For Quick Alerts
ALLOW NOTIFICATIONS  
For Daily Alerts

ಈ ದರ್ಗಾದಲ್ಲಿ ಕಲ್ಲುಗಳು ತನ್ನಷ್ಟಕ್ಕೇ ಗಾಳಿಯಲ್ಲಿ ತೇಲುತ್ತವೆಯಂತೆ!!

By Manu
|

ನಮ್ಮ ಸುತ್ತ ನಡೆಯುತ್ತಿರುವ ಎಲ್ಲಾ ಕ್ರಿಯೆಗಳಿಗೆ ಒಂದು ಕಾರಣವಿದ್ದೇ ಇರುತ್ತದೆ. ಕಾಮನಬಿಲ್ಲಿನಲ್ಲಿರುವ ಬಣ್ಣ, ಎಲೆಯ ಹಸಿರು, ಎಲ್ಲಕ್ಕೂ ನಿಸರ್ಗ ಒಂದು ಕಾರಣವನ್ನು ನೀಡಿದೆ. ಕೆಲವು ನೈಸರ್ಗಿಕ ವಿದ್ಯಮಾನಗಳು ಚಮತ್ಕಾರದಂತೆ ಕಂಡುಬರುತ್ತದೆ. ಕೆಲವು ಚಮತ್ಕಾರಗಳ ಬಗ್ಗೆ ಹೇಳಿದರೂ, ಚಿತ್ರ ತೋರಿಸಿದರೂ ನಂಬದವರಿಗೆ ಪ್ರತ್ಯಕ್ಷದರ್ಶನವೊಂದೇ ಉಳಿದ ದಾರಿ. ಹೆಚ್ಚಿನ ನೈಸರ್ಗಿಕ ಚಮತ್ಕಾರಗಳಿಗೆ ಪವಾಡ ಎಂದು ತಿಳಿಸಿ ಹಣ ದೋಚುವುದು ಕೆಲವು ದುರುಳರ ಕುತಂತ್ರವಾಗಿದೆ. ಆದರೆ ಎಲ್ಲಾ ನಿಸರ್ಗದ ಚಮತ್ಕಾರಗಳಿಗೆ ವಿಜ್ಞಾನ ಸೂಕ್ತ ಉತ್ತರ ನೀಡುತ್ತದೆ. ಪವಾಡ ಬಯಲು ಕಾರ್ಯಕ್ರಗಳಲ್ಲಿ ನಮ್ಮ ವಿಜ್ಞಾನಿಗಳು ಮಾಡುವುದೂ ಇದನ್ನೇ.

ಆದರೆ ಕೆಲವು ಚಮತ್ಕಾರಗಳಿಗೆ ವಿಜ್ಞಾನ ಸಹಾ ಸೂಕ್ತವಾದ ವಿವರಣೆ ನೀಡಲು ಅಸಮರ್ಥವಾಗಿದೆ. ಉದಾಹರಣೆಗೆ ರಾಜಸ್ಥಾನದ ಅಜ್ಮೇರ್ ನಲ್ಲಿರುವ ಒಂದು ಕಲ್ಲು ನೆಲದಿಂದ ಎರಡಿಂಚು ಮೇಲೆ ಎದ್ದಿದ್ದು ಗಾಳಿಯಲ್ಲಿ ತೇಲುತ್ತಿರುವಂತಿದೆ. ಇದೇ ಕಾರಣಕ್ಕೆ ಅಜ್ಮೇರ್ ದರ್ಗಾ ತನ್ನ ಸ್ಥಳಮಹಾತ್ಮೆ ಪಡೆದಿದೆ. ಅಷ್ಟೇ ಏಕೆ ರಾಜಸ್ಥಾನದ ಬರ್ಮಾರ್ ಜಿಲ್ಲೆಯಲ್ಲಿರುವ ಜಿಲ್ಲಾಕೇಂದ್ರದಿಂದ ಸುಮಾರು ಮೂವತ್ತೈದು ಕಿ.ಮೀ ದೂರದಲ್ಲಿ ಮರುಭೂಮಿಯ ವಿಸ್ತಾರದ ನಡುವೆ ಎಲ್ಲೋ ಒಂದು ಚುಕ್ಕೆಯಂತಿರುವ ಕಿರಾಡು (ಹಿಂದೆ ಕಿರಾಡ್ ಕೋಟ್ ಎಂದು ಕರೆಯಲ್ಪಡುತ್ತಿತ್ತು) ಎಂಬ ಪ್ರದೇಶದಲ್ಲಿ ಪಂಚ ದೇವಾಲಯಗಳ ಸಮುಚ್ಛಯವೊಂದಿದೆ. ಅತ್ಯಂತ ಸುಂದರ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯಗಳಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ ನರಮನುಷ್ಯರ ಇರುವಿಕೆ ಸೊನ್ನೆಯಾಗುತ್ತದೆ!

ಅಂದರೆ ಯಾರಿಗೂ ರಾತ್ರಿಯ ಹೊತ್ತು ಈ ದೇವಾಲಯಗಳಿಗೆ ಪ್ರವೇಶಿಸುವ ಧೈರ್ಯವಿರುವುದಿಲ್ಲ. ಇದಕ್ಕೆ ಕಾರಣ ಈ ದೇವಾಲಯಕ್ಕೆ ತಟ್ಟಿರುವ ಶಾಪ. ರಾತ್ರಿ ಈ ಸ್ಥಳದಲ್ಲಿರುವ ಯಾರೇ ಆದರೂ ಬೆಳಿಗ್ಗೆದ್ದಾಗ ಕಲ್ಲಾಗಿಬಿಡುತ್ತಾರೆ ಎಂಬ ಶಾಪ. ಆದರೆ ಈ ಶಾಪಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಯಾವುದೇ ಶಾಸನ, ಕಥೆ ಅಥವಾ ಗ್ರಂಥದಲ್ಲಿ ಉಲ್ಲೇಖವಿಲ್ಲ! ಹೌದು ಇಂತಹ ಹಲವಾರು ನಿಗೂಢ ಸ್ಥಳಗಳು ನಮ್ಮ ಭಾರತಲ್ಲಿರದ್ದು ಇನ್ನೂ ಇದರ ರಹಸ್ಯ ಮಾತ್ರ ಯಾರಿಂದಲೂ ಭೇದಿಸಲಾಗುತ್ತಿಲ್ಲ! ಈ ತೇಲುವ ಕಲ್ಲಿನ ಬಗ್ಗೆ ತಿಳಿದುಕೊಳ್ಳುವ ಜೊತೆಗೇ ಇಂದು ಇತರ ವಿಷಯಗಳನ್ನೂ ತಿಳಿದುಕೊಳ್ಳೋಣ:

ತೇಲುವ ಕಲ್ಲು

ತೇಲುವ ಕಲ್ಲು

ಇದುವರೆಗೆ ಹಲವಾರು ವಿಜ್ಞಾನಿಗಳು ಭೇಟಿ ನೀಡಿದರೂ ಸೂಕ್ತ ವಿವರಣೆಯನ್ನು ನೀಡಲು ಅಸಾಧ್ಯವಾದ ಈ ಅದ್ಭುತ ಚಮತ್ಕಾರ ನೋಡುವವರನ್ನು ಬೆಕ್ಕಸ ಬೆರಗಾಗಿಸುತ್ತದೆ. ಅದೂ ಇದೇನೂ ಚಿಕ್ಕ ಕಲ್ಲಲ್ಲ, ಸುಮಾರು ಐನೂರು ಕೇಜಿಯಾದರೂ ತೂಗುವ ದೊಡ್ಡ ಬಂಡೆ. ಇದು ನಿಶ್ಚಲವಾಗಿ ಗಾಳಿಯಲ್ಲಿ ತೇಲುತ್ತಿದ್ದು ನೆಲದಿಂದ ಎರಡಿಂಚು ಮೇಲಿದೆ. ಇದು ತೇಲಲು ಕೆಲವಾರು ಕಾರಣಗಳನ್ನು ಹಲವರು ನೀಡಿದರೂ ಇದಕ್ಕೆ ಸರಿಯಾದ ವಿವರಣೆ ನೀಡಲು ಸಾಧ್ಯವಾಗಿಲ್ಲ.

ಈ ದರ್ಗಾ ವಿಶ್ವವಿಖ್ಯಾತ

ಈ ದರ್ಗಾ ವಿಶ್ವವಿಖ್ಯಾತ

ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿರುವ ಈ ದರ್ಗಾದಲ್ಲಿ ಸಂತ ಖಾಜಾ ಮೊಯ್ನುದ್ದೀನ್ ಚಿಸ್ತಿಯವರ ಸಮಾಧಿ ಇದ್ದು ಇಲ್ಲಿ ಬೇಡಿಕೊಳ್ಳಲು ವಿಶ್ವದ ಹಲವೆಡೆಯಿಂದ ಕೋಟಿಗಟ್ಟಲೆ ಜನ ಆಗಮಿಸುತ್ತಾರೆ. ಇಲ್ಲಿ ಚಾದರ್ ಚಡಾನಾ ಎಂಬ ಹರಕೆಯನ್ನು ಹೊರುವ ಮೂಲಕ ದೇವರ ಅನುಗ್ರಹವನ್ನು ಪಡೆಯುತ್ತಾರೆ.

ಈ ಪ್ರದೇಶದ ಇತಿಹಾಸ

ಈ ಪ್ರದೇಶದ ಇತಿಹಾಸ

ಅಜ್ಮೇರ್ ಶರೀಫ್ ಎಂದು ಹೆಸರಾದ ಈ ಸ್ಥಳ ಮೊಗಲ್ ದೊರೆ ಅಕ್ಬರ್ ತನ್ನ ಮಗ ಜಹಾಂಗೀರ್ ಹುಟ್ಟಿದ ಸಂತೋಷಕ್ಕೆ ಕಟ್ಟಿಸಿದ್ದು ಎಂದು ಇತಿಹಾಸ ತಿಳಿಸುತ್ತದೆ. ಈ ದಿನ ಅಲ್ಲಿದ್ದ ಮಸೀದಿಯನ್ನು ಮಕ್ಕಳಿಗೆ ಕುರಾನ್ ಹಾಗೂ ಇಸ್ಲಾಮಿಕ್ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯಾಗಿ ಬದಲಿಸಲಾಗಿತ್ತು.

ನಿಯಾಜ್ ಎಂಬ ಪ್ರಸಾದ

ನಿಯಾಜ್ ಎಂಬ ಪ್ರಸಾದ

ದರ್ಗಾದ ಆವರಣದೊಳಗೆ ಎರಡು ದೊಡ್ಡ ಪಾತ್ರೆಗಳಿವೆ. ಇದಕ್ಕೆ ದೇಘ್ ಎಂದು ಕರೆಯುತ್ತಾರೆ. ಇದರಲ್ಲಿ ನಿಯಾಜ್ ಅಥವಾ ತಬರೂಕ್ ಎಂಬ ಸಿಹಿವಸ್ತುವನ್ನು ತಯಾರಿಸಲಾಗುತ್ತದೆ. ಇದೊಂದೇ ಇಲ್ಲಿ ಸಸ್ಯಾಹಾರಿ ಆಹಾರ. ಇದನ್ನು ಅಕ್ಕಿ, ತುಪ್ಪ, ಒಣಫಲಗಳು, ಕಸ್ತೂರಿ ಹಾಗೂ ಸಕ್ಕರೆ ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ರಾತ್ರಿ ತಯಾರಿಸಿ ಇಡಿಯ ರಾತ್ರಿ ದಮ್ ನಲ್ಲಿಟ್ಟು ಮರುದಿನ ಬೆಳಿಗ್ಗೆ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.

ದರ್ಗಾದ ಬಾಗಿಲು ವರ್ಷಕ್ಕೆ ನಾಲ್ಕು ಬಾರಿ ಮಾತ್ರವೇ ತೆರೆಯುತ್ತದೆ

ದರ್ಗಾದ ಬಾಗಿಲು ವರ್ಷಕ್ಕೆ ನಾಲ್ಕು ಬಾರಿ ಮಾತ್ರವೇ ತೆರೆಯುತ್ತದೆ

ಈ ಬಾಗಿಲಿಗೆ ಜನ್ನತಿ ದರ್ವಾಜಾ ಎಂಬ ಹೆಸರಿದೆ. ಅಂದರೆ ಸ್ವರ್ಗದ ಬಾಗಿಲು ಎಂದರ್ಥ. ಈ ಸುಂದರ ಬಾಗಿಲಿಗೆ ಬೆಳ್ಳಿತ ತಗಡನ್ನು ಹೊದೆಸಲಾಗಿದೆ. ವರ್ಷದ ಎರಡು ಈದ್, ಉರುಸ್ ಹಾಗೂ ಖಾಜಾ ಸಾಬೇ ಪೀರ್ ರವರ್ ಉರುಸ್ ಸಮಯದಲ್ಲಿ ಮಾತ್ರ ಒಟ್ಟು ನಾಲ್ಕು ಬಾರಿ ತೆರೆಯಲಾಗುತ್ತದೆ.

ಇಂತಹ ಅಚ್ಚರಿಯ ಮಾಹಿತಿಗಳು ಇನ್ನೂ ಬೇಕಿದ್ದರೆ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ನಮಗೆ ಖಂಡಿತಾ ಬರೆದು ತಿಳಿಸಿ.

English summary

A Dargah Where A Rock Floats In Air Literally!

There is a reason for everything that happens around us. From the colours present in the rainbow to the green colour in leaves, there is a reason for all these phenomena that happen. Miracles happen and it makes us wonder if it really takes place or not and believing on something unless we see it wouldn't make us want to trust it. There are many unexplained scientific phenomena that exist and these things make us wonder on how do they even exist.
X
Desktop Bottom Promotion