Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ದೇಹದ ಅಸ್ಥಿ ಪಂಜರ: ಬೆಚ್ಚಿ ಬೀಳಿಸುವ 8 ಅದ್ಭುತ ಸಂಗತಿಗಳು
ನಮ್ಮ ದೇಹದಲ್ಲಿ ವಯಸ್ಸಾಗಿ ಅಥವಾ ಅಪಘಾತದಿಂದ ಮೂಳೆಗಳು ಮುರಿಯುವವರೆಗು ಅದರ ಕುರಿತು ನಾವು ತಾತ್ಸಾರ ಮಾಡುತ್ತಿರುತ್ತೇವೆ. ಆದರೆ ಸತ್ಯಾಂಶವೇನೆಂದರೆ ನಮ್ಮ ಮೂಳೆಗಳಿಗೆ ಜೀವನ ಪರ್ಯಂತ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುತ್ತದೆ.
ಅಸ್ಥಿ ಪಂಜರ ವ್ಯವಸ್ಥೆಯಲ್ಲಿ, ಮೂಳೆಗಳು, ಸ್ನಾಯುಗಳು, ಮೂಳೆ ಕಟ್ಟುಗಳು ಮತ್ತು ಕಾರ್ಟಿಲೇಜ್ ಸೇರಿರುತ್ತದೆ. ಇವುಗಳೆಲ್ಲವು ಕೂಡಿ ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ಇವುಗಳೆಲ್ಲವು ಸೇರಿ ನಮ್ಮ ದೇಹಕ್ಕೆ ಆಕಾರವನ್ನು ನೀಡುತ್ತವೆ. ಜೊತೆಗೆ ನಮ್ಮ ದೇಹದ ಚಲನೆಗಳಿಗೆ ನೆರವಾಗುತ್ತದೆ ಮತ್ತು ಹೊಸ ರಕ್ತದ ಕೋಶಗಳನ್ನು ಉತ್ಪಾದಿಸುತ್ತವೆ. ಬನ್ನಿ ಈ ಅಸ್ಥಿಪಂಜರದ ವ್ಯವಸ್ಥೆಯ ಕುರಿತಾಗಿ ಇರುವ ಎಂಟು ಅದ್ಭುತ ಸಂಗತಿಗಳ ಕುರಿತಾಗಿ ಇಂದು ತಿಳಿದುಕೊಳ್ಳೋಣ.

ಕೈಗಳು ಮತ್ತು ಕಾಲುಗಳಲ್ಲಿ
ನಮ್ಮ ಮೂಳೆಗಳು ಇಡೀ ದೇಹದಲ್ಲಿ ಸಮ ಪ್ರಮಾಣದಲ್ಲಿ ವಿತರಣೆಯಾಗಿರುತ್ತವೆ. ಕೆಲವೊಂದು ಭಾಗಗಳಲ್ಲಿ ಮಾತ್ರ ಇತರೆ ಭಾಗಗಳಿಗಿಂತ ಹೆಚ್ಚಿನ ಮೂಳೆಗಳು ಇರುತ್ತವೆ. ನಿಮ್ಮ ಕೈಗಳಲ್ಲಿ 27 ಮೂಳೆಗಳು ಮತ್ತು ಪ್ರತಿ ಕಾಲಿನಲ್ಲಿ 26 ಮೂಳೆಗಳು ಇರುತ್ತವೆ. ಇದರರ್ಥ ನಿಮ್ಮ ಕೈ-ಕಾಲು ಎರಡು ಸೇರಿ 106 ಮೂಳೆಗಳು ಇರುತ್ತವೆ. ಹೀಗೆ ನಿಮ್ಮ ಕೈ ಮತ್ತು ಕಾಲು ಎರಡು ಸೇರಿ ನಿಮ್ಮ ದೇಹದ ಅರ್ಧ ಭಾಗದಷ್ಟು ಮೂಳೆಗಳನ್ನು ಹೊಂದಿರುತ್ತವೆ.

ದೇಹದಲ್ಲಿ ಮೂಳೆಗಳು ಅತ್ಯಂತ ಗಟ್ಟಿಯಾದ ಭಾಗವಲ್ಲ
ನಿಮ್ಮ ಇಡೀ ದೇಹದಲ್ಲಿರುವ ಅತ್ಯಂತ ಬಲಿಷ್ಟ ಭಾಗವೆಂದರೆ ಅದು ಹಲ್ಲುಗಳ ಎನಾಮೆಲ್ ಹೊರತು ಮೂಳೆಗಳಲ್ಲ. ಹಲ್ಲುಗಳ ಎನಾಮೆಲ್ ನಿಮ್ಮ ಹಲ್ಲುಗಳ ಮೇಲ್ಭಾಗವನ್ನು ಕಾಪಾಡುತ್ತವೆ. ಕ್ಯಾಲ್ಸಿಯಂ ಸಾಲ್ಟ್ ಸೇರಿ ಈ ಎನಾಮೆಲ್ ಅನ್ನು ಸದೃಢಗೊಳಿಸಿರುತ್ತವೆ.

ಮೂಳೆಗಳು ಸ್ಟೀಲ್‍ಗಿಂತ ಸದೃಢವಾಗಿರುತ್ತವೆ
ಒಂದು ವೇಳೆ ನಾವು ನಮ್ಮ ತೂಕವನ್ನು ಮತ್ತು ಮೂಳೆಗಳನ್ನು ಮತ್ತು ಮೂಳೆಗಳು ಹಾಗು ಸ್ಟೀಲ್ ಅನ್ನು ಪರಿಗಣನೆಗೆ ತೆಗೆದುಕೊಂಡರೆ, ನಮ್ಮ ಮೂಳೆಗಳು ಸ್ಟೀಲ್‍ಗಿಂತ ಸದೃಢವಾಗಿರುತ್ತವೆ.

ಮೂಳೆಗಳು ಜೀವಂತವಾಗಿರುತ್ತವೆ
ನಮ್ಮಲ್ಲಿ ಬಹುತೇಕ ಮಂದಿ ಆಲೋಚಿಸುವುದು ಮೂಳೆಗಳು ನಿರ್ಜೀವ ಕೋಶಗಳೆಂದು ಆಲೋಚಿಸುತ್ತಾರೆ. ಆದರೆ ಮೂಳೆಗಳು ಮಾನವನ ದೇಹದಲ್ಲಿರುವವರೆಗೆ ಜೀವಂತವಾಗಿರುತ್ತವೆ. ಇವುಗಳು ಕ್ಯಾಲ್ಸಿಯಂ ಮತ್ತು ಸಜೀವ ಕೋಶಗಳನ್ನು ಹೊಂದಿರುತ್ತವೆ.

ಮಕ್ಕಳು ವಯಸ್ಕರಿಗಿಂತ ಹೆಚ್ಚಿನ ಮೂಳೆಗಳನ್ನು ಹೊಂದಿರುತ್ತವೆ
ವಯಸ್ಕರು 206 ಮೂಳೆಗಳನ್ನು ಹೊಂದಿದ್ದರೆ, ಎಳೆ ಮಕ್ಕಳ ದೇಹದಲ್ಲಿ 300 ಮೂಳೆಗಳು ಇರುತ್ತವೆ. ಇದರಲ್ಲಿ ಮೂಳೆಗಳು ಮತ್ತು ಕಾರ್ಟಿಲೇಜ್ ಎರಡು ಸೇರಿರುತ್ತವೆ. ಈ ಕಾರ್ಟೀಲೇಜ್‌ಗಳು ಕೊನೆಗೆ ಆಸಿಫಿಕೇಶನ್ ಎಂಬ ಪ್ರಕ್ರಿಯೆಯ ಮೂಲಕ ಮೂಳೆಗಳಾಗಿ ಪರಿವರ್ತನೆಗೊಳ್ಳುತ್ತದೆ. ಕಾಲಾನಂತರ ಈ ಮಗುವಿನ ಮೂಳೆಗಳು, ದೊಡ್ಡ ಮೂಳೆಗಳಾಗಿ ಪರಿವರ್ತನೆ ಹೊಂದುತ್ತವೆ. ಹೀಗೆ ವಯಸ್ಸಾದ ನಂತರ ಇವು ಒಟ್ಟಾರೆ 206 ಮೂಳೆಗಳಾಗಿ ಪರಿವರ್ತನೆಯಾಗುತ್ತವೆ.

ಇಡೀ ದೇಹದಲ್ಲಿಯೇ ಕಾಲ್ಬೆರಳುಗಳ ಮೂಳೆಯು ಅತ್ಯಂತ ನಾಜೂಕಿನದು
ಮೂಳೆಗಳಲ್ಲಿಯೇ ಕಾಲ್ಬೆರಳುಗಳ ಮೂಳೆಯು ಅತ್ಯಂತ ನಾಜೂಕಿನದು. ಬಹುಶಃ ಬಹುತೇಕ ಎಲ್ಲಾ ಜನರು ತಮ್ಮ ಕಾಲ್ಬೆರಳುಗಳನ್ನು ಮುರಿದುಕೊಂಡಿರುತ್ತಾರೆ. ಕನಿಷ್ಠ ತಮ್ಮ ಜೀವನದಲ್ಲಿ ಕಿರು ಬೆರಳಿನ ಮೂಳೆಯನ್ನಾದರು ಮುರಿದುಕೊಂಡಿರುತ್ತಾರೆ. ಅದರ ಪಾಡಿಗೆ ಅದು ಗುಣ ಮುಖವಾಗಲು ಬಿಡುವುದನ್ನು ಹೊರತು ಪಡಿಸಿ ನೀವು ಇನ್ನೇನು ಮಾಡುವ ಅಗತ್ಯವಿರುವುದಿಲ್ಲ.

ಆಸ್ಟೀಯೋಪೊರೊಸಿಸ್ ಕಾಯಿಲೆ
ಆಸ್ಟೀಯೋಪೊರೊಸಿಸ್ ಸಾಮಾನ್ಯವಾಗಿ ಕಂಡು ಬರುವ ಮೂಳೆಗಳ ಕಾಯಿಲೆಯಾಗಿರುತ್ತದೆ ಮತ್ತು ಇದು ಮೂಳೆಗಳ ಸಾಂದ್ರತೆ ಮತ್ತು ರಚನೆಯನ್ನು ಹಾಳು ಮಾಡುತ್ತದೆ. ಆಸ್ಟೀಯೋಪೊರೊಸಿಸ್ ಅನ್ನು ನಿಯಂತ್ರಿಸಬಹುದು ಮತ್ತು ಇದನ್ನು ಮೊದಲೆ ಕಂಡು ಕೊಂಡರೆ ಪರಿಹರಿಸಬಹುದು. ಕಡಿಮೆ ಮೂಳೆಯ ಸಾಂದ್ರತೆಯ ಸಮಸ್ಯೆಯು ಮೂಳೆಗಳಿಗೆ ಅಗತ್ಯವಾಗಿರುವ ಖನಿಜಾಂಶಗಳನ್ನು, ಅದರಲ್ಲಿಯೂ ವಿಶೇಷವಾಗಿ ಕ್ಯಾಲ್ಸಿಯ ಕೊರತೆ ಕಂಡು ಬಂದಾಗ ಕಾಣಿಸಿಕೊಳ್ಳುತ್ತದೆ. ಇದು ಮೂಳೆಗಳನ್ನು ದುರ್ಬಲಗೊಳಿಸಿ, ಇವು ಸುಲಭವಾಗಿ ಮುರಿಯುವಂತೆ ಮಾಡುತ್ತವೆ.

120,000 ವರ್ಷಗಳಿಂದ ಮಾನವರು ಬೋನ್ ಟ್ಯೂಮರ್‌ಗಳಿಂದ ನರಳುತ್ತಿದ್ದಾರೆ
ನಿಮ್ಮ ಮೂಳೆಗಳು ಸಜೀವವಾದ ಮತ್ತು ಸಕ್ರಿಯವಾದ ಕೋಶಗಳಿಂದ ನಿರ್ಮಿಸಲ್ಪಟ್ಟಿವೆ. ದೇಹದಲ್ಲಿರುವ ಇತರೆ ಕೋಶಗಳಂತೆ, ಈ ಮೂಳೆ ಕೋಶಗಳು ಸಹ ಟ್ಯೂಮರ್‌ಗಳಿಗೆ ಗುರಿಯಾಗುವ ಸಂಭವವಿರುತ್ತವೆ. 2013 ರಲ್ಲಿ ಸಂಶೋಧಕರು ಮೂಳೆಗಳು ಸುಮಾರು ಸಾವಿರಾರು ವರ್ಷಗಳಿಂದ ಟ್ಯೂಮರ್‌ಗಳಿಗೆ ಗುರಿಯಾಗುತ್ತ ಬಂದಿದೆ ಎಂದು ಕಂಡು ಹಿಡಿದಿದ್ದಾರೆ. ಅಂದರೆ ನಿಯಾಂಡರ್ ಥಾಲ್ ಮಾನವ ಬದುಕಿದ್ದ ಕಾಲದಿಂದಲೂ ಅಂದರೆ 120,000 ರಿಂದ 130,000 ವರ್ಷಗಳಿಂದಲೂ ಈ ಸಮಸ್ಯೆ ಮಾನವ ಕುಲವನ್ನು ಕಾಡುತ್ತ ಬಂದಿದೆ.



Click it and Unblock the Notifications











