ಏನೋ ಮಾಡುವುದಕ್ಕೆ ಹೋಗಿ, ಕೊನೆಗೆ ಕುರೂಪಿ ಕುರಿಮರಿ ಜನನವಾಯಿತು!

By: manu
Subscribe to Boldsky

ವಂಶವಾಹಿನಿಯ ಕೆಲವು ಸೂಚನೆಗಳನ್ನು ಬದಲಿಸುವ ಮೂಲಕ ತಳಿಯನ್ನು ಅಭಿವೃದ್ಧಿಪಡಿಸುವುದು ಮೇಲ್ನೋಟಕ್ಕೆ ವೈಜ್ಞಾನಿಕ ಸಾಧನೆ ಎಂದು ಕಂಡುಬರುತ್ತದೆ. ಆದರೆ ಕೆಲವೊಮ್ಮೆ ಇದರ ಪರಿಣಾಮಗಳು ಭೀಕರವಾಗಿರಬಹುದು. ಸಾಮಾನ್ಯವಾಗಿ ಮನುಷ್ಯರ ಬಳಕೆಗೆ ತಯಾರಿಸುವ ಯಾವುದೇ ಔಷಧಿಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ಇದರ ಫಲಿತಾಂಶವನ್ನು ಆಧರಿಸಿಯೇ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತದೆ. ಕೆಲವೊಮ್ಮೆ ಅಚಾತುರ್ಯದಿಂದ ಪ್ರಾಣಿಗಳ ಮೇಲೆ ಪ್ರಯೋಗಿಸಬೇಕಾದ ಪ್ರಯೋಗಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಿ ಪ್ರಮಾದಗಳಾಗುವುದುಂಟು.

ವಿಚಿತ್ರ ಆದರೂ ಸತ್ಯ: ಮಿಲನದ ಬಳಿಕ-ಇವುಗಳ ಸಾವು ಖಚಿತ!

ಅರ್ಜೆಂಟೀನಾದಲ್ಲಿ ಇಂತಹದ್ದೇ ಒಂದು ಪ್ರಮಾದದ ಫಲವಾಗಿ ಕುರೂಪಿಯಾಗಿರುವ ಕುರಿಮರಿಯೊಂದು ಹುಟ್ಟಿದ್ದು ಇದು ನೋಡಲು ಸೈತಾನನಂತೆಯೇ ಕಾಣಿಸುತ್ತದೆ. ತಳಿ ವಂಶವಾಹಿನಿಯ ಪ್ರಯೋಗವೊಂದು ಅಂಕೆತಪ್ಪಿ ಎಲ್ಲೆಲ್ಲೋ ಹೋಗಿರುವ ಎಡವಟ್ಟಿನ ಪರಿಣಾಮವೇ ಇದು. ಬನ್ನಿ, ಈ ಪಾಪದ ಕುರಿಮರಿಯ ಕತೆಯನ್ನು ಕೇಳಿದರೆ ನಿಮ್ಮ ಶರೀರದ ರೋಮಗಳು ನಿಲ್ಲುವುದು ಖಂಡಿತ!

ಅರ್ಜಿಂಟೀನಾ ದಲ್ಲಿ ಹುಟ್ಟಿದೆ ಈ ಕುರಿಮರಿ

ಅರ್ಜಿಂಟೀನಾ ದಲ್ಲಿ ಹುಟ್ಟಿದೆ ಈ ಕುರಿಮರಿ

ನೋಡಲಿಕ್ಕೆ ಹೆಚ್ಚೂ ಕಡಿಮೆ ಮಾನವ ಮುಖವನ್ನೇ ಹೋಲುವ ಈ ಕುರಿಮರಿ ಅರ್ಜೆಂಟೀನಾ ದೇಶದಲ್ಲಿ ಹುಟ್ಟಿದ್ದು. ಇದರ ಮಾಲಕಿ ಕುರಿಮರಿಯ ಮುಖ ನೋಡಿದ ತಕ್ಷಣ ಅತ್ಯಂತ ಸೋಜಿಗಗೊಂಡಿದ್ದಾರೆ. ಭೂತವನ್ನೇ ನೋಡಿದಂತೆ ಇವರು ಬೆಚ್ಚಿಬಿದ್ದಿದ್ದು ಯಾವುದೋ ಪ್ರೇತಾತ್ಮವೇ ಕುರಿಮರಿಯ ರೂಪದಲ್ಲಿ ತಮ್ಮ ಮನೆಯಲ್ಲಿ ಹುಟ್ಟಿದೆ ಎಂದು ತಿಳಿದುಕೊಂಡು ಗಾಬರಿಯಾಗಿದ್ದಾರೆ.

ಆದರೆ ಈ ಕುರಿಮರಿ ಜೀವಿಸಿದ್ದು ಕೇವಲ ಮೂರು ಗಂಟೆ ಮಾತ್ರ

ಆದರೆ ಈ ಕುರಿಮರಿ ಜೀವಿಸಿದ್ದು ಕೇವಲ ಮೂರು ಗಂಟೆ ಮಾತ್ರ

ಈ ಕುರಿಮರಿಯ ಕಣ್ಣುಗಳು ಗುಡ್ಡೆಗಳಿಂದ ಹೊರಚಾಚಿದಂತಿದ್ದು ಭಯ ಹುಟ್ಟಿಸುವಂತಿತ್ತು. ಅರ್ಜೆಂಟೀನಾದ ಮಧ್ಯಭಾಗದಲ್ಲಿರುವ ಸ್ಯಾನ್ ಲೂವಿಸ್ ಎಂಬ ಪ್ರದೇಶದಲ್ಲಿ ಈ ಪ್ರಕರಣ ವರದಿಯಾಗಿದೆ. ಹುಟ್ಟಿದ ಮೂರೇ ಘಂಟೆ ಈ ಕುರಿಮರಿ ಬದುಕಿತ್ತು ಎಂದು ಇದರ ಮಾಲಕಿ ತಿಳಿಸಿದ್ದಾರೆ.

ಮಾಲಕಿಯ ವಿವರಣೆಯ ಪ್ರಕಾರ

ಮಾಲಕಿಯ ವಿವರಣೆಯ ಪ್ರಕಾರ

ಈ ಭಯಾನಕ ರೂಪದ ಕುರಿಮರಿಯ ಬಗ್ಗೆ ಇದರ ಮಾಲಕಿ ನೀಡಿರುವ ವಿವರಗಳ ಪ್ರಕಾರ ಈ ಕುರಿಮರಿಯ ಮುಖವನ್ನು ಬಿಟ್ಟು ಇತರ ಅಂಗಗಳೆಲ್ಲಾ ಸಾಮಾನ್ಯ ಆಕಾರ ಹಾಗೂ ಗಾತ್ರವನ್ನು ಪಡೆದಿದ್ದವು. ಆದರೆ ತಲೆಯಲ್ಲಿ ಮಾತ್ರವೇ ವಿರೂಪತೆ ಇತ್ತು. ಇದು ಎಲ್ಲೋ ಕೋಟಿಗೊಂದು ಪ್ರಕರಣದಲ್ಲಿ ಸಂಭವಿಸುವ ವಿದ್ಯಮಾನವಾಗಿರಬಹುದು. ಅಲ್ಲದೇ ಈ ಮರಿ ಉಸಿರಾಡಲು ಕಷ್ಟಪಡುತ್ತಿತ್ತು. ಸಮಯ ಕಳೆದಂತೆ ಇದು ನಿತ್ರಾಣವಾಗುತ್ತಾ ಹೋಗಿ ಮೂರು ಘಂಟೆಗಳ ಬಳಿಕ ಸಾವನ್ನಪ್ಪಿತು.

ಈಗ ಈ ಚಿತ್ರಗಳು ವೈರಲ್ ಆಗಿವೆ

ಈಗ ಈ ಚಿತ್ರಗಳು ವೈರಲ್ ಆಗಿವೆ

ಇವರ ಸೊಸೆ ತಕ್ಷಣವೇ ತನ್ನ ಮೊಬೈಲಿನಿಂದ ಈ ಕುರಿಮರಿಯ ಚಿತ್ರಗಳನ್ನು ತೆಗೆದು ಸಾಮಾಜಿಕ ತಾಣದಲ್ಲಿರುವ ತಮ್ಮ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಚಿತ್ರಗಳು ವೈರಲ್ ಆಗಿದ್ದು ನೋಡಿರುವ ಎಲ್ಲರ ಎದೆಯಲ್ಲಿಯೂ ಅವಲಕ್ಕಿ ಕುಟ್ಟಿಸಿದೆ.

ಈ ಪ್ರಾಣಿ-ಪಕ್ಷಿಗಳಿಂದ ನಾವು ನೋಡಿ ಕಲಿಯುವುದು ಸಾಕಷ್ಟಿದೆ...

ಇದಕ್ಕೂ ಮುನ್ನ ಒಂದು ಹಸುವಿನ ಕರುವೂ ಹೀಗೇ ಜನಿಸಿತ್ತು

ಇದಕ್ಕೂ ಮುನ್ನ ಒಂದು ಹಸುವಿನ ಕರುವೂ ಹೀಗೇ ಜನಿಸಿತ್ತು

ವರದಿಗಳ ಪ್ರಕಾರ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಭಾರತದ ಉತ್ತರ ಪ್ರದೇಶದಲ್ಲಿ ಹಸುವಿನ ಕರುವೊಂದು ಜನಿಸಿದ್ದು ಮಾನವ ಮುಖವನ್ನೇ ಹೋಲುವ ಕಣ್ಣು, ಮೂಗು ಮತ್ತು ಕಿವಿಗಳನ್ನು ಹೊಂದಿತ್ತು.

All Images Sources: PTI

English summary

Demon Baby Goat Born In Argentina Can Give You Nightmares

Genetic mutations can result in some of the most scary results. Some tests are done on animals before they are tried on humans, while some are done on purpose some happen unintentionally! This case is about a baby goat who looked like a demon, thanks to her scary looks! This was a result of a genetic mutation that drastically went wrong. Check out on the story of the demonic goat that can simply haunt you for nights!
Story first published: Wednesday, September 20, 2017, 23:31 [IST]
Please Wait while comments are loading...
Subscribe Newsletter