ಹಸ್ತದ ರೇಖೆಗಳು ಭವಿಷ್ಯ ನುಡಿದರೆ-ಹಸ್ತದ ಬಣ್ಣ ಆರೋಗ್ಯದ ಮಾಹಿತಿ ನೀಡುತ್ತದೆ!

By: Arshad
Subscribe to Boldsky

ಓರ್ವ ವ್ಯಕ್ತಿಯ ಹಸ್ತವನ್ನು ಗಮನಿದರೆ ಹಸ್ತದ ರೇಖೆಗಳು ಭವಿಷ್ಯ ನುಡಿದರೆ ಹಸ್ತದ ಬಣ್ಣ ಆರೋಗ್ಯದ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತವೆ. ಈ ವ್ಯಕ್ತಿ ಮುಂದೆ ಯಾವ ವೃತ್ತಿಯನ್ನು ಕೈಗೊಳ್ಳುವರು, ಇವರ ಅದೃಷ್ಟ ಹಾಗೂ ಇನ್ನಿತರ ಜೀವನಕ್ಕೆ ಸಂಬಂಧಿಸಿದ ಸೂಚನೆಗಳ ಮುನ್ಸೂಚನೆಯನ್ನು ಪಡೆಯಬಹುದು.

ಅಂಗೈಯಲ್ಲಿ 'H' ಅಕ್ಷರ ಇದೆಯೇ ಎಂದು ಹುಡುಕಿ, ಇದ್ದರೆ ನೀವು ಅದೃಷ್ಟವಂತರು!

ಇಂದಿನ ಲೇಖನದಲ್ಲಿ ಹಸ್ತದ ಬಣ್ಣದ ವೈವಿಧ್ಯತೆ ಹಾಗೂ ಇವುಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಕೆಲವಾರು ಮಾಹಿತಿಗಳನ್ನು ನೀಡಲಿದ್ದೇವೆ. ಬನ್ನಿ, ಈ ಅಚ್ಚರಿಯ ಸಂಗತಿಗಳನ್ನು ಅರಿತು ನಿಮ್ಮ ಅಕ್ಕಪಕ್ಕದವರ ಹಸ್ತಗಳನ್ನು ಗಮನಿಸುವ ಮೂಲಕ ಅವರ ವ್ಯಕ್ತಿತ್ವವನ್ನು ಗುರುತಿಸಲು ಪ್ರಯತ್ನಿಸೋಣ...

ಗುಲಾಬಿ ಬಣ್ಣದ ಹಸ್ತಗಳು

ಗುಲಾಬಿ ಬಣ್ಣದ ಹಸ್ತಗಳು

ಸಾಮಾನ್ಯವಾಗಿ ಹೆಚ್ಚಿನ ವ್ಯಕ್ತಿಗಳ ಹಸ್ತಗಳು ತಿಳಿ ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಈ ವ್ಯಕ್ತಿಗಳು ಶಿಸ್ತುಬದ್ದ ಜೀವನವನ್ನು ಇಷ್ಟಪಡುತ್ತಾರೆ. ಇವರ ಜೀವನದಲ್ಲಿ ಎಲ್ಲವೂ ಸಮತೋಲನದಲ್ಲಿರುತ್ತವೆ. ಊಟವೇ ಆಗಲಿ, ವಿದ್ಯಾಭಾಸ, ಸಮಾಜದಲ್ಲಿ ಸಾಮರಸ್ಯ, ಸಂಬಂಧಗಳು, ಆಧ್ಯಾತ್ಯ, ಯಾವುದೇ ವಿಷಯವನ್ನು ಇವರು ಸೂಕ್ತ ಸ್ಥಳದಲ್ಲಿಟ್ಟು ಎಷ್ಟು ಬೇಕೋ ಅಷ್ಟೇ ಪಡೆದುಕೊಳ್ಳುವವರಾಗಿರುತ್ತಾರೆ.

ಸಾಮಾನ್ಯವಾಗಿ ಇವರು ಖ್ಯಾತ ಚಿಂತಕರಾಗಿರುತ್ತಾರಂತೆ!

ಸಾಮಾನ್ಯವಾಗಿ ಇವರು ಖ್ಯಾತ ಚಿಂತಕರಾಗಿರುತ್ತಾರಂತೆ!

ಇವರು ಅತ್ಯಂತ ಆರೋಗ್ಯಕರ ವ್ಯಕ್ತಿಗಳಾಗಿರುತ್ತಾರೆ. ತಿಳಿಗುಲಾಬಿಗೂ ಕೊಂಚ ಹೆಚ್ಚೇ ಗುಲಾಬಿಯಿಂದ ತೊಡಗಿ ಗಾಢಗುಲಾಬಿ ಬಣ್ಣದ ಹಸ್ತ ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಖ್ಯಾತ ಚಿಂತಕರಾಗಿರುತ್ತಾರೆ.

 ಕೆಂಪು ಬಣ್ಣದ ಹಸ್ತಗಳು

ಕೆಂಪು ಬಣ್ಣದ ಹಸ್ತಗಳು

ಒಂದು ವೇಳೆ ಕಣ್ಣಿಗೆ ಥಟ್ಟನೇ ಗೋಚರಿಸುವಷ್ಟು ಪ್ರಖರವಾದ ಕೆಂಪು ಬಣ್ಣದ (ಅಂದರೆ ಸರಿಸುಮಾರು ಅರ್ಧ ಹಣ್ಣಾದ ಕಲ್ಲಂಗಡಿಯಷ್ಟು) ಹಸ್ತದ ವ್ಯಕ್ತಿಗಳು ಇದೇ ಕಾರಣಕ್ಕೆ ಎಲ್ಲರ ಗಮನವನ್ನು ಶೀಘ್ರವಾಗಿ ಪಡೆಯುತ್ತಾರೆ. ಇವರು ಅತಿ ಹೆಚ್ಚು ಶ್ರಮಜೀವಿಗಳಾಗಿದ್ದು ಸದಾ ಸಮಾಜಸೇವೆಯಲ್ಲಿ ತೊಡಗಿರುತ್ತಾರೆ. ಇವರ ಜೀವನಮಂತ್ರವೆಂದರೆ "ಶ್ರಮವಹಿಸಿ ಕೆಲಸ ಮಾಡಿ, ಇದರ ಫಲವನ್ನು ಪೂರ್ಣವಾಗಿ ಅನುಭವಿಸಿ" ಎಂದೇ ಇರುತ್ತದೆ.

 ಕೆಂಪು ಬಣ್ಣದ ಹಸ್ತಗಳು

ಕೆಂಪು ಬಣ್ಣದ ಹಸ್ತಗಳು

ಹೆಚ್ಚಿನ ವ್ಯಕ್ತಿಗಳು ಶ್ರಮದ ಕೆಲಸವೆಂದರೆ ದೈಹಿಕ ಶ್ರಮವನ್ನೇ ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ. ಕೆಂಪು ಬಣ್ಣ ಅತಿ ಹೆಚ್ಚು ಭಾವನಾತ್ಮಕ ಸೂಸುವ ಬಣ್ಣವಾಗಿದ್ದು ಈ ವ್ಯಕ್ತಿಗಳು ಅತಿ ಹೆಚ್ಚು ಭಾವುಕರಾಗಿರುತ್ತಾರೆ. ಈ ವ್ಯಕ್ತಿಗಳು ಮೆದುಳಿಗೆ ಕಸರತ್ತು ನೀಡುವ ಉದ್ಯೋಗಗಳಿಗಿಂತಲೂ ಹೆಚ್ಚಾಗಿ ದೈಹಿಕ ಶ್ರಮ ಬೇಡುವ ಕೆಲಸಗಳನ್ನೇ ವೃತ್ತಿಯಾಗಿಸಿಕೊಳ್ಳಲು ಇಷ್ಟಪಡುತ್ತಾರೆ.

ಹಳದಿ ಹಸ್ತಗಳು

ಹಳದಿ ಹಸ್ತಗಳು

ತಿಳಿ ಹಳದಿ ಬಣ್ಣದ ಹಸ್ತದ ವ್ಯಕ್ತಿಗಳು ಸಾಮಾನ್ಯವಾಗಿ ಇತರರಿಗಿಂತಲೂ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಹಳದಿ ಎಂದರೆ ಕಾಮಾಲೆಯ ಲಕ್ಷಣವಾಗಿದ್ದು ಇದೇ ರೀತಿಯ ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುವಷ್ಟು ದುರ್ಭಲರಾಗಿರುತ್ತಾರೆ. ಇವರಿಗೆ ಒತ್ತಡ, ಖಿನ್ನತೆ, ಚಿಂತೆ ಹಾಗೂ ಅತಿ ಹೆಚ್ಚು ಚಿಂತಿಸುವ ತೊಂದರೆ ಇದ್ದು ತಮ್ಮನ್ನು ತಾವೇ ಸಂತೈಸಿಕೊಳ್ಳುವ ಸಾಮರ್ಥ್ಯದಿಂದ ವಂಚಿತರಾಗಿರುತ್ತಾರೆ.

ಹಳದಿ ಹಸ್ತಗಳು

ಹಳದಿ ಹಸ್ತಗಳು

ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ಇತರರಿಗಿಂತ ಇವರು ಬೇಗನೇ ಗ್ರಹಿಸುತ್ತಾರೆ. ಇವರು ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆಯುವವರಾಗಿರುತ್ತಾರೆ. ಇವರು ಪರಿಸ್ಥಿತಿ ತಮಗೆ ವಿರುದ್ಧವಾಗಿದ್ದಾಗ ಸುಲಭವಾಗಿ ಸಿಟ್ಟಿಗೇಳುವವರಾಗಿರುತ್ತಾರೆ. ಇವರು ಚಿಕ್ಕ ಕಾರಣಕ್ಕೂ ಇತರರಿಂದ ಕಳಚಿಕೊಂಡು ಒಂಟಿಯಾಗಿ ಹಾಗೂ ಖಿನ್ನರಾಗಿರುವ ವ್ಯಕ್ತಿತ್ವ ಹೊಂದಿರುತ್ತಾರೆ.

ಬಿಳಿ ಹಾಗೂ ಪೇಲವ ಹಸ್ತಗಳು

ಬಿಳಿ ಹಾಗೂ ಪೇಲವ ಹಸ್ತಗಳು

ಈ ವ್ಯಕ್ತಿಗಳು ಬಹುತೇಕ ಸಂದರ್ಭದಲ್ಲಿ ಶಾಂತ ಸ್ವಭಾವ ಹೊಂದಿದ್ದು ಇದೇ ಕಾರಣಕ್ಕೆ ಸುತ್ತಮುತ್ತಲಿನವರು ಚಕಿತಗೊಳ್ಳುವಂತೆ ಮಾಡುತ್ತಾರೆ. ಇವರು ಮಿತಭಾಷಿಗಳು ಹಾಗೂ ಸುಸಂಸ್ಕೃತರು ಹಾಗೂ ಪ್ರಕೃತಿ ತಮಗೆ ನೀಡಿದ ಎಲ್ಲಾ ವಿಷಯಗಳಿಗೆ ಗೌರವ ನೀಡುವವರಾಗಿರುತ್ತಾರೆ. ಅಲ್ಲದೇ ಇವರು ಜೀವನವನ್ನು ಇತರರಿಗಿಂತ ಭಿನ್ನವಾದ ದೃಷ್ಟಿಕೋನದಲ್ಲಿ ಕಾಣುವ ಹಾಗೂ ಅನುಭವಿಸುವವರಾಗಿರುತ್ತಾರೆ. ಇವರಿಗೆ ಇತರರಿಂದ ಯಾವುದೇ ಅಪೇಕ್ಷೆ ಇರುವುದಿಲ್ಲ ಹಾಗೂ ಯಾವುದೇ ಭಾವನೆಯಿಲ್ಲದೇ ನಿಕಟವರ್ತಿಗಳಿಂದ ಸುಲಭವಾಗಿ ಬೇರ್ಪಡುವ ತಣ್ಣನೆಯ ಸ್ವಭಾವ ಹೊಂದಿರುತ್ತಾರೆ.

English summary

Colour Of Your Palm Reveals This Secret About You

By looking at the palm of a person, there is a lot that can be revealed about him. From the career path he'd take, to the luck factor and most of the things related to his life - these can be predicted based on the colour of the palm.We'll let you know what different coloured palms can signify and what they could reveal about a person's personality. What are you waiting for?
Subscribe Newsletter