Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಕುಡಿದ ಅಮಲಿನಲ್ಲಿ ನಾಯಿಮರಿಯ ಮೇಲೆ ಅತ್ಯಾಚಾರ ಮಾಡಿದ ಪಾಪಿ...
ಪತ್ರಿಕೆಗಳಲ್ಲಿ ಆಗಾಗ ವೃದ್ಧರು, ಚಿಕ್ಕ ಮಕ್ಕಳು ಅಥವಾ ಅಸಹಾಯಕರ ಮೇಲೆ ಕಾಮುಕರು ಎರಗಿ ಅತ್ಯಾಚಾರ ನಡೆಸಿದ ಬಗ್ಗೆ ವರದಿಗಳು ಬರುತ್ತಲೇ ಇರುತ್ತವೆ. ಈ ವರದಿಗಳನ್ನು ಓದಿದಾಗ ರಕ್ತ ಕುದಿಯುತ್ತದೆ. ಈ ಕಾಮುಕರು ಮನುಷ್ಯರ ಮೇಲೆ ಮಾತ್ರವಲ್ಲ ಬಡಪ್ರಾಣಿಗಳ ಮೇಲೂ ತಮ್ಮ ಕಾಮುಕದೃಷ್ಟಿ ಬೀರುತ್ತಾರೆ. ಇವರ ಕೃತ್ಯಗಳು ಮಾನವತೆಯನ್ನೇ ನಾಚಿಕೆಗೀಡುಮಾಡುತ್ತವೆ.
ಇತ್ತೀಚಿನ ಘಟನೆಯೊಂದರಲ್ಲಿ, ಅದೂ ನಮ್ಮ ಭಾರತದಲ್ಲಿಯೇ, ಪಾನಮತ್ತ ವ್ಯಕ್ತಿಯೊಬ್ಬ ನಾಯಿಮರಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿದ್ದು ಇದರ ಪರಿಣಾಮವಾಗಿ ರಕ್ತಸ್ರಾವ ಹಾಗೂ ಆಘಾತದಿಂದ ಈ ನಾಯಿಮರಿ ಸತ್ತೇ ಹೋಗಿದ್ದು ಮಾತ್ರ ಮನುಕುಲವೇ ತಲೆತಗ್ಗಿಸಬೇಕಾದ ನಾಚಿಕೆಗೇಡಿನ ವಿಷಯವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ....

ಈ ವ್ಯಕ್ತಿ ಒಬ್ಬ ಟ್ಯಾಕ್ಸಿ ಡ್ರೈವರ್
ದೆಹಲಿಯ ನಿವಾಸಿಯಾಗಿರುವ ಮೂವತ್ತನಾಲ್ಕು ವರ್ಷ ವಯಸ್ಸಿನ ಈ ವ್ಯಕ್ತಿ ಟ್ಯಾಕ್ಸಿ ಚಾಲಕನಾಗಿದ್ದು ನಾಯಿಮರಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ರಸ್ತೆಯಲ್ಲಿ ಸಾಯಲು ಬಿಟ್ಟು ತೆರಳಿದ್ದಾನೆ. ಈ ಸಮಯದಲ್ಲಿ ಈತ ಪಾನಮತ್ತನಾಗಿದ್ದು ತನ್ನ ತೃಶೆಯನ್ನು ಪೂರೈಸಿಕೊಳ್ಳಲು ನಾಯಿಮರಿಯನ್ನು ಬಳಸಿಕೊಂಡಿದ್ದಾನೆ.

ಗೋಣಿ ಚೀಲದಲ್ಲಿ ತ್ಯಜಿಸಲ್ಪಟ್ಟ ನಾಯಿಮರಿ
ಅತ್ಯಾಚಾರದ ಸಮಯದಲ್ಲಿ ನಾಯಿಮರಿಯ ದೇಹದಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ತನ್ನ ಕೆಲಸ ಮುಂದುವರೆಸಿದ ಈ ವ್ಯಕ್ತಿ ತನ್ನ ಕೆಲಸವಾದ ಬಳಿಕ ನಾಯಿಮರಿಯನ್ನು ಗೋಣಿಚೀಲದಲ್ಲಿ ಹಾಕಿ ಪಕ್ಕದ ಒಣ ಚರಂಡಿಯಲ್ಲಿ ಎಸೆದಿದ್ದಾನೆ. ಇದಕ್ಕೆ ಇವನ ಸಹೋದರನೂ ಸಹಕರಿಸಿದ್ದಾನೆ.

ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ
ಈ ಸ್ಥಳದ ನಿವಾಸಿಯಾಗಿದ್ದ ಪ್ರಾಣಿಗಳ ಬಗ್ಗೆ ದಯೆ ತೋರುವ ವ್ಯಕ್ತಿಯೊಬ್ಬರು ಈ ನಾಯಿಮರಿಯನ್ನು ಹುಡುಕುತ್ತಾ ಬಂದಾಗ ಗೋಣಿಚೀಲದಲ್ಲಿ ನಾಯಿಮರಿ ಸತ್ತು ಬಿದ್ದುದ್ದನ್ನು ಕಂಡರು. ಆಗ ಅಲ್ಲಿಯೇ ಇದ್ದ ಆ ಟ್ಯಾಕ್ಸಿ ಚಾಲಕನಲ್ಲಿ ಈ ನಾಯಿಮರಿ ಹೇಗೆ ಸತ್ತಿತು ಎಂದು ಕೇಳಿದಾದ ಪಾನಮತ್ತ ಈ ವ್ಯಕ್ತಿ ಯಾವುದೇ ನಾಚಿಕೆಯಿಲ್ಲದೇ ತನ್ನ ಕೃತ್ಯವನ್ನು ಬಣ್ಣಿಸಿ ಬಳಿಕ ಅಲ್ಲಿಂದ ತೆರಳಿದ್ದಾನೆ.

ಈ ವಕ್ತಿ ಇಂದಿಗೂ ನಾಪತ್ತೆಯಾಗಿದ್ದಾನೆ
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮತ್ತಲ ಜನರೆಲ್ಲಾ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ನಾಯಿಮರಿಯನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ದು ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಯಿಮರಿ ತೀವ್ರ ರಕ್ತಸ್ರಾವ ಹಾಗೂ ಮಾನಸಿಕ ಆಘಾತದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಇಂತಹ ಜನರು ತಮ್ಮೊಂದಿಗೆ ಇದ್ದಾರೆಯೇ?
ಆದರೆ ಈ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡಿದ್ದು ಇದುವರೆಗೆ ಯಾವುದೇ ಪತ್ತೆಯಿಲ್ಲ. ಈ ಘಟನೆ ನಾವು ಯಾವ ಲೋಕದಲ್ಲಿ ಜೀವಿಸುತ್ತಿದ್ದೇವೆ ಎಂದು ಚಿಂತನೆ ಮಾಡುವಂತಾಗಿದೆ.



Click it and Unblock the Notifications
