ಕಪ್ಪು ಮಾರುಕಟ್ಟೆಯಲ್ಲಿ ಮಾನವ ದೇಹವೆಷ್ಟು ಬೆಲೆಬಾಳಬಹುದು?

By Arshad
Subscribe to Boldsky

ಇದೆಂಥಾ ಪ್ರಶ್ನೆ? ಮಾನವ ಜೀವಕ್ಕೆ ಬೆಲೆ ಕಟ್ಟಲಾದೀತೇ? ಜೀವ ಉಳಿಸಿಕೊಳ್ಳಲು ಎಷ್ಟು ಬೇಕಾದರೂ ಖರ್ಚು ಮಾಡಲು ನಾವು ಸಿದ್ಧರಿಲ್ಲವೇ? ಆದರೆ ಈ ಪ್ರಶ್ನೆಯಲ್ಲಿಯೇ ಈ ಪ್ರಶ್ನೆಗೆ ಉತ್ತರವೂ ಅಡಗಿದೆ. ಅಂದರೆ ಜೀವ ಉಳಿಸಿಕೊಳ್ಳಬೇಕಾದರೆ ಹಾನಿಗೊಂಡ ಅಂಗಗಳನ್ನು ಬದಲಿಸಬೇಕಾಗಿ ಬಂದ ಸಮಯದಲ್ಲಿ ಈ ಅಂಗಕ್ಕಾಗಿ ದಾನಿಗಳನ್ನೇ ಆಶ್ರಯಿಸುವಂತಿಲ್ಲ. ದಾನಿಗಳಿಂದ ಅಂಗದಾನ ಪಡೆಯುವ ಪ್ರಕ್ರಿಯೆ ತುಂಬಾ ನಿಧಾನ ಹಾಗೂ ಅಲ್ಲಿಯವರೆಗೆ ಕಾಯುವುದು ಸಾಧ್ಯವಿಲ್ಲವೆಂದಾಗ ಕಪ್ಪು ಮಾರುಕಟ್ಟೆಯಲ್ಲಿ ಅಜ್ಞಾತರಿಂದ ಕೊಳ್ಳುವುದೇ ಅನಿವಾರ್ಯವೆಂದಾಗುತ್ತದೆ.

ಹೀಗೆ ಎದುರಾಗಿರುವ ಬೇಡಿಕೆಯನ್ನು ಪೂರೈಸಲೆಂದೇ ಮೃತರಿಂದ ಅಂಗಗಳನ್ನು ಹಣಕ್ಕೆ ಮಾರಾಟ ಮಾಡುವ ಜಾಲವೇ ಈಗ ಹಲವು ನಗರಗಳಲ್ಲಿದೆ. ಒಂದು ದೇಹದಿಂದ ಮಾರಾಟವಾಗುವ ವಿವಿಧ ಅಂಗಗಳ ಬೆಲೆಯನ್ನು ಒಟ್ಟುಗೂಡಿಸಿದರೆ ಒಂದು ಮಾನವ ದೇಹದ ಬೆಲೆ ಕೋಟಿಗೂ ಹೆಚ್ಚು ಬಾಳುತ್ತದೆ! ಈ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ ಕೆಳಗೆ ನೀಡಿರುವ ಮಾಹಿತಿಗಳು ನಿಮ್ಮನ್ನು ಬೆಕ್ಕಸ ಬೆರಗಾಗಿಸ ಬಹುದು. ಮುಂದಿನ ಬಾರಿ ಯಾವುದೋ ಅಂತ್ಯಸಂಸ್ಕಾರಕ್ಕೆ ಹೋದಾಗ ಅಯ್ಯೋ, ಕೋಟಿ ರೂಪಾಯಿ ಸುಡುತ್ತಿದ್ದಾರಲ್ಲಪ್ಪಾ ಎಂದು ನಿಡುಸುಯ್ಯಲೂ ಸಾಕು!... 

ಮೂತ್ರಪಿಂಡಗಳು -ರೂ 1,34,19,290

ಮೂತ್ರಪಿಂಡಗಳು -ರೂ 1,34,19,290

ಕಪ್ಪು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ಇರುವ ಅಂಗಗಳೆಂದರೆ ಮೂತ್ರಪಿಂಡಗಳು. ಒಂದು ವರದಿಯ ಪ್ರಕಾರ ಅಂಗ ಮಾರಾಟದ ಒಟ್ಟೂ ಹಣದಲ್ಲಿ 75% ರಷ್ಟು ಹಣ ಈ ಅಂಗವೊಂದರಿಂದಲೇ ಬರುತ್ತದೆ. ಆದ್ದರಿಂದ ನಮ್ಮ ದೇಹದ ಅತಿ ಮುಖ್ಯವಾದ ಅಂಗ ಯಾವುದು ಎಂದು ಕೇಳಿದರೆ ಹೃದಯದ ಬದಲು ಇನ್ನು ಮೂತ್ರಪಿಂಡಗಳು ಎಂದು ಹೇಳಬಹುದು. ಇದು ಕಾನೂನಿಗೆ ವಿರುದ್ಧವಾಗಿ ಮಾರಾಟವಾಗುವ ಗರಿಷ್ಟ ಮೊತ್ತದ ಅಂಗವಾಗಿದೆ.

ಯಕೃತ್– ರೂ.1,07,35,432

ಯಕೃತ್– ರೂ.1,07,35,432

ಇನ್ನೊಂದು ಅಧ್ಯಯನದ ಪ್ರಕಾರ ಮದ್ಯಪಾನದ ಪರಿಣಾಮವಾಗಿ ಹಾಳಾಗುವ ಯಕೃತ್ ನ ಪರಿಣಾಮದಿಂದ ಇತರ ಯಾವುದೇ ಕಾಯಿಲೆಗಿಂತ ಹೆಚ್ಚು ಜನರು ಮರಣ ಹೊಂದುತ್ತಾರೆ. ಸಾಮಾನ್ಯವಾಗಿ ಮರಣಹೊಂದುವ ಮುನ್ನ ಯಕೃತ್ ಪರಿಪೂರ್ಣವಾಗಿ ಹಾಳಾಗಿರುತ್ತದೆ. ಅಂದರೆ ಹಾಳಾಗುವ ಮುನ್ನ ತನ್ನ ಕೊನೆಯ ಜೀವಕೋಶ ಜೀವಂತವಿರುವವರೆಗೂ ಇದು ಕಾರ್ಯ ಎಸಗುತ್ತಿರುತ್ತದೆ. ಇದೇ ಕಾರಣಕ್ಕೆ ಹೆಚ್ಚಿನವರು ಯಕೃತ್ ಕಾಯಿಲೆಯಿಂದ ಬಳಲುತ್ತಿದ್ದರೆ ಕೊನೆಯವರೆಗೂ ಕಾಯುತ್ತಾರೆ. ಕಡೆಯ ಘಳಿಗೆಯಲ್ಲಿ ಯಕೃತ್ ದಾನಿಗಳು ಸಿಗದೇ (ಯಕೃತ್ ನ ಒಂದು ವಿಶೇಷತೆ ಎಂದರೆ ಇದರ ಒಂದು ಭಾಗವನ್ನು ದಾನ ಮಾಡಿದರೂ ದಾನಿಯ ದೇಹದಲ್ಲಿ ಇದು ಮತ್ತೊಮ್ಮೆ ಬೆಳೆಯುತ್ತದೆ) ಹೋದಾಗ ಕಪ್ಪು ಮಾರುಕಟ್ಟೆಯೇ ಅನಿವಾರ್ಯವಾಗುತ್ತದೆ. ಇಲ್ಲಿ ಸುಲಭ ಬೆಲೆಯಲ್ಲಿ ಹಾಗೂ ಹೆಚ್ಚಿನ ತ್ರಾಸಿಲ್ಲದೇ ಯಕೃತ್ ಅನ್ನು ಕೊಳ್ಳಬಹುದು.

ಹೃದಯ – ರೂ. 79,84,477

ಹೃದಯ – ರೂ. 79,84,477

ಕಾನೂನಿನ ಪ್ರಕಾರ ಹೃದಯವನ್ನು ದಾನ ಪಡೆದುಕೊಳ್ಳುವುದಾದರೆ ಇದು ಸಾಮಾನ್ಯರಿಗೆ ಕೊಳ್ಳಲು ಸಾಧ್ಯವೇ ಇಲ್ಲದಷ್ಟು ದುಬಾರಿಯಾಗಿದೆ. ಇದರೊಂದಿಗೆ ಹೃದಯವನ್ನು ಅಳವಡಿಸುವ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯ ಖರ್ಚು ಪ್ರತ್ಯೇಕ. ಆದರೆ ಕಪ್ಪು ಮಾರುಕಟ್ಟೆಯಲ್ಲಿ ಇದು ಕಾನೂನಿಗೆ ವಿರುದ್ದವಾದರೂ ಸರಿ, ಕೊಂಚ ಅಗ್ಗವಾಗಿ ಸಿಗುತ್ತದೆ.

ಕಣ್ಣಿನ ಪಾಪೆ (ಕಾರ್ನಿಯಾ) – ರೂ 1,02,322

ಕಣ್ಣಿನ ಪಾಪೆ (ಕಾರ್ನಿಯಾ) – ರೂ 1,02,322

ಕಣ್ಣಿನ ಪಾಪೆಗೆ ಆಗುವ ಯಾವುದೇ ಹಾನಿಯಿಂದ ಅಂಧತ್ವ ಎದುರಾಗುತ್ತದೆ. ಅಲ್ಲದೇ ಈ ಭಾಗ ಸೂಕ್ಷ್ಮವೂ ಆಗಿರುವ ಕಾರಣ ಕಣ್ಣುಗಳನ್ನು ತುಂಬಾ ಜತನದಿಂದ ಕಾಪಾಡಿಕೊಂಡು ಬರಬೇಕು. ಆದರೆ ಕಾರಣಾಂತರಗಳಿಂದ ಕಣ್ಣುಗಳು ವಯಸ್ಸಾದಂತೆ ಕ್ಷೀಣಿಸುತ್ತಲೇ ಹೋಗುತ್ತವೆ. ಕೆಲವರಿಗೆ ಅಪಘಾತದಲ್ಲಿಯೂ ಕಣ್ಣುಗಳನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ಕೆಲವರು ಅರಿವಿಲ್ಲದೇ ಸೂರ್ಯಗ್ರಹಣವನ್ನು ನೇರವಾಗಿ ನೋಡಿ ಈ ಭಾಗವನ್ನು ಘಾಸಿಗೊಳಿಸಿಕೊಂಡಿರುತ್ತಾರೆ. ಈ ಭಾಗವನ್ನು ದಾನಿಗಳಿಂದ ಕಣ್ಣುಗಳನ್ನು ಪಡೆದು ಬದಲಿಸಿಕೊಳ್ಳಬಹುದು. ಆದರೆ ಇದಕ್ಕಾಗಿ ಈಗಾಗಲೇ ಸರತಿಯಲ್ಲಿರುವ ವ್ಯಕ್ತಿಗಳ ಬಳಿಕವೇ ಕಣ್ಣು ಲಭಿಸುವ ಸಾಧ್ಯತೆ ಇರುತ್ತದೆ. ಅಲ್ಲದೇ ನೇತ್ರದಾನದಲ್ಲಿ ಭಾಗವಹಿಸಿರುವ ವ್ಯಕ್ತಿ ಮರಣಹೊಂದಿದ ಬಳಿಕವೇ ಇದು ಸಾಧ್ಯವಾಗುವುದರಿಂದ ದಾನಿ ಮೃತನಾಗುವವರೆಗೂ ಕಾಯಬೇಕಾಗುತ್ತದೆ. ಬದಲಿಗೆ ಕಪ್ಪು ಮಾರು ಕಟ್ಟೆಯಲ್ಲಿ ಕೊಳ್ಳುವುದಾದರೆ ಹೆಚ್ಚು ಕಾಯಬೇಕಾಗಿಲ್ಲ ಹಾಗೂ ಹೆಚ್ಚು ಹಣವನ್ನೂ ತೆರಬೇಕಾಗಿಲ್ಲ.

ಅಸ್ತಿಮಜ್ಜೆ –ರೂ 15,43,218

ಅಸ್ತಿಮಜ್ಜೆ –ರೂ 15,43,218

ಒಂದು ಗ್ರಾಮ್ ಅಸ್ತಿ ಮಜ್ಜೆಯನ್ನು ದಾನ ಮಾಡಿದರೆ ಅತಿ ಶೀಘ್ರವಾಗಿ ಶ್ರೀಮಂತರಾಗಬಹುದು ಎಂದು ನಿಮಗೆ ಗೊತ್ತಿತ್ತೇ? ಕಾನೂನಿನ ಪ್ರಕಾರ ನೀವು ಅಸ್ತಿಮಜ್ಜೆಯನ್ನು ಕೇವಲ ದಾನ ಮಾಡಬಹುದು, ಮಾರಾಟ ಮಾಡುವಂತಿಲ್ಲ. ಆದರೆ ಕಪ್ಪು ಮಾರುಕಟ್ಟೆ ಈ ನಿಯಮವನ್ನೆಲ್ಲಾ ಗಾಳಿಗೆ ತೂರಿ ಅಸ್ತಿಮಜ್ಜೆಯನ್ನೂ ಮಾರಾಟ ಮಾಡುತ್ತದೆ.

ಅಂಡಾಣುಗಳು – ರೂ 8,38,705

ಅಂಡಾಣುಗಳು – ರೂ 8,38,705

ಅಮೇರಿಕಾದ ಕಾನೂನಿನ ಪ್ರಕಾರ ಮಾನವ ಶರೀರದಿಂದ ಅಂಡಾಣುಗಳನ್ನು ಕೊಳ್ಳುವುದು ಹಾಗೂ ಮಾರುವುದನ್ನು ಮಾಡಬಹುದು. ಆದರೆ ಇದಕ್ಕೆ ತಗಲುವ ಖರ್ಚು ಮಾತ್ರ ತೀರಾ ದುಬಾರಿ. ಆದರೆ ಕಪ್ಪು ಮಾರುಕಟ್ಟೆ ಈ ಖರ್ಚನ್ನು ಸುಲಭವಾಗಿಸುವ ಮೂಲಕ ಹೆಚ್ಚಿನ ಜನರಲ್ಲಿ ಆಶಾವಾದವನ್ನು ಮೂಡಿಸಿದೆ.

ಪರಿಧಮನಿಯ ಅಪಧಮನಿ (coronary artery) –ರೂ 1,02,322

ಪರಿಧಮನಿಯ ಅಪಧಮನಿ (coronary artery) –ರೂ 1,02,322

ಹೆಚ್ಚು ಸಾವುಗಳಿಗೆ ಹೃದಯಾಘಾತವೇ ಕಾರಣವಾಗಿದ್ದು ಇದರಲ್ಲಿ ಹೃದಯದ ಪ್ರಮುಖ ನಾಳವಾದ ಪರಿಧಮನಿಯ ಅಪಧಮನಿ ವೈಫಲ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಈ ಅಂಗಕ್ಕೆ ಕಪ್ಪು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದು ಕಾನೂನಿಗೆ ವಿರುದ್ಧವಾಗಿದ್ದರೂ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಕಪ್ಪು ಮಾರುಕಟ್ಟೆಯಲ್ಲಿ ಈ ಅಂಗದ ಬೇಡಿಕೆ ಮಾತ್ರ ಏರುತ್ತಲೇ ಹೋಗುತ್ತಿದೆ.

ಸಣ್ಣ ಕರುಳು – ರೂ1,69,015

ಸಣ್ಣ ಕರುಳು – ರೂ1,69,015

ಸಣ್ಣಕರುಳು ಅಪರೂಪಕ್ಕೆ ಬೇಡಿಕೆ ಬರುವ ಅಂಗವಾಗಿದ್ದು ಇದರ ಶಸ್ತ್ರಚಿಕಿತ್ಸೆ ಮಾತ್ರ ತೀರಾ ಸಂಕೀರ್ಣವಾದ ಹಾಗೂ ದುಬಾರಿಯಾಗಿಯೂ ಇದೆ. ಸಾಮಾನ್ಯವಾಗಿ ಕರುಳಿನ ಕ್ಯಾನ್ಸರ್ ಅಥವಾ ಇತರ ಕಾಯಿಲೆಗಳಿಗೆ ತುತ್ತಾಗಿ ಕರುಳನ್ನು ನಿವಾರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾದ ರೋಗಿಗಳೇ ಈ ಅಂಗಕ್ಕೆ ಬೇಡಿಕೆ ಇರಿಸುತ್ತಾರೆ.

ಪಿತ್ತಕೋಶ – ರೂ81,790

ಪಿತ್ತಕೋಶ – ರೂ81,790

ಪಿತ್ತಕೋಶದಲ್ಲಿ ಕಲ್ಲುಗಳಿರುವ ರೋಗಿಗಳಿಂದಾಗಿ ಈ ಅಂಗಕ್ಕೂ ಹೆಚ್ಚಿನ ಬೇಡಿಕೆ ಇದೆ. ಸಾಮಾನ್ಯವಾಗಿ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯ ಬಳಿಕ ಮೊದಲಿನ ಸ್ಥಿತಿಗೆ ತರುವ ಸಾಧ್ಯತೆ ಕಡಿಮೆ ಇರುವ ಕಾರಣದಿಂದ ಈ ಅಂಗವನ್ನು ಬದಲಿಸಿಕೊಂಡರೇ ಒಳ್ಳೆಯದು ಎಂಬ ಅಭಿಪ್ರಾಯದ ಮೂಲಕ ಈ ಅಂಗಕ್ಕೂ ಹೆಚ್ಚಿನ ಬೆಲೆ ಇದೆ.

ರಕ್ತ – ರೂ 1677-22,812

ರಕ್ತ – ರೂ 1677-22,812

ಮಧುಮೇಹ ಹಾಗೂ ಇತರ ರಕ್ತಸಂಬಂಧಿ ತೊಂದರೆ ಇಲ್ಲದ ಹೊರತು ಯಾವುದೇ ಆರೋಗ್ಯಕರ ವಯಸ್ಕರು ರಕ್ತದಾನ ಮಾಡಬಹುದು. ಆದರೂ ಎಲ್ಲ ಆಸ್ಪತ್ರೆಗಳಲ್ಲಿ ರಕ್ತಕ್ಕೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಭಾರತದಲ್ಲಿ ಅಲ್ಲಲ್ಲಿ ಬ್ಲಡ್ ಫಾರ್ಮ್ ಎಂಬ ರಕ್ತದ ಬ್ಯಾಂಕುಗಳಿವೆ. ಇವು ಒಂದು ತರಹ ಬಂದೀಖಾನೆ ಇದ್ದಂತೆ ಇಲ್ಲಿ ಕೆಲವು ವ್ಯಕ್ತಿಗಳನ್ನು ಕೂಡಿ ಹಾಕಿ ಅವರಿಂದ ಬಲವಂತವಾಗಿ ನಿಯಮಿತವಾಗಿ ರಕ್ತವನ್ನು ಸಂಗ್ರಹಿಸುತ್ತಾ ಬರಲಾಗುತ್ತದೆ.

ಒಂದು ಜೋಡಿ ಕಣ್ಣುಗುಡ್ಡೆಗಳು: ರೂ 1,02,322

ಒಂದು ಜೋಡಿ ಕಣ್ಣುಗುಡ್ಡೆಗಳು: ರೂ 1,02,322

ಒಂದು ಜೋಡಿ ಕಣ್ಣುಗುಡ್ಡೆಗಳನ್ನೇ ಕೊಳ್ಳಿ, ಅಥವಾ ಕಣ್ಣಿನ ಪಾಪೆಯನ್ನು ಮಾತ್ರವೇ ಕೊಳ್ಳಿ, ಬೆಲೆ ಹೆಚ್ಚೂ ಕಡಿಮೆ ಒಂದೇ. ತುಂಬಾ ಕ್ಲಿಷ್ಟಕರ ಸಂದರ್ಭಗಳಲ್ಲಿ ಕಣ್ಣುಗಳ ಪಾಪೆಯ ಬದಲು ಇಡಿಯ ಕಣ್ಣುಗುಡ್ಡೆಯನ್ನೇ ಬದಲಿಸಲಾಗುತ್ತದೆ. ಅಪರೂಪಕ್ಕೆ ಇಂತಹ ಬೇಡಿಕೆಗಳು ಕಪ್ಪು ಮಾರುಕಟ್ಟೆಗೆ ಬರುತ್ತವೆ.

ಒಟ್ಟಾರೆ ಒಂದು ಮಾನವದೇಹದ ಬೆಲೆ (ಕಪ್ಪು ಮಾರುಕಟ್ಟೆಯಲ್ಲಿ)

ಒಟ್ಟಾರೆ ಒಂದು ಮಾನವದೇಹದ ಬೆಲೆ (ಕಪ್ಪು ಮಾರುಕಟ್ಟೆಯಲ್ಲಿ)

ಮೂತ್ರಪಿಂಡಗಳು - ರೂ1,34,19,290

ಯಕೃತ್ - ರೂ 1,07,35,432

ಹೃದಯ - ರೂ 79,84,477

ಕಣ್ಣಿನ ಪಾಪೆಗಳು -ರೂ 1,02,322

ಅಸ್ತಿ ಮಜ್ಜೆ- ರೂ 15,43,218

ಅಂಡಾಣುಗಳು-ರೂ 8,38,705

ಪರಿಧಮನಿಯ ಅಪಧಮನಿ- ರೂ 1,02,322

ಸಣ್ಣ ಕರುಳು - ರೂ 1,69,015

ಪಿತ್ತ ಕೋಶ -ರೂ 81,790

ರಕ್ತ - ರೂ 1677-22,812

ಕಣ್ಣು ಗುಡ್ಡೆಗಳು -ರೂ 1,02,322

ಒಟ್ಟು = ರೂ 35,101,705!

For Quick Alerts
ALLOW NOTIFICATIONS
For Daily Alerts

    English summary

    How Much The Human Body Is Worth In The Black Market?

    If you are feeling low and wonder if you are worth living or not, then give it a second thought, as this article will brighten up your spirits! According to studies, it is revealed that our body is worth crores! And this is no joke, especially in the black market. Check out the different prices of each of the human body parts and its net worth!We bet, by the time you reach the end of this article, you would realise as to how rich we are as humans!
    Story first published: Thursday, December 7, 2017, 23:41 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more