Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆನ್‍ಲೈನ್‍ನಲ್ಲಿ ನೀವು ಖರೀದಿಸಬಹುದಾದ 20 ವಸ್ತುಗಳು
ಇತ್ತೀಚಿನ ದಿನಗಳಲ್ಲಿ ತುಂಬಾ ಜನ ಆನ್‍ಲೈನ್‍ನಲ್ಲಿ ವಸ್ತುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿರುವುದು ಸಾಮಾನ್ಯ. ಇಂಟರ್‌ನೆಟ್ ಎಲ್ಲಾ ಕಡೆ ಈಗ ಲಭ್ಯವಾಗಿರುವುದರಿಂದ ಮತ್ತು ಸ್ಮಾರ್ಟ್‍ಫೋನ್‍ಗಳಲ್ಲಿ ಸಹ ಇಂಟರ್‌ನೆಟ್ ಸೌಲಭ್ಯ ಸುಲಭವಾಗಿ ಸಿಗುವುದರಿಂದ, ಜನರು ಈಗ ಸದಾ ಸಂಪರ್ಕಿತರಾಗಿರುತ್ತಾರೆ. ನೀವು ಇದರ ಮೂಲಕ ಇಮೇಲ್‍ಗಳನ್ನು ನೋಡಬಹುದು, ಸುದ್ದಿಗಳನ್ನು ಓದಬಹುದು, ನಿಮ್ಮ ಬಂಧು-ಮಿತ್ರರ ಜೊತೆಗೆ ಚಾಟ್ ಮಾಡಬಹುದು ಮತ್ತು ನೀವು ಓಡಾಡುತ್ತ ಇರುವಾಗ ವಸ್ತುಗಳನ್ನು ಸಹ ಖರೀದಿಸಬಹುದು.
ಮೊದಲು ವೆಬ್‍ಸೈಟ್‍ಗಳ ಮೂಲಕ ವಸ್ತುಗಳನ್ನು ಕೊಂಡುಕೊಳ್ಳುವ ಸೌಲಭ್ಯವಿತ್ತು. ಆದರೆ ಯಾವಾಗ ಸ್ಮಾರ್ಟ್‍ಫೋನ್‍ಗಳು ವ್ಯಾಪಕವಾಗಿ ಬಳಕೆಗೆ ಬಂದಿತೊ, ಆಗ ಇ-ಕಾಮರ್ಸ್‍ಗೆ ಸಂಬಂಧಿಸಿದ ಆಪ್‍ಗಳು ಸಹ ಪ್ರಾರಂಭವಾದವು. ಇವುಗಳ ಮೂಲಕ ನೀವು ವಿಂಡೋ ಶಾಪಿಂಗ್ ಮಾಡಬಹುದು, ವಸ್ತುಗಳನ್ನು ಖರೀದಿಸಬಹುದು ಅಥವಾ ನಿಮಗೆ ಇಷ್ಟವಾದ ವಸ್ತುಗಳನ್ನು ವಿಶ್ ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು. ಏನೇ ಇರಲಿ ನೀವು ಎಲ್ಲಾದರು ಹೋಗುವಾಗ ಬೇಕಾದರು ಶಾಪಿಂಗ್ ಮಾಡಬಹುದು.
ನೋಡಲು ಇದು ತಮಾಷೆಯಾಗಿ ಮತ್ತು ಅನುಕೂಲಕರವಾಗಿ ಕಾಣುತ್ತಿಲ್ಲವೆ? ನಿಮಗೆ ಖರೀದಿಸಲು ಪ್ರಪಂಚದಲ್ಲಿ ನಾನಾ ವಸ್ತುಗಳು ದೊರೆಯುತ್ತವೆ. ಆದರೆ ಕೆಲವೊಂದನ್ನಾದರು ನೀವು ಆನ್‍ಲೈನ್ ಮೂಲಕ ಖರೀದಿಸುವ ಅವಕಾಶವು ಇದೆ. ಹಾಗೆಂದು ಕಾರ್ ಅಥವಾ ಆಭರಣವನ್ನು ಖರೀದಿಸಬಹುದೇ ಎಂಬ ಪ್ರಶ್ನೆ ಇಲ್ಲಿ ಅಪ್ರಸ್ತುತ. ಆದರೆ ಕೆಲವೊಂದು ವಸ್ತುಗಳನ್ನು ನೀವು ತಪ್ಪದೆ ಆನ್‍ಲೈನ್‍ನಲ್ಲಿ ಖರೀದಿಸಬಹುದು. ನಾವು ಇಲ್ಲಿ ನಿಮಗಾಗಿ ಒಂದು ಪಟ್ಟಿಯನ್ನು ನೀಡಿದ್ದೇವೆ. ಈ ಪಟ್ಟಿ ಪರಿಪೂರ್ಣವೇನಲ್ಲ, ಆದರೂ ನಿಮಗೆ ಅಗತ್ಯವಾದ ಮತ್ತು ಮನಸ್ಸಂತೋಷಗೊಳಿಸುವ ಹಲವಾರು ಪ್ರಮುಖ ಮತ್ತು ಕುತೂಹಲಕಾರಿ ವಸ್ತುಗಳನ್ನು ಈ ಪಟ್ಟಿ ಒಳಗೊಂಡಿದೆ.
ಬಿಯರ್‌ನಿ೦ದ ಆಗುವ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿದಿವೆಯೇ?

ನಿಮ್ಮ ಪ್ರವಾಸದ ಕೊಡುಗೆಗಳನ್ನು ಖರೀದಿಸಿ
ಇಂಟರ್‌ನೆಟ್ ಬಂದ ಮೇಲೆ ನಿಮ್ಮ ಪ್ರವಾಸವನ್ನು ಕೇವಲ ನಿಮ್ಮ ಮನಸ್ಸಿನಲ್ಲಿಯೋ ಅಥವಾ ಪೇಪರ್ ಮೇಲೆಯೋ ಲೆಕ್ಕಾಚಾರ ಮಾಡಲು ಹೋಗಬೇಡಿ. ಎಲ್ಲಿಗೆ? ಹೇಗೆ? ಯಾವಾಗ ಹೋಗಬೇಕು? ಎಲ್ಲಿ ಉಳಿದುಕೊಳ್ಳಬೇಕು? ಏನೆನೆಲ್ಲ ನೋಡಬೇಕು? ಈ ಎಲ್ಲಾ ಪ್ರಶ್ನೆಗಳಿಗು ಆನ್‍ಲೈನ್‍ನಲ್ಲಿ ಉತ್ತರ ದೊರೆಯುತ್ತದೆ. ನಿಮ್ಮ ರೈಲು/ವಿಮಾನ/ಬಸ್ ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಿ. ಜೊತೆಗೆ ಹೋಟೆಲ್ ಅಥವಾ ರೆಸಾರ್ಟ್‌ಗಳಲ್ಲಿ ಕೋಣೆಯನ್ನು ಮುಂಗಡವಾಗಿ ಕಾಯ್ದಿರಿಸಬಹುದು.

ನಿಮ್ಮ ನೆಚ್ಚಿನ ಕಾರ್ಯಕ್ರಮದ ಟಿಕೆಟ್‍ಗಳನ್ನು ಖರೀದಿಸಿ
ನಿಮ್ಮ ನೆಚ್ಚಿನ ರಸ ಸಂಜೆ, ಸಂಗೀತ ಕಾರ್ಯಕ್ರಮ ಮುಂತಾದವುಗಳಿಗೆ ಯಾವಾಗಲೂ ಸಾಲಿನಲ್ಲಿಯೇ ನಿಂತು ಟಿಕೆಟ್ ಖರೀದಿಸುವಿರೆ? ಅದಕ್ಕೆ ಗುಡ್ ಬೈ ಹೇಳಿ ನಿಮ್ಮ ನೆಚ್ಚಿನ ಕಾರ್ಯಕ್ರಮದ ಟಿಕೆಟ್ ಅನ್ನು ಆನ್‍ಲೈನ್ ಮೂಲಕ ಖರೀದಿಸಿ. ಸಮಯ ಉಳಿಯುತ್ತೆ, ಏಕೆಂದರೆ ಈಗ ಸಮಯ ಎಂದರೆ ದುಡ್ಡಲ್ಲವೇ?

ನೀವು ನೋಡಬೇಕಾದ ಮುಂದಿನ ಸಿನಿಮಾದ ಟಿಕೆಟ್
ಈಗ ಎಲ್ಲೆಲ್ಲೂ ಮಲ್ಟಿಫ್ಲೆಕ್ಸ್‌ಗಳ ಕಾಲ. ಇವುಗಳು ಇ-ಕಾಮರ್ಸ್‌ನ ಒಂದು ಭಾಗವಾಗಿ ಬಿಟ್ಟಿವೆ. ನಿಮ್ಮ ನೆಚ್ಚಿನ ನಟರ ಮುಂದಿನ ಸಿನಿಮಾವನ್ನು ಮೊದಲನೆ ದಿನ, ಮೊದಲ ಪ್ರದರ್ಶನ ನೋಡಲು ರಾತ್ರಿಯೆಲ್ಲಾ ಕಾಯುವ ಅಗತ್ಯವಿಲ್ಲ. ಇಂದೇ ಬುಕ್ ಮಾಡಿ ಸಾಕು. ಕೆಲವು ಕಡೆ ಪ್ರೀಮಿಯರ್ ಪ್ರದರ್ಶನಗಳ ಟಿಕೆಟ್ ಸಹ ದೊರೆಯುತ್ತವೆ, ಆನ್‍ಲೈನ್‍ನಲ್ಲಿ!. ಸಿನಿಮಾ ಟಿಕೆಟ್‍ಗಳು ಆನ್‍ಲೈನ್‍ನಲ್ಲಿ ಬಿಕರಿಯಾಗುವ ವಸ್ತುಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿವೆ.

ಹೊಸ ಫೋನ್ ಖರೀದಿಸಿ
ನಿಮ್ಮಲ್ಲಿ ಬಹುತೇಕ ಮಂದಿ ಫೋನ್‍ಗಳನ್ನು ಟಿ-ಶರ್ಟ್‍ಗಳ ರೀತಿಯಲ್ಲಿ ಬದಲಾಯಿಸುತ್ತಿರುತ್ತೀರಿ, ನಿಮಗೆ ಹೊಸ ಫೋನ್ ಖರೀದಿಸುವ ಹುಚ್ಚು ಇದೆಯೇ, ಹಾಗಾದರೆ ಆನ್‍ಲೈನ್‍ನಲ್ಲಿ ಖರೀದಿಸಿ. ಬಹುತೇಕ ಆನ್‍ಲೈ ಗ್ಯಾಡ್ಜೆಟ್ ಅಂಗಡಿಗಳು ಗ್ರಾಹಕರಿಗೆ ಈ ರೀತಿಯಲ್ಲಿ ಸಹಕರಿಸುತ್ತಿವೆ.

ಪುಸ್ತಕಗಳು ಹಾಗು ಇತ್ಯಾದಿಗಳು
ನಿಮಗೆ ಇ-ಬುಕ್ ಓದಲು ಇಷ್ಟವಿಲ್ಲವೇ? ಮುದ್ರಣಗೊಂಡಿರುವ ಪುಸ್ತಕಗಳೇ ನಿಮ್ಮ ನೆಚ್ಚಿನ ಸಂಗಾತಿಗಳೇ? ಹಾಗಾದರೆ ಆನ್‍ಲೈನ್‍ನಲ್ಲಿ ಅವುಗಳನ್ನು ಖರೀದಿಸಿ. ಪುಸ್ತಕಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಲು ಯಾವುದೇ ಮೀನ ಮೇಷ ಎಣಿಸಬೇಕಾಗಿಲ್ಲ.

ಅಲಂಕಾರಿಕ ಕಿಚನ್‍ವೇರ್
ಅಡುಗೆ ಮನೆಯು ಮನೆಯ ಪ್ರಯೋಗಶಾಲೆ ಇದ್ದಂತೆ. ಇಲ್ಲಿ ಎಲ್ಲವೂ ಇರಬೇಕು. ನಿಮ್ಮ ಕೆಲಸವನ್ನು ಸರಾಗ ಮಾಡಲು ಮತ್ತು ಕಿಚನ್‍ನ ಅಲಂಕಾರವನ್ನು ಹೆಚ್ಚಿಸಲು ಅನೇಕ ವಸ್ತುಗಳನ್ನು ಖರೀದಿಸಲು ನೀವೀಗ ಅಂಗಡಿ- ಅಂಗಡಿ ಹತ್ತಿ ಇಳಿಯಬೇಕಾಗಿಲ್ಲ. ಬದಲಿಗೆ ನಿಮಗೆ ಹಿಡಿಸಿದ ವಸ್ತುಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಬಹುದು. ತರಕಾರಿ ಕತ್ತರಿಸುವುದರಿಂದ ಹಿಡಿದು, ಅಡುಗೆ ಮಾಡಿ, ಅದನ್ನು ಬಡಿಸುವ ಪಾತ್ರೆ ಹಾಗು ಅದನ್ನು ತೊಳೆಯುವ ಪೌಡರ್‌ವರೆಗು ಎಲ್ಲವೂ ಇಲ್ಲಿ ದೊರೆಯುತ್ತವೆ.

ನಿಮ್ಮ ಕೋಣೆಗೆ ಬೇಕಾದ ಬೆಡ್‍ಶೀಟ್‍ಗಳು
ನಿಮ್ಮ ಕೋಣೆಗೆ ಬೇಕಾದ ಬೆಡ್‍ಶೀಟ್‍ಗಳು ಮತ್ತು ಬೆಡ್‍ಸ್ಪ್ರೆಡ್‍ಗಳನ್ನು ನೀವು ಆನ್‍ಲೈನ್‍ನಲ್ಲಿ ಖರೀದಿಸಬಹುದು. ಆದರೆ ಇದಕ್ಕಾಗಿ ನೀವು ಸರಿಯಾದ ಆನ್‍ಲೈನ್ ಅಂಗಡಿಯನ್ನು ಹುಡುಕಿ, ಅದರಲ್ಲಿ ನಿಮಗೆ ಒಪ್ಪುವ ಲಿನೆನ್ ಖರೀದಿಸಬೇಕಾಗುತ್ತದೆ ಅಷ್ಟೇ.

ಶೂಗಳು
ನಿಮಗೆ ನಿಮ್ಮ ಶೂ ಗಾತ್ರ ಗೊತ್ತಿದ್ದರೆ, ಅದನ್ನು ನೀವು ಆನ್‍ಲೈನ್ ಮೂಲಕ ಖರೀದಿಸಬಹುದು. ಇವುಗಳು ವಿವಿಧ ಬಗೆಯಲ್ಲಿ ಮತ್ತು ದರಗಳಲ್ಲಿ ಆನ್‍ಲೈನ್‍ನಲ್ಲಿ ಮಾರಾಟವಾಗುತ್ತವೆ. ಇವುಗಳನ್ನು ಸಹ ಯಾವುದೇ ಸಂಶಯವಿಲ್ಲದೆ ನೀವು ಖರೀದಿಸಬಹುದು.

ನಿಮ್ಮ ಬಟ್ಟೆಗಳನ್ನು ಫ್ಯಾನ್ಸಿ ಮಾಡಿಕೊಳ್ಳಿ ಆನ್‍ಲೈನ್‍ನಲ್ಲಿ
ನಿಮಗೆ ಒಂದು ಪಾರ್ಟಿ ವೇರ್ ಬೇಕೆ ಅಥವಾ ಸಾಧಾರಣವಾದ ಡ್ರೆಸ್ ಬೇಕೆ? ಅವುಗಳನ್ನು ನೀವು ಆನ್‍ಲೈನ್‍ನಲ್ಲಿ ಖರೀದಿಸಬಹುದು. ಇತ್ತೀಚೆಗೆ ಬಟ್ಟೆಗಳನ್ನು ಆನ್‍ಲೈನ್ ಮೂಲಕ ಖರೀದಿಸುವುದು ಸಾಮಾನ್ಯವಾಗಿದೆ.

ಅದ್ಭುತವಾದ ಸನ್‍ಗ್ಲಾಸ್‍ಗಳನ್ನು ಖರೀದಿಸಿ
ನಿಮಗೆ ಶೇಡ್‍ಗಳನ್ನು ಧರಿಸುವ ಮೂಲಕ ಒಳ್ಳೆಯ ಲುಕ್ ಪಡೆಯಬೇಕು ಎಂದೆನಿಸುತ್ತಿದೆಯೇ? ಒಳ್ಳೆಯದು, ನಿಮಗೆ ಒಪ್ಪುವ ಸನ್‍ಗ್ಲಾಸ್‍ಗಳನ್ನು ನೀವು ಆನ್‍ಲೈನ್ ಮೂಲಕ ಖರೀದಿಸಬಹುದು. ಇಲ್ಲಿ ನಿಮಗೆ ಅದ್ಭುತವಾದ ಡಿಸೈನ್ ಮತ್ತು ಬಣ್ಣಗಳ ಸನ್‍ಗ್ಲಾಸ್‍ಗಳ ಭಂಡಾರವೇ ಸಿಗುತ್ತದೆ.

ವೀಡಿಯೊ ಗೇಮ್ ಹಾಗು ಇತ್ಯಾದಿ
ನಿಮ್ಮ ಮಗುವಿಗೆ ಮನೋರಂಜನೆಯನ್ನು ಒದಗಿಸುವಂತಹ ವೀಡಿಯೊ ಗೇಮ್ ಉಡೂಗೊರೆಯಾಗಿ ನೀಡಲು ಆಸೆ ಪಡುತ್ತಿದ್ದೀರಾ? ಹಾಗದರೆ ನಿಮ್ಮ ಆಸೆಯನ್ನು ಅಕ್ಷರಶಃ ಪೂರೈಸುವ ವೀಡಿಯೋ ಗೇಮ್ ಅನ್ನು ಆನ್‍ಲೈನ್‍ನಲ್ಲಿ ಖರೀದಿಸಿ.

ನಿಮ್ಮ ವಾರ್ಡ್‍ರೋಬ್‍ಗೆ ಬೇಕಾದ ವಸ್ತುಗಳು
ನಿಮಗೆ ಒಪ್ಪುವ ಸ್ಟೋಲ್‍ಗಳು, ವಾಚ್‍ಗಳು ಅಥವಾ ಜ್ಯೂವೆಲ್ಲರಿಗಳನ್ನು ನೀವು ಆನ್‍ಲೈನ್‍ನಲ್ಲಿ ಖರೀದಿಸಬಹುದು. ನಿಮ್ಮ ಮೆಚ್ಚಿನ ಉಡುಗೆಗೆ ಒಪ್ಪುವ ಅಲಂಕಾರಿಕ ವಸ್ತುಗಳಿಗಾಗಿ ಅಲ್ಲಿ ಹುಡುಕಾಡುವ ಬದಲು ನೇರವಾಗಿ ಆನ್‍ಲೈನ್‍ನಲ್ಲಿ ಖರೀದಿಸಿ.

ಬ್ಯಾಗ್‍ಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಿ
ವಿವಿಧ ವಿನ್ಯಾಸದ ಬ್ಯಾಗ್‍ಗಳು ಆನ್‍ಲೈನ್‍ನಲ್ಲಿ ನಮಗೆ ದೊರೆಯುತ್ತವೆ. ನಿಮಗೆ ಒಪ್ಪುವ ಹ್ಯಾಂಡ್‍ಬ್ಯಾಗ್‍ಗಳು, ಬ್ಯಾಕ್‍ಪ್ಯಾಕ್‍ಗಳು ಮತ್ತು ಇನ್ನಿತರ ಬಗೆಯ ವ್ಯಾಲೆಟ್‍ಗಳನ್ನು ನೀವು ಆನ್‍ಲೈನ್‍ನಲ್ಲಿ ಖರೀದಿಸಬಹುದು.

ನಿಮ್ಮ ಫಿಟ್‍ನೆಸ್ ಕನಸನ್ನು ನನಸು ಮಾಡಲು
ಫಿಟ್‍ನೆಸ್ ಬೇಡ ಎನ್ನುವವರು ಯಾರು? ನಿಮ್ಮ ಫಿಟ್‍ನೆಸ್ ಕಾಪಾಡಿಕೊಳ್ಳಲು ಆನ್‍ಲೈನ್‍ನಲ್ಲಿ ಉಪಕರಣಗಳನ್ನು ಖರೀದಿಸಬಹುದು. ಆಬ್ಸ್ ಮೆಷಿನ್ ಅಥವಾ ಸೈಕಲ್ ಟ್ರೈನರ್‌ಗಳನ್ನು ನೀವು ಆನ್‍ಲೈನ್ ಮೂಲಕ ಖರೀದಿಸಬಹುದು.

ಗ್ರೂಮಿಂಗ್ ಸಾಮಗ್ರಿಗಳು
ನಿಮಗೆ ಬೇಕಾದ ಟ್ರಿಮ್ಮರ್, ಶೇವಿಂಗ್ ಕಿಟ್, ಸ್ಟ್ರೈಟೆನಿಂಗ್ ಕಿಟ್‍ಗಳನ್ನು ನೀವು ಆನ್‍ಲೈನ್ ಮೂಲಕ ಖರೀದಿಸಬಹುದು. ಇವೆಲ್ಲವು ಆಕರ್ಷಕ ಕೊಡುಗೆಗಳ ಮೂಲಕ ನಿಮಗೆ ದೊರೆಯುತ್ತವೆ.

ಮನೆಯನ್ನು ಸುಧಾರಿಸಲು ಹಣ ತೊಡಗಿಸಿ
ನಿಮ್ಮ ಮನೆಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಲು ಅಗತ್ಯವಾದ ವಸ್ತುಗಳು ಆನ್‍ಲೈನ್‍ನಲ್ಲಿ ದೊರೆಯುತ್ತವೆ. ಟೂಲ್ ಕಿಟ್‍ಗಳು ಮತ್ತು ಅಳತೆ ಮಾಡುವ ಕಿಟ್‍ಗಳು ಆನ್‍ಲೈನ್‍ನಲ್ಲಿ ಸುಲಭವಾಗಿ ದೊರೆಯುತ್ತವೆ.

ಕಿಚನ್ ಅಪ್ಪ್ಲೈಯನ್ಸ್‌ಗಳು
ನಿಮಗೆ ಬೇಕಾದ ಕಾಫಿ ಮೇಕರ್, ಮಿಕ್ಸರ್ ಮತ್ತು ಜ್ಯೂಸರ್‌ಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಬಹುದು. ಇವುಗಳೆಲ್ಲವು ಆಕರ್ಷಕ ಕೊಡುಗೆಗಳ ಸಮೇತ ನಿಮಗೆ ತಕ್ಷಣಕ್ಕೆ ದೊರೆಯುತ್ತವೆ.

ಮೊಬೈಲ್ ಬಿಡಿಭಾಗಗಳು
ನಿಮ್ಮ ಫೋನ್‍ಗೆ ಬೇಕಾದ ಬ್ಯಾಕ್ ಕವರ್‌ಗಳು ಮತ್ತು ಹೆಡ್ ಫೋನ್‍ಗಳನ್ನು ನೀವು ಆನ್‍ಲೈನ್‍ನಲ್ಲಿ ಖರೀದಿಸಬಹುದು.

ಆನ್‍ಲೈನ್‍ನಲ್ಲಿ ಚಲನಚಿತ್ರಗಳನ್ನು ಖರೀದಿಸಿ
ನಿಮಗೆ ಬೇಕಾದ ಚಲನಚಿತ್ರ ಮತ್ತು ಟಿ.ವಿ ಕಾರ್ಯಕ್ರಮಗಳನ್ನು ಸಹ ನೀವು ಆನ್‍ಲೈನ್‍ನಲ್ಲಿ ಖರೀದಿಸಬಹುದು. ಇವುಗಳೆಲ್ಲವು ವಿಶೇಷವಾಗಿ ಆನ್‍ಲೈನ್‍ನಲ್ಲಿ ಕೋರಿಕೆಯ ಆಧಾರದ ಮೇಲೆ ಬಿತ್ತರಗೊಳ್ಳುತ್ತವೆ.

ಮಗುವಿನ ವಸ್ತುಗಳು
ಡೈಪರ್‌ಗಳು ಮತ್ತು ಇನ್ನಿತರ ಮಗುವಿನ ವಸ್ತುಗಳನ್ನು ಸಹ ನೀವು ಆನ್‍ಲೈನ್‍ನಲ್ಲಿ ಖರೀದಿಸಬಹುದು. ಅದೇ ಅಲ್ಲದೆ ಮಗುವಿನ ಬೊಂಬೆಗಳ ಸಹಿತ ಹಲವು ವಸ್ತುಗಳನ್ನು ನಾವು ಆನ್‍ಲೈನ್ ಮೂಲಕ ಖರೀದಿಸಬಹುದು.



Click it and Unblock the Notifications


