ಅಂಗೈಯಲ್ಲಿ 'M' ಅಕ್ಷರದ ಗುರುತು ಇದ್ದವರು ಅದೃಷ್ಟವಂತರು!

By: manu
Subscribe to Boldsky

ಪ್ರಾಚೀನ ಭಾರತೀಯ ಗ್ರಂಥಗಳ ಪ್ರಕಾರ ಅಂಗೈಯಲ್ಲಿ ರೇಖೆಗಳ ಮೂಲಕ ಕಾಣಿಸಿಕೊಳ್ಳುವ ಅಕ್ಷರಗಳಿಗೆ ಅದರದ್ದೇ ಆದಂತಹ ಮಹತ್ವವಿದೆ. ಕೆಲವೊಂದು ಅಕ್ಷರಗಳು ವ್ಯಕ್ತಿಗೆ ಅದೃಷ್ಟ ತಂದರೆ ಇನ್ನು ಕೆಲವು ದುರಾದೃಷ್ಟ ತರಬಹುದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಲು ಹೊರಟಿರುವುದು ಇಂಗ್ಲಿಷ್‌ನ M ಅಕ್ಷರದ ಬಗ್ಗೆ. ಈ ಅಕ್ಷರವು ಹೆಚ್ಚಿನವರ ಅಂಗೈಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಸ್ತದ ಮೇಲಿನ ರೇಖೆಗಳಲ್ಲಿ 'X' ಗುರುತು! ಏನಿದರ ರಹಸ್ಯ?

ಆದರೆ ಈ ಅಕ್ಷರ ಕಾಣಿಸಿದರೆ ಆ ವ್ಯಕ್ತಿ ತುಂಬಾ ಅದೃಷ್ಟವಂತನೆಂದು ಅರ್ಥ. ಅಂಗೈಯಲ್ಲಿ M ಅಕ್ಷರವನ್ನು ಗುರುತಿಸುವುದು ಹೇಗೆ ಮತ್ತು ಅದರಿಂದ ಯಾವ ಫಲಾಫಲಗಳು ಸಿಗಲಿದೆ ಎಂದು ಹೇಳಲಾಗುವುದು. ಅಂಗೈಯನ್ನು ನೋಡುತ್ತಾ ಮುಂದಕ್ಕೆ ಓದಲು ಶುರು ಹಚ್ಚಿಕೊಳ್ಳಿ... 

ಪ್ರಾಚೀನ ಗ್ರಂಥಗಳ ಪ್ರಕಾರ M

ಪ್ರಾಚೀನ ಗ್ರಂಥಗಳ ಪ್ರಕಾರ M

ಭಾರತದ ಪ್ರಾಚೀನ ಗ್ರಂಥಗಳ ಪ್ರಕಾರ M ಅಕ್ಷರ ಕಾಣಿಸಿಕೊಳ್ಳುವವರು ಸ್ವಯಂಪ್ರೇರಿತರು ಮತ್ತು ಅವರು ಸ್ವಯಂಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಅವರು ತುಂಬಾ ಅದೃಷ್ಟವಂತರು ಮತ್ತು ಇತರರಿಗಿಂತ ಬೇಗನೆ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಬನ್ನಿಅಂಗೈಯಲ್ಲಿ M ಅಕ್ಷರವನ್ನು ಪತ್ತೆ ಹಚ್ಚುವುದು ಹೇಗೆ? ಎಂಬುದನ್ನು ಮುಂದೆ ಓದಿ...

ಸ್ಟೆಪ್ #1

ಸ್ಟೆಪ್ #1

ಅಂಗೈಯಲ್ಲಿ M ಅಕ್ಷರವನ್ನು ಪತ್ತೆ ಹಚ್ಚಲು ಮೊದಲಿಗೆ ನೀವು ಜೀವನರೇಖೆಯನ್ನು ಪತ್ತೆ ಹಚ್ಚುವುದು ಮುಖ್ಯ. ಇದು ಅಂಗೈಯ ಅಂಚಿನಿಂದ ಹೆಬ್ಬೆರಳು ಮತ್ತು ತೋರುಬೆರಳಿನ ನಡು ಭಾಗದಲ್ಲಿ ಆರಂಭವಾಗುತ್ತದೆ. ಇದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದು ಹೆಬ್ಬೆರಳಿನ ತಳದ ತನಕ ಮುಂದುವರಿದು, ಆರೋಗ್ಯ ಮತ್ತು ಆಯುಷ್ಯವನ್ನು ತಿಳಿಸುತ್ತದೆ.

ಸ್ಟೆಪ್ #2

ಸ್ಟೆಪ್ #2

ಮೊದಲು ಅಂಗೈಯ ತಲೆಯ ರೇಖೆಯನ್ನು ಗುರುತಿಸಬೇಕು. ಇದು ಹೆಬ್ಬೆರಳು ಮತ್ತು ತೋರುಬೆರಳಿನ ನಡುವಿನಿಂದ ಅಂಗೈಯ ಅಂಚಿನಿಂದ ಆರಂಭವಾಗುತ್ತದೆ ಮತ್ತು ಅಂಗೈಯ ಮಧ್ಯಭಾಗದಲ್ಲಿ ತುಂಡಾಗುತ್ತದೆ. ಇದು ನೇರವಾಗಿ ಅಥವಾ ಸ್ವಲ್ಪ ಓರೆಯಾಗಿ ಕಾಣಿಸಬಹುದು. ನೀವು ಎಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ಮನೋಬಲ ಹೇಗಿದೆ ಎಂದು ಇದು ತೋರಿಸುತ್ತದೆ.

ಸ್ಟೆಪ್ #3

ಸ್ಟೆಪ್ #3

ಹೃದಯ ರೇಖೆಯನ್ನು ನೀವು ಗುರುತಿಸಬೇಕು. ಇದು M ಅಕ್ಷರವನ್ನು ಮಾಡಲು ಅತೀ ಅಗತ್ಯ. ಇದು ತೋರು ಬೆರಳಿನಿಂದ ಆರಂಭವಾಗಿ ಕಿರು ಬೆರಳಿನ ತನಕ ಹೋಗುತ್ತದೆ, ಹಾಗೂ ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಿಮ್ಮ ಸಂಬಂಧವನ್ನು ತಿಳಿಸುತ್ತದೆ.

ಸ್ಟೆಪ್ #4

ಸ್ಟೆಪ್ #4

ಅಂಗೈಯಲ್ಲಿ ಇರುವಂತಹ ಅತ್ಯಂತ ಅಪರೂಪದ ರೇಖೆಯನ್ನು ನೀವು ಹೀಗೆ ಗುರುತಿಸಬೇಕು. ಇದನ್ನು ವಿಧಿರೇಖೆ ಅಥವಾ ಶನಿ ರೇಖೆ ಎಂದು ಕರೆಯಲಾಗುತ್ತದೆ. ಕೆಲವರ ಅಂಗೈಯಲ್ಲಿ ಇದು ಸಣ್ಣದಾಗಿದ್ದರೆ ಇನ್ನು ಕೆಲವರ ಅಂಗೈಯ ಪೂರ್ತಿ ಈ ರೇಖೆಯಿರುತ್ತದೆ.ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ತೀರ್ಮಾನ

ತೀರ್ಮಾನ

ವಿಧಿ ರೇಖೆಯು ಹೆಚ್ಚಿನವರ ಅಂಗೈಯಲ್ಲಿ ಕಾಣಿಸಿಕೊಳ್ಳದೆ ಇರುವ ಕಾರಣದಿಂದಾಗಿ ಅಂಗೈಯಲ್ಲಿ M ಅಕ್ಷರವು ಕಾಣಿಸಿಕೊಳ್ಳುವುದಿಲ್ಲ. ವಿಧಿರೇಖೆ ಇರುವವರ ಕೈಯಲ್ಲಿ ಹೃದಯ ರೇಖೆ, ತಲೆ ರೇಖೆ ಮತ್ತು ಜೀವನ ರೇಖೆ ಇದ್ದರೆ M ಅಕ್ಷರವನ್ನು ಕಾಣಬಹುದು. ಇದು ಇರುವವರು ತುಂಬಾ ಅದೃಷ್ಟವಂತರೆಂದು ಹೇಳಲಾಗುತ್ತದೆ.ಕುತೂಹಲದ ರಹಸ್ಯಗಳನ್ನು ಬಿಚ್ಚಿಡುವ 'ಹಸ್ತ ರೇಖೆಗಳು'

 
English summary

Do You Have Letter “M” On Your Palm?

According to the ancient Indian scriptures, there is a deep meaning to all the letters that are seen on the palm; and here in this article, we are about to reveal what exactly does a letter "M" mean on your palm. Does the letter M on the palm reveal anything at all? This letter is pretty uncommon, as most of them do not have it. And in case you do, you're quite lucky, my friend, as it does mean you are quite lucky in life
Please Wait while comments are loading...
Subscribe Newsletter