Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಇದು ಎಲ್ಲಾ ರಾಶಿಚಕ್ರದವರ ಗಮನಕ್ಕೆ! ಹೊಸವರ್ಷ ಬರುವ ಮುನ್ನ ಹೀಗೆ ಮಾಡಿ..
ನೀವು ಈ ವರ್ಷದಲ್ಲಿ ಏನು ಸಾಧಿಸಬೇಕೆಂದುಕೊಂಡಿದ್ದಿರೋ ಎಲ್ಲವನ್ನು ಸಾಧಿಸಿ, ಪಡೆದುಕೊಂಡಿದ್ದೀರಾ? ನಿಮ್ಮ ಉತ್ತರ ಹೌದು ಎಂದಿದ್ದರೆ ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು. ಇಲ್ಲ ಎನ್ನುವುದಾಗಿದ್ದರೆ 2018 ಬರುವ ವೇಳೆಗೆ ನೀವು ಕೆಲವು ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಹೊಸ ವರ್ಷ ಪ್ರಾರಂಭವಾಗುವ ಮುನ್ನ ರಾಶಿ ಚಕ್ರದ ಅನ್ವಯದಂತೆ ಯಾವೆಲ್ಲಾ ಕೆಲಸವನ್ನು ಮಾಡಬೇಕು ಎನ್ನುವುದನ್ನು ಅರಿಯಬೇಕು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಬದಲಾವಣೆ ಹಾಗೂ ಶ್ರೇಯಸ್ಸನ್ನು ಪಡೆದುಕೊಳ್ಳಬೇಕು ಎನ್ನುವ ಆಶಯವಿರುತ್ತದೆ. ಈ ವರ್ಷ ಪಡೆದುಕೊಳ್ಳಲಾಗದ ಸಂಗತಿಯು ಮುಂದಿನ ದಿನಗಳಲ್ಲಿ ಅಥವಾ ಮುಂಬರುವ ವರ್ಷದಲ್ಲಾದರೂ ಪಡೆದುಕೊಳ್ಳಬೇಕು ಎನ್ನುವ ಹಂಬಲ ಇರುತ್ತದೆ. ಇಂತಹ ಹಂಬಲ ಪೂರ್ಣಗೊಳ್ಳಲು ಕೆಲವು ವಿಧಾನವನ್ನು ಅನುಸರಿಸಬೇಕು. ಅಂತಹ ಕೆಲಸ ಏನು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಬೇಕಿದ್ದರೆ ಮುಂದಿರುವ ವಿವರಣೆಯಲ್ಲಿ ಪಡೆದುಕೊಳ್ಳಿ...
ಮೇಷ
ಮೇಷ ರಾಶಿಯವರು ಸದಾ ಗೆಲುವನ್ನು ಸಾಧಿಸುವ ಹವಣಿಕೆಯಲ್ಲಿರುತ್ತಾರೆ. ಇವರು ತಮ್ಮ ಮೊದಲನೇ ಸ್ಥಾನವನ್ನು ಬಿಟ್ಟು ಎರಡನೇ ಸ್ಥಾನದಲ್ಲಿ ನಿಲ್ಲಲು ಬಯಸುವುದಿಲ್ಲ. ಇವರು ಸದಾ ಸ್ಪರ್ಧಾತ್ಮಕ ಮನೋಭಾವದಲ್ಲಿಯೇ ಇರುತ್ತಾರೆ ಎನ್ನಬಹುದು. ಇವರಿಗೆ ಈ ವರ್ಷ ಸ್ವಲ್ಪ ದುರ್ಬಲವಾಗಿದ್ದುದರಿಂದ ಹೆಚ್ಚಿನದಾಗಿ ಏನನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದೇ ಹೇಳಬಹುದು. ಇವರು ಮುಂಬರುವ ಅಂದರೆ 2018ರಲ್ಲಿ ಆರೋಗ್ಯಕರ ಪೈಪೋಟಿ ನಡೆಸಬೇಕಾಗಿದೆ. ಅದಕ್ಕಾಗಿ ಈಗಿನಿಂದಲೇ ಸೂಕ್ತ ರೀತಿಯ ತಯಾರಿ ಮಾಡಿಕೊಳ್ಳಬೇಕು.
ವೃಷಭ
ಈ ರಾಶಿಚಕ್ರದವರು ಸರಿಪಡಿಸುವ ಅಭ್ಯಾಸವನ್ನು ಪಡೆದುಕೊಳ್ಳಬೇಕು. ಇವರು ಮಾಡುವ ತಪ್ಪಿನ ಬಗ್ಗೆಯೂ ಸೂಕ್ತ ರೀತಿಯ ಚಿಂತನೆ ನಡೆಸಬೇಕು. ಇವರು ಎಲ್ಲಾ ವಿಚಾರದಲ್ಲೂ, ಎಲ್ಲವೂ ಸರಿಯಾಗಿದೆ ಎಂದೇ ಚಿಂತಿಸುತ್ತಿರುತ್ತಾರೆ. 2018ಕ್ಕೆ ಸೂಕ್ತ ರೀತಿಯ ಗುರಿಯನ್ನು ಹೊಂದುವುದರ ಜೊತೆಗೆ ಅದು ಸುಲಭವಾಗಿ ನೆರವೇರುವಂತೆ ನೋಡಿಕೊಳ್ಳಬೇಕು.
ಮಿಥುನ
ಇವರು ಸದಾ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎನ್ನುವ ಭಯದಲ್ಲಿಯೇ ಇರುತ್ತಾರೆ. ಇವರು ಈ ಭಯದಿಂದ ಹೊರಬರುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಮುಂಬರುವ ವರ್ಷದಲ್ಲಿ ಕಾರ್ಯವನ್ನು ಕೈಗೊಳ್ಳಲು ಅಡಚಣೆ ಉಂಟಾಗಬಹುದು. ಮುಂದಿನ ವರ್ಷ ಅಂದರೆ 2018ರಲ್ಲಿ ಪರಿಪೂರ್ಣತೆ ಪಡೆದುಕೊಳ್ಳಬೇಕೆಂದರೆ ಮೊದಲು ಭಯದಿಂದ ಹೊರ ಬರಬೇಕು.
ಕರ್ಕ
ಈ ರಾಶಿಚಕ್ರದ ಜನರು ತಮ್ಮ ಭಾವನೆಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಕೆಲವೊಮ್ಮೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. 2018 ರಲ್ಲಿ ಪ್ರತಿಯೊಬ್ಬರಿಗೂ ತಮ್ಮನ್ನು ತಾವು ಭಾವನಾತ್ಮಕವಾಗಿ ಲಭ್ಯವಾಗುವಂತೆ ಮಾಡಲು ಅವಕಾಶ ಮಾಡಿಕೊಡಬೇಕು ಮತ್ತು ಸ್ವಲ್ಪ ಸಮಯದವರೆಗೆ ತಮ್ಮ ಅಸ್ತಿತ್ವವನ್ನು ಗಮನಹರಿಸಬೇಕು. ಅವರು ತಮ್ಮ ಜೀವನದಲ್ಲಿ ಕಳೆದುಹೋದ ಎಲ್ಲಾ ಸಂಬಂಧಗಳನ್ನೂ ಹೊರಬಿಟ್ಟು ಮುಂದೆ ಸಾಗಬೇಕಾಗುತ್ತದೆ.
ಸಿಂಹ
ಈ ರಾಶಿಯವರನ್ನು ಸದಾ ತಪ್ಪು ರೀತಿಯಲ್ಲಿಯೇ ಅರ್ಥೈಸಿಕೊಳ್ಳಲಾಗುತ್ತದೆ. ಅಲ್ಲದೆ ಇವರನ್ನು ಸಾಮಾನ್ಯವಾಗಿ ತಿರಸ್ಕರಿಸುವ ಸಂದರ್ಭವೂ ಉಂಟು. ಎಲ್ಲರಿಗೂ ಸರಿಮಾಡಿ ನಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಸರಿ. ನಿರಾಕರಣೆಯನ್ನು ಸ್ವೀಕರಿಸುವುದು ಮತ್ತು ತಿರಸ್ಕರಿಸುವುದೆಲ್ಲವೂ ನಿಮ್ಮ ಮೇಲೆ ಬಿಟ್ಟಿದೆ. 2018ರಲ್ಲಿ ನೀವು ನಿಮ್ಮ ಅಹಂ ತೊರೆದು, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಿದ್ಧರಾಗಬೇಕು.
ಕನ್ಯಾ
ಈ ರಾಶಿಚಕ್ರದವರ ಆಸೆಗೆ ಅಂತ್ಯ ಎನ್ನುವುದೇ ಇರುವುದಿಲ್ಲ. ಇವರು ತಮ್ಮ ಅಗತ್ಯತೆ ಮತ್ತು ಪ್ರಯತ್ನಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಮುಂಬರುವ ವರ್ಷ 2018ರಲ್ಲಿ ಕಲಿಯಬೇಕಾದದ್ದು ಹಾಗೂ ಸಾಧಿಸಬೇಕಾದ ಅನೇಕ ವಿಚಾರಗಳಿವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.
ತುಲಾ
ಇವರು ತಮ್ಮ ಸುತ್ತಲಿನ ಎಲ್ಲಾ ಜನರನ್ನು ಸಂಪೂರ್ಣವಾಗಿ ಸಂತೋಷದಿಂದ ಇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇವರು ಬೇರೆಯವರನ್ನು ಸಂತೋಷಪಡಿಸುವ ಕಾರ್ಯವನ್ನು ಮೊದಲು ನಿಲ್ಲಿಸಬೇಕು. ಜೊತೆಗೆ ತಮ್ಮ ಕಾರ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. 2018ರಲ್ಲಿ ಇವರು ಬೇರೆಯವರ ಸಂತೋಷಕ್ಕಾಗಿ ಮಾಡುವ ಆಲೋಚನೆಗಳನ್ನು ನಿಲ್ಲಿನಿ, ತಮ್ಮ ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕಾಗುವುದು.
ವೃಶ್ಚಿಕ
ಇವರು ಸೂಕ್ತ ವ್ಯಕ್ತಿಯನ್ನು ಆರಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದರಿಂದ ತಮ್ಮ ವಿಶ್ವಾಸ ಹಾಗೂ ನಂಬಿಕೆಯನ್ನು ಕಳೆದುಕೊಂಡು ತಮ್ಮ ತನವನ್ನು ಕಳೆದುಕೊಳ್ಳುತ್ತಾರೆ ಎನ್ನಬಹುದು. 2018ರಲ್ಲಿ ಇವರು ಸೂಕ್ತ ವ್ಯಕ್ತಿಯ ಆಯ್ಕೆ ಮಾಡುವ ಪರಿಯನ್ನು ತಿಳಿಯಬೇಕಿದೆ. ಅದೊಂದು ಅವರ ಜೀವನವನ್ನು ಸರಿಯಾದ ಹಾದಿಯಲ್ಲಿ ನಡೆಸಿಕೊಂಡು ಹೋಗಲು ಸೂಕ್ತವಾದ ವರ್ಷವಾಗಿದೆ ಎಂದು ಹೇಳಬಹುದು.
ಧನು
ಈ ರಾಶಿಯವರು ಈಗಾಗಲೇ ಕೆಲವು ವಿಚಾರ ಹಾಗೂ ವ್ಯಕ್ತಿಗಳಿಂದ ದೂರವಾಗಿದ್ದಾರೆ. ಇವರು 2018ರಲ್ಲಿ ತಮ್ಮ ಕೈಯಲ್ಲಿರುವ ಅವಕಾಶ ಹಾಗೂ ವಿಚಾರಗಳ ಬಗ್ಗೆ ಸೂಕ್ತವಾಗಿ ಅರಿತು, ಸಂತೋಷವನ್ನು ಕಾಣಬೇಕಿದೆ. ಅದರ ಬಗ್ಗೆ ಹೆಚ್ಚು ಗಮನ ಹಾಗೂ ಕಾರ್ಯ ವಿಧಾನಗಳನ್ನು ತಿಳಿದುಕೊಳ್ಳಬೇಕಿದೆ.
ಧನು
ಈ ರಾಶಿಯವರು ಈಗಾಗಲೇ ಕೆಲವು ವಿಚಾರ ಹಾಗೂ ವ್ಯಕ್ತಿಗಳಿಂದ ದೂರವಾಗಿದ್ದಾರೆ. ಇವರು 2018ರಲ್ಲಿ ತಮ್ಮ ಕೈಯಲ್ಲಿರುವ ಅವಕಾಶ ಹಾಗೂ ವಿಚಾರಗಳ ಬಗ್ಗೆ ಸೂಕ್ತವಾಗಿ ಅರಿತು, ಸಂತೋಷವನ್ನು ಕಾಣಬೇಕಿದೆ. ಅದರ ಬಗ್ಗೆ ಹೆಚ್ಚು ಗಮನ ಹಾಗೂ ಕಾರ್ಯ ವಿಧಾನಗಳನ್ನು ತಿಳಿದುಕೊಳ್ಳಬೇಕಿದೆ.
ಮಕರ
ಈ ರಾಶಿಯವರು ಬೇರೆಯವರು ಮಾಡಿರುವ ತಪ್ಪು ಹಾಗೂ ಅವರ ಸ್ಥಿತಿಯ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ. ತಮ್ಮ ಜೀವನದಲ್ಲಾದ ತೊಂದರೆ ಹಾಗೂ ಕಷ್ಟಗಳ ಬಗ್ಗೆ ಹೆಚ್ಚಿನ ಚಿಂತನೆಯನ್ನೇ ನಡೆಸುವುದಿಲ್ಲ. 2018ರಲ್ಲಿ ಇವರು ತಮ್ಮ ಸ್ಥಿತಿಗತಿಯ ಬಗ್ಗೆ ಚಿಂತನೆ ಹಾಗೂ ಅವುಗಳ ಹಿಡಿತಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಮಾನಸಿಕವಾಗಿ ಸಿದ್ಧತೆಯನ್ನು ನಡೆಸಿಕೊಳ್ಳಬೇಕು.
ಕುಂಬ
ಇವರಿಗೆ ಇತರರು ನೀಡಿದ ಭರವಸೆ ಹಾಗೂ ಮಾತುಗಳಿಂದ ಹೊರ ಬರಬೇಕಾದ ಅನಿವಾರ್ಯತೆಗಳಿವೆ. ಯಾರು ತಮ್ಮ ಮಾತಿಗೆ ಹಾಗೆಯೇ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ ಎನ್ನುವುದನ್ನು ಅರಿಯಬೇಕು. 2018ರಲ್ಲಿ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರಬಾರದು ಎನ್ನುವುದನ್ನು ಅರಿಯಬೇಕಿದೆ.
ಮೀನ
ಈ ರಾಶಿಯವರು ಎಲ್ಲಾ ವಿಚಾರಕ್ಕೂ ಅಧಿಕವಾಗಿ ಚಿಂತಿಸುತ್ತಾರೆ. ಕೆಲವು ವಿಷಯಗಳಿಗೆ ಮಾನಸಿಕವಾಗಿ ಚಿಂತಿಸುವ ಬದಲು ಹೃದಯದ ಮೂಲಕ ಚಿಂತಿಸಬೇಕಾದ ಅನಿವಾರ್ಯತೆಗಳಿರುತ್ತದೆ ಎನ್ನುವುದನ್ನು ಅರಿಯಬೇಕು. ಸಂದರ್ಭವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಂತಹ ಗುಣವನ್ನು ಹೊಂದಿರಬೇಕು. 2018ರಲ್ಲಿ ಅತಿಯಾದ ಚಿಂತನೆಗೆ ಒಳಗಾಗುವುದನ್ನು ನಿಲ್ಲಿಸಿ, ಸಂಭವಿಸಬೇಕಾದ ವಿಚಾರಗಳನ್ನು ಹಾಗೇಯೇ ನೆರವೇರಲು ಬಿಡಿ.