Latest Updates
-
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ!
ಯಾರು ಇಲ್ಲದ ಸಮಯದಲ್ಲಿ, ಈ 'ಕಲ್ಲು' ತನ್ನಷ್ಟಕ್ಕೇ ಚಲಿಸುತ್ತದೆ!!
ವಿವರಿಸಲಾಗದ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುವಾಗ ಪ್ರಕೃತಿಯು ನಮಗೆ ಆಶ್ಚರ್ಯಕರವಾಗಿದೆ ಎಂದು ಅನಿಸುವುದು. ಒಂದು ಕಡೆ ಬಿದ್ದಿರುವ ಕಲ್ಲು ತನ್ನಿಂದ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿರಬೇಕಷ್ಟೆ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯ ಎನ್ನುವಂತೆ ಚಲಿಸುತ್ತವೆ.
ಹೌದು, ಡೆತ್ ಕಣಿವೆಯಲ್ಲಿನ ಕಲ್ಲುಗಳು ತಮ್ಮದೆ ಆದ ನೌಕಾಯಾನವನ್ನು ನಡೆಸುತ್ತವೆ. ಈ ಕುರಿತು ಹಲವಾರು ಸಿದ್ಧಾಂತಗಳನ್ನು ಹಾಗೂ ವಿವರಣೆಗಳನ್ನು ನೀಡಲಾಗುತ್ತದೆ. ಆದರೆ ಅವು ಯಾವುದೂ ನಿಜವಾದ ತರ್ಕವನ್ನು ಒದಗಿಸುವಲ್ಲಿ ಯಶಸ್ವಿಯಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಹಾಗಾದರೆ ಈ ಡೆತ್ ವ್ಯಾಲಿ ಎನ್ನುವುದು ಏನು? ಈ ಪ್ರದೇಶದ ವಿಚಾರವನ್ನು ಕೇಳಿದರೆ ಯಾಕೆ ಎಲ್ಲರೂ ಆಶ್ಚರ್ಯ ಚಕಿತರಾಗುತ್ತಾರೆ? ಇಲ್ಲಿಯ ನಿಗೂಢ ರಹಸ್ಯವೇನು ಎನ್ನುವುದನ್ನು ತಿಳಿದುಕೊಳ್ಳಲು ನಿಮಗೂ ಕುತೂಹಲ ಹಾಗೂ ಕಾತುರ ಉಂಟಾಗುತ್ತಿದೆಯೇ? ಹಾಗಾದರೆ ಬೋಲ್ಡ್ ಸ್ಕೈ ನಿಮಗಾಗಿಯೇ ವಿವಿರವಾದ ವಿವರಣೆಯನ್ನು ನೀಡುತ್ತಿದೆ. ಅದನ್ನು ಓದಿ... ಡೆತ್ ವ್ಯಾಲಿಯ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿಕೊಳ್ಳಿ....

ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಿಸಿ ಇರುವ ಪ್ರದೇಶ
ಡೆತ್ ವ್ಯಾಲಿ ಎನ್ನುವುದು ಒಂದು ಮರುಭೂಮಿಯ ಕಣಿವೆ. ಇದು ಕ್ಯಾಲಿಫೋರ್ನಿಯಾದಲ್ಲಿದೆ. ಇದನ್ನು ಡೆತ್ ವ್ಯಾಲಿ ಹಾಗೂ ಅತ್ಯಂತ ಬಿಸಿ ಅಥವಾ ತಾಪಮಾನ ಇರುವ ಪ್ರದೇಶ ಎಂದು ಹೇಳಲಾಗುತ್ತದೆ. ಈ ಪ್ರದೇಶವು ಸುಮಾರು ಒಂದು ಶತಮಾನಗಳಷ್ಟು ಹಿಂದಿನ ರಹಸ್ಯ ಕಥೆಯನ್ನು ಒಳಗೊಂಡಿದೆ.

ಇಲ್ಲಿಯ ಕಲ್ಲುಗಳು ತಾವಾಗಿಯೇ ಚಲಿಸುತ್ತವೆ
ಈ ಪ್ರದೇಶದಲ್ಲಿರುವ ಕಲ್ಲುಗಳು ತಾವಾಗಿಯೇ ಚಲಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಆ ಕಲ್ಲನ್ನು ನೋಡುತ್ತಿರುವಾಗ ಅವು ಚಲಿಸುವುದಿಲ್ಲ. ಯಾರು ಇಲ್ಲದ ಸಮಯದಲ್ಲಿ ಚಲಿಸುತ್ತವೆ ಎಂದು ಹೇಳಲಾಗುತ್ತದೆ. ಕಲ್ಲುಗಳು ಚಲಿಸುವ ಸ್ಥಳವನ್ನು "ರೇಟ್ರ್ಯಾಕ್ ಪ್ಲಾಯಾ" ಎಂದು ಕರೆಯುತ್ತಾರೆ. ಇದನ್ನು ತೇಲುವ ಕಲ್ಲುಗಳಿಗೆ ಹೆಸರಾದ ಒಣ ಸ್ಥಳ ಎಂತಲೂ ಕರೆಯುತ್ತಾರೆ.

ಇದು ರಹಸ್ಯವಾಗಿದೆ
ಈ ಒಣ ನೆಲದ ಮೇಲೆ ಕಲ್ಲುಗಳು ಸಾಗಿರುವ ಗುರುತನ್ನು ಕಾಣಬಹುದು. ಯಾವ ಮಾರ್ಗವಾಗಿ ಹೋಗಿದೆ ಎನ್ನುವುದನ್ನು ಸಹ ನಮಗೆ ಗೋಚರವಾಗುತ್ತದೆ. ಈ ಕಲ್ಲನ್ನು ಚಲಿಸಲು ಯಾವುದೇ ವ್ಯಕ್ತಿಯ ಬಲವನ್ನು ಬಳಸುವುದಿಲ್ಲ. ಈ ಕ್ರಿಯೆಯು ತಾನಾಗಿಯೇ ನೈಸರ್ಗಿಕವಾಗಿ ನಡೆಯುತ್ತದೆ.

ನೋಡುವಾಗ ಕಾಣಿಸುವುದಿಲ್ಲ
ಯಾರಾದರೂ ನೋಡುವಾಗ ಈ ಕಲ್ಲುಗಳು ಚಲಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಇದು ನಿಜಕ್ಕೂ ಒಂದು ಆಶ್ಚರ್ಯಕರವಾದ ಸಂಗತಿಯಾಗಿದೆ. ಇನ್ನೊಂದು ವಿಚಾರವೆಂದರೆ ಇಲ್ಲಿರುವ ಎಲ್ಲಾ ಕಲ್ಲುಗಳು ಚಲಿಸುವುದಿಲ್ಲ. ಕೆಲವು ಕಲ್ಲುಗಳು ಮಾತ್ರ ಮುಂದೆ ಸಾಗುತ್ತವೆ ಎಂದು ಪರೀಕ್ಷಿಸಲಾಗಿದೆ. ಚಲಿಸುವ ಕಲ್ಲುಗಳು ಸುಮಾರು 2-3 ವರ್ಷಗಳಿಗೊಮ್ಮೆ ಚಲಿಸುತ್ತವೆ. ಅಲ್ಲದೆ ಎಲ್ಲಾ ಕಲ್ಲುಗಳು ಒಂದೇ ಮಾರ್ಗದಲ್ಲಿ ಚಲಿಸುವುದಿಲ್ಲ. ಈ ಕಲ್ಲುಗಳು ಕಾಂತೀಯ ಪರಿಣಾಮದಿಂದ ಚಲಿಸುತ್ತದೆ ಎಂದು ನಂಬಲಾಗಿದೆ.

ವಿವಿಧ ಸಿದ್ಧಾಂತಗಳು
ಈ ಸ್ಥಳದಲ್ಲಿ ನಡೆಯುವ ಅಪರೂಪದ ವಿದ್ಯಮಾನದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಡೆತ್ ವ್ಯಾಲಿಯಲ್ಲಿ ಬಲವಾದ ಗಾಳಿ ಬೀಸುತ್ತದೆ. ಅದರಿಂದಲೇ ಕಲ್ಲುಗಳು ಚಲಿಸುತ್ತವೆ ಎಂದು ಅನೇಕರು ಅಭಿಪ್ರಾಯಿಸುತ್ತಾರೆ. ಗಾಳಿಗೆ ಚಲಿಸುವುದಾದರೆ ಕಲ್ಲು ಮಾತ್ರ ಏಕೆ ಚಲಿಸುತ್ತದೆ? ಎನ್ನುವುದು ಪ್ರಶ್ನೆಯಾಗಿದೆ.

ಇದು ಇನ್ನೂ ರಹಸ್ಯವಾಗಿಯೇ ಉಳಿದಿದೆ
ಕೆಲವು ಸಿದ್ಧಾಂತಗಳು ಮತ್ತು ಸಂಶೋಧನೆಗಳು ಗಾಳಿ ಮತ್ತು ಉಷ್ಣತೆಯ ಸಂಯೋಜನೆಯಿಂದ ಈ ವಿದ್ಯಮಾನ ಉಂಟಾಗುತ್ತದೆ ಎಂದು ಹೇಳುತ್ತವೆ. ಈ ತೇಲುವ ಕಲ್ಲುಗಳು ಮಣ್ಣಿನ ಮೇಲ್ಮೈಗಳಲ್ಲಿ ಅಂಕುಡೊಂಕಾದ ಹಾದಿಯನ್ನು ಮಾಡುತ್ತದೆ. ಈ ವಿಚಾರವನ್ನು ತಿಳಿಯಲು ವರ್ಷಗಳಕಾಲ ಅಲ್ಲೇ ಕುಳಿತು ಅಧ್ಯಯನ ನಡೆಸಬೇಕಷ್ಟೇ...



Click it and Unblock the Notifications
