ಹಸ್ತರೇಖೆ: ಮಗು ಹುಟ್ಟುವ ಮೊದಲೇ ಭವಿಷ್ಯ ತಿಳಿಯಬಹುದು!

By: Divya
Subscribe to Boldsky

ನಮ್ಮ ಬದುಕನ್ನು ಬೆಳಗಿಸಲು ಮುದ್ದಾದ ಮಗು ಹುಟ್ಟಬೇಕು, ಅದರ ಭವಿಷ್ಯ ನಮ್ಮ ಕಲ್ಪನೆಗಿಂತ ಉಜ್ವಲವಾಗಿರಬೇಕು, ಎಲ್ಲರೂ ಎತ್ತಿ ಮುದ್ದಾಡುವಂತಿರಬೇಕು... ಹೀಗೆ ಅಂತ್ಯ ಕಾಣದ ಅನೇಕ ಕನಸುಗಳು ತಂದೆ-ತಾಯಿಗೆ ಇರುತ್ತವೆ. ಅವರು ಕಂಡ ಕನಸುಗಳಲ್ಲಿ ಒಂದೆರಡು ನಿಜವಾದರೂ ಸಾಕು.   ಕುತೂಹಲದ ರಹಸ್ಯಗಳನ್ನು ಬಿಚ್ಚಿಡುವ 'ಹಸ್ತ ರೇಖೆಗಳು'

ಅವರಷ್ಟು ಅದೃಷ್ಟವಂತರು ಭೂಮಿಮೇಲೆ ಇನ್ಯಾರು ಇಲ್ಲ ಎನ್ನುವಂತೆ ಹಿಗ್ಗತ್ತಾರೆ. ನಿಜ, ಆದರೆ ಕಂಡ ಬಯಕೆಗಳು ಆಸೆಗಳಿಂದ ಅದೆಷ್ಟೋ ಪಾಲಕರು ವಂಚಿತರಾಗುತ್ತಾರೆ. ಮನಸ್ಸಿನ ಮೂಲೆಯಲ್ಲಿ ಆ ನೋವನ್ನು ಹಾಗೆಯೇ ಮರೆಮಾಚಿಕೊಂಡಿರುತ್ತಾರೆ... ಮಗುವಿನ ಹುಟ್ಟು, ಬೆಳವಣಿಗೆ ನೈಸರ್ಗಿಕವಾಗಿ ಸಹಜವಾದದ್ದು ಎನಿಸಬಹುದು. ಆದರೆ ಅದರ ಹಿಂದೆ ನಮ್ಮ ಪೂರ್ವಜನ್ಮದ ಪಾಪ-ಕರ್ಮಗಳು ಅಡಕವಾಗಿರುತ್ತವೆ ಎನ್ನುವುದನ್ನು ಕೈಬಿಡುವ ಹಾಗಿಲ್ಲ.  ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ನಾವು ಮಾಡುವ ತಪ್ಪು-ಒಪ್ಪುಗಳು ಅವರ ಭವಿಷ್ಯವನ್ನು ಅವಲಂಬಿಸಿರುತ್ತದೆ ಎಂಬುದು ಜ್ಯೋತಿಷಿಗಳ ಅಂಬೋಣ. ಮಗುವಿನ ಜನನ, ಲಿಂಗ, ಆರೋಗ್ಯ ಹಾಗೂ ಮಕ್ಕಳ ಸಂಖ್ಯೆ ಎಲ್ಲವೂ ನಮ್ಮ ಅಂಗೈಯಲ್ಲಿ ಅಡಗಿರುತ್ತವೆಯಂತೆ. ಹಸ್ತ ಮುದ್ರಿಕೆಯ ಪ್ರಕಾರ ನಮ್ಮ ಹಸ್ತದಲ್ಲಿ ಹಲವಾರು ರೇಖೆಗಳಿರುತ್ತವೆ. ಅವೆಲ್ಲವೂ ಅವರದ್ದೇ ಆದ ಅರ್ಥ ಹಾಗೂ ಭವಿಷ್ಯವನ್ನು ನುಡಿಯುತ್ತವೆ. ನಮ್ಮ ಬದುಕಲ್ಲಿ ಬರುವ ಮುದ್ದಾದ ಕಂದಮ್ಮಗಳು ಹೇಗಿರುತ್ತಾರೆ ಎನ್ನುವ ರೇಖೆಗಳು ಹೀಗಿರುತ್ತವೆ ಎಂದು ಹೇಳಿದ್ದಾರೆ...  

ಅವಳಿ ಮಕ್ಕಳು

ಅವಳಿ ಮಕ್ಕಳು

ಅಂಗೈ ಮುಷ್ಟಿಕಟ್ಟಿದಾಗ ಕೊನೆಯ ಬೆರಳು ಮಡಿಚುವ ಜಾಗದಲ್ಲಿ ಮಕ್ಕಳ ರೇಖೆಯು ಇರುತ್ತದೆ. ಈ ರೇಖೆಗಳು ಈ ಚಿತ್ರದಲ್ಲಿ ಸೂಚಿಸುವ ಆಕಾರದಲ್ಲಿದ್ದರೆ ಅವಳಿ ಮಕ್ಕಳು ಹುಟ್ಟುತ್ತಾರೆ ಎನ್ನಲಾಗುತ್ತದೆ.

ಗಂಡು ಮಗು

ಗಂಡು ಮಗು

ಚೀನಿ ಹಸ್ತ ಮುದ್ರಿಕೆಯ ಪ್ರಕಾರ, ಅಂಗೈಯಲ್ಲಿ ಚಿತ್ರದಲ್ಲಿರುವಂತಹ ಆಳವಾದ ಮತ್ತು ವ್ಯಾಪಕವಾಗಿರುವಂತಹ ರೇಖೆಗಳು ಇದ್ದರೆ ಗಂಡು ಮಗುವನ್ನು ಸೂಚಿಸುತ್ತದೆ.

ಹೆಣ್ಣು ಮಗು

ಹೆಣ್ಣು ಮಗು

ಕಿರಿದಾದ ಮತ್ತು ಆಳವಿಲ್ಲದ ಮಕ್ಕಳ ರೇಖೆಗಳು ಹೆಣ್ಣುಮಗುವಿನ ಸೂಚನೆ ಎಂದು ನಂಬಲಾಗಿದೆ.

ದುರ್ಬಲ ಮಗು

ದುರ್ಬಲ ಮಗು

ಮಕ್ಕಳ ಸಾಲಿನ ಆರಂಭದಲ್ಲಿರುವ ದ್ವೀಪಗಳಂತಹ ಚಿಹ್ನೆ ಮಗುವಿನ ಬಾಲ್ಯಾವಸ್ಥೆಯು ಅನಾರೋಗ್ಯದಿಂದ ಕೂಡಿರುತ್ತದೆ ಎಂಬುದನ್ನು ತಿಳಿಸುತ್ತದೆ.

ಬೆಳವಣಿಗೆಯ ಸಮಯದಲ್ಲಿ ತೊಂದರೆ

ಬೆಳವಣಿಗೆಯ ಸಮಯದಲ್ಲಿ ತೊಂದರೆ

ಮಕ್ಕಳ ರೇಖೆಯು ಈ ಚಿತ್ರದಲ್ಲಿರುವಂತೆ ಇದ್ದರೆ, ಮಗು ಬೆಳವಣಿಗೆ ಹೊಂದುವ ಸಮಯ ಹೆಚ್ಚು ಕಷ್ಟದ ಕಾಲವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಮಗುವಿನ ಆರೋಗ್ಯದಲ್ಲಿ ತೊಂದರೆ

ಮಗುವಿನ ಆರೋಗ್ಯದಲ್ಲಿ ತೊಂದರೆ

ಮಕ್ಕಳ ರೇಖೆಯ ಸಾಲು ಈ ಚಿತ್ರದಲ್ಲಿರುವಂತಿದ್ದರೆ ಮಗು ಅನಾರೋಗ್ಯದಿಂದ ಕೂಡಿರುತ್ತದೆ. ಜೊತೆಗೆ ದೇಹ ರಚನೆಯೂ ವಿಕಾರದಿಂದ ಕೂಡಿರುತ್ತದೆ.

ಪುರುಷರ ಹಸ್ತದಲ್ಲಿ ಮಕ್ಕಳ ರೇಖೆ

ಪುರುಷರ ಹಸ್ತದಲ್ಲಿ ಮಕ್ಕಳ ರೇಖೆ

ಪುರುಷರ ಹಸ್ತದಲ್ಲಿ ಮಕ್ಕಳ ರೇಖೆಯು ಈ ಚಿತ್ರದಲ್ಲಿರುವಂತಿದ್ದರೆ ಶಿಶುವಿನ ಸ್ಥಿತಿ ಅನಾರೋಗ್ಯದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ.

ಮಹಿಳೆಯರ ಹಸ್ತದಲ್ಲಿ ಮಕ್ಕಳ ರೇಖೆ

ಮಹಿಳೆಯರ ಹಸ್ತದಲ್ಲಿ ಮಕ್ಕಳ ರೇಖೆ

ಮಹಿಳೆಯರ ಅಂಗೈಯಲ್ಲಿ ಮಕ್ಕಳ ರೇಖೆ ಈ ಚಿತ್ರದಲ್ಲಿರುವಂತೆ ಇದ್ದರೆ ಮಕ್ಕಳ ಸಂಖ್ಯೆ ಎಷ್ಟೆಂಬುದನ್ನು ತಿಳಿಯುತ್ತದೆ.

English summary

How Many Children Will You Have According To Your Palm Lines?

Check out the details about these lines called the 'children lines' on your palms and get to know on how many kids could you have! Find out more
Subscribe Newsletter