For Quick Alerts
ALLOW NOTIFICATIONS  
For Daily Alerts

  ಮಹಿಳೆಯರಿಗೂ ಆಸೆಗಳಿರುತ್ತವೆ, ಆದರೆ ರಹಸ್ಯವಾಗಿ ಇಟ್ಟು ಕೊಳ್ಳುತ್ತಾರೆ!

  By Deepak
  |

  ಜಗತ್ತಿನಲ್ಲಿ ಹಲವಾರು ರಹಸ್ಯಗಳು ಇರುತ್ತವೆ. ಅವುಗಳಲ್ಲಿ ಅದ್ಭುತವಾದ ರಹಸ್ಯ ಎಂದರೆ ಅದು ಹೆಣ್ಣು. ಆಕೆಯ ಕುರಿತಾಗಿ ಇನ್ನೂ ಹಲವಾರು ವಿಚಾರಗಳು ಪ್ರಪಂಚಕ್ಕೆ ತಿಳಿದಿಲ್ಲ. ತಿಳಿದುಕೊಳ್ಳುವುದರೊಳಗೆ ಇನ್ನು ಹಲವಾರು ರಹಸ್ಯಗಳು ಬಂದು ಅದರೊಂದಿಗೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಏಕೆಂದರೆ ಆಕೆ ಸ್ತ್ರೀ, ಅವರು ಹಾಗೆಯೇ ರಹಸ್ಯದಲ್ಲಿಯೇ ಅತ್ಯಂತ ರಹಸ್ಯವಾದವರು.

  ಇನ್ನು ಇವರ ಕಾಮಾಸಕ್ತಿಯ ಕುರಿತಾಗಿ ವಿಜ್ಞಾನಿಗಳಿಗೆ ಸರಿಯಾಗಿ ತಿಳಿದಿಲ್ಲ ಎಂದರೆ ನೀವೇ ಊಹಿಸಿ, ಇನ್ನು ನಮ್ಮ ನಿಮ್ಮಂತಹವರಿಗೆ ಎಷ್ಟು ತಿಳಿದಿರಬೇಕು. ಇಂದು ಮಹಿಳೆಯರ ಸ್ಥಾನಮಾನವು ಶತಮಾನಗಳ ಹಿಂದಿನ ಪರಿಸ್ಥಿತಿಗಿಂತ ಸ್ವಲ್ಪ ಸುಧಾರಿಸಿದೆ. ಅವರಿಗೆ ಸ್ವಲ್ಪ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಇನ್ನಿತರ ಸವಲತ್ತುಗಳು ಲಭ್ಯವಾಗಿವೆ. ಸಮಾಗಮಕ್ಕೆ ಮಹಿಳೆಯರಿಂದ ದೊರಕುವ ಗುಪ್ತ ಸಂಜ್ಞೆಗಳು

  ಆದರೂ ಇವರು ಬೆಡ್‌ರೂಮಿನಲ್ಲಿ ತಮ್ಮ ಕಾಮಾಸಕ್ತಿಯ ಕುರಿತಾಗಿ ತಮ್ಮ ಸಂಗಾತಿಗೆ ಮನ ಬಿಚ್ಚಿ ತಿಳಿಸುವ ಮಟ್ಟಿಗೆ ಹೋಗಿಲ್ಲ. ಎಲ್ಲವನ್ನು ಗಂಡಸು ಗ್ರಹಿಸಬೇಕು ಎಂದು ಭಾವಿಸುತ್ತಾರೆ. ಆದರೆ ಆತ ಗ್ರಹಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದರೆ ಪರವಾಗಿಲ್ಲ, ಇಲ್ಲವಾದರೆ?

  ಅದಕ್ಕಾಗಿಯೇ ಬಹುತೇಕ ಗಂಡಸರು ತಮ್ಮ ಹೆಂಡತಿ ಯಾವ ರೀತಿ ಕಾಮಾಸಕ್ತಿಯನ್ನು ತೃಪ್ತಪಡಿಸಿಕೊಳ್ಳುತ್ತಾಳೆ ಮತ್ತು ಅವರ ಕಾಮಾಸಕ್ತಿ ತೃಪ್ತಿಯಾಗಬೇಕು ಎಂದರೆ ಗಂಡಸರು ಏನು ಮಾಡಬೇಕು ಎಂಬ ಅಂಶವನ್ನು ತಿಳಿದುಕೊಂಡಿರುವುದಿಲ್ಲ. ಹೆಂಡತಿಯ ಯಾವ ಭಾಗವು ಆಕೆಗೆ ಕಾಮಾಸಕ್ತಿಯನ್ನುಂಟು ಮಾಡುತ್ತದೆ ಎಂದು ಮುಖ್ಯವಾಗಿ ಗಂಡನಾದವನು ತಿಳಿದಿರಬೇಕಾಗುತ್ತದೆ. ಬನ್ನಿ ಮಹಿಳೆಯರ ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುವ ಅಂಶಗಳ ಕುರಿತು ನಾವು ಗಮನಹರಿಸೋಣ....

  ಸಂಸ್ಕೃತಿಯು ಪ್ರಮುಖ ಪಾತ್ರವಹಿಸುತ್ತದೆ

  ಸಂಸ್ಕೃತಿಯು ಪ್ರಮುಖ ಪಾತ್ರವಹಿಸುತ್ತದೆ

  ನಿಜ ಮಹಿಳೆಯರ ಕಾಮಾಸಕ್ತಿಯ ಮೇಲೆ ಸಂಸ್ಕೃತಿಯು ಪ್ರಮುಖ ಪಾತ್ರವನ್ನುವಹಿಸುತ್ತದೆ. ಮಹಿಳೆಯರಿಗೆ ಕಾಮಾಸಕ್ತಿಯು ಬಂದರೂ ಸಹ ಅವರು ತಮ್ಮ ಮರ್ಯಾದೆ, ನಾಚಿಕೆ ಮತ್ತು ಸಂಕೋಚಗಳಿಗೆ ಅಥವಾ ತಮ್ಮ ಧರ್ಮದ, ಸಂಪ್ರದಾಯದ ಕಟ್ಟುಪಾಡುಗಳಿಗೆ ಬದ್ಧವಾಗಿ ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ಕೆಲವರ ಪ್ರಕಾರ ಕಾಮಾಸಕ್ತಿಯನ್ನು ತೋರಿಸಿಕೊಳ್ಳುವುದು ಪಾಪ ಎಂಬ ಪ್ರಜ್ಞೆ ಇರುತ್ತದೆ.

  ಸ್ತ್ರೀಯರು ತಾವು ಅಂದುಕೊಂಡಂತೆ ಇರುತ್ತಾರೆ

  ಸ್ತ್ರೀಯರು ತಾವು ಅಂದುಕೊಂಡಂತೆ ಇರುತ್ತಾರೆ

  ಕಾಮಾಸಕ್ತಿಯನ್ನು ತೋರಿಸಿಕೊಳ್ಳುವ ಬದಲಿಗೆ ಸ್ತ್ರೀಯರು ಕಾಮಾಸಕ್ತಿಯನ್ನು ಉಂಟು ಮಾಡುವ ರೀತಿ ಇರುತ್ತಾರೆ. ಇದಕ್ಕೆ ಸಮೂಹ ಮಾಧ್ಯಮವು ಸಹ ಕಾರಣ. ಹಾಗಾಗಿ ಹೆಂಗಸರು ಕಾಮಾಸಕ್ತಿಯನ್ನು ತೋರಿಸುವ ಬದಲಿಗೆ ಸುಂದರವಾಗಿ ಕಾಣುತ್ತಾರೆ, ಮಾಡೆಲ್‌ಗಳ ರೀತಿ ಕಾಣುತ್ತಾರೆ.

  ಏಕಪತ್ನಿತ್ವ ಸಾಧ್ಯವೇ?

  ಏಕಪತ್ನಿತ್ವ ಸಾಧ್ಯವೇ?

  ಯಾರೇ ಆಗಲಿ ಜೀವನದಲ್ಲಿ ಒಮ್ಮೆ ಮಾತ್ರ ಮದುವೆಯಾಗಲು ಇಷ್ಟಪಡುತ್ತಾರೆ. ಅಂದರೆ ಏಕಪತ್ನಿತ್ವ ಅಥವಾ ಏಕಪತಿತ್ವ ಎಂದರ್ಥ. ಆರೋಗ್ಯ ತಜ್ಞರು ಮತ್ತು ಮನೋವಿಜ್ಞಾನಿಗಳು ಈ ಬಗೆಯ ಏಕ ಸಂಗಾತಿಯನ್ನು ಹೊಂದಲು ಶಿಫಾರಸು ಮಾಡುತ್ತಾರೆ. ಆದರೂ ಅವರು ಹೇಳುವಂತೆ ಗಂಡಸರಾಗಲಿ, ಹೆಂಗಸರಾಗಲಿ ತಮ್ಮ ಸಂಗಾತಿಯನ್ನು ಬಿಟ್ಟು ಇನ್ನೊಬ್ಬರನ್ನು ಇಡೀ ಜೀವನದಲ್ಲಿ ಒಮ್ಮೆಯಾದರು ಇಷ್ಟಪಡದೆ ಇರುವುದು ಅಸಾಧ್ಯವಂತೆ!

  ಕಡಿಮೆ ಕಾಮಾಸಕ್ತಿಯು ದೋಷವಲ್ಲ

  ಕಡಿಮೆ ಕಾಮಾಸಕ್ತಿಯು ದೋಷವಲ್ಲ

  ಇಡೀ ಜೀವನ ಪರ್ಯಂತ ಗಂಡು ಮತ್ತು ಹೆಣ್ಣು ಒಂದೇ ಮಟ್ಟದ ಕಾಮಾಸಕ್ತಿಯನ್ನು ಹೊಂದಿರುವುದು ಅಸಾಧ್ಯವಂತೆ. ಇದಕ್ಕೆ ಮಕ್ಕಳು, ಆರ್ಥಿಕತೆ ಅಥವಾ ಇನ್ನಿತರ ಸಮಸ್ಯೆಗಳು ಕಾರಣವಾಗಿರಬಹುದು.

  ಪ್ರೀತಿಯಿಲ್ಲದ ಮದುವೆಗಳಿಗಿಂತ ಲೈಂಗಿಕ ಸುಖವಿಲ್ಲದ ಮದುವೆಗಳು ಪರವಗಿಲ್ಲ

  ಪ್ರೀತಿಯಿಲ್ಲದ ಮದುವೆಗಳಿಗಿಂತ ಲೈಂಗಿಕ ಸುಖವಿಲ್ಲದ ಮದುವೆಗಳು ಪರವಗಿಲ್ಲ

  ಕೆಲವು ದಂಪತಿಗಳು ತಮ್ಮ ಜೀವನದಲ್ಲಿ ರಸಮಯ ದಿನಗಳನ್ನು ಕಳೆಯುತ್ತಾರೆ. ಅವರಿಗೆ ಕಡಿಮೆ ಕಾಮಾಸಕ್ತಿ ಇನ್ನಿತರ ಸಮಸ್ಯೆಗಳು ಇರುವುದಿಲ್ಲ. ಇನ್ನೂ ಕೆಲವರು ಈ ಎಲ್ಲಾ ಸಮಸ್ಯೆಗಳಿಂದ ಬಳಲಿ ಕಡಿಮೆ ರಸಮಯ ದಿನಗಳನ್ನು ಕಳೆಯುತ್ತಾರೆ. ಆದರೂ ಅವರು ಚೆನ್ನಾಗಿ ಬಾಳುತ್ತಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಪ್ರೀತಿಯಿಲ್ಲದ ಮದುವೆಗಳಿಗಿಂತ ಲೈಂಗಿಕ ಸುಖವಿಲ್ಲದ ಮದುವೆಗಳು ಪರವಗಿಲ್ಲ

  ಪ್ರೀತಿಯಿಲ್ಲದ ಮದುವೆಗಳಿಗಿಂತ ಲೈಂಗಿಕ ಸುಖವಿಲ್ಲದ ಮದುವೆಗಳು ಪರವಗಿಲ್ಲ

  ಆರೋಗ್ಯ ತಜ್ಞರ ಪ್ರಕಾರ ಎಲ್ಲಾ ಸಮಸ್ಯೆಗಳಿದ್ದು, ಸರಿಯಾಗಿ ಜೀವನ ನಡೆಸುವ ಇವರ ಜೀವನವೇ ಆದರ್ಶಮಯ ಎಂದು ಹೇಳಲಾಗುತ್ತದೆ. ಏಕೆಂದರೆ ಇವರಲ್ಲಿ ಎಲ್ಲಾ ಸಮಸ್ಯೆಗಳಿದ್ದರು, ಪ್ರೀತಿಯು ಅವರನ್ನು ಒಟ್ಟಿಗೆ ಇಟ್ಟಿರುತ್ತದೆ.

   

  English summary

  Secret Facts About Female Desire

  Even scientists say that they know very less about female libido and psychology. Yes, women are among the mysteries that men may always fail to understand. But still, today's knowledge levels are a bit better than what men knew about women a few centuries back. At least, today we know that even women need space, liberty and freedom of expression inside the bedroom in order to show their real romantic sides to a man.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more