Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಅಚ್ಚರಿ ಜಗತ್ತು: ಯಾವ ತಾಯಿಗೂ ಇಂತಹ ವಿಚಿತ್ರ ಮಗು ಹುಟ್ಟದಿರಲಿ
ಯಾವುದೇ ತಾಯಿ ಜನ್ಮ ನೀಡುವಾಗ ತನ್ನ ಮಗು ಆರೋಗ್ಯವಂತವಾಗಿರಲಿ ಎಂದೇ ಮೊದಲಾಗಿ ಪ್ರಾರ್ಥಿಸುತ್ತಾಳೆ. ಆರೋಗ್ಯವಿದ್ದರೆ ಉಳಿದ್ದದ್ದೆಲ್ಲಾ. ಒಂದು ವೇಳೆ ಯಾವುದಾದರೂ ನ್ಯೂನ್ಯತೆ ಅಥವಾ ವಿರೂಪವನ್ನು ಹೊತ್ತೇ ಜನಿಸಿದರೆ? ಆ ತಾಯಿಗೆ ಮಾತ್ರವಲ್ಲ, ಮನೆಯ ಎಲ್ಲಾ ಸದಸ್ಯರಿಗೂ ಇದು ಚಿಂತೆಯ ವಿಷಯವಾಗಿ ಕಾಡಬಹುದು. ಆದರೆ ಅಲ್ಲಲ್ಲಿ ಇಂತಹ ಕೆಲವು ವಿರಳ ಪ್ರಕರಣಗಳು ಜರುತ್ತಿವೆ. ಬನ್ನಿ, ಜಗತ್ತಿನ ಇತಿಹಾಸದಲ್ಲಿ ಕಂಡುಬಂದಿದ್ದು ವಿಲಕ್ಷಣ ಪ್ರಕರಣವೆಂದು ದಾಖಲಾಗಿರುವ ಇಂತಹ ಅಪರೂಪದ ಶಿಶುಗಳ ಬಗ್ಗೆ ಅರಿಯೋಣ....
ಕುದುರೆಮಗು
ಅತ್ಯಂತ ವಿಚಿತ್ರವಾಗಿ ಕಾಣುವ ಈ ಮಗು ಕುದುರೆ ಹಾಗೂ ಮಾನವರ ಆಕೃತಿಗಳ ಮಿಶ್ರಣದಂತೆ ತೋರುತ್ತದೆ. ಅಲ್ಲದೇ ಇದರ ನೋಟ ಹೆದರಿಕೆ ಹುಟ್ಟಿಸುವಂತೆಯೂ ಇದೆ. ಈ ಚಿತ್ರ ಅಪ್ಪಟ ಎನ್ನುವುದಕ್ಕೆ ಯಾವುದೇ ರುಜುವಾತಿಲ್ಲ. ಆದರೆ ಇದನ್ನು ಅಲ್ಲಗಳೆಯುವುದಕ್ಕೂ ಪುರಾವೆಗಳಿಲ್ಲದ ಕಾರಣ ಅಪರೂಪದ ಪ್ರಕರಣ ಎಂದು ದಾಖಲಾಗಿದೆ. ಈ ಚಿತ್ರದಲ್ಲಿ ಕಾಣುವ ಮಗುವನ್ನು ಎಡೋ ರಾಜ್ಯದ ಬೆನಿಸ್ ಸಿಟಿ ಎಂಬ ನಗರದಲ್ಲಿ ಮಹಿಳೆಯೊಬ್ಬರು ಜನ್ಮ ನೀಡಿದ್ದು ಜನ್ಮದ ಸಮಯದಲ್ಲಿಯೇ ಸತ್ತ ಸ್ಥಿತಿಯಲ್ಲಿ ಹುಟ್ಟಿದೆ ಎಂದು ವೈದ್ಯರು ದೃಢೀಕರಿಸಿದ್ದಾರೆ.
ರಾಜಸ್ಥಾನದ ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ!!
ಹಾವುಮಗು
ಈ ಪ್ರಕರಣ ವರದಿಯಾಗಿದ್ದು ಸೌದಿ ಅರೇಬಿಯಾದ ಪವಿತ್ರ ನಗರ ಮಕ್ಕಾದಿಂದ. ಈ ಮಗುವಿನ ಚರ್ಮ ಹಸಿರು ಬಣ್ಣ ಹಾಗೂ ಭಯಾನಕವಾದ ಕೆಂಪು ಕಣ್ಣುಗಳು ನೋಡುವವರಲ್ಲಿ ಹೆದರಿಕೆ ಹುಟ್ಟಿಸುತ್ತಿತ್ತು. ಮಗುವಿನ ಇಡಿಯ ದೇಹ ಒಂದು ರೀತಿಯ ಹುರುಪೆಗಳಿಂದ ಆವರಿಸಿತ್ತು. ಈ ಸ್ಥಿತಿಯನ್ನು ವೈದ್ಯವಿಜ್ಞಾನದಲ್ಲಿ Harlequin Disorder ಎಂದು ಕರೆಯಲಾಗುತ್ತದೆ. ಈ ಸ್ಥಿತಿ ಇರುವ ವ್ಯಕ್ತಿಗಳ ಚರ್ಮ ಹಾವಿನ ಹುರುಪೆಯಂತೆಯೇ ಕಾಣುತ್ತದೆ.
ಕಪ್ಪೆಮಗು
ಇಬ್ಬರು ಮಕ್ಕಳ ತಾಯಿ ತನ್ನ ಮೂರನೆಯ ಹೆರಿಗೆಯ ಒಂಭತ್ತು ತಿಂಗಳು ದಾಟಿದರೂ ಇನ್ನೂ ಹೆರಿಗೆಯಾಗದೇ ಇದ್ದುದಕ್ಕೆ ಚಿಂತಾಕ್ರಾಂತಳಾಗಿದ್ದಳು. ಕೊನೆಗೂ ಮಗುವಿನ ಜನನವಾದಾದ ಹೊಟ್ಟೆಯ ಗಾತ್ರದಿಂದ ಇದು ಅವಳಿಮಕ್ಕಳಾಗಿರಬಹುದು ಎಂದು ಎಣಿಸಿದ್ದವರಿಗೆ ನಿರಾಶೆ ಕಾದಿತ್ತು. ನಿರಾಶೆಗಿಂತಲೂ ಹೆಚ್ಚಾಗಿ ಈ ಮಗು ಹೆಚ್ಚೂ ಕಡಿಮೆ ಇಬ್ಬರು ಮಕ್ಕಳಷ್ಟು ಗಾತ್ರದ್ದಾಗಿದ್ದು ವಿಚಿತ್ರವಾದ ಮುಖವನ್ನು ಹೊಂದಿದ್ದು ಆಶ್ಚರ್ಯ ಮೂಡಿಸಿತ್ತು. ಇದರ ಮುಖ ಮನುಷ್ಯರಿಗಿಂತಲೂ ಹೆಚ್ಚಾಗಿ ಕಪ್ಪೆಯನ್ನೇ ಹೋಲುತ್ತಿತ್ತು!
ಇಲಿಯಂತೆ ಕಾಣುವ ಮಗು!
ಇಂತಹ ಪ್ರಕರಣಗಳಲ್ಲಿ ಅತಿ ವಿಚಿತ್ರವಾದ ಈ ಪ್ರಕರಣವನ್ನು ಮೊದಲಿಗೆ ಸಾಕಷ್ಟು ಗುಪ್ತವಾಗಿರಿಸಲಾಗಿತ್ತು. ವಿಚಿತ್ರ ಮುಖವನ್ನು ಹೊಂದಿರುವ ಮಗುವಿನ ಆಕೃತಿ ಸಮಾಜದಲ್ಲಿ ಸಂಚಲನೆಯುಂಟುಮಾಡಬಹುದು ಎಂದು ಇದನ್ನು ಗುಪ್ತವಾಗಿರಿಸಲಾಗಿತ್ತು. ಸುಮಾರು ಒಂಭತ್ತು ಘಂಟೆಗಳ ಕಾಲ ಹೆರಿಗೆ ಬೇನೆಯನ್ನು ಅನುಭವಿಸಿದ ತಾಯಿ ಕೊನೆಗೂ ಜನ್ಮ ನೀಡಿದಾಗ ಮಗುವಿನ ಮುಖವನ್ನು ನೋಡಲು ತಾಯಿಗಿರಲಿ, ವೈದ್ಯರಿಗೂ ಭಯವಾಗಿತ್ತು. ಏಕೆಂದರೆ ಈ ಮಗು ಕೂದಲೇ ಇಲ್ಲದ ಇಲಿಯಂತೆ ಕಾಣುತ್ತಿದ್ದು ಉದ್ದವಾದ ಒಂದು ಬಾಲವೂ ಇತ್ತು. ಆದರೆ ಈ ಮಗು ಹುಟ್ಟಿದ ಕೆಲವೇ ಕ್ಷಣಗಳ ಬಳಿಕ ಸಾವನ್ನಪ್ಪಿತ್ತು.
ಒಕ್ಕಣ್ಣ ಮಗು
ಯೂಲಿಸಿಸ್ ಅಂಡ್ ದ ಸೈಕ್ಲೋಪ್ಸ್ ಎಂಬ ಗ್ರೀಕ್ ದಂತಕಥೆಯಲ್ಲಿ ಒಕ್ಕಣ್ಣ ರಾಕ್ಷಸನ ವಿವರಣೆ ಇದೆ. ಆ ಕಾಲದಲ್ಲಿ ಯಾವುದಾದರೊಬ್ಬ ವ್ಯಕ್ತಿಗೆ ಒಕ್ಕಣ್ಣು ಇತ್ತೋ ಏನೋ. ಆದರೆ ಇಂತಹ ಪ್ರಕರಣವೊಂದು ಭಾರತದಲ್ಲಿಯೇ ನಡೆದಿದೆ. ಈ ಮಗುವಿನ ತಾಯಿ ಕ್ಯಾನ್ಸರ್ ಚಿಕಿತ್ಸೆಗೆ ಪಡೆದುಕೊಂಡ ಔಷಧಿಗಳ ಅಡ್ಡಪರಿಣಾಮವಿದು ಎಂದು ವೈದ್ಯರು ತಿಳಿಸುತ್ತಾರೆ. ಮಗುವಿನ ಎರಡೂ ಕಣ್ಣುಗಳು ಒಂದೇ ಕಡೆ ಇದ್ದಂತಿದ್ದು ಹೆಚ್ಚೂ ಕಡಿಮೆ ಒಕ್ಕಣ್ಣಿನಂತೆ ತೋರುತ್ತಿತ್ತು. ಆದರೆ ಹುಟ್ಟಿದ ಕೆಲವೇ ನಿಮಿಷಗಳ ಬಳಿಕ ಈ ಮಗು ಸಾವನ್ನಪ್ಪಿತು.
ಬಾಲವಿರುವ ಮಗು
ಈ ಬಾಲಕ ಬಾಲದಂತಹ ಒಂದು ಚಿಕ್ಕ ಅಂಗವನ್ನು ಹೊತ್ತೇ ಜನಿಸಿದ್ದು ಇದು ದುರಾದೃಷ್ಟಕರವಾಗಿತ್ತು. ಏಕೆಂದರೆ ಮಾನವದೇಹಕ್ಕೆ ಅನಗತ್ಯವಾದ ಈ ಅಂಗದಿಂದ ಬಾಲಕನ ನಿತ್ಯದ ಚಟುವಟಿಕೆಗಳು ಕಷ್ಟಕರವಾಗಿತ್ತು. ಆದ್ದರಿಂದ ಬಹಳ ಜಟಿಲವಾದ ಶಸ್ತ್ರಚಿಕಿತ್ಸೆಯ ಮೂಲಕ ಈ ಬಾಲವನ್ನು ನಿವಾರಿಸಲಾಯಿತು.
ಮೆದುಳೇ ಇಲ್ಲದ ಮಗು
ಮೆದುಳೇ ಇಲ್ಲದ ಮಗುವೊಂದುಜನಿಸಿದ್ದು ಇದರ ತಲೆ ಹಣೆಯ ಮಟ್ಟಕ್ಕಿರುವಂತೆ ಚಪ್ಪಟೆಯಾಗಿದೆ. ವೈದ್ಯವಿಜ್ಞಾನದಲ್ಲಿ ಈ ಪರಿಸ್ಥಿತಿಗೆ anencephaly ಎಂದು ಕರೆಯುತ್ತಾರೆ. ಕೋಕ್ ಎಂಬ ಹೆಸರಿನ ಈ ಮಗು ಮೆದುಳೇ ಇಲ್ಲದೇ ಸುಮಾರು ಮೂರುವರ್ಷಗಳ ಕಾಲ ಜೀವಿಸಿ ವೈದ್ಯರನ್ನೂ ಅಚ್ಚರಿಯ ಕೂಪಕ್ಕೆ ತಳ್ಳಿತ್ತು.
ತಲೆಗಳು ಜೊತೆಯಾದ ಮಗು
ಈ ಪ್ರಕರಣದಲ್ಲಿ ಇಬ್ಬರುಮಕ್ಕಳ ತಲೆಗಳು ಬೆಸೆದುಕೊಂಡಿರುವ ನೋಟ ಯಾರದ್ದೇ ಹೃದಯವನ್ನು ಕಲಕದೇ ಇರಲಾರದು. ಸಯಾಮೀಸ್ ಅವಳಿಗಳೆಂದು ಕರೆಯುವ ಹಲವು ಪ್ರಕರಣಗಳಲ್ಲಿ ಎರಡೂ ಮಕ್ಕಳ ದೇಹ ಪೂರ್ಣವಾಗಿ ಬೆಳೆದಿರುತ್ತದೆ. ಆದರೆ ಈ ಪ್ರಕರಣದಲ್ಲಿ ಒಂದು ಮಗುವಿನ ತಲೆ ಮಾತ್ರ ಬೆಳೆದಿದ್ದು ದೇಹ ಬೆಳೆದೇ ಇಲ್ಲ. ಅಷ್ಟೇ ಅಲ್ಲ, ಈ ಮಗುವಿನ ಅಗತ್ಯಕ್ಕೆ ಬೇಕಾದ ರಕ್ತ ಪೋಷಕಾಂಶವನ್ನು ಇನ್ನೊಂದು ತಲೆಯಿಂದ ಪಡೆದುಕೊಳ್ಳುತ್ತಿರುವುದು ಹಾಗೂ ಜೀವ ಉಳಿಸಿಕೊಂಡಿರುವುದು ಮಾತ್ರ ಸೋಜಿಗವಾಗಿದೆ. ಸಾಮಾನ್ಯವಾಗಿ ಈ ಮಕ್ಕಳು ಹದಿ ಹರೆಯವನ್ನು ದಾಟುವುದನ್ನು ವೈದ್ಯವಿಜ್ಞಾನದ ಇತಿಹಾಸದಲ್ಲಿ ದಾಖಲಿಸಲಾಗಿದೆ.
ಕಲ್ಲಾಗುತ್ತಿರುವ ಬಾಲಕ! ವಿಚಿತ್ರ ಅನಿಸಿದರೂ ಇದು ಮಾತ್ರ ಸತ್ಯ!
All Image Source