For Quick Alerts
ALLOW NOTIFICATIONS  
For Daily Alerts

ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಪ್ರಾಣಿ ಬಲಿ! ಏನಿದು ಘಟನೆ?

ಪಾಕಿಸ್ತಾನದ ರನ್ ವೇ ಮಾರ್ಗದ ಮೇಲೆ ಆಡೊಂದನ್ನು ಬಲಿ ನೀಡಿ ಇದರ ರಕ್ತವನ್ನು ಮಾರ್ಗದ ಮೇಲೆಲ್ಲಾ ಚೆಲ್ಲಾಡಲಾಗಿದೆ. ಇದನ್ನು ಅಪಶಕುನದಿಂದ ಪಾರಾಗಲು ನಡೆಸಿದ ಕ್ರಮವೆಂದು ಅಧಿಕಾರಿಗಳೇ ಸಮರ್ಥಿಸಿಕೊಂಡಿದ್ದಾರೆ.

By Manu
|

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಆಧುನಿಕ ವಿಜ್ಞಾನದ ಸಾಕಾರ ರೂಪವೆಂದೇ ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದೆ.

ಇಲ್ಲಿನ ರನ್ ವೇ ಮಾರ್ಗದ ಮೇಲೆ ಆಡೊಂದನ್ನು ಬಲಿ ನೀಡಿ ಇದರ ರಕ್ತವನ್ನು ಮಾರ್ಗದ ಮೇಲೆಲ್ಲಾ ಚೆಲ್ಲಾಡಲಾಗಿದೆ. ಇದನ್ನು ಅಪಶಕುನದಿಂದ ಪಾರಾಗಲು ನಡೆಸಿದ ಕ್ರಮವೆಂದು ಅಧಿಕಾರಿಗಳೇ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಪಾಕಿಸ್ತಾನದ ವಿಮಾನವೊಂದು ಅಪಘಾತಕ್ಕೀಡಾಗಿ ಪತನಗೊಂಡ ಬಳಿಕ ಕೆಲವೇ ವಾರಗಳ ಅವಧಿಯಲ್ಲಿ ಇಂತಹ ಘಟನೆಯನ್ನು ನಡೆಸಲಾಗಿದೆ. ವಿಮಾನ ಅಪಹರಣಗಳಲ್ಲಿಯೇ ಅತಿ ಭಯಾನಕವಾದ ಪ್ರಕರಣಗಳು

ಡಿಸೆಂಬರ್ 7 ರಂದು ಯೂರೋಪ್ ನಿರ್ಮಿತ ಟರ್ಬೋಪ್ರಾಪ್ ವಿಮಾನವೊಂದು ಪಾಕಿಸ್ತಾನದ ಉತ್ತರ ಭಾಗದ ಅಬೊಟ್ಟಾಬಾದ್‌ದ ದಾರಿಯಲ್ಲಿ ಸಾಗುತ್ತಿದ್ದಾಗ ಪರ್ವತಗಳಿಗೆ ಢಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿದ್ದ ಒಟ್ಟು ನಲವತ್ತೇಳು ಜನರೂ ಹತರಾಗಿದ್ದರು. ಸಂಸ್ಥೆ ಯಾವುದಾದರೂ, ಎಲ್ಲಾ ವಿಮಾನಗಳ ಬಣ್ಣ ಬಿಳಿ! ಯಾಕೆ ಹೀಗೆ?

ಬಳಿಕ ಈ ಅಪಘಾತ ಮತ್ತೊಮ್ಮೆ ಸಂಭವಿಸದಂತೆ ನಿಲ್ದಾಣದ ರನ್ ವೇ ಮೇಲೆ ಆಡಿನ ಬಲಿಯನ್ನು ನೀಡಿ ರಕ್ತ ಚೆಲ್ಲಾಡಲಾಗಿತ್ತು. ಈ ದೃಶ್ಯವನ್ನು ಸೆರೆಹಿಡಿದು ಅಂತರ್ಜಾಲದಲ್ಲಿ ಪ್ರಕಟಿಸಿದ ಬಳಿಕ ಜನರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಲು ಹೇಗೆ ಕಾತುರರಾಗಿದ್ದರೆಂಬುದನ್ನು ಸ್ವತಃ ಗಮನಿಸಿ.......

ಈ ಚಿತ್ರವನ್ನು ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳೇ ಟ್ವೀಟ್ ಮಾಡಿದ್ದರು

ಈ ಕ್ರಮವನ್ನು ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ ಅಥವಾ ಪಿಐಎ ಅಧಿಕಾರಿಗಳು ನಡೆಸಿದ್ದರು. ಈ ಕ್ರಮವನ್ನು ಗಮನಿಸಿದ ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳೇ ತಮ್ಮ ಟ್ವಿಟರ್ ಖಾತೆಯ ಮೂಲಕ "ಈ ವಿಶ್ವ ವಿಮಾನದ ಸುರಕ್ಷತೆಯ ಬಗ್ಗೆ ಪಿಐಎ ನಿಂದಲೇ ಕಲಿಯಬೇಕು, ಇವರ ಸುರಕ್ಷಾ ವಿಧಾನವೆಂದರೆ ಆಡನ್ನು ರನ್ವೇಗೆ ಬಲಿ ನೀಡುವುದು" ಎಂದು ಟ್ವೀಟ್ ಮಾಡಿದ್ದರು.

ಇಮ್ರಾನ್ ಖಾನ್ ನಂತಹ ಖ್ಯಾತನಾಮರೂ ಈ ಬಗ್ಗೆ ಚರ್ಚಿಸಿದರು

ಖ್ಯಾತ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಸಹಾ ತಮ್ಮ ಟ್ವಿಟರ್ ಖಾತೆಯಲ್ಲಿ "ಈ ಬಗ್ಗೆ ಅರಿಯುತ್ತಿದ್ದಂತೆಯೇ ನಾವೆಲ್ಲಾ ಅಚ್ಚರಿಯ ಕೂಪಕ್ಕೆ ಬಿದ್ದಿದ್ದೇವೆ. ಪಿಐಎ ವಿಶ್ವದ ಒಂದು ಪ್ರಮುಖ ವಿಮಾನಯಾನ ಸಂಸ್ಥೆಯಾಗಿದ್ದು ಈಗ ವಿಮಾನಗಳ ಸುರಕ್ಷತೆಗಾಗಿ ಆಡುಗಳನ್ನು ಬಲಿ ನೀಡುತ್ತಿದೆ" ಎಂದು ಟ್ವೀಟ್ ಮಾಡಿದ್ದರು.

ಜನಸಾಮಾನ್ಯರೂ ಈ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದರು

ಈ ಬಗ್ಗೆ ಜನಸಾಮಾನ್ಯರಿಂದಲೂ ಭಾರೀ ಪ್ರಮಾಣದ ಟೀಕೆಗಳು ವ್ಯಕ್ತವಾದವು. ಟ್ವೀಟ್ ಮಾಡಿದ ಪ್ರಜೆಯೊಬ್ಬರು "ಕರಿ ಆಡೊಂದನ್ನು ಬಲಿ ನೀಡುವುದರಿಂದ ವಿಮಾನ ಸುರಕ್ಷತೆ ಹೇಗೆ ಹೆಚ್ಚುತ್ತದೆ? ಹೇಗೆ? ಹೇಗೆ?" ಎಂದು ಟ್ವೀಟ್ ಮಾಡಿದ್ದಾರೆ.

ಈಕೆಯ ಮಾತಿನಲ್ಲಿ ತರ್ಕವಿದೆ

ಓರ್ವ ಯುವತಿ ಮಾಡಿದ ಟ್ವೀಟ್ ವಿವೇಕಯುಕ್ತವಾಗಿದೆ. ಈಕೆ "ಪಿಐಎಗೆ ಈಗ ನೂತನ ಮತ್ತು ಹೆಚ್ಚಿನ ಸುರಕ್ಷತೆಯುಳ್ಳ ವಿಮಾನಗಳು ಬೇಕಾಗಿವೆಯೇ ಹೊರತು ಹಳೆಯ ವಿಮಾನಗಳಿಗೆ ಕರಿ ಆಡುಗಳ ಬಲಿಯ ರಕ್ಷಣೆಯಲ್ಲ, ನಾನಂತೂ ಈ ವಿಧಿಯನ್ನು ಅನುಸರಿಸಿದ ವಿಮಾನವನ್ನು ಏರುವುದಿಲ್ಲ"

ಕೆಲವರು ಈ ಕ್ರಮವನ್ನು ಸಮರ್ಥಿಸಿದ್ದಾರೆ

ಕೆಲವು ಧಾರ್ಮಿಕ ವ್ಯಕ್ತಿಗಳು ಈ ಕ್ರಮವನ್ನು ಸರಿ ಎಂದು ಒಪ್ಪಿದ್ದಾರೆ. ಏಕೆಂದರೆ ಆಡನ್ನು ಬಲಿ ಕೊಡುವುದು ಒಂದು ಧಾರ್ಮಿಕ ವಿಧಿಯಾಗಿದ್ದು ಪಿಐಎ ಅಧಿಕಾರಿಗಳು ಅಥವಾ ಸಿಬ್ಬಂತಿ ತಮ್ಮ ಸುರಕ್ಷತೆಗಾಗಿ ತಮ್ಮ ಖರ್ಚಿನಲ್ಲಿ ಆಡನ್ನು ಬಲಿಕೊಟ್ಟರೆ ಇದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಪಿಐಎ ಸಿಬ್ಬಂದಿಯ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬ ತನ್ನ ಸುರಕ್ಷತೆಗಾಗಿ ಈ ಕ್ರಮ ಅನುಸರಿಸಿದರೆ ಇದನ್ನು ಪಿಐಎ ನಡೆಸಿದೆ ಎಂದು ವರದಿಯನ್ನು ತಿರುಚಲಾಗಿದೆ ಎಂದು ಇವರು ಆಪಾದಿಸುತ್ತಾರೆ.

ಈ ಘಟನೆಯಿಂದ ಜನರಲ್ಲಿ ಬಲಿಯ ಬಗ್ಗೆ ಇನ್ನೂ ಯಾವ ರೀತಿಯ ಅಭಿಪ್ರಾಯಗಳು ಉಳಿದುಕೊಂಡಿವೆ ಎಂದು ಗೊತ್ತಾಗುತ್ತದೆ. ನಮ್ಮ ನಂಬಿಕೆಗಾಗಿ ಮುಗ್ಧ ಪ್ರಾಣಿಗಳನ್ನು ಬಲಿ ನೀಡುವುದು ಸರಿಯಲ್ಲ ಎಂದು ಹೆಚ್ಚಿನ ವಿಚಾರವಾದಿಗಳು ಅಭಿಪ್ರಾಯಪಡುತ್ತಾರೆ.

English summary

Pakistan Airline Staff Sacrificed Goat On Runway

A shocking incident happened in the Pakistan International Airport where a goat was sacrificed on the runway and its blood was spilled all over the runaway!! All this was done to ward off bad luck. This was done a few weeks after a Pakistan's airline had crashed killing several people!
X
Desktop Bottom Promotion