Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಅಚ್ಚರಿ: ಕಣ್ಮರೆ ಆಗಲು ಸಜ್ಜಾಗುತ್ತಿದೆ ವಿಶ್ವದ ಪ್ರತಿಷ್ಠಿತ ನಗರಗಳು!
ನಮ್ಮ ವಿಶ್ವವನ್ನು ನಾವು ಯಾವ ಮಟ್ಟಿಗೆ ಹಾನಿ ಮಾಡಿದ್ದೇವೆ ಎಂದರೆ, ಅದನ್ನು ಇನ್ನು ಹಾಳು ಮಾಡಲು ನಾವು ಏನು ಉಳಿಸಿಲ್ಲ. ರಾಸಾಯನಿಕಗಳು, ಹೊಗೆ, ಶಬ್ದ ಮಾಲಿನ್ಯ ಮತ್ತು ಅಧಿಕ ಕಾರ್ಬನ್ ಬಳಕೆಯಿಂದ ನಾವು ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸಾಧ್ಯವಾದ ಮಟ್ಟಿಗೆ ಹಾಳು ಮಾಡಿದ್ದೇವೆ. ಹಾಗೆಂದು ಈ ಪರಿಸರ ಮಾಲಿನ್ಯವು ಕೇವಲ ನಮ್ಮ ನಿಮ್ಮ ಸುತ್ತಲಿನ ಪರಿಸರವನ್ನಷ್ಟೇ ಅಲ್ಲದೆ, ನಮಗೆ ಕಾಣದಷ್ಟು ದೂರದಲ್ಲಿರುವ ನಗರಗಳನ್ನು ಸಹ ಆಪೋಶನ ತೆಗೆದುಕೊಳ್ಳುತ್ತದೆ ಎಂದರೆ ನಂಬಲಸಾಧ್ಯವಾದರು ನಂಬಲೇ ಬೇಕಾಗುತ್ತದೆ. ನೀರಿನಲ್ಲಿ ಮುಳುಗಿದ್ದ ಕಟ್ಟಡಗಳು, ಇಲ್ಲಿ ಮತ್ತೆ ಗೋಚರಿಸುತ್ತಿವೆ!
ನಿಜ ನಾವು ಹೇಳುತ್ತಿರುವುದು ಬದಲಾಗುತ್ತಿರುವ ಪರಿಸರದ ಕಾರಣದಿಂದಾಗಿ ಜಗತ್ತಿನ ದೊಡ್ಡ ದೊಡ್ಡ ನಗರಗಳು ಮುಂದೆ ಕಣ್ಮರೆಯಾಗುತ್ತವೆಯಂತೆ. ಹಾಗೆಂದು ಈ ಮಾತನ್ನು ಹೇಳುತ್ತಿರುವುದು ಗಿಣಿ ಶಾಸ್ತ್ರದವರೋ, ಟಿ.ವಿಯಲ್ಲಿ ಕುಳಿತು ಕಂಪ್ಯೂಟರ್ ಜಾತಕ ಹೇಳುವವರೋ ಅಲ್ಲ. ಈ ಮಾತನ್ನು ಒತ್ತಿ ಒತ್ತಿ ಹೇಳುತ್ತಿರುವವರು ವಿಜ್ಞಾನಿಗಳು, ಭೂಗರ್ಭ ಶಾಸ್ತ್ರಜ್ಞರು ಮತ್ತು ಹವಾಮಾನ ತಜ್ಞರು ಎಂದರೆ ಭಯವಾಗದೆ ಇರುತ್ತದೆಯೇ? ಬನ್ನಿ ಅವರು ಹೆಸರಿಸಿರುವ ಆ ಮಹಾನಗರಗಳು ಯಾವುವು ಎಂದು ತಿಳಿದುಕೊಳ್ಳೋಣ.

ಬ್ಯಾಂಕಾಕ್
ಭೂಲೋಕದ ಈ ಸ್ವರ್ಗವು ಸಹ ತನ್ನ ಅಮರತ್ವವನ್ನು ಕಳೆದುಕೊಂಡು ಸಮುದ್ರದಲ್ಲಿ ಲೀನಗೊಳ್ಳಲಿದೆ. ಈ ನಗರದ ಒಳಗೆ ಇರುವ ಅಂತರ್ಜಲವು ಈ ನಗರವನ್ನು ದುರ್ಬಲಗೊಳಿಸಿ ನಾಮಾವಶೇಷ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಸ್ಯಾನ್ ಫ್ರಾನ್ಸಿಸ್ಕೋ
ಅಮೆರಿಕಾದಲ್ಲಿರುವ ಈ ಅದ್ಭುತ ನಗರವು ಸಹ ಕಣ್ಮರೆಯಾಗಲಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದರೆ ಆಶ್ಚರ್ಯದ ಜೊತೆಗೆ ಬೇಸರ ಸಹ ಆಗುತ್ತದೆ. ವರದಿಗಳ ಪ್ರಕಾರ ಈ ನಗರವು ಪ್ರಮುಖ ಫಾಲ್ಟ್ ಲೈನ್‌ನಲ್ಲಿದೆಯಂತೆ!. ಅಂದರೆ ಈ ನಗರವು ಭೂಕಂಪದಿಂದ ಹಾಳಾಗುವ ಸಾಧ್ಯತೆ 75% ಅಂದರೆ, ಈ ನಗರದ ಭವಿಷ್ಯದ ಕುರಿತು ನಿಮಗೆ ಇನ್ನೂ ನಂಬಿಕೆಯಿದೆಯೇ? ತಜ್ಞರ ಪ್ರಕಾರ ಈ ನಗರವು ಭೂಕಂಪದಿಂದ ನೆಲಸಮವಾಗುವುದು ಖಚಿತವಂತೆ.

ವೇನಿಸ್
ಜಗತ್ತಿನ ಅತ್ಯಂತ ಸುಂದರವಾದ ನಗರ ಯಾವುದೆಂದರೆ ವೇನಿಸ್ ಎಂದು ಹೇಳುತ್ತಾರೆ ಬಹುತೇಕ ಮಂದಿ. ದುರದೃಷ್ಟವಶಾತ್ ಈ ನಗರವು ಸಹ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆಯಂತೆ. ಪ್ರತಿದಿನ ಈ ನಗರವು ಅಕ್ಷರಶಃ ನೀರಿನಲ್ಲಿ ಮುಳುಗಡೆಯಾಗುತ್ತಿದೆ. ಕಟ್ಟಡಗಳು ಪ್ರತಿದಿನ ಜಲಾವೃತವಾಗುತ್ತಿವೆ.

ಮೆಕ್ಸಿಕೊ
ಮೆಕ್ಸಿಕೊದ ಬಹುತೇಕ ಭಾಗವು ಸರೋವರದ ಒಣ ದಡದ ಮೇಲೆ ನಿರ್ಮಾಣಗೊಂಡಿದೆ. ಆದರೆ ಪ್ರತಿ ವರ್ಷವು ಈ ನಗರವು ನಾಲ್ಕು ಇಂಚಿನಷ್ಟು ಮುಳುಗಡೆಯಾಗುತ್ತಲೆ ಸಾಗುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ಈ ನಗರವು 10 ಮೀಟರ್‌ಗಳಷ್ಟು ಮುಳುಗಡೆಯಾಗಿದೆಯಂತೆ!

ನೇಪಾಳ
ಇದು ಜಗತ್ತಿನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಇದು ಜಗತ್ತಿನ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ನಗರವು ಮೌಂಟ್ ವೆಸುವಿಯಸ್ ಪಕ್ಕದಲ್ಲಿಯೇ ನೆಲೆಗೊಂಡಿದೆ. ಈ ಪರ್ವತವು ಅಂತಿಂತಹ ಪರ್ವತವಲ್ಲ. ಅದು ಜ್ವಾಲಾಮುಖಿಯನ್ನು ಹೊಂದಿರುವ ಪರ್ವತ. ಈ ಜ್ವಾಲಾಮುಖಿಯು ಕ್ರಿ.ಶ 79 ರಲ್ಲಿ ಪೊಂಪೇ ನಗರವನ್ನು ಸರ್ವನಾಶ ಮಾಡಿದ ಜ್ವಾಲಾಮುಖಿ!. ಈ ಜ್ವಾಲಾಮುಖಿ ಈಗಲೂ ಸಕ್ರಿಯವಾಗಿದ್ದು, ಯಾವಾಗ ಬೇಕಾದರು ಇದು ಬೆಂಕಿ ಕಾರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications