For Quick Alerts
ALLOW NOTIFICATIONS  
For Daily Alerts

ಮುಂದಿನ 20 ವರ್ಷಗಳಲ್ಲಿ ಈ ದೇಶಗಳು ಅಸ್ತಿತ್ವದಲ್ಲಿ ಇರುವುದಿಲ್ಲ!

ಯಾವುದೋ ಪುಟ್ಟ ದೇಶ ಕಣ್ಮರೆಯಾಗುತ್ತದೆ ಎಂದರೆ ನಂಬಬಹುದು ಆದರೆ ಈ ಬಲಿಷ್ಠ ರಾಷ್ಟ್ರಗಳು ಸಹ ಇರುವುದಿಲ್ಲವೇ ಎಂದರೆ ನಂಬಲೂ ಕಷ್ಟವಾಗಬಹುದು. ಆದರೂ ನೀವು ನಂಬಲೇಬೇಕು..!

By Deepak
|

ಅಮೆರಿಕಾ, ಚೀನಾ, ಇಂಗ್ಲೆಂಡ್ ಮುಂತಾದ ಬಲಿಷ್ಠ ರಾಷ್ಟ್ರಗಳು ಮುಂದಿನ ಕೆಲವು ದೇಶಗಳಲ್ಲಿ ಪ್ರಪಂಚ ಭೂಪಟದಿಂದ ಕಣ್ಮರೆಯಾಗುತ್ತವೆಯಂತೆ. ಅರೇ ಯಾವುದೋ ಪುಟ್ಟ ದೇಶ ಕಣ್ಮರೆಯಾಗುತ್ತದೆ ಎಂದರೆ ನಂಬಬಹುದು ಆದರೆ ಈ ಬಲಿಷ್ಠ ರಾಷ್ಟ್ರಗಳು ಸಹ ಇರುವುದಿಲ್ಲವೇ ಎಂದರೆ ನಂಬಲೂ ಕಷ್ಟವಾಗಬಹುದು. ಆದರೂ ನೀವು ನಂಬಲೇಬೇಕು.

ಕೇವಲ ಈ ಮೇಲಿನ ರಾಷ್ಟ್ರಗಳಷ್ಟೇ ಅಲ್ಲ ಸ್ಪೇನ್ ಮತ್ತು ಬೆಲ್ಜಿಯಂನಂತಹ ಯೂರೋಪಿಯನ್ ದೇಶಗಳು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನತದೃಷ್ಟ ರಾಷ್ಟ್ರಗಳಾಗಿವೆ. ಬನ್ನಿ ಇನ್ನು 20 ವರ್ಷಗಳಲ್ಲಿ ಕಾಣೆಯಾಗಲಿರುವ ದೇಶಗಳ ಪಟ್ಟಿಯನ್ನು ನಿಮಗೆ ನೀಡುತ್ತೇವೆ. ನಿಮ್ಮಿಂದ ಸಾಧ್ಯವಾದರೆ ಆ ದೇಶಗಳಿಗೆ ಒಮ್ಮೆ ಹೋಗಿ ಬಂದು ಬಿಡಿ.

ಅಚ್ಚರಿ: ಕಣ್ಮರೆ ಆಗಲು ಸಜ್ಜಾಗುತ್ತಿದೆ ವಿಶ್ವದ ಪ್ರತಿಷ್ಠಿತ ನಗರಗಳು!

ಅಸಲಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದ ರಾಷ್ಟ್ರಗಳನ್ನು ಯುದ್ಧ, ಪ್ರಾಕೃತಿಕ ಅಂಶಗಳು, ಸ್ವಾತಂತ್ರ್ಯ ಮತ್ತು ಇನ್ನಿತರ ಅಂಶಗಳ ಆಧಾರದ ಮೇಲೆ ಈ ಪಟ್ಟಿಗೆ ಪರಿಗಣಿಸಲಾಗಿದೆ. ಬನ್ನಿ ಅವು ಯಾವ ಯಾವ ರಾಷ್ಟ್ರಗಳು ಎಂದು ತಿಳಿದುಕೊಳ್ಳೋಣ...

ಉತ್ತರ ಕೊರಿಯಾ

ಉತ್ತರ ಕೊರಿಯಾ

ಏಷ್ಯಾದ ಈ ಸಣ್ಣ ರಾಷ್ಟ್ರವು ಸ್ವಾವಲಂಬನೆಗೆ ಮತ್ತು ಆಡಳಿತಕ್ಕೆ ಹೆಸರುವಾಸಿಯಾಗಿದೆ. ಇವರು ತಮ್ಮ ಗಡಿಯೊಳಗೆ ಮಾತ್ರ ದೊರಕುವ ಸಂಪನ್ಮೂಲಗಳನ್ನು ಮಾತ್ರ ಬಳಸುತ್ತಾರೆ. ಸ್ವಲ್ಪ ಪ್ರಮಾಣದ ಸಹಾಯ ಇವರ ಮಿತ್ರ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾದಿಂದ ಬರುತ್ತದೆ. ಮೂಲಗಳ ಪ್ರಕಾರ ಕೊರಿಯಾವು ತನ್ನ ಏಕಾಂಗಿತನವನ್ನು ತ್ಯಜಿಸಿ ರಷ್ಯಾ ಮತ್ತು ಚೀನಾದ ಸಹಾಯವನ್ನು ಮೀರಿ ವಿದೇಶಿ ಸಂಪರ್ಕಗಳನ್ನು ಸಾಧಿಸುತ್ತದೆಯಂತೆ. ಆಗ ಅವುಗಳ ಗಡಿ ಚಹರೆಯೇ ಬದಲಾಗುತ್ತದೆ.

'ಉತ್ತರ ಕೊರಿಯಾದ' ಕರಾಳ ಮುಖ ತೆರೆದಿಟ್ಟ ಯುವತಿ!! ವಿಡಿಯೋ ವೈರಲ್....

ಬೆಲ್ಜಿಯಂ

ಬೆಲ್ಜಿಯಂ

ಯೂರೋಪಿನ ಈ ಸಣ್ಣ ರಾಷ್ಟ್ರವು ಫ್ಲಾಂಡರ್ಸ್ ಮತ್ತು ವಲ್ಲೋನಿಯಾ ಎಂಬ ಪ್ರಾಂತ್ಯಗಳಾಗಿ ಅಲ್ಲ ಅಲ್ಲ ದೇಶಗಳಾಗಿ ಬೇರ್ಪಡಲಿದೆ. ಈ ಎರಡೂ ಪ್ರಾಂತ್ಯಗಳ ಇಬ್ಭಾಗದ ಕುರಿತಾಗಿ 2007 ರಲ್ಲಿಯೇ ವ್ಯಾಪಕ ಚರ್ಚೆ ನಡೆಯಿತು. ವಲ್ಲೋನಿಯಾ ಪ್ರಾಂತ್ಯದಲ್ಲಿರುವವರು ಬಹುತೇಕ ಫ್ರೆಂಚ್ ಭಾಷೆ ಮಾತನಾಡುವ ಜನ. ಇವರು ಫ್ರೆಂಚ್ ಜೊತೆಗೆ ಸಂಬಂಧವಿರುವ ದೇಶವಾಗಿ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಇನ್ನು ಫ್ಲಾಂಡರ್‌ಗಳು ಸಹ ಇವರಿಂದ ಬೇರ್ಪಟ್ಟು ತಮ್ಮದೇ ಆದ ದೇಶ ಸ್ಥಾಪನೆಗೆ ಮನಸ್ಸು ಮಾಡುತ್ತಿದ್ದಾರೆ.

ಚೀನಾ

ಚೀನಾ

ಜಗತ್ತಿನ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿರುವ ಚೀನಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರ ಆರ್ಥಿಕತೆ ಮತ್ತು ಮಿಲಿಟರಿ ಶಕ್ತಿಯ ಕುರಿತು ಮಾತನಾಡುವ ಹಾಗೆ ಇಲ್ಲ ಬಿಡಿ. ಇತರೆ ರಾಷ್ಟ್ರಗಳು ಇದರ ಜೊತೆಗೆ ಜಗಳ ಮಾಡಲು ಹಿಂದೇಟು ಹಾಕುತ್ತವೆ. ಆದರೆ ಚೀನಾದಲ್ಲಿರುವ ಪರಿಸರ ಈ ದೇಶಕ್ಕೆ ದೊಡ್ಡ ಸವಾಲು ಹಾಕಿದೆ. ಇವರು ಮಾಡಿರುವ ಪರಿಸರ ನಾಶವೇ ಸಾಕು ಇವರ ವಿನಾಶ ಮಾಡಲು. ಮುಂದಿನ ಕೆಲವು ವರ್ಷಗಳಲ್ಲಿ ಬೀಜಿಂಗ್ ಹೊಗೆಯ ಸಮಸ್ಯೆಗೆ ತುತ್ತಾಗಬಹುದು. ಜನರನ್ನು ಮನೆಯಿಂದ ಹೊರಗೆ ಬರದಂತೆ ತಡೆಯುವ ಆದೇಶಗಳು ಹೊರಬೀಳುತ್ತವೆ. ಈಗಾಗಲೇ ಈ ದೇಶದಲ್ಲಿ ಇಂತಹ ಪ್ರಕರಣಗಳು ನಡೆದಿವೆ ಮತ್ತು ಆಕ್ಸಿಜೆನ್ ಬಾರ್‌ಗಳು ಸಹ ಆರಂಭವಾಗಿವೆ. ಈ ದೇಶದ ಸರ್ಕಾರ ಈಗಾಗಲೇ 2030ಕ್ಕೆ ನಮಗೆ ಕುಡಿಯುವ ನೀರಿನ ಬರ ಎದುರಾಗುತ್ತದೆ ಎಂದು ಘೋಷಿಸಿದೆ. ಚೀನಾ ವಿಶ್ವ ಭೂಪಟದಿಂದ ಕಣ್ಮರೆಯಾಗುವ ಪಟ್ಟಿಯಲ್ಲಿ ಸಹ ಅಗ್ರ ಸ್ಥಾನದಲ್ಲಿದೆ.

ವಿಷಭರಿತ ಚೀನಾ ಆಹಾರಗಳು ಮಾರುಕಟ್ಟೆಗೆ ಬಂದುಬಿಟ್ಟಿವೆ!

 ಇರಾಕ್

ಇರಾಕ್

ಮಧ್ಯ ಪ್ರಾಚ್ಯದ ಈ ದೇಶವು ಸಹ ಇಬ್ಭಾಗವಾಗಿ ಹೊಸ ದೇಶವಾಗಿ ಪರಿವರ್ತನೆಯಾಗುತ್ತದೆ. ಉತ್ತರದಲ್ಲಿ ಖುರ್ದ್‌ಗಳು, ಪಶ್ಚಿಮದಲ್ಲಿ ಸುನ್ನಿಗಳು ಮತ್ತು ಶೀಟೆಸ್ ದಕ್ಷಿಣದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇವರ ನಡುವೆ ಕಾದಾಟ ತಪ್ಪಿಸಲು ಇದಕ್ಕಿಂತ ಉತ್ತಮ ಮಾರ್ಗವಿಲ್ಲ. ಇರಾಕ್ ಸಹ ಬಹುಬೇಗ ಜಗತ್ತಿನ ಭೂಪಟದಿಂದ ಕಣ್ಮರೆಯಾಗುತ್ತದೆ.

ಪ್ರಪಂಚದಲ್ಲಿನ 8 ಅತ್ಯಂತ ಅಪಾಯಕಾರಿ ನಗರಗಳು

ಯುನೈಟೆಡ್ ಕಿಂಗ್‌ಡಮ್

ಯುನೈಟೆಡ್ ಕಿಂಗ್‌ಡಮ್

ಸ್ಕಾಟ್‌ಲ್ಯಾಂಡ್ ತುಂಬಾ ದಿನಗಳಿಂದ ಯುಕೆಯಿಂದ ಸ್ವತಂತ್ರವಾಗಲು ಬಯಸುತ್ತಿದೆ. ಇದರ ಜೊತೆಗೆ ಇಂಗ್ಲೆಂಡ್ ಯೂರೋಪಿಯನ್ ಯೂನಿಯನ್‌ನ ಸದಸ್ಯನಾಗಿ ಉಳಿದಿಲ್ಲ. ಈ ಕಾರಣದಿಂದಾಗಿ ಈ ದೇಶವು ಸಹ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬೇರ್ಪಡಲು ಕಾಯುತ್ತಿದೆ.

ಅಮೆರಿಕಾ

ಅಮೆರಿಕಾ

ಅಮೆರಿಕಾವು ಸಹ ಸಾಮಾಜಿಕವಾಗಿ ಮತ್ತು ರಾಜಕೀಯ ನಂಬಿಕೆಗಳ ಪ್ರಕಾರ ವಿಂಗಡಣೆಯಾಗಿದೆ. ಈ ದೇಶವು ರಾಜ್ಯಗಳ ಒಂದು ಒಕ್ಕೂಟವಾಗಿ ಉಳಿದಿದೆ. ಈ ದೇಶವನ್ನು ಇಬ್ಭಾಗ ಮಾಡಬೇಕು ಎಂಬ ಸಿದ್ಧಾಂತಗಳು ತುಂಬಾ ದಿನಗಳಿಂದ ಚಾಲ್ತಿಯಲ್ಲಿದೆ ಮತ್ತು ಈ ಕುರಿತಾಗಿ ಹೋರಾಟಗಳು ನಡೆಯುತ್ತಿವೆ.

ಸ್ಪೇನ್

ಸ್ಪೇನ್

ಯೂರೋಪಿನ ಹೆಗ್ಗುರುತುಗಳಲ್ಲಿ ಒಂದಾದ ಈ ದೇಶವು 2008 ರಿಂದ ಆರ್ಥಿಕತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಅವರ ರಾಷ್ಟ್ರೀಯ ತಲಾ ಉತ್ಪನ್ನ (ಜಿಡಿಪಿ) ಅಪಾಯಕಾರಿಯಾದ 94% ಗೆ ಸಮೀಪದಲ್ಲಿದೆ. ದೇಶದಲ್ಲಿರುವ ಕಾಲು ಭಾಗ ಯುವಜನರಿಗೆ ಉದ್ಯೋಗವಿಲ್ಲ. ಉದ್ಯೋಗ ಅರಸಿ ಇವರು ಪಕ್ಕ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಕಾರಣಗಳಿಂದ ಸ್ಪೇನ್ ಸಹ ಭೂಪಟದಿಂದ ಬೇಗ ಕಣ್ಮರೆಯಾಗಬಹುದು.

ಲಿಬ್ಯಾ

ಲಿಬ್ಯಾ

ಇರಾಕ್‌ನಂತೆ ಲಿಬ್ಯಾ ಸಹ ವಸಾಹತುಶಾಹಿ ಸಮಯದಲ್ಲಿ ರಚನೆಗೊಂಡ ರಾಷ್ಟ್ರವಾಗಿದೆ. ಇದು ಸಹ ಮೂರು ಮುಖ್ಯ ಪ್ರಾಂತ್ಯಗಳಾಗಿ ವಿಭಜನೆ ಹೊಂದಿದೆ. ಈ ಮೂರೂ ಪ್ರಾಂತ್ಯಗಳಲ್ಲಿ ತಮ್ಮದೇ ಆದ ಮನೋಭಾವದ ಪ್ರಜೆಗಳು ಇದ್ದಾರೆ ಮತ್ತು ಇವರು ಲಿಬ್ಯಾದ ಸಾರ್ವಭೌಮತೆಗೆ ಬದ್ಧರಾಗಿಲ್ಲ.

ಮಾಲ್ಡೀವ್ಸ್

ಮಾಲ್ಡೀವ್ಸ್

ಈ ದ್ವೀಪ ರಾಷ್ಟ್ರವು ತುಂಬಾ ಬೇಗ ಕಣ್ಮರೆಯಾಗುತ್ತದೆ. ಹಿಂದೂ ಮಹಾಸಾಗರದಲ್ಲಿ ನೆಲೆಸಿರುವ ಈ ಉಷ್ಣವಲಯದ ರಾಷ್ಟ್ರವು ಕೆಲವು ವರ್ಷಗಳಿಂದ ಸಮುದ್ರ ಮಟ್ಟ ಏರಿಕೆಯಾಗುವುದರಿಂದ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದೆ.

ಬಹಾಮಾಸ್

ಬಹಾಮಾಸ್

ಸಣ್ಣ ಸಣ್ಣ ದ್ವೀಪ ರಾಜ್ಯಗಳ ಒಕ್ಕೂಟವಾದ ಈ ದೇಶವು ಸಹ ಪ್ರಕೃತಿಯ ಪ್ರಬಲ ಬೆದರಿಕೆಗೆ ಒಳಗಾಗಿದೆ. 1.2 ಡಿಗ್ರಿಯಷ್ಟರ ಸಣ್ಣ ಉಷ್ಣಾಂಶದ ಬದಲಾವಣೆಯು ಸಹ ಈ ದೇಶದ ಕರಾವಳಿಯನ್ನು ನಿರ್ನಾಮ ಮಾಡಬಹುದು. ಒಂದು ವೇಳೆ ಸಾಗರವು 5 ಅಡಿಗಳಷ್ಟು ಮೇಲೆ ಏರಿದರೆ ಬಹಾಮಾದ ಸುಮಾರು 80% ಭೂಭಾಗ ಸಾಗರದೊಳಗೆ ಸೇರಿಬಿಡುತ್ತದೆ.

English summary

Countries That May Not Exist In The Next 20 Years!

European countries such as Spain and Belgium are also labeled to have ill-fated futures. Check out on the list of countries that will not survive for more than 20 years in the coming years. The list is based on many reasons like war, natural factors, the want of independence and many other such reasons that will simply shock you.
X
Desktop Bottom Promotion