Latest Updates
-
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ
ನಿಮ್ಮ ಹಸ್ತಗಳನ್ನು ನೋಡಿ, ಆಮೇಲೆ ಈ ಲೇಖನವನ್ನು ತಪ್ಪದೇ ಓದಿ
ಹಸ್ತಸಾಮುದ್ರಿಕೆ ಭಾರತದ ಪುರಾತನ ವಿದ್ಯೆಯಾಗಿದ್ದು ವ್ಯಕ್ತಿಯ ಹಸ್ತವನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ವ್ಯಕ್ತಿಯ ಗುಣಗಳ ಬಗ್ಗೆ ಅರಿತುಕೊಳ್ಳಬಹುದು. ವ್ಯಕ್ತಿಯ ಹಸ್ತವನ್ನು ಗಮನಿಸಿದಾಗ ಹಸ್ತದ ರೇಖೆಗಳ ಹೊರತಾಗಿ ಬೆರಳುಗಳ ಗಾತ್ರ, ಹಸ್ತದ ಆಕಾರಗಳನ್ನೂ ಪರಿಗಣಿಸಿ ವ್ಯಕ್ತಿಯ ಗುಣಗಳನ್ನು ಇನ್ನೂ ಸೂಕ್ಷ್ಮವಾಗಿ ತಿಳಿಸಬಹುದು.
ಹಸ್ತಸಾಮುದ್ರಿಕೆಯ ಪ್ರಕಾರ ವ್ಯಕ್ತಿಯ ಹಸ್ತದ ಯಾವ ಮೂಲ ವಿಷಯಗಳನ್ನು ಗಮನಿಸಿದರೆ ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬಹುದು ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಇವೆಲ್ಲವೂ ಕುತೂಹಲಕಾರಿಯಾಗಿದ್ದು ಕಲಿಯಲು ಸುಲಭವೂ ಆಗಿದೆ. ನಿಮ್ಮ ಸ್ನೇಹಿತರ, ಬಾಂಧವರ ಹಸ್ತಗಳನ್ನು ಪರಿಶೀಲಿಸಿ ನೀವು ಇಂದು ಕಲಿತದ್ದು ಎಷ್ಟು ಮಟ್ಟಿಗೆ ನಿಜ ಎಂಬುದನ್ನು ಒರೆ ಹಚ್ಚಿ ಒಮ್ಮೆ ನೋಡಿ....

ಯಾವ ಕೈಯ ಹಸ್ತವನ್ನು ಗಮನಿಸಬೇಕು?
ಹಸ್ತಸಾಮುದ್ರಿಕೆಯಲ್ಲಿ ಇದು ಅತಿ ಹೆಚ್ಚು ಕೇಳಲಾಗುವ ಸಾಮಾನ್ಯ ಪ್ರಶ್ನೆ. ಇದಕ್ಕೆ ಉತ್ತರ: ಎರಡೂ! ಆದರೆ ಸಾಮಾನ್ಯವಾಗಿ ಎದುರಿನ ವ್ಯಕ್ತಿ ತನ್ನ ಪ್ರಾಥಮಿಕ ಅವಶ್ಯಕತೆಗಳಿಗೆ ಮೊದಲಾಗಿ ಯಾವ ಕೈಯನ್ನು ಬಳಸುತ್ತಾನೋ ಆ ಕೈಯನ್ನೇ ಪರಿಗಣಿಸಲಾಗುತ್ತದೆ. ಉದಾಹರಣೆಗೆ ಬಲಗೈ ಅಭ್ಯಾಸದ ವ್ಯಕ್ತಿಗಳ ಬಲ ಹಸ್ತವನ್ನೂ, ಎಡಗೈ ಅಭ್ಯಾಸವುಳ್ಳವರ ಎಡಹಸ್ತವನ್ನೂ ನೋಡಲಾಗುತ್ತದೆ.
ಅಂಗೈಯಲ್ಲಿ 'M' ಅಕ್ಷರದ ಗುರುತು ಇದ್ದವರು ಅದೃಷ್ಟವಂತರು!

ಆದರೆ ಅಭ್ಯಾಸಬಲದ ಹಸ್ತವೇ ಏಕೆ?
ಏಕೆಂದರೆ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಇಂದು ಬೆಳೆದುಬರಲು ಈ ಕೈಗಳನ್ನು ಉಪಯೋಗಿಸಬೇಕಾಗಿದ್ದು ಆ ಪ್ರಕಾರವೇ ಹಸ್ತದ ಆಕಾರ ರೂಪುಗೊಂಡಿರುತ್ತದೆ. ಈ ಆಕಾರ ಅಭ್ಯಾಸವಿಲ್ಲದ ಇನ್ನೊಂದು ಹಸ್ತದಲ್ಲಿ ಇರಲು ಸಾಧ್ಯವಿಲ್ಲ.

ಹಸ್ತದ ಗಾತ್ರ ಏನನ್ನು ಸೂಚಿಸುತ್ತದೆ?
ಮೊದಲಾಗಿ ಹಸ್ತದ ಗಾತ್ರವನ್ನು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಹಸ್ತದ ಗಾತ್ರ ದೊಡ್ಡದಿದ್ದರೆ ಈ ವ್ಯಕ್ತಿ ತನಗೆ ವಹಿಸಲಾದ ಕೆಲಸದ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಾನೆಯೇ ಹೊರತು ಈ ಕಾರ್ಯ ಸಾಧನೆಗೆ ಅಗತ್ಯವಾದ ಕೆಲಸವನ್ನು ಕಡಿಮೆ ಮಾಡುತ್ತಾನೆ ಎಂದು ತಿಳಿದುಕೊಳ್ಳಬಹುದು. ಆದರೆ ಹಸ್ತದ ಹೋಲಿಕೆಯಲ್ಲಿ ಚಿಕ್ಕ ಗಾತ್ರ ಹೊಂದಿರುವ ಹಸ್ತದ ವ್ಯಕ್ತಿಗಳು ತಮ್ಮ ಕರ್ತವ್ಯಗಳನ್ನು ಚ್ಯುತಿಗೆ ಅವಕಾಶ ಮಾಡಗೊಡದೇ ಪೂರೈಸುವವರೂ ಈ ಬಗ್ಗೆ ಚಿಂತಿಸುವಲ್ಲಿ ಕಡಿಮೆ ಸಮಯ ವ್ಯಯಿಸುವರೂ ಆಗಿರುತ್ತಾರೆ.

ಹಸ್ತದ ಆಕಾರ ಏನನ್ನು ಸೂಚಿಸುತ್ತದೆ?
ಹಸ್ತಸಾಮುದ್ರಿಕೆಯ ಪ್ರಕಾರ ಒಟ್ಟು ನಾಲ್ಕು ಪ್ರಕಾರದ ಹಸ್ತಗಳಿವೆ. ಇವು ನಾಲ್ಕು ಮೂಲಭೂತ ಅಂಶಗಳನ್ನು ಪ್ರತಿನಿಧಿಸುತ್ತವೆ. ಇವೆಂದರೆ: ವಾಯು, ಭೂಮಿ, ಅಗ್ನಿ ಮತ್ತು ಜಲ.
ಹಸ್ತರೇಖೆ: ಮಗು ಹುಟ್ಟುವ ಮೊದಲೇ ಭವಿಷ್ಯ ತಿಳಿಯಬಹುದು!

ವಾಯುವಿನ ಅಂಶವಿರುವ ಹಸ್ತದ ಬಗ್ಗೆ
ಈ ಹಸ್ತ ಬಹುತೇಕ ಚೌಕಾಕಾರವಾಗಿದ್ದು ತೆಳ್ಳಗಿರುತ್ತದೆ ಹಾಗೂ ಹಸ್ತದಲ್ಲಿ ಮೂಡಿರುವ ರೇಖೆಗಳು ಸ್ಪಷ್ಟವಾಗಿರುತ್ತವೆ. ಈ ವ್ಯಕ್ತಿಗಳು ಬುದ್ದಿವಂತರೂ, ಸಮಾಜದಲ್ಲಿ ಜನರೊಂದಿಗೆ ಸುಲಭವಾಗಿ ಬೆರೆಯುವವರೂ ಆಗಿರುತ್ತಾರೆ. ಇವರು ಸಾಮಾನ್ಯವಾಗಿ ಸತತವಾಗಿ ಕೆಲಸ ಮಾಡುವವರಾಗಿದ್ದು ಪರಿಸ್ಥಿತಿಗೆ ಅನುಗುಣವಾಗಿ ಕ್ಷಿಪ್ರ ಗತಿಯಲ್ಲಿ ಬದಲಾವಣೆಯನ್ನು ಸ್ವೀಕರಿಸಿ ಅಳವಡಿಸಿ ಕೊಳ್ಳುವವರಾಗಿರುತ್ತಾರೆ. ಪ್ರೀತಿ ವಿಶ್ವಾಸದ ವಿಷಯಕ್ಕೆ ಇವರು ಅತಿ ಹೆಚ್ಚಿನ ಮಹತ್ವ ನೀಡುವವರಾಗಿದ್ದು ಮಾನಸಿಕ ನೆಮ್ಮದಿಗೆ ಬೇರೆಲ್ಲಕ್ಕಿಂತಲೂ ಹೆಚ್ಚಿನ ಬೆಲೆ ನೀಡುತ್ತಾರೆ.

ಭೂಮಿಯ ಅಂಶವಿರುವ ಹಸ್ತದ ಬಗ್ಗೆ
ಈ ಹಸ್ತದ ಲಕ್ಷಣಗಳೆಂದರೆ ಬಹುತೇಕ ಚೌಕಾಕಾರದ ಹಸ್ತ, ಆದರೆ ಕೊಂಚವೇ ಗಿಡ್ಡ ಎನಿಸುವ ಬೆರಳುಗಳು, ಗಡುಸಾದ ಅಥವಾ ಕಠಿಣವಾದ ಚರ್ಮ ಹಾಗೂ ಹಸ್ತದ ಭಾಗದಲ್ಲಿ ಅತ್ಯಂತ ಸ್ಪಷ್ಟವಾದ, ಆಳವಾದ ಮತ್ತು ಬಹುತೇಕ ನೇರವಾಗಿರುವ ರೇಖೆಗಳಿರುತ್ತವೆ. ಈ ವ್ಯಕ್ತಿಗಳು ಯಾವುದೇ ಸಂದರ್ಭದಲ್ಲಿಯೂ ಸ್ಥಿಮತೆ ಕಳೆದುಕೊಳ್ಳದ ವ್ಯಕ್ತಿಗಳಾಗಿದ್ದು ಕೆಲಸವನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವ ವ್ಯಕ್ತಿಗಳಾರುತ್ತಾರೆ. ಈ ವ್ಯಕ್ತಿಗಳು ಅತ್ಯಂತ ವಿನಯವಂತರೂ ಆಗಿರುತ್ತಾರೆ. ಇವರು ಪ್ರಕೃತಿಯನ್ನು ಪ್ರೀತಿಸುವವರಾಗಿದ್ದು ಹೊರಗಿನ ವಾತಾವರಣದಲ್ಲಿ ಹೆಚ್ಚಿನ ಸಮಯ ಕಳೆಯಲು ಇಚ್ಛಿಸುತ್ತಾರೆ. ಪ್ರೀತಿಯ ವಿಷಯದಲ್ಲಿ ಇವರು ನೇರವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವವರಾಗಿರುತ್ತಾರೆ ಹಾಗೂ ಸಂಬಂಧದಲ್ಲಿ ತಮ್ಮನ್ನು ನಂಬಿದವರನ್ನು ಕೈಬಿಡದವರಾಗಿರುತ್ತಾರೆ.

ಅಗ್ನಿಯ ಅಂಶವಿರುವ ಹಸ್ತದ ಬಗ್ಗೆ
ಈ ಹಸ್ತಗಳು ಕೊಂಚ ನೀಳವಾಗಿದ್ದು ಬೆರಳುಗಳ ಗಾತ್ರ ಕೊಂಚ ಗಿಡ್ಡವಿರುತ್ತದೆ. ಇವರ ಹಸ್ತದ ಮೇಲೆ ಹಲವಾರು ಸ್ಪಷ್ಟ ರೇಖೆಗಳಿದ್ದು ಚರ್ಮ ಬೆಚ್ಚಗಿರುತ್ತದೆ. ಈ ವ್ಯಕ್ತಿಗಳು ಜೀವನದಲ್ಲಿ ಸದಾ ಹೊಸತನ್ನು ಬಯಸುವವರಾಗಿದ್ದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಯಾವುದೇ ಅಪಾಯವನ್ನು ಎದುರಿಸಲೂ ತಯಾರಿರುತ್ತಾರೆ. ಪ್ರೀತಿಯ ವಿಷಯದಲ್ಲಿ ಇವರು ಧನಾತ್ಮಕ ಹಾಗೂ ಸ್ಪಷ್ಟ ನಿಲುವಿನ ವ್ಯಕ್ತಿಗಳಾಗಿರುತ್ತಾರೆ ಹಾಗೂ ಇವರು ನೇತೃತ್ವವನ್ನು ಹೊರಲು ಹಾಗೂ ಯೋಜನೆಯನ್ನು ಮುನ್ನಡೆಸಲು ಉತ್ಸುಕರಾಗಿರುತ್ತಾರೆ.
ಹಸ್ತರೇಖೆಗಳು: ಅಡ್ಡ-ದಿಡ್ಡಿಯ ರೇಖೆಯಲ್ಲಿದೆ ಅಂಕು-ಡೊಂಕಿನ ಭವಿಷ್ಯ!

ಜಲದ ಅಂಶವಿರುವ ಹಸ್ತದ ಬಗ್ಗೆ
ಈ ವ್ಯಕ್ತಿಗಳ ಹಸ್ತಗಳು ನೀಳವಾಗಿದ್ದು ಬೆರಳುಗಳೂ ನೀಳವಾಗಿರುತ್ತವೆ. ಇವರ ಹಸ್ತದಲ್ಲಿ ಬೇಕಾದಷ್ಟು ರೇಖೆಗಳಿದ್ದರೂ ಇವುಗಳಲ್ಲಿ ಬಹುತೇಕ ಅಸ್ಪಷ್ಟವಾಗಿರುತ್ತವೆ. ಇವರ ಹಸ್ತದ ಚರ್ಮ ತೀರಾ ಮೃದುವಾಗಿದ್ದು ತೇವದಿಂದ ಕೂಡಿರುತ್ತದೆ. ಈ ವ್ಯಕ್ತಿಗಳು ಕ್ರಿಯಾತ್ಮಕರು ಹಾಗೂ ಭಾವನಾತ್ಮಕರೂ ಆಗಿರುತ್ತಾರೆ. ಪ್ರೀತಿಯ ವಿಷಯದಲ್ಲಿ ಇವರು ತೀರಾ ಸೂಕ್ಷ್ಮಮತಿಗಳಾಗಿದ್ದು ನಿಷ್ಕಪಟಿಗಳಾಗಿರುತ್ತಾರೆ. ಆದರೆ ಸಂಬಂಧದಲ್ಲಿ ಎದುರಾಗುವ ಚಿಕ್ಕ ಪುಟ್ಟ ಬಿರುಕುಗಳಿಗೂ ಇವರು ತುಂಬಾ ಬೇಗನೇ ಮತ್ತು ಸುಲಭವಾಗಿ ಅಧೀರರಾಗಿಬಿಡುತ್ತಾರೆ.

ಹೆಬ್ಬೆಟ್ಟಿನ ಬಗ್ಗೆ
ವ್ಯಕ್ತಿಯ ಹೆಬ್ಬೆಟ್ಟು ಸಹಾ ಆತನ ವ್ಯಕ್ತಿತ್ವದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ ಎಂದು ನಿಮಗೆ ಗೊತ್ತಿತ್ತೇ? ಹೌದು, ಹೆಬ್ಬೆಟ್ಟು ಸಹಾ ಕೆಲವಾರು ವಿಷಯಗಳನ್ನು ತಿಳಿಸಬಲ್ಲುದು. ಆದರೆ ಇದು ಹೆಬ್ಬೆಟ್ಟು ಎಷ್ಟು ಮಟ್ಟಿಗೆ ಸುಲಭವಾಗಿ ಬಾಗುತ್ತದೆ ಎಂಬ ಅಂಶವನ್ನು ಆಧರಿಸಿರುತ್ತದೆ. ಹೆಚ್ಚು ಸುಲಭವಾಗಿ ಬಾಗುವ ಹೆಬ್ಬೆರಳು ಅಂದರೆ ಹೆಚ್ಚು ಸುಲಭವಾಗಿ ಹೊಂದಿಕೊಳ್ಳುವ ವ್ಯಕ್ತಿಯಾಗಿರುತ್ತಾರೆ. ತದ್ವಿರುದ್ಧವಾಗಿ ಹೆಬ್ಬೆರಳು ತೀರಾ ಕಡಿಮೆ ಮಡಚಲು ಆದರೆ ಈ ವ್ಯಕ್ತಿಗಳು ಹಠಮಾರಿಗಳೂ, ಸುಲಭವಾಗಿ ಹೊಂದಿಕೊಳ್ಳದವರೂ ಆಗಿರುತ್ತಾರೆ.



Click it and Unblock the Notifications











