Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಲಿಕಾನ್ ಸಿಟಿ ಬೆಂಗಳೂರು, ಸೌಂದರ್ಯದ ತವರೂರು
ನಮ್ಮೆಲ್ಲರ ನೆಚ್ಚಿನ ಬೆಂಗಳೂರು ದೇಶದ ಎಲ್ಲರ ಅಚ್ಚು ಮೆಚ್ಚಿನ ನಗರವಾಗಿದೆ. ನಮ್ಮ ದೇಶದ ವಿವಿಧ ರಾಜ್ಯಗಳಿಂದ ಬಿಡಿ, ಹಲವು ವಿದೇಶೀಯರೂ ಬೆಂಗಳೂರನ್ನೇ ತಮ್ಮ ವಾಸಸ್ಥಾನವನ್ನಾಗಿ ಆರಿಸಿಕೊಂಡಿರುವುದಕ್ಕೆ ಬೆಂಗಳೂರಿನ ತಂಪಾದ ವಾತಾವರಣ ಒಂದೇ ಕಾರಣವಲ್ಲ. ಡಾ. ಶಿವರುದ್ರಪ್ಪನವರ ಕವನದ ಪ್ರಕಾರ ದಿನಕ್ಕೊಂದು ಬಡಾವಣೆಯನ್ನು ಹೆರುತ್ತಾ ಅಕ್ಕಪಕ್ಕದ ಹಳ್ಳಿಗಳನ್ನೆಲ್ಲಾ ತನ್ನ ತೆಕ್ಕೆಯೊಳಕ್ಕೆ ತೆಗೆದುಕೊಂಡು ಬೃಹತ್ ಗಾತ್ರ ಪಡೆದಿರುವ ಬೆಂಗಳೂರು ವಿಶ್ವವನ್ನೇ ಆಕರ್ಷಿಸುತ್ತಿರುವುದಕ್ಕೆ ಇನ್ನೂ ಹಲವಾರು ಕಾರಣಗಳಿವೆ.
ಮೆಟ್ರೋ ರೈಲು, ಬ್ರಿಗೇಡ್ ರೋಡು, ವಿದೇಶೀ ವಸ್ತುಗಳು, ಅತ್ಯುತ್ತಮ ಆಸ್ಪತ್ರೆಗಳು ಮಾತ್ರವೇ ಬೆಂಗಳೂರನ್ನು ಆಕರ್ಷಿಸಲು ಕಾರಣವಲ್ಲ. ಬೆಂಗಳೂರಿನ ಬಗ್ಗೆ ಹೆಮ್ಮೆ ಪಡಲು ಇಂತಹದ್ದೇ ಇನ್ನೂ ಹಲವು ಕಾರಣಗಳನ್ನು ಇಲ್ಲಿ ನೀಡಲಾಗಿದೆ...

ಕಬ್ಬನ್ ಪಾರ್ಕ್
ಈ ಬೃಹತ್ ನಗರದ ನಟ್ಟ ನಡುವೆ ಸುಮಾರು ನೂರೆಕರೆ ಜಾಗದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕಬ್ಬನ್ ಪಾರ್ಕ್ ಬೆಂಗಳೂರಿನ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ. ಮಿನಿ ರೈಲು, ವಿವಿಧ ಮತ್ತು ಅಪರೂಪದ ತಳಿಯ ವೃಕ್ಷಗಳು, ನಿತ್ಯಹರಿದ್ವರ್ಣದ ಸಸ್ಯಗಳು ಮತ್ತು ಶತಾಯುಶಿ ಮರಗಳು ಆಗಮಿಸಿದ ಪ್ರತಿಯೊಬ್ಬರ ಮನಗೆಲ್ಲುತ್ತವೆ. ಬೇಸಿಗೆ ಬಂತೆಂದರೆ ಇಡಿಯ ವೃಕ್ಷವೇ ಬೆಂಕಿ ಹತ್ತಿಕೊಂಡಂತೆ ಹಳದಿ ಹೂವುಗಳಿಂದ ತುಂಬಿಕೊಳ್ಳುವ ವಿಶಿಷ್ಟ ವೃಕ್ಷಗಳು ಕಬ್ಬನ್ ಪಾರ್ಕಿನ ವಿಶೇಷ ಆಕರ್ಷಣೆಯಾಗಿವೆ. ಈ ಉದ್ಯಾನವನ್ನು ನಿರ್ಮಿಸುವಾಗ ವಿಶ್ವದ ವಿವಿಧ ಪ್ರದೇಶಗಳಿಂದ ತಂದು ನೆಟ್ಟ ಗಿಡಗಳು ಇಂದು ಬೃಹದಾಕಾರವಾಗಿ ಬೆಳೆದು ನಗರದ ಮೆರುಗನ್ನು ಹೆಚ್ಚಿಸಿವೆ.

ಲಕ್ಷಗಟ್ಟಲೆ ಜನರನ್ನು ಸಾಗಿಸುವ ಅದ್ಭುತ ಸಾರಿಗೆ ಸಂಸ್ಥೆ ಬಿಎಂಟಿಸಿ
ಎಪ್ಪತ್ತರ ದಶಕದಲ್ಲಿ ಕೆಲವು ನೂರು ಬಸ್ಸುಗಳನ್ನು ಹೊಂದಿದ್ದ ಬಿಟಿಎಸ್ ಇಂದು (ಈಗ ಬಿಎಂಟಿಸಿ) ಸಾವಿರಾರು ಬಸ್ಸುಗಳನ್ನು ಹೊಂದಿದ್ದು ಪ್ರತಿದಿನ ಸುಮಾರು ನಲವತ್ತಮೂರು ಲಕ್ಷ ಜನರನ್ನು ನಗರದ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುತ್ತಿದೆ. ಹಿಂದೆ ಬಾಗಿಲಿಲ್ಲದ ಗಟ್ಟಿಯಾದ ಮತ್ತು ಇಕ್ಕಟ್ಟಾದ ಕುರ್ಚಿಗಳ ಬಸ್ಸುಗಳಿದ್ದುದು ಇಂದು ಪೂರ್ಣ ಹವಾನಿಯಂತ್ರಿತ ಮತ್ತು ಆರಾಮದಾಯಕ ವೋಲ್ವೋ ಬಸ್ಸುಗಳಿಂದ ಪ್ರಯಾಣವನ್ನು ಒಂದು ಅನುಭವವನ್ನಾಗಿಸುತ್ತಿವೆ. ವಿಮಾನ ನಿಲ್ದಾಣಕ್ಕೆ ಈಗ ಮನೆಯಿಂದ ಕಾರು ಕೊಂಡೊಯ್ಯುವ ಅಗತ್ಯವೇ ಇಲ್ಲ, ಸುಂದರ, ಹವಾನಿಯಂತ್ರಿತ ಮತ್ತು ವಿಮಾನದಲ್ಲಿ ತಂದಿರುವ ಸಾಮಾನುಗಳನ್ನು ಒಳಗಿರಿಸಿಕೊಳ್ಳಲು ವಿಶಾಲ ಸ್ಥಳಾವಕಾಶವಿರುವ ಬಸ್ಸು ವಿಮಾನ ನಿಲ್ದಾಣದಿಂದಲೇ ಲಭ್ಯವಿದೆ.

ಬೆಂಗಳೂರಿನ ಫಿಲ್ಟರ್ ಕಾಫಿ
ಕಾಫಿ ವಾಸ್ತವವಾಗಿ ಬಲವಂತದಿಂದ ರುಚಿ ಹತ್ತಿಸಿದ ಪೇಯ. ಭಾರತದಾದ್ಯಂತ ಕಾಫಿ ಎಸ್ಟೇಟುಗಳನ್ನು ಬೆಳೆಸಿದ ಬ್ರಿಟಿಷರು ಕಾಫಿಯ ರುಚಿಯನ್ನು ಭಾರತೀಯರಿಗೆ ಪರಿಚಯಿಸಲು ಆಯ್ದುಕೊಂಡಿದ್ದು ಬೆಂಗಳೂರನ್ನು! ಅದರಲ್ಲೂ ಸಾಂಪ್ರಾದಾಯಿಕ ಫಿಲ್ಟರ್ ಕಾಫಿ ಅಂದಿನಿಂದಲೂ ಬೆಂಗಳೂರಿಗರ ನೆಚ್ಚಿನ ಪೇಯವಾಗಿದೆ. ಇಂದು ಫಿಲ್ಟರ್ ಕಾಫಿ ಪ್ರತಿ ಗಲ್ಲಿ, ರಸ್ತೆಯ ಚಿಕ್ಕಪುಟ್ಟ ಹೋಟೆಲುಗಳಿಂದ ಹಿಡಿದು ಪಂಚತಾರಾ ಹೋಟೆಲುಗಳವರೆಗೆ ಲಭ್ಯವಿದೆ. ಅದರಲ್ಲೂ ಹರಟೆ ಕೊಚ್ಚುವ ಜನರಿಗೆ ಅಗತ್ಯವಾದ, ಒಂದು ಕಪ್ ಕಾಫಿಯ ಬೆಲೆಗೆ ಸರಿಸುಮಾರು ಎರಡು ಕಪ್ ದೊರೆಯುವ ಬೈಟೂ ಕಾಫಿ ಯೂ ಬೆಂಗಳೂರಿನದ್ದೇ ಕೊಡುಗೆ. ಸ್ಥಳೀಯರಿಂದ ಕಾಪಿ ಎಂದು ಕರೆಯಲ್ಪಡುವ ಈ ಪೇಯ ಇಂದು ವಿವಿಧ ಅವತಾರವನ್ನು ಪಡೆದು ಹಲವು ವಿದೇಶೀ ರೂಪವನ್ನು ಪಡೆದಿದೆ. ಕೆಫೆ ಕಾಫಿ ಡೇ ಸಂಸ್ಥೆ ಕಾಫಿಯ ಹೆಸರಿನಲ್ಲಿ ನಗರದೆಲ್ಲೆಡೆ ತೆರೆದಿರುವ ಮಳಿಗೆಗಳು ಜನರ ನೆಚ್ಚಿನ ತಾಣವಾಗಿದೆ.

ಪ್ರತಿ ಮನೆಯಲ್ಲಿಯೂ ಕಂಡುಬರುವ ನೃತ್ಯ
ನೃತ್ಯವನ್ನು ಅಭ್ಯಸಿಸುವುದು ಪ್ರತಿಮನೆಯಲ್ಲಿಯೂ ಹೆಣ್ಣುಮಕ್ಕಳು ಕಡ್ಡಾಯವಾಗಿ ಕಲಿತುಕೊಳ್ಳುವ ಒಂದು ವಿದ್ಯೆ. ನೃತ್ಯ ಇಲ್ಲಿ ಒಂದು ಪ್ರಾಕಾರವಲ್ಲ, ಜೀವನದ ಒಂದು ಭಾಗ! ಬೆಂಗಳೂರಿನಲ್ಲಿ ಹುಟ್ಟಿದ ಪ್ರತಿ ಹೆಣ್ಣುಮಗುವೂ ತನ್ನ ಬಾಲ್ಯದಿಂದಲೇ ಕನಿಷ್ಟ ಒಂದಾದರೂ ನೃತ್ಯಪ್ರಾಕಾರವನ್ನು ಕಲಿತಿರುತ್ತದೆ.

ಇಂದಿಗೂ ರಂಗಮಂದಿರಗಳು ಜೀವಂತವಾಗಿರುವ ನಗರ
ಒಂದು ಕಾಲದಲ್ಲಿ ನೂರು ಚಿತ್ರಮಂದಿರಗಳ ನಗರ ಎಂದು ಜನಪ್ರಿಯವಾಗಿದ್ದ ಬೆಂಗಳೂರಿನಲ್ಲಿ ರಂಗಪ್ರದರ್ಶನಕ್ಕೂ ಕೊರತೆ ಇರಲಿಲ್ಲ. ಇಂದು ಸಿನೇಮಾಗೃಹಗಳು ಬಹುತೇಕ ಮಾಯವಾಗಿದ್ದು ಅವುಗಳ ಬದಲಿಗೆ ಮಲ್ಟಿಪ್ಲೆಕ್ಸ್ಗಳು ನಗರದಲ್ಲಿ ತಲೆಯೆತ್ತಿವೆ. ಆದರೆ ರಂಗಮಂದಿರಗಳ ಆಕರ್ಷಣೆ ಇಂದಿಗೂ ಕಡಿಮೆಯಾಗಿಲ್ಲ. ಇದರಲ್ಲಿ ಪ್ರಮುಖವಾದುದು ರಂಗಶಂಕರ. ಇದುವರೆಗೆ ಸುಮಾರು 2,700ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಈ ರಂಗಮಂದಿರ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ನಗರದಲ್ಲಿರುವ ಜಾಗೃತಿ ಥಿಯೇಟರ್, ಚೌಡಯ್ಯ ಮೆಮೋರಿಯಲ್ ಹಾಲ್, ರವೀಂದ್ರ ಕಲಾಕ್ಷೇತ್ರ ಮೊದಲಾದ ರಂಗಮಂದಿರಗಳು ಇಂದಿಗೂ ಕಾರ್ಯಾಚರಣೆಯಲ್ಲಿದ್ದು ಸಂಗೀತ, ಕಲೆ, ಸಂಸ್ಕೃತಿಗಳ ಉಳಿವಿಗೆ ನೆರವಾಗುತ್ತಿವೆ.

ಜೈವಿಕ ಆಹಾರಕ್ಕೆ ಆದ್ಯತೆ ನೀಡುವ ನಗರ
ಆಹಾರವಸ್ತುಗಳ ಮೂಲಕವೂ ಲಾಭ ಮಾಡುವ ಇರಾದೆಯಿಂದ ಕೃತಕ ಗೊಬ್ಬರಗಳನ್ನು ಬಳಸಿ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುವ ಪರಿಯನ್ನು ಖಂಡಿಸುವ ಬೆಂಗಳೂರಿಗರು ಇಂದು ಜೈವಿಕ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪ್ರತಿ ಪ್ರಮುಖ ಆಹಾರ ಮಳಿಗೆಯಲ್ಲಿ ಜೈವಿಕ ಆಹಾರ ಮತ್ತು ತರಕಾರಿಗಳ ಪ್ರತ್ಯೇಕ ವಿಭಾಗವೇ ಇದ್ದು ಕೊಂಚ ದುಬಾರಿಯಾದರೂ ಕೊಳ್ಳಲು ಹಾತೊರೆಯುವ ಬೆಂಗಳೂರಿಗರು ದೇಶದಲ್ಲಿ ಬದಲಾವಣೆಯ ಗಾಳಿಗೆ ನಾಂದಿ ಹಾಡಿದ್ದಾರೆ. ಕ್ಯಾರೆಟ್ಸ್ ಹೆಲ್ದೀ ಕಿಚನ್, ಯೋಗಾ ಹೌಸ್ ಮೊದಲಾದ ಸಂಸ್ಥೆಗಳು ಜೈವಿಕ ವಸ್ತುಗಳ ಮೂಲಕ ಜನಪ್ರಿಯತೆ ಗಳಿಸುತ್ತವೆ. ಕೇವಲ ಆಹಾರವಸ್ತುಗಳು ಮಾತ್ರವಲ್ಲ, ಸೌಂದರ್ಯ ಪ್ರಸಾದನ, ಬಟ್ಟೆಬರೆ ಮೊದಲಾದವುಗಳನ್ನೂ ಜೈವಿಕ ವಿಧಾನಕ್ಕೆ ಆದ್ಯತೆ ನೀಡುತ್ತಿರುವುದು ಬೆಂಗಳೂರಿಗೆ ಹೆಮ್ಮೆಯ ಸಂಗತಿಯಾಗಿದೆ.

ಬ್ರಿಗೇಡ್ ರೋಡಿನಲ್ಲೊಂದು ಸುತ್ತು ಹಾಕಿ, ಬೆಂಗಳೂರಿನ ಬಗ್ಗೆ ಅರಿಯಿರಿ
ಬೆಂಗಳೂರಿನ ಬಗ್ಗೆ ಅರಿಯಲು ಇಡಿಯ ಬೆಂಗಳೂರನ್ನು ಸುತ್ತುವ ಅಗತ್ಯವಿಲ್ಲ. ಕೇವಲ ಬ್ರಿಗೇಡ್ ರೋಡಿನಲ್ಲೊಂದು ಸುತ್ತು ಹಾಕಿದರೆ ಸಾಕು, ಬೆಂಗಳೂರಿನ ಸತ್ವ ಅನಾವರಣಗೊಳ್ಳುತ್ತದೆ. ವಿವಿಧ ರಾಜ್ಯಗಳ ವಿದ್ಯಾರ್ಥಿಗಳು, ವಿವಿಧ ಮಳಿಗೆಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶೀಯರು ಬೆಂಗಳೂರಿನ ಜಗದ್ವ್ಯಾಪಕತೆಯನ್ನು ಬಿಂಬಿಸುತ್ತದೆ.

ಸೌಲಭ್ಯಗಳ ಆಗರವಾಗಿರುವ ಸಾರ್ವಜನಿಕ ಸ್ಥಳಗಳು
ಬೆಂಗಳೂರಿನಲ್ಲಿ ನೂರಾರು ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳವಿದ್ದು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಎಂ ಜಿ ರಸ್ತೆಯಲ್ಲಿರುವ ಎಂ ಜಿ ರೋಡು ಬೋಲೆವಾರ್ಡ್. ಮಕ್ಕಳಿಗಾಗಿ ಹಾವು ಏಣಿ ಆಟ ಮೊದಲಾದ ವಿವಿಧ ಆಟದ ಸ್ಥಳಗಳಿರುವ ಇಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು ಹೃನ್ಮನ ತಣಿಸುತ್ತವೆ.

ತಂತ್ರಜ್ಞಾನದ ತಾಣ
ವಾಸ್ತವವಾಗಿ ಬೆಂಗಳೂರಿಗೆ ವಿಶ್ವಸ್ತರದ ಮಾನ್ಯತೆ ದೊರಕಿದ್ದೇ ಐಟಿ ಸಂಸ್ಥೆಗಳ ಮೂಲಕ. ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಮೊದಲಾದ ಐಟಿ ದಿಗ್ಗಜ ಸಂಸ್ಥೆಗಳು ಬೆಂಗಳೂರಿನಲ್ಲಿ ಪ್ರಾರಂಭವಾದ ಬಳಿಕ ರಾಜ್ಯದ ಚಿತ್ರಣವೇ ಬದಲಾಗಿ ಹೋಗಿದೆ. ಇನ್ನೂ ಹಲವು ದಿಗ್ಗಜ ಸಂಸ್ಥೆಗಳು ರಾಷ್ಟ್ರವ್ಯಾಪಿಯಾಗುವ ಮೊದಲು ಪ್ರಾಯೋಗಿಕವಾಗಿ ಒಂದು ನಗರದಲ್ಲಿ ತಮ್ಮ ಉತ್ಪನ್ನಗಳನ್ನು ಪರೀಕ್ಷಿಸಿಕೊಳ್ಳಲು ಬೆಂಗಳೂರನ್ನು ಆಯ್ದುಕೊಂಡಿವೆ. ಫ್ಲಿಪ್ ಕಾರ್ಟ್, ಇನ್ ಮೋಬಿ, ಮಿಂತ್ರಾ ಮೊದಲಾದ ಸಂಸ್ಥೆಗಳು ಬೆಂಗಳೂರಿನಿಂದ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿವೆ. ಅಷ್ಟೇ ಏಕೆ, ರಸ್ತೆಯಲ್ಲಿ ಅಡ್ಡಾಡುವ ಜನಸಾಮಾನ್ಯರೂ ತಮಗೆ ಹೊಳೆದ ಅಥವಾ ಹೊಳೆಯುತ್ತಿರುವ ನೂತನ ಯೋಜನೆಗಳನ್ನು ಮುಕ್ತವಾಗಿ ಚರ್ಚಿಸುತ್ತಾರೆ. ಪ್ರಾಯಶಃ ಈ ಚರ್ಚೆಗೆಂದೇ ನಗರದಾದ್ಯಂತ ಕೈ ಕಾಲಿಗೆ ತೊಡರುವಂತೆ ಕೆಫೆಗಳಿವೆ.

ಕೆಲಸವೂ ಹೆಚ್ಚು, ಪಾರ್ಟಿಗಳೂ ಹೆಚ್ಚು
ಇತ್ತೀಚಿನ ಸಮೀಕ್ಷೆಯ ಪ್ರಕಾರ ಏಶಿಯಾದಲ್ಲಿಯೇ ಅತ್ಯಂತ ಹೆಚ್ಚಿನ ಪಬ್ಬುಗಳಿರುವ ನಗರವೆಂದರೆ ಬೆಂಗಳೂರು. ಇದುವರೆಗೆ ರಾತ್ರಿ ಹನ್ನೊಂದರವರೆಗೆ ಮಾತ್ರ ತೆರೆದಿರಬೇಕೆಂದಿದ್ದ ಕಾನೂನು ಈಗ ಸಡಿಲಗೊಂಡು ರಾತ್ರಿ ಒಂದರವರೆಗೂ ತೆರೆದಿದ್ದು ತಡರಾತ್ರಿಯವರೆಗೂ ಪಾರ್ಟಿ ನಡೆಸುವವರ ಪಾಲಿಗೆ ಸ್ವರ್ಗವಾಗಿದೆ.

ಅತ್ಯುತ್ತಮ ಹವಾಮಾನ
ಭಾರತದ ವಿವಿಧ ನಗರಗಳನ್ನು ಬೆಂಗಳೂರಿಗೆ ಹೋಲಿಸಿದರೆ ಪ್ರತಿಯೊಬ್ಬರೂ ಬೆಂಗಳೂರನ್ನು ಆಯ್ದುಕೊಳ್ಳುವುದು ಅದರ ಹವಾಮಾನಕ್ಕಾಗಿ. ವರ್ಷದ ಬಹುತೇಕ ದಿನಗಳಲ್ಲಿ ಅತಿ ಬಿಸಿಯೂ ಅಲ್ಲದ ಅತಿ ತಣ್ಣಗೂ ಅಲ್ಲದ, ಆಗಾಗ ಮುಸಲಧಾರಾ ಮಳೆಯಾಗುವ, ಬಹುತೇಕ ಎಲ್ಲಾ ರಸ್ತೆಗಳಲ್ಲೂ ಹಸಿರು ಮರಗಳಿರುವ ಕಾರಣ ಎಲ್ಲರೂ ಬೆಂಗಳೂರನ್ನೇ ಆಯ್ದುಕೊಳ್ಳುತ್ತಿದ್ದಾರೆ. ಬೇಸಿಗೆಯ ಕೆಲದಿನಗಳಲ್ಲಿ ಮಾತ್ರ ಹಗಲಿನಲ್ಲಿ ಬಿಸಿಯಾಗಿದ್ದರೂ ರಾತ್ರಿ ತಣ್ಣಗಾಗುವ ಪರಿ ಇನ್ಯಾವ ಮಹಾನಗರದಲ್ಲಿಯೂ ಸಿಗದು.

ಬೆಂಗಳೂರಿನ ಏರೋ ಶೋ
ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭವಾದ ಯಲಹಂಕದ ಏರೋ ಶೋ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಹಲವಾರು ನಾಗರಿಕ ಮತ್ತು ಒಂದೆರಡು ಜನರು ಪ್ರಯಾಣಿಸಬಹುದಾದ ಚಿಕ್ಕ ವಿಮಾನಗಳು ಆಗಸದಲ್ಲಿ ನಡೆಸುವ ಕಸರತ್ತು ದಂಗುಬಡಿಸುತ್ತವೆ. ಈ ವರ್ಷದ ಜೂನ್ ಮೊದಲ ವಾರದಲ್ಲಿ ನಡೆಯಲಿರುವ ಈ ಪ್ರದರ್ಶನವನ್ನು ನೋಡಲು ಮರೆಯದಿರಿ.

ವಿಶ್ವದ ಅತ್ಯಂತ ರುಚಿಯಾದ ದೋಸೆ
ವಿದೇಶೀಯರ ಮತ್ತು ಭಾರತದ ಇತರ ರಾಜ್ಯದವರಿಂದ ದೋಸಾ ಎಂದು ಕರೆಯಲ್ಪಡುವ ದೋಸೆಯ ವಿವಿಧ ಅವತರಣಿಕೆಗಳನ್ನು ಸವಿಯಲು ಬೆಂಗಳೂರಿಗಿಂತ ಇನ್ನೊಂದು ಸ್ಥಳವಿಲ್ಲ. ಎಂಟಿಆರ್, ಸಿಟಿಆರ್, ವಿದ್ಯಾರ್ಥಿ ಭವನದ ದೋಸೆ, ಅದರಲ್ಲೂ ಮಸಾಲೆ ದೋಸೆಯನ್ನು ಸವಿದವರಿಗೇ ಗೊತ್ತು ಅದರ ರುಚಿ. ಎಂಟಿಆರ್ ನಲ್ಲಂತೂ ಒಂದು ದೋಸೆ ತಂದಿಡುತ್ತಿದ್ದಂತೆಯೇ ಇನ್ನೊಂದು ದೋಸೆಗೆ ಆರ್ಡರ್ ಮಾಡುವ ಪರಿ ನೋಡಿದರೆ ಇದರ ಮಹತ್ವವನ್ನು ಗಮನಿಸಬಹುದು.

ಅತ್ಯುತ್ತಮ ಶಿಕ್ಷಣಾ ಸಂಸ್ಥೆಗಳು
ಉತ್ತಮ ಶಿಕ್ಷಣಕ್ಕಾಗಿ ಈಗ ವಿದೇಶದ ವಿಶ್ವವಿದ್ಯಾಲಯಗಳನ್ನು ಅವಲಂಬಿಸಬೇಕಾದ ಅಗತ್ಯವಿಲ್ಲ. ಬೆಂಗಳೂರಿನಲ್ಲಿಯೇ ಈ ವಿಶ್ವವಿದ್ಯಾಲಯಗಳು ತಮ್ಮ ಶಾಖೆಗಳನ್ನು ತೆರೆದಿವೆ ಹಾಗೂ ಬೆಂಗಳೂರಿನಲ್ಲಿಯೇ ಅತ್ಯುತ್ತಮ ಶಿಕ್ಷಣಾ ಸಂಸ್ಥೆಗಳಿವೆ.



Click it and Unblock the Notifications