For Quick Alerts
ALLOW NOTIFICATIONS  
For Daily Alerts

'ಹಿಡನ್ ಕ್ಯಾಮೆರಾ' ಪತ್ತೆ ಹಚ್ಚುವ ರಹಸ್ಯ, ತಪ್ಪದೇ ಓದಿ

By Super
|

ತಮಗೆ ಸೂಕ್ತವೆನಿಸಿದ ಉಡುಪುಗಳನ್ನು ತೊಡುವುದು ವ್ಯಕ್ತಿಸ್ವಾತಂತ್ರ್ಯದ ಒಂದು ಭಾಗವಾಗಿದೆ. ಅಂತೆಯೇ ಬಟ್ಟೆ ಬದಲಿಸಲು, ಹೊಸ ಬಟ್ಟೆಗಳನ್ನು ತೊಟ್ಟು ಪರೀಕ್ಷಿಸಲು ನೋಡುವಾಗ, ಜಿಮ್, ಮದುವೆಮನೆ, ನಾಟಕರಂಗ ಮೊದಲಾದ ಕಡೆಗಳಲ್ಲಿ ಸಂದರ್ಭಕ್ಕೆ ತಕ್ಕ ಉಡುಪು ಬದಲಿಸಿಕೊಳ್ಳಲು ಮರೆ ಒದಗಿಸಲು ಸೂಕ್ತ ಕೋಣೆಯ ಅಗತ್ಯ ಎಲ್ಲರಿಗೂ ಇದೆ. ಆದರೆ ಈ ಸ್ಥಳಗಳಲ್ಲಿಯೂ ಕೆಲವರು ಕಿಂಡಿಯ ಮೂಲಕ ಇಣುಕಿ ನೋಡುವ, ಕ್ಯಾಮೆರಾ ಅಳವಡಿಸಿ ಆ ಮೂಲಕ ವ್ಯಕ್ತಿಯ ಖಾಸಗಿ ಕ್ಷಣಗಳನ್ನು ಕದ್ದು ನೋಡುವ ಕುತ್ಸಿತ ಮನೋಭಾವ ಹೊಂದಿರುತ್ತಾರೆ. ಭಾರತದ ಸಂವಿಧಾನದಲ್ಲಿ ಈ ಕೃತ್ಯವನ್ನು ದುಷ್ಕೃತ್ಯವೆಂದೇ ಪರಿಗಣಿಸಲಾಗಿದ್ದು ಶಿಕ್ಷಾರ್ಹ ಅಪರಾಧವೂ ಆಗಿದೆ. ಕಾನೂನಿನ ಭಾಷೆಯಲ್ಲಿ ಇದನ್ನು "ದಾರ್ಶಿಕ ಅತ್ಯಾಚಾರ" ಅಥವಾ "Visual Rape" ಎಂದೇ ಪರಿಗಣಿಸಲಾಗುತ್ತದೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಆದರೆ ಇಂತಹ ಯಾವುದೇ ಕೋಣೆಯಲ್ಲಿ ಕ್ಯಾಮೆರಾಗಳಿರುವುದನ್ನು ಪತ್ತೆ ಹಚ್ಚುವುದು ಕಷ್ಟ. ಏಕೆಂದರೆ ಇಂದು ಆಧುನಿಕ ತಂತ್ರಜ್ಞಾನ ಹೊಂದಿರುವ ಅತಿಚಿಕ್ಕ ಕ್ಯಾಮೆರಾಗಳು ನಮ್ಮ ಶರ್ಟಿನ ಬಟನ್ನಿನ ಗಾತ್ರ ಹೊಂದಿದ್ದು ಚಿಕ್ಕ ತೂತಿನ ಮೂಲಕವೂ ನಿಖರವಾಗಿ ದೃಶ್ಯವನ್ನು ಸೆರೆಹಿಡಿಯಬಲ್ಲವು. ಇದನ್ನು ಹಿಮ್ಮೇಳದ ಯಾವುದೋ ಚುಕ್ಕೆ ಇರುವಂತೆ ಚಿತ್ರದಲ್ಲಿ ಅಳವಡಿಸಿದರೆ, ಉದಾಹರಣೆಗೆ ಹಕ್ಕಿಯ ಕಣ್ಣಿರುವಲ್ಲಿ, ಯಾರಿಗೂ ಅನುಮಾನ ಬರಲು ಸಾಧ್ಯವೇ ಇಲ್ಲ.

ಈ ಕೃತ್ಯ ಎಸಗುವ ಖದೀಮರು ಈ ಕ್ಯಾಮೆರಾದ ಮೂಲಕ ಸೆರೆಹಿಡಿಯುವ ಚಿತ್ರಗಳನ್ನು ಯಾವ ರೀತಿಯಲ್ಲಿ ಬಳಸಿ ಪೀಡಿತರನ್ನು ಯಾವ ರೀತಿ ಗೋಳು ಹೊಯ್ದುಕೊಳ್ಳಬಹುದು ಎಂದು ಅಂದಾಜಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಕೃತ್ಯಕ್ಕೆ ಬಲಿಪಶುವಾಗುವ ಬದಲು ಕೊಂಚ ಜಾಣತನ, ಕೊಂಚ ಜಾಗರೂಕತೆ, ಕೊಂಚ ಸಾಮಾನ್ಯ ಜ್ಞಾನ ಬಳಸಿದರೆ ಇಂತಹ ಕೋಣೆಯಲ್ಲಿ ಕ್ಯಾಮೆರಾ ಇರುವುದನ್ನು ಕಂಡುಕೊಳ್ಳಬಹುದು.

ಇತ್ತೀಚೆಗೆ ಸಚಿವೆ ಸ್ಮೃತಿ ಇರಾನಿಯವರೂ ಇಂತಹ ಒಂದು ಕ್ಯಾಮೆರಾ ಇದ್ದುದನ್ನು ಕಂಡುಹಿಡಿದದ್ದು ತಮ್ಮ ಜಾಗರೂಕತೆಯಿಂದಲೇ. ಕದ್ದು ನೋಡಲು ಖದೀಮರು ಬಳಸುವ ವಿಧಾನಗಳಲ್ಲಿ ಸಾಮಾನ್ಯವಾದವು ಎಂದರೆ ಅಡಗಿಸಿಟ್ಟ ಕ್ಯಾಮೆರಾ, ಒಂದು ಬದಿಯಿಂದ ಕನ್ನಡಿ, ಇನ್ನೊಂದು ಬದಿಯಿಂದ ಪಾರದರ್ಶಕವಾದ ನಿಲುವುಗನ್ನಡಿ ಇತ್ಯಾದಿಗಳು. ಬನ್ನಿ, ಈ ಬಗ್ಗೆ ಜಾಗರೂಕರಾಗಲು ಕೆಳಗಿನ ಸ್ಲೈಡ್ ಶೋ ನಿಮಗೆ ನೆರವಾಗಲಿದೆ...

ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದರೆ ಕಂಡುಹಿಡಿಯುವುದು ಹೇಗೆ?

ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದರೆ ಕಂಡುಹಿಡಿಯುವುದು ಹೇಗೆ?

ಇಂದು ಹೆಚ್ ಡಿ ಗುಣಮಟ್ಟದ ವೀಡಿಯೋವನ್ನು ಪುಟ್ಟ ಬಟನ್ ಗಾತ್ರದ ಕ್ಯಾಮೆರಾಗಳಿವೆ. ಇದನ್ನು ಸೂಕ್ಷ್ಮವಾಗಿ ಯಾವುದಾದರೂ ಅನುಮಾನ ಬರದ ಚುಕ್ಕೆ ಇರುವಂತಹ ಚಿತ್ರ ಅಥವಾ ಇನ್ನಾವುದೋ ವಸ್ತುಗಳ ಜೊತೆ ಅನುಮಾನ ಬರದಂತೆ ಅಳವಡಿಸಲಾಗುತ್ತದೆ. ಇದನ್ನು ಕಂಡುಹಿಡಿಯಲು ಕೆಲವು ವಿಧಾನಗಳಿವೆ. ಮೊದಲು ಕೋಣೆಯಲ್ಲಿರುವ ರಂಧ್ರವನ್ನ ಹುಡುಕಿ ಕೋಣೆಯ ಕನ್ನಡಿಯ ಫ್ರೇಮ್'ನಲ್ಲಿ ಅಥವಾ ಗೋಡೆಯ ಯಾವುದೇ ಭಾಗದಲ್ಲಿ ಸಣ್ಣ ರಂಧ್ರವೇನಾದರೂ ಇದೆಯಾ ಎಂದು ಗಮನಿಸಿ, ಅಥವಾ ರೂಮಿನ ಕಿಟಕಿ, ಬಾಗಿಲುಗಳೆಲ್ಲವನ್ನೂ ಮುಚ್ಚಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದರೆ ಕಂಡುಹಿಡಿಯುವುದು ಹೇಗೆ?

ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದರೆ ಕಂಡುಹಿಡಿಯುವುದು ಹೇಗೆ?

ಇನ್ನುಎಲ್ಲ ಲೈಟ್'ಗಳನ್ನು ಆಫ್ ಮಾಡಿ. ಒಟ್ಟಿನಲ್ಲಿ ಕೋಣೆ ಪೂರ್ತಿ ಕತ್ತಲಾಗುವಂತೆ ನೋಡಿಕೊಳ್ಳಿ. ಈಗ ನೀವು ಬರಿಗಣ್ಣಿನಲ್ಲೇ ಎಲ್ಲ ಕಡೆಯೂ ಸೂಕ್ಷ್ಮವಾಗಿ ನೋಡಿ. ಎಲ್ಲಿಯಾದರೂ ರೆಡ್ ಲೈಟ್'ನ ಸಣ್ಣ ಬಿಂದು ಕಾಣಿಸುತ್ತಾ ಎಂದು ಹುಡುಕಿ. ಇದರಲ್ಲಿ ಯಾವುದಾದರೊಂದು ಅಥವಾ ಅನುಮಾನ ದಟ್ಟವಾದರೆ ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಅನುಸರಿಸಿ ಪ್ರಮಾಣಿಸಿ. ಒಂದು ವೇಳೆ ನಿಜವೇ ಅನ್ನಿಸಿದರೆ ಯಾವುದೇ ಅಳುಕಿಲ್ಲದೇ ನಿಮ್ಮ ಮನೆಯ ಹಿರಿಯರಿಗೆ, ಮತ್ತು ಅವರ ಮೂಲಕ ಆಯಾ ಊರಿನ ಪೋಲೀಸರಿಗೆ ಲಿಖಿತ ದೂರು ಸಲ್ಲಿಸಿ ಈ ಖದೀಮರಿಗೆ ತಕ್ಕ ಬುದ್ಧಿ ಕಲಿಸಿ.

ಮೊಬೈಲ್ ಬಳಸಿ

ಮೊಬೈಲ್ ಬಳಸಿ

ಟ್ರಯಲ್ ರೂಂ ಒಳಗೆ ಪ್ರವೇಶ ಪಡೆದ ಬಳಿಕ ಒಂದು ಕರೆಯನ್ನು ಮಾಡಲು ಪ್ರಯತ್ನಿಸಿ. ಒಂದು ವೇಳೆ ಟ್ರಯಲ್ ರೂಂ ಹೊರಗೆ ಸಿಗ್ನಲ್ ಚೆನ್ನಾಗಿದ್ದು ಟ್ರಯಲ್ ರೂಂ ಒಳಗೆ ಸಿಗ್ನಲ್ ಕ್ಷೀಣ ಅಥವಾ ಇಲ್ಲವಾಗಿದ್ದರೆ ಕ್ಯಾಮೆರಾ ಇರುವುದು ಖಚಿತ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಬೈಲ್ ಬಳಸಿ

ಮೊಬೈಲ್ ಬಳಸಿ

ಏಕೆಂದರೆ ಅಡಗಿಸಿಟ್ಟ ಕ್ಯಾಮೆರಾ ಮತ್ತ್ತು ಆಪ್ಟಿಕಲ್ ಫೈಬರ್ ಮೂಲಕ ಸಂಕೇತಗಳನ್ನು ಕಳಿಸಲು ಮೊಬೈಲ್ ನೆಟ್ವರ್ಕ್ ನ ಹೆಚ್ಚಿನ ಅಂಶವನ್ನು ಕಬಳಿಸುವ ಕಾರಣ ಸಿಗ್ನಲ್ ಕಡಿಮೆಯಾಗುತ್ತದೆ. ಕೆಲವೊಮ್ಮೆ ಟ್ರಯಲ್ ರೂಂ ಒಂದು ಮೂಲೆಯಲ್ಲಿದ್ದು ಅಲ್ಲಿ ಸ್ವಾಭಾವಿಕವಾಗಿಯೇ ಸಿಗ್ನಲ್ ಕಡಿಮೆ ಇರುತ್ತದೆ. ಆದ್ದರಿಂದ ಇದನ್ನು ಮೊದಲು ಖಚಿತಪಡಿಸಿಕೊಳ್ಳಿ.

ಟೂ ವೇ ಮಿರರ್

ಟೂ ವೇ ಮಿರರ್

ಹೌದು,ಟೂ ವೇ ಮಿರರ್ ಅಥವಾ ಒಂದು ಬದಿಯಿಂದ ಕನ್ನಡಿ, ಇನ್ನೊಂದು ಬದಿಯಿಂದ ಪಾರದರ್ಶಕವಾದ ನಿಲುವುಗನ್ನಡಿ. ಈ ಬಗೆಯ ಕನ್ನಡಿಗಳನ್ನು ಕ್ಯಾಮೆರಾ ಬದಲಾಗಿ ಅಳವಡಿಸಲಾಗಿರುತ್ತದೆ. ಅದರ ಹಿಂದೆ ದೊಡ್ಡ ಗಾತ್ರದ ಕ್ಯಾಮೆರಾ ನಿಲ್ಲಿಸಲಾಗಿರುತ್ತದೆ. ಸಾಮಾನ್ಯವಾಗಿ ಈ ಕನ್ನಡಿಗಳು ಗೋಡೆಗೆ ಅಂಟಿಸಿದಂತಿರುತ್ತವೆ. ಕೇವಲ ನೋಡುವ ಮೂಲಕ ಈ ಕನ್ನಡಿ ಟೂ ವೇ ಎಂದು ಕಂಡು ಹಿಡಿಯಲು ಸಾಧ್ಯವಿಲ್ಲ. ಆದರೆ ಇದನ್ನು ಕಂಡುಹಿಡಿಯಲು ಸುಲಭ ವಿಧಾನವೊಂದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಟೂ ವೇ ಮಿರರ್

ಟೂ ವೇ ಮಿರರ್

ಬೆರಳು ಮುಟ್ಟಿ ನೋಡಿ, ಒಂದು ವೇಳೆ ನಿಮ್ಮ ಬೆರಳನ್ನು ನೇರವಾಗಿ ಕನ್ನಡಿಯ ಮೇಲೆ ತಾಗಿಸಿ. ಒಂದು ವೇಳೆ ಇದು ಟೂ ವೇ ಮಿರರ್ ಆಗಿದ್ದರೆ ಬೆರಳಿಗೂ ಕನ್ನಡಿಯ ಬುಡಕ್ಕೂ ಕೊಂಚ ಅಂತರವಿರುತ್ತದೆ. ಏಕೆಂದರೆ ಕನ್ನಡಿಯ ಹಿಂಬದಿಯಲ್ಲಿ ಪಾದರಸದ ಲೇಪನವಿರುತ್ತದೆ. ಒಂದು ವೇಳೆ ಬೆರಳು ಪ್ರತಿಬಿಂಬಕ್ಕೆ ತಾಕಿದಂತೆ ಇರುವಂತಿದ್ದರೆ, ಅಂದರೆ ಬೆರಳಿಗೂ ಬಿಂಬಕ್ಕೂ ಯಾವುದೇ ಅಂತರವಿಲ್ಲದೇ ಇದ್ದಲ್ಲಿ ಇದು ಟೂ ವೇ ಮಿರರ್ ಎಂದು ಖಚಿತವಾಗುತ್ತದೆ. ಅಲ್ಲದೇ ಇದರಲ್ಲಿ ಬಿಂಬವೂ ಕೊಂಚ ಮಂಕಾಗಿರುತ್ತದೆ. ನಿಜವಾದ ಕಾಳಜಿಯುಳ್ಳ ವರ್ತಕರು ಟ್ರಯಲ್ ರೂಮಿನ ಬಾಗಿಲಿಗೆ ಕನ್ನಡಿ ಅಳವಡಿಸುತ್ತಾರೆ. ಇದರಿಂದ ಕನ್ನಡಿಯ ಹಿಂದೆ ಏನೂ ಇಲ್ಲ ಎಂಬುದು ಖಚಿತವಾಗುತ್ತದೆ.

ಟೂ ವೇ ಮಿರರ್ ಪರೀಕ್ಷಿಸಲು ಇನ್ನೊಂದು ವಿಧಾನ

ಟೂ ವೇ ಮಿರರ್ ಪರೀಕ್ಷಿಸಲು ಇನ್ನೊಂದು ವಿಧಾನ

ಈ ಕನ್ನಡಿಗಳಲ್ಲಿ ಇತ್ತ ಬದಿಯಿಂದ ಹೊಳೆಯುವ ವಸ್ತುವಿನ ಲೇಪನವನ್ನು ಮಾಡಲಾಗಿರುತ್ತದೆ. ಸುಮಾರಾಗಿ ಇದು ಕಾರುಗಳ ಗಾಜುಗಳಿಗೆ ಬಿಸಿಲಿನಿಂದ ರಕ್ಷಣೆ ನೀಡುವ ಸನ್ ಸ್ಕ್ರೀನ್ ನಂತೆ ಕಾಣುತ್ತದೆ. ಇದು ಬೆಳಕನ್ನು ಕೊಂಚವೇ ಒಳಬಿಟ್ಟು ಹೆಚ್ಚಿನ ಭಾಗವನ್ನು ಪ್ರತಿಫಲಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಟೂ ವೇ ಮಿರರ್ ಪರೀಕ್ಷಿಸಲು ಇನ್ನೊಂದು ವಿಧಾನ

ಟೂ ವೇ ಮಿರರ್ ಪರೀಕ್ಷಿಸಲು ಇನ್ನೊಂದು ವಿಧಾನ

ಇದೇ ಕಾರಣಕ್ಕೆ ಇತ್ತ ಬದಿಯವರಿಗೆ ತಮ್ಮವೇ ಪ್ರತಿಬಿಂಬ ಕಂಡರೆ ಅತ್ತ ಕಡೆಯವರಿಗೆ ಮಸುಕಾಗಿ ಇತ್ತಕಡೆಯ ಬಿಂಬ ಕಾಣುತ್ತದೆ. ಇದನ್ನು ಪರೀಕ್ಷಿಸಲು ಕೋಣೆಯನ್ನು ಸಂಪೂರ್ಣವಾಗಿ ಕತ್ತಲು ಆವರಿಸುವಂತೆ ಮಾಡಿ. ಬಳಿಕ ಕತ್ತಲಿನಲ್ಲಿ ನಿಂತು ಕನ್ನಡಿಗೆ ಹತ್ತಿರದಿಂದ ಗಮನಿಸಿ. ಇದರಿಂದ ಅತ್ತ ಕಡೆ ಕೊಂಚವೂ ಬೆಳಕಿದ್ದರೆ ಇದನ್ನು ಕಾಣಬಹುದು.

ಟಾರ್ಚ್ ಪರೀಕ್ಷೆ

ಟಾರ್ಚ್ ಪರೀಕ್ಷೆ

ಒಂದು ವೇಳೆ ಈ ಕನ್ನಡಿ ಟೂ ವೇ ಎಂದು ಅನುಮಾನವಾದರೆ ಇದನ್ನು ಖಚಿತಪಡಿಸಲು ಒಂದು ಟಾರ್ಚ್‌ನ ಅಗತ್ಯವಿದೆ. ಮೊದಲು ಟ್ರಯಲ್ ರೂಂ ಪೂರ್ಣವಾಗಿ ಕತ್ತಲಾವರಿಸುವಂತೆ ಮಾಡಿ. ಬಳಿಕ ಟಾರ್ಚ್ ನ ಪ್ರಖರ ಬೆಳಕನ್ನು ಕನ್ನಡಿನ ಮೇಲೆ ಒಂದು ಕೋನದಲ್ಲಿ ಬೀಳುವಂತೆ ಮಾಡಿ. ಉದಾಹರಣೆಗೆ ಮೇಲಿನಿಂದ ಕೆಳಗೆ ಬೀಳುವಂತೆ. ಈಗ ಇದರ ಪ್ರತಿಬಿಂಬ ನೆಲದ ಮೇಲೆ ಅಷ್ಟೇ ಪ್ರಖರವಾಗಿದ್ದರೆ ಸರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಟಾರ್ಚ್ ಪರೀಕ್ಷೆ

ಟಾರ್ಚ್ ಪರೀಕ್ಷೆ

ಕೊಂಚವೂ ಮಂಕಾಗಿದ್ದರೆ ಇದರ ಕೊಂಚ ಭಾಗ ಕನ್ನಡಿಯ ಆಚೆ ದಾಟಿಯೇ ಇರುತ್ತದೆ. ಈ ಕ್ಷೀಣ ಬೆಳಕು ಕನ್ನಡಿಯ ಅತ್ತಕಡೆಯ ಕತ್ತಲ ಕೋಣೆಯ ಒಂದು ಭಾಗವನ್ನು ಕೊಂಚವಾದರೂ ಬೆಳಗಿಸಿಯೇ ಬೆಳಗಿಸುತ್ತದೆ. ಈಗ ಟಾರ್ಚ್ ಇತರ ಕೋನಗಳಿಂದಲೂ ಬೆಳಗಿಸಿ ಹಿಂಬದಿಯಲ್ಲಿ ಖಾಲಿ ಜಾಗ, ಕ್ಯಾಮೆರಾ ಅಥವಾ ಇನ್ನಾವುದೋ ಉಪಕರಣ ಇರುವುದನ್ನು ಖಚಿತಪಡಿಸಿಕೊಳ್ಳಿ.

ಬಳಿಕ ಏನು ಮಾಡಬೇಕು?

ಬಳಿಕ ಏನು ಮಾಡಬೇಕು?

ನಿಮ್ಮ ಹಿರಿಯರನ್ನು ತಕ್ಷಣವೇ ಈ ಕೋಣೆಗೆ ಬರುವಂತೆ ಕೇಳಿಕೊಳ್ಳಿ. ಸಾಧ್ಯವಾದರೆ ಆ ಸ್ಥಳದಲ್ಲಿ ಉಪಸ್ಥಿತರಿದ್ದ ಇತರ ಹಿರಿಯರನ್ನೂ ಕರೆದುಕೊಳ್ಳಿ.

ಬಳಿಕ ಏನು ಮಾಡಬೇಕು?

ಬಳಿಕ ಏನು ಮಾಡಬೇಕು?

ತಕ್ಷಣವೇ ಈ ಸ್ಥಳದಲ್ಲಿ ಕನಿಷ್ಠ ಒಬ್ಬರಾದರೂ ಇರುವಂತೆ ನೋಡಿಕೊಂಡು ಉಳಿದವರು ಪೋಲೀಸರಿಗೆ ಸುದ್ದಿ ಮುಟ್ಟಿಸಿ. ಪೋಲೀಸರು ಬರುವವರೆಗೆ ಇಲ್ಲಿಂದ ಜಾಗ ಖಾಲಿ ಮಾಡಬೇಡಿ. ಈ ಬಗ್ಗೆ ಸುದ್ದಿ ತಿಳಿದ ಖದೀಮರು ಸಾಕ್ಷ್ಯಗಳನ್ನು ನಾಶಪಡಿಸಬಹುದು.

English summary

Tips to Detect Secret Hidden Cameras In Trial Room

When "intrusion" in someone's privacy at any kind is a indecent proposal, peeping people when they are at any private room's such as bathroom, trial room, wash room, gym and dressing room is a "Visual Rape". It's better not to be a victim of "Visual Rape" than prosecuting after being a victim, beware of private room's in public places and some hotels. We never know someone may be filming us in private rooms intentionally for sexual desire's while undressing.
X
Desktop Bottom Promotion