For Quick Alerts
ALLOW NOTIFICATIONS  
For Daily Alerts

ಉದ್ಯೋಗವೆಂದರೆ ಹೀಗಿರಬೇಕು-ಕೈ ತುಂಬಾ ಸಂಬಳ ಸಿಗಬೇಕು!

By Arshad
|

ಭಾರತ ಮತ್ತು ಚೀನಾ ದೇಶಗಳು ಜನಸಂಖ್ಯೆಯ ಕಾರಣದಿಂದ ವಿಶ್ವವಿಖ್ಯಾತಿ ಪಡೆದಿವೆ. ಅಂತೆಯೇ ಲಭ್ಯವಿರುವ ಉದ್ಯೋಗಗಳಿಗೆ ಭಾರೀ ಪೈಪೋಟಿಯೂ ಇದೆ. ಈ ಪೈಪೋಟಿಯನ್ನು ನಗದೀಕರಿಸುವ ಸಂಸ್ಥೆಗಳು ಅತಿ ಕಡಿಮೆ ವೇತನ ನೀಡಿ ಅತಿಹೆಚ್ಚು ಕೆಲಸ ಮಾಡಿಸಿಕೊಳ್ಳುವ ಹುನ್ನಾರದಲ್ಲಿರುತ್ತವೆ. ವ್ಯತಿರಿಕ್ತವಾಗಿ ಕೆಲವು ಉದ್ಯೋಗಗಳಿಗೆ ಭಾರೀ ಪ್ರಮಾಣದ ವೇತನವಿದ್ದು ಉಳಿದವರ ಹುಬ್ಬೇರಿಸುತ್ತವೆ. ಈ ಗುಣಗಳು ಇಲ್ಲದಿದ್ದರೆ ದುಡ್ಡು ಮಾಡಲು ಸಾಧ್ಯವಿಲ್ಲ ರೀ

ನಾವೆಲ್ಲರೂ ತಿಳಿದುಕೊಂಡಂತೆ ರಾಷ್ಟ್ರಪತಿಗಳಿಗೆ ಅತಿ ಹೆಚ್ಚಿನ ವೇತನ ಹಾಗೂ ಸರ್ಕಾರದ ಗೌರವ ಮತ್ತು ತಕ್ಕ ಸವಲತ್ತುಗಳಿವೆ. ಆದರೆ ಭಾರತದಲ್ಲಿ ಕೆಲವು ಉದ್ಯೋಗಗಳಿಗೆ ನಾವು ಊಹಿಸದಷ್ಟೂ ಹೆಚ್ಚಿನ ವೇತನವಿದ್ದು ಈಗಾಗಲೇ ಕಡಿಮೆ ವೇತನ ಮತ್ತು ಹೆಚ್ಚಿನ ಕೆಲಸದಿಂದ ಬಳಲಿರುವ ಬಹುಸಂಖ್ಯಾತ ಉದ್ಯೋಗಿಗಳಿಗೆ ತಮ್ಮ ಉದ್ಯೋಗಗಳ ಬಗ್ಗೆ ಇನ್ನಷ್ಟು ಕಿರಿಕಿರಿಯುಂಟಾಗಬಹುದು. ನಿಮ್ಮ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲವೇ? ಬನ್ನಿ ಕಾರಣ ಹುಡುಕೋಣ!

ಅಷ್ಟಕ್ಕೂ ಈ ಅತಿಹೆಚ್ಚಿನ ವೇತನ ಪಡೆಯುವವರ ಕೆಲಸವೇನು ಇರುತ್ತದೆ? ಉಳಿದವರಿಗೆ ಸಾಧ್ಯವಾಗದ ಕೆಲಸವಿರುವ ಕಾರಣದಿಂದಲೇ ಇವರಿಗೆ ಈ ಹೆಚ್ಚಿನ ವೇತನ ಸಿಗುತ್ತಿರುವುದು ನಿಚ್ಚಳವಾದರೂ ಈ ಕೆಲಸವನ್ನು ಪಡೆಯಲು ನಮ್ಮಿಂದೇಕೆ ಸಾಧ್ಯವಾಗುತ್ತಿಲ್ಲ ಎಂಬೆಲ್ಲಾ ಪ್ರಶ್ನೆಗಳಿಗೆ ಕೆಳಗಿನ ಲೇಖನ ಉತ್ತರ ನೀಡುತ್ತದೆ.....


ಬಿಸಿನೆಸ್ ಅನಾಲಿಟಿಕ್ಸ್

ಬಿಸಿನೆಸ್ ಅನಾಲಿಟಿಕ್ಸ್

ಪ್ರಸ್ತುತ ದಿನಗಳಲ್ಲಿ ಈ ಉದ್ಯೋಗ ಅತಿ ಹೆಚ್ಚಿನ ಬೇಡಿಕೆ ಪಡೆದಿದ್ದು ಭಾರತದಲ್ಲಿ ಅತಿ ಹೆಚ್ಚಿನ ವೇತನ ನೀಡಲಾಗುತ್ತಿರುವ ವೇತನವಾಗಿದೆ. ಇಂದು ಇ-ಕಾಮರ್ಸ್ ಅಥವಾ ಆನ್ಲೈನ್ ಮತ್ತು ಬಹುವಿಧದ ಉತ್ಪನ್ನಗಳ ಭಾರೀ ಮಳಿಗೆಗಳ ಮೂಲಕ ವ್ಯಾಪಾರವನ್ನು ಹೆಚ್ಚಿಸುವ ಮತ್ತು ಕುದುರಿಸುವ ಮುಖ್ಯ ನಿರ್ಧಾರಗಳನ್ನು ಪಡೆಯುವ ಕೆಲಸ ಇವರದ್ದಾಗಿದ್ದು ಜವಾಬ್ದಾರಿಯುತವೂ ಆಗಿದೆ. ಈ ಉದ್ಯೋಗ ಪಡೆಯಲು ಗಣಿತದಲ್ಲಿ ಮೇಧಾವಿಯಾಗಿರುವುದು ಮಾತ್ರ ಖಂಡಿತಾ ಅಗತ್ಯ. ಹಾಗಾಗಿ ಸಾಮಾನ್ಯರಿಗೆ ಈ ಉದ್ಯೋಗ ಲಭಿಸುವ ಸಾಧ್ಯತೆ ಕಡಿಮೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೂಡಿಕೆದಾರ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೂಡಿಕೆದಾರ

ಈ ಕೆಲಸದಲ್ಲಿ ಬ್ಯಾಂಕುಗಳಿಗೆ ಭಾರೀ ಪ್ರಮಾಣದ ಹಣವನ್ನು ಇತರರಿಂದ ಹೂಡಿಸಬಲ್ಲ ಚಾಕಚಕ್ಯತೆ ಇರುವ ವ್ಯಕ್ತಿಗಳಿಗೆ ಭಾರೀ ಬೇಡಿಕೆ ಇದ್ದು ಇವರು ತರುವ ಹೂಡಿಕೆಗಳ ಮೊತ್ತದ ಮೇಲೆ ಇವರಿಗೆ ಸಂಭಾವನೆ ಸಿಗುತ್ತದೆ.

ಮ್ಯಾನೇಜ್ಮೆಂಟ್ ಕುಶಲಕರ್ಮಿ

ಮ್ಯಾನೇಜ್ಮೆಂಟ್ ಕುಶಲಕರ್ಮಿ

ಯಾವುದೇ ಸಂಸ್ಥೆಯ ಯಶಸ್ಸಿಗೆ ನೇರವಾಗಿ ಕಾರಣರಾಗಿರುವ ಈ ವ್ಯಕ್ತಿಗಳು ಸಂಸ್ಥೆಯ ಒಟ್ಟಾರೆ ಕಾರ್ಯವೈಖರಿ, ಉತ್ಪನ್ನಗಳು, ಮಾರುಕಟ್ಟೆ, ವಿನ್ಯಾಸ ಮೊದಲಾದವುಗಳನ್ನೆಲ್ಲಾ ನಿರ್ವಹಿಸುವ ಮೂಲಕ ಅತಿ ಹೆಚ್ಚಿನ ಲಾಭ ಪಡೆಯಲು ನೆರವಾಗುತ್ತಾರೆ. ಪ್ರಸ್ತುತ ಈ ವ್ಯಕ್ತಿಗಳು ಪಡೆಯುವ ವೇತನ ಭಾರತದಲ್ಲಿ ಮೂರನೆಯ ಅತಿ ಹೆಚ್ಚಿನದ್ದಾಗಿದೆ.

ಚಾರ್ಟರ್ಡ್ ಅಕೌಂಟೆಂಟ್

ಚಾರ್ಟರ್ಡ್ ಅಕೌಂಟೆಂಟ್

ಪ್ರಸ್ತುತ ಅತಿ ಹೆಚ್ಚು ವೇತನದಲ್ಲಿ ನಾಲ್ಕನೆಯ ಸ್ಥಾನ ಪಡೆದಿರುವ ಈ ಉದ್ಯೋಗಕ್ಕೆ ಸಾಮಾನ್ಯವದ ವಾಣಿಜ್ಯ ಪದವಿ ಸಾಕಾಗದು. ಬದಲಿಗೆ ವಾಣಿಜ್ಯ ವಿಷಯದಲ್ಲಿ ಅತಿಹೆಚ್ಚಿನ ಕ್ಷಮತೆ ಹಾಗೂ ವಾಸ್ತವಿಕ ಅಂಕಿಅಂಶಗಳನ್ನು ಕಲೆಹಾಕಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವವರಿಗೆ ಮಾತ್ರ ಈ ಉದ್ಯೋಗ ಲಭ್ಯ.

ಸಾಫ್ಟ್ ವೇರ್ ಉದ್ಯೋಗಿಗಳು

ಸಾಫ್ಟ್ ವೇರ್ ಉದ್ಯೋಗಿಗಳು

ಒಂದು ದಿನದಲ್ಲಿ ಅತಿ ಹೆಚ್ಚಿನ ವೇತನ ಪಡೆಯುತ್ತಿದ್ದ ಈ ಕ್ಷೇತ್ರ ಈಗ ಐದನೆಯ ಸ್ಥಾನಕ್ಕೆ ಇಳಿದಿದೆ. ಆದರೂ ಈ ಉದ್ಯೋಗಿಗಳು ಉಳಿದವರಿಗಿಂತ ಹೆಚ್ಚಿನ ಮೊತ್ತದ ಹಣವನ್ನೇ ಮನೆಗೆ ತರುತ್ತಾರೆ. ಸಾಫ್ಟ್ ವೇರ್ ವಿಷಯದಲ್ಲಿ ಪರಿಣಿತಿ ಹಾಗೂ ಸತತವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಬದಲಿಸಿಕೊಳ್ಳುವ ಮೂಲಕ ಈ ಉದ್ಯೋಗಗಳನ್ನು ಉಳಿಸಿಕೊಳ್ಳಬಹುದು.

English summary

List Of Highest Paid Jobs In India

These guys are minting cash like crazy and their job fields are really cool. If you are confused on taking up a career, then you should think twice and may be this article will help you clear your mind. So, find out about the highest paid jobs in India...
Story first published: Tuesday, December 6, 2016, 18:14 [IST]
X
Desktop Bottom Promotion