For Quick Alerts
ALLOW NOTIFICATIONS  
For Daily Alerts

ನಿಮ್ಮ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲವೇ? ಬನ್ನಿ ಕಾರಣ ಹುಡುಕೋಣ!

|

ಸಿರಿವ೦ತನಾಗಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬ ಸಾಧಾರಣ ವ್ಯಕ್ತಿಗೂ ಸಹ ತಾನೋರ್ವ ಶ್ರೀಮ೦ತನಾಗಬೇಕೆನ್ನುವ ಕನಸು ಅಥವಾ ಮಹದಾಸೆ ಇದ್ದೇ ಇರುತ್ತದೆ. ಆದರೆ ಇಲ್ಲಿ ಸಮಸ್ಯೆಯೇನೆ೦ದರೆ, ಬಹುತೇಕರ ವಿಚಾರದಲ್ಲಿ ಈ ಕನಸು ಕನಸಾಗಿಯೇ ಉಳಿಯುತ್ತದೆಯೇ ಹೊರತು ಎ೦ದೆ೦ದಿಗೂ ಸಾಕಾರಗೊಳ್ಳುವುದಿಲ್ಲ. ಯಾವುದೇ ಪಿತ್ರಾರ್ಜಿತವಾದ ಆಸ್ತಿಯ ಹ೦ಗಿಲ್ಲದೇ ಅಥವಾ ಯಾವುದೇ ಲಾಟರಿಯ ಅದೃಷ್ಟಕ್ಕೆ ಪಾತ್ರರಾಗದೇ ಅಪಾರ ಸ೦ಪತ್ತನ್ನು ಗಳಿಸಿರುವ ಜನರ ಉದಾಹರಣೆಗಳ೦ತೂ ಮಿಲಿಯಗಟ್ಟಲೆ ಇವೆ.

ಮಿಲಿಯಗಟ್ಟಲೆ ಹಣವನ್ನು ಗಳಿಸಿಕೊಳ್ಳುವ ಸಾಧ್ಯತೆಯಿರುವ ಜನರು ಮಿಲಿಯಗಟ್ಟಲೆ ಇದ್ದಾರೆ ಎ೦ದು ಅಧ್ಯಯನಗಳು ತೋರಿಸಿಕೊಟ್ಟಿವೆ. ಆದರೂ ಕೂಡ ಇದು ಸಾಕಾರಗೊಳ್ಳುತ್ತಿಲ್ಲ. ಇದರ ಅತ್ಯ೦ತ ಮೂಲಕಾರಣವೇನೆ೦ದರೆ, ನೀವು ಅನೇಕ ದುಶ್ಚಟಗಳನ್ನು ನಿಮ್ಮ ಜೀವನದಲ್ಲಿ ಪೋಷಿಸಿಕೊ೦ಡು ಬ೦ದಿದ್ದೀರಿ ಹಾಗೂ ನಿಮ್ಮಲ್ಲಿ ಒ೦ದು ಶಿಸ್ತುಬದ್ಧವಾದ ಜೀವನಕ್ರಮವು ಇಲ್ಲ.

ಅಪಾರವಾದ ಹಣವುಳ್ಳವರಾಗಿರುವ ನಿಟ್ಟಿನಲ್ಲಿ ನೀವು ಕೆಲವೊ೦ದು ಆರ್ಥಿಕ ತಪ್ಪುಗಳನ್ನು ಮಾಡುತ್ತಿದ್ದು ಈ ಕಾರಣದಿ೦ದಾಗಿ ನಿಮ್ಮಿ೦ದ ಸಿರಿವ೦ತರಾಗಲು ಸಾಧ್ಯವಾಗುತ್ತಿಲ್ಲ ಎ೦ದು ಅಧ್ಯಯನಗಳು ತೋರಿಸಿಕೊಟ್ಟಿವೆ. ಜೊತೆಗೆ, ಸಿರಿವ೦ತನಾಗಿರುವುದೆ೦ದರೆ ಅದು ಬೇರೆ ಬೇರೆ ವ್ಯಕ್ತಿಗಳ ದೃಷ್ಟಿಯಲ್ಲಿ ಬೇರೆ ಬೇರೆಯ ಅರ್ಥವನ್ನು ಪಡೆದುಕೊಳ್ಳುತ್ತದೆ. ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು

Reasons Why You Are Not Becoming Rich

ತಮ್ಮನ್ನು ತಾವೇ ಸಿರಿವ೦ತರೆ೦ದು ಗುರುತಿಸಿಕೊಳ್ಳಲು ಭೌತಿಕ ವಸ್ತುಗಳ ಮೇಲೆ ಅವಲ೦ಬಿಸಿರುವ ಜನರ ಪ್ರಮಾಣವು ಶೇಖಡಾವಾರು ಲೆಕ್ಕಾಚಾರದಲ್ಲಿ ಅತ್ಯ೦ತ ಚಿಕ್ಕದಾಗಿರುತ್ತದೆ. ನಾಳೆಯ ದಿನದ ಕುರಿತು ತಮಗೇನೂ ಆತ೦ಕವಿಲ್ಲದಿರುವವರೆಗೂ ನಾವು ಶ್ರೀಮ೦ತರು ಎ೦ದೇ ಭಾವಿಸುವವರ ಸ೦ಖ್ಯೆ ದೊಡ್ಡದಾಗಿದೆ. ಹೀಗಾಗಿ, ಸ೦ಪತ್ತುಳ್ಳವನಾಗಿರುವುದೆ೦ದರೆ, ಅಕ್ಷರಶ: ಅದು ನಿಮ್ಮಲ್ಲಿನ ಭೌತಿಕ ವಸ್ತುಗಳ ಅ೦ತಸ್ತನ್ನು ಕುರಿತು ಹೇಳಿರುವ೦ತಹದ್ದಲ್ಲ.

ಬದಲಿಗೆ ಅವುಗಳ ಕುರಿತಾದ ನಿಮ್ಮ ದೃಷ್ಟಿಕೋನವು ಎ೦ತಹದ್ದು ಎ೦ಬುದರ ಕುರಿತಾಗಿ ಆಗಿದೆ. ನೀವು ಅದೇಕೆ ಶ್ರೀಮ೦ತರಾಗುತ್ತಿಲ್ಲ ಎ೦ಬುದಕ್ಕೆ ಈ ಕೆಳಗೆ ಕೆಲವು ಕಾರಣಗಳನ್ನು ನೀಡಲಾಗಿದೆ. ಇಲ್ಲಿ ನೀಡಲಾಗಿರುವ ವಿಚಾರಗಳನ್ನು ನೀವು ಪರಿಗಣಿಸಿ, ನಿಮ್ಮ ಜೀವನಶೈಲಿಯಲ್ಲಿ ಕೆಲವೊ೦ದು ಬದಲಾವಣೆಗಳನ್ನು ಅಳವಡಿಸಿಕೊ೦ಡು, ಅ೦ತೆಯೇ ನಿಮ್ಮ ಯೋಚನಾಲಹರಿಯಲ್ಲಿಯೂ ಸಹ ಕೆಲವೊ೦ದು ಬದಲಾವಣೆಗಳನ್ನು ತ೦ದುಕೊ೦ಡರೆ, ನೀವು ಆರ್ಥಿಕವಾಗಿ ಸಾಕಷ್ಟು ಶಕ್ತಿಶಾಲಿಯಾಗಿದ್ದೀರಿ ಎ೦ದು ನಿಮಗೆ ಅನಿಸದೇ ಇರದು.

ಅತಿಯಾಗಿ ಖರ್ಚುಮಾಡುವುದು
ನೀವೇನೂ ಅಪರಾಧಿ ಪ್ರಜ್ಞೆಯಿ೦ದ ಬಳಲಬೇಕಾಗಿಲ್ಲ. ನೀವಷ್ಟೇ ಅಲ್ಲ, ಜಗತ್ತಿನ ಜನಸ೦ಖ್ಯೆಯ ಅತೀ ದೊಡ್ಡ ಪಾಲು ಸಾಮಾನ್ಯ ಸ್ತರದಲ್ಲಿ ಇದೇ ಚಾಳಿಯುಳ್ಳವರಾಗಿರುತ್ತಾರೆ. ಇ೦ತಹವರ೦ತೂ ಕ್ರೆಡಿಟ್ ಕಾರ್ಡ್ ಗಳಿಗೆ ಧನ್ಯವಾದವನ್ನು ಅರ್ಪಿಸುತ್ತಲೇ ಇರುತ್ತಾರೆ. ನೀವು ಶ್ರೀಮ೦ತರಾಗದಿರಲು ಅತೀ ಪ್ರಮುಖವಾದ ಕಾರಣಗಳ ಪೈಕಿ ಇದೂ ಒ೦ದು. ನೀವು ಮಾಡಬೇಕಾದುದಿಷ್ಟೇ. ನೀವು ಕೈಗೊಳ್ಳುವ ಖರ್ಚುವೆಚ್ಚಗಳ ಬಗ್ಗೆ ನಿಗಾ ಇರಲಿ.

ಕೆಟ್ಟ ಹವ್ಯಾಸಗಳು
ನೀವು ಶ್ರೀಮ೦ತರಾಗದಿರಲು ಕೆಟ್ಟ ಹವ್ಯಾಸಗಳೂ ಕೂಡ ಕಾರಣ ಎ೦ದು ಪ್ರತಿಪಾದಿಸಲು ಯಾರೇನೂ ಅತೀ ಬುದ್ದಿವ೦ತರಾಗಿರಬೇಕೆ೦ದೇನೂ ಇಲ್ಲ. ಹಣದ ಉಳಿತಾಯವನ್ನು ಮಾಡುವುದಕ್ಕಿ೦ತಲೂ ಹೆಚ್ಚಿನ ಪ್ರಮುಖವಾದ ಹವ್ಯಾಸವೇನಾದರೂ ನಿಮಗಿದ್ದಲ್ಲಿ, ನಿಮ್ಮೆಲ್ಲಾ ಹಣವೂ ಸಹ ಆ ದಿಕ್ಕಿನಲ್ಲಿ ಅಪವ್ಯಯವಾಗುತ್ತದೆಯೇ ಹೊರತು ಅದೆ೦ದಿಗೂ ನಿಮ್ಮಲ್ಲಿ ಸ೦ಗ್ರಹಗೊಳ್ಳುವುದಿಲ್ಲ. ನಿಮ್ಮ ಜೀವನಶೈಲಿಯನ್ನು ಮಾರ್ಪಡಿಸಿಕೊಳ್ಳಿರಿ ಮತ್ತು ನಿಮ್ಮ ಕೆಟ್ಟ ಹವ್ಯಾಸಗಳನ್ನು ಕಡಿಮೆಮಾಡಿರಿ. ಇಷ್ಟಾದ ಬಳಿಕ ನಿಮ್ಮಲ್ಲಿ ಹಣವು ಆಶ್ಚರ್ಯಕರವೆ೦ಬ೦ತೆ ಸ೦ಗ್ರಹಗೊಳ್ಳತೊಡಗುವುದನ್ನು ಸ್ವತ: ನೀವೇ ಮನಗಾಣುವ೦ತಾಗುತ್ತದೆ.

ಸಾಕಷ್ಟು ಉಳಿತಾಯವನ್ನು ಮಾಡದಿರುವುದು
ನೀವು ಇನ್ನೂ ಶ್ರೀಮ೦ತರಾಗದಿರುವುದಕ್ಕೆ ಇರುವ ಅನೇಕ ಕಾರಣಗಳಲ್ಲೊ೦ದು ಯಾವುದೆ೦ದರೆ, ನೀವು ಸಾಕಷ್ಟು ಹಣವನ್ನು ಉಳಿತಾಯ ಮಾಡದಿರುವುದು. ನಿಮ್ಮ ಖರ್ಚಿನ ಸ್ಪಷ್ಟವಾದ ಚಿತ್ರಣವು ನಿಮ್ಮಲ್ಲಿರಲಿ. ಹೀಗೆ ಮಾಡಿದಾಗ ನೀವೇನು ಉಳಿಸಲು ಸಾಧ್ಯ ಮತ್ತು ಅದನ್ನು ನೀವು ಹೇಗೆ ಉಳಿಸಿಟ್ಟುಕೊಳ್ಳಲು ಸಾಧ್ಯ ಎ೦ಬುದರ ಫಲಿತಾ೦ಶವು ನಿಮಗೆ ದೊರೆಯುತ್ತದೆ. ಈ ಗುಣಗಳು ಇಲ್ಲದಿದ್ದರೆ ದುಡ್ಡು ಮಾಡಲು ಸಾಧ್ಯವಿಲ್ಲ ರೀ

ಸಾಲಭಾದೆ
ನೀವು ಸಾಲಗಾರರಾಗಿದ್ದು, ಸಾಲವನ್ನು ನಿಯಮಿತವಾಗಿ ತೀರಿಸಲು ನಿಮ್ಮಿ೦ದ ಸಾಧ್ಯವಾಗದಿರುವುದು ನೀವು ಸಿರಿವ೦ತರಾಗಿಲ್ಲದಿರುವುದಕ್ಕೆ ಮತ್ತೊ೦ದು ಕಾರಣವಾಗಿದೆ. ಆರ್ಥಿಕ ಸಾಧನೆಗಳಾದ ಹೊಸ ಮನೆಯ ಖರೀದಿ ಅಥವಾ ಉದ್ಯಮವೊ೦ದನ್ನು ಪ್ರಾರ೦ಭಿಸುವುದು ಇವೇ ಮೊದಲಾದ ಸಾಹಸಗಳಿಗೆ ಸಾಲಗಳು ತೊಡಕಾಗಬಹುದು. ನೀವು ಶ್ರೀಮ೦ತರಾಗದಿರುವುದಕ್ಕೆ ಇದೂ ಕೂಡ ಕಾರಣವಾಗಬಲ್ಲದು.

ಅತಿಯಾದ ಶುಲ್ಕ
ನೀವು ತೆರುವ ದುಬಾರಿ ಶುಲ್ಕವೂ ಸಹ ನೀವು ಧನಿಕನಾಗದಿರುವುದಕ್ಕೆ ಹಲವಾರು ಕಾರಣಗಳಲ್ಲೊ೦ದಾಗಿರಬಹುದು. ನೀವು ಎಚ್ಚರದಿ೦ದಿರದಿದ್ದರೆ, ನೀವು ದ೦ಡವನ್ನು ತೆರುವುದಕ್ಕಾಗಿಯೇ ಅಪಾರ ಮೊತ್ತದ ಹಣವನ್ನು ವ್ಯಯಿಸುವ೦ತಾಗಬಹುದು. ಇವುಗಳ ಪೈಕಿ ಕೆಲವನ್ನು ಹೆಸರಿಸಬೇಕೆ೦ದರೆ ನೀವು ತಡವಾಗಿ ದ೦ಡ ಸಮೇತ ಪಾವತಿಸುವ ಶುಲ್ಕ, ಬ್ಯಾ೦ಕಿ೦ಗ್ ಶುಲ್ಕ, ಕ್ರೆಡಿಟ್ ಕಾರ್ಡ್ ಶುಲ್ಕ, ಇತ್ಯಾದಿ. ಮೇಲ್ನೋಟಕ್ಕೆ ಇವು ನಿಮಗೆ ನಗಣ್ಯವೆನಿಸುವ೦ತಹ ಸಣ್ಣ ಮೊತ್ತವೆ೦ದನಿಸಬಹುದಾದರೂ ಕೂಡ, ಇವೇ ಶುಲ್ಕವನ್ನು ನೀವು ನಿಯಮಿತವಾಗಿ ಪಾವತಿಸುವ೦ತಾದರೆ, ಅವೇನೂ ಸಣ್ಣ ಮೊತ್ತವಾಗಿ ಉಳಿದಿರುವುದಿಲ್ಲ.

ಉಳಿತಾಯದ ಸದಾವಕಾಶವನ್ನು ಉಪಯೋಗಿಸಿಕೊಳ್ಳದಿರುವುದು
ನೀವು ಇನ್ನೂ ಕೂಡ ಸಿರಿವ೦ತರಾಗಿಲ್ಲದಿರುವುದಕ್ಕೆ ಇದೂ ಸಹ ಒ೦ದು ಕಾರಣವಾಗಿದೆ. ಸುಲಭ ಹಣ ಅಥವಾ ಮುಕ್ತವಾಗಿ ದೊರೆಯುವ ಹಣವು ಎಲ್ಲೆಡೆಯೂ ಇರುತ್ತದಾದರೂ ಕೂಡ, ಅದನ್ನು ಉಪಯೋಗಿಸಿಕೊಳ್ಳಲು ನೀವು ಕಣ್ಣುಗಳು ಹಾಗೂ ಕಿವಿಗಳನ್ನು ತೆರೆದಿಟ್ಟುಕೊಳ್ಳಬೇಕಾಗುತ್ತದೆ. ನಿವೃತ್ತ ಯೋಜನೆಯೊ೦ದರಲ್ಲಿ ಪಾಲ್ಗೊಳ್ಳುವುದು, ವಿಭಿನ್ನ ವ್ಯವಹಾರಗಳಲ್ಲಿ ನಿಮ್ಮ ಕಾರ್ಡ್‌ನ ಮೂಲಕ ನಿಮಗೆ ಸಲ್ಲಬಹುದಾದ ಕೊಡುಗೆಯ ಅ೦ಕಗಳು ಅಥವಾ ರಿವಾರ್ಡ್ ಪಾಯಿ೦ಟ್‌ಗಳು, ನಿಮ್ಮ ತೆರಿಗೆಯ ಮೊತ್ತವನ್ನು ಕಡಿಮೆಮಾಡುವ ಅವಕಾಶಗಳು, ಇವೇ ಮೊದಲಾದವುಗಳ ರೂಪದಲ್ಲಿ ಮುಕ್ತ ಹಣವು ನಿಮ್ಮತ್ತ ಹರಿದುಬರುತ್ತದೆ.

English summary

Reasons Why You Are Not Becoming Rich

Becoming rich is a dream that any common man has. The problem is that it always stays a dream and never materialises. You always look with envy at those who you call ‘are blessed with all the money’.
X
Desktop Bottom Promotion