ಮಂಗಳಮುಖಿಯರ ಬಗ್ಗೆ ತಿಳಿಯಬೇಕಾದ ಸತ್ಯಾಸತ್ಯತೆಗಳು

By: Deepu
Subscribe to Boldsky

ನಗರಗಳಲ್ಲಿ ಕೆಲವೊಂದು ಕಡೆಗಳಲ್ಲಿ ಮಂಗಳಮುಖಿಯರನ್ನು ನೋಡಿರಬಹುದು. ಮಂಗಳಮುಖಿಯರ ಬಗ್ಗೆ ಸಾಮಾನ್ಯ ಜನರಲ್ಲಿ ಇಂದಿಗೂ ಕೆಲವೊಂದು ರಹಸ್ಯ ಪ್ರಶ್ನೆಗಳು ಇವೆ. ಇಂತಹ ಕೆಲವು ಪ್ರಶ್ನೆಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಮಂಗಳಮುಖಿಯರ ಬಗ್ಗೆ ಇತಿಹಾಸಗಳಲ್ಲೂ ಉಲ್ಲೇಖವಿದೆ.

ಮಂಗಳಮುಖಿಯರ ಆ ಗೋಳು, ಕೇಳುವವರು ಯಾರು?

ಮಹಾಭಾರತದಲ್ಲೂ ಮಂಗಳಮುಖಿಯ ಬಗ್ಗೆ ಉಲ್ಲೇಖವಿದೆ. ಇಸ್ಲಾಂನ ಗ್ರಂಥಗಳಲ್ಲೂ ಮಂಗಳಮುಖಿಯರ ಉಲ್ಲೇಖವಿದೆ. ಮುಘಲ್ ಸಾಮ್ರಾಜ್ಯದಲ್ಲಿ ಮಂಗಳಮುಖಿಯರಿದ್ದರು. ಹಿಂದೂ ಪುರಾಣಗಳಲ್ಲಿ ಮಂಗಳಮುಖಿಯರ ಕೆಲವು ಆಚರಣೆಗಳ ಉಲ್ಲೇಖವಿದೆ. ಆದರೆ ಇದನ್ನು ಮುಸ್ಲಿಮರು ಕೂಡ ಆಚರಿಸಿಕೊಂಡು ಬಂದಿದ್ದಾರೆ.

ಕಠಿಣ ಪರಿಶ್ರಮದಿಂದ ಹಣ ಗಳಿಸುತ್ತಿದ್ದರು

ಕಠಿಣ ಪರಿಶ್ರಮದಿಂದ ಹಣ ಗಳಿಸುತ್ತಿದ್ದರು

ಇಂದಿನ ದಿನಗಳಲ್ಲಿ ಮಂಗಳಮುಖಿಯರು ಹೆಚ್ಚಾಗಿ ಭಿಕ್ಷೆ ಬೇಡುವುದನ್ನು ಕಾಣುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ತುಂಬಾ ಕಠಿಣ ಪರಿಶ್ರಮದಿಂದ ಅವರು ಜೀವನ ಸಾಗಿಸುತ್ತಿದ್ದರು. ಶ್ರೀಮಂತ ಮಹಿಳೆಯರಿಗೆ ರಕ್ಷಕರಾಗಿ ಅಥವಾ ಕೆಲಸದವರಾಗಿ ತುಂಬಾ ಕಠಿಣ ಪರಿಶ್ರಮದಿಂದ ಹಣ ಸಂಪಾದನೆ ಮಾಡುತ್ತಿದ್ದರು. ರಾಜಮನೆತನದವರು ಹೆಚ್ಚಾಗಿ ಮಂಗಳಮುಖಿಯರ ಮೇಲೆ ಭರವಸೆಯನ್ನಿಡುತ್ತಿದ್ದರು.

ತುಂಬಾ ಸಂಭ್ರಮದ ಮರುಜನ್ಮದ ಸಮಾರಂಭ

ತುಂಬಾ ಸಂಭ್ರಮದ ಮರುಜನ್ಮದ ಸಮಾರಂಭ

ಮಂಗಳಮುಖಿ ಜನಿಸಿದಾಗ ಮರುಜನ್ಮ ಸಮಾರಂಭ ಆಯೋಜಿಸಲಾಗುವುದು. ಇದನ್ನು ನಿರ್ವಹಣ ಸಮಾರಂಭವೆಂದೂ ಕರೆಯಲಾಗುವುದು. ಪುರುಷರ ಬಾಹ್ಯ ಲೈಂಗಿಕ ಅಂಗಗಳಾದ ಶಿಶ್ನ ಹಾಗು ವೃಷಣ ತೆಗೆದುಹಾಕಲಾಗುವುದು. ಇದರ ಮೂಲಕ ಪುರುಷನನ್ನು ನಪುಂಸಕನಾಗಿ ಪರಿವರ್ತಿಸಲಾಗುವುದು.

ವಿಶೇಷ ಆಹಾರ

ವಿಶೇಷ ಆಹಾರ

ಸಮರ್ಥ ಮಂಗಳಮುಖಿಯಾಗುವ ಮೊದಲು ಮಂಗಳಮುಖಿಯರು ವಿಶೇಷ ಆಹಾರಕ್ರಮ ಪಾಲಿಸಬೇಕಾಗುವುದು. ಕೆಲವೊಂದು ರೀತಿಯ ನಿರ್ಬಂಧಗಳೊಂದಿಗೆ ಪ್ರಸವದ ಬಳಿಕ ಮಹಿಳೆಯರು ಅನುಸರಿಸುವಂತಹ ನಿರ್ಬಂಧದ ಸಮಯ ಕಳೆಯಬೇಕು. ಶಸ್ತ್ರಚಿಕಿತ್ಸೆಯ 40 ದಿನಗಳ ಮೊದಲು ಇದನ್ನು ನಡೆಸಲಾಗುವುದು.

ಮಂಗಳಮುಖಿಯರಲ್ಲಿ ಅತಿಮಾನುಷ ಸಾಮರ್ಥ್ಯ

ಮಂಗಳಮುಖಿಯರಲ್ಲಿ ಅತಿಮಾನುಷ ಸಾಮರ್ಥ್ಯ

ಭವಿಷ್ಯ ನೋಡುವಂತಹ ಸಾಮರ್ಥ್ಯವು ಮಂಗಳಮುಖಿಯರಲ್ಲಿ ಇರುವುದು ಎಂದು ನಂಬಲಾಗಿದೆ. ಅವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ತಿಳಿದುಬರುವುದು ಎನ್ನಲಾಗಿದೆ.

ಸಾವು ತುಂಬಾ ನಿಗೂಢ

ಸಾವು ತುಂಬಾ ನಿಗೂಢ

ಮಂಗಳಮುಖಿಯರ ಸಾವಿನ ಶೋಕಾಚರಣೆಯಲ್ಲಿ ತೊಡಗಿಕೊಳ್ಳುವ ಮಂದಿ ಕೆಲವೇ ಕೆಲವು ಮಂದಿ. ಯಾಕೆಂದರೆ ಇದು ತುಂಬಾ ಗೌಪ್ಯ ಸಮಾರಂಭವಾಗಿರುವುದು. ಮಂಗಳಮುಖಿಯರ ಸಾವಿನ ಕಾರ್ಯಗಳನ್ನು ರಾತ್ರಿ ವೇಳೆ ನಡೆಸಲಾಗುತ್ತದೆ.

English summary

All About The Hijra Facts That You Need To Know

Hijras are still a matter of curiosity to a common man. How does one realise if a human is a kinnar or like any other person? Many such questions pop up when we think about Hijras as a topic and today, we are here to enlighten you about the history and facts on hijras. So, go ahead and clear your doubts! Continue reading to know more.
Subscribe Newsletter