Latest Updates
-
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ
ಹುಡುಗರೇ ಮಹಿಳೆಯರಿಗಿಂತ ಬೀರ್ ಬೊಂಬಾಟ್ ಗೊತ್ತೇನ್ರಿ?
ನೀವು ನಿಮ್ಮ ಸ್ನೇಹಿತರು ಸ್ನೇಹಿತೆಯರೊಂದಿಗೆ ಪಾರ್ಟಿಯಲ್ಲಿ ಇದ್ದೀರಿ ಅಂತಿಟ್ಟುಕೊಳ್ಳೋಣ? ನಿಮ್ಮ ಪಕ್ಕ ನಿಮ್ಮ ಕನಸಿನ ಸುಂದರ ಹುಡುಗಿ ಇದ್ದರೂ ಕೂಡ ನಿಮ್ಮ ಕಣ್ಣು ಧಾವಿಸುವುದು ಬೀರ್ ಜಗ್ ಕಡೆಗೆ ಬೇಕಿದ್ದರೆ ಇದು ನೂರಕ್ಕೆ ನೂರು ಸತ್ಯ!
ಎಲ್ಲಾ ಪುರುಷರು ಹೀಗೆಂದಲ್ಲ ಆದರೆ ಮಹಿಳೆ ಮತ್ತು ಬಿಯರ್ ವಿಷಯಕ್ಕೆ ಬಂದಾಗ ಅವರು ನೆಚ್ಚಿಕೊಳ್ಳುವುದು ಬೀರ್ ಅನ್ನು. ತಮ್ಮ ಲವ್ಲೀ ಲೇಡಿಗಿಂತ ಅವರಿಗೆ ತಂಪಾದ ಬೀರ್ ತುಂಬಾ ಇಷ್ಟವಾಗಿರುತ್ತದೆ. ಕೆಲವೊಂದು ಮೋಜಿನ ಕಾರಣಗಳಿಗೆ ಪುರುಷರು ಬೀರ್ ಅನ್ನು ಮಹಿಳೆಯರಿಗಿಂತ ಹೆಚ್ಚು ಇಷ್ಟ ಪಡುತ್ತಾರೆ ಎಂಬುದು ನಿಮಗೆ ಗೊತ್ತೇ?
ಹೌದು ಕೆಲವೊಂದು ಮೋಜಿನ 15 ಕಾರಣಗಳು ಮಹಿಳೆಗಿಂತ ಬೀರ್ ಹೆಚ್ಚು ಪ್ರಮುಖ ಎಂಬುದನ್ನು ಸಾಧಿಸಿದೆ. ಇಂದಿನ ಲೇಖನದ ಸಾರಾಂಶವೇ ಆ 15 ಕಾರಣಗಳ ವಿಸ್ತಾರ ನೋಟ. ಬನ್ನಿ ಹಾಗಿದ್ದರೆ ಆ ಮೋಜಿನ ಕಾರಣಗಳನ್ನು ತಿಳಿದುಕೊಂಡು ನಿಮ್ಮ ಅಭಿಪ್ರಾಯವೂ ಇದುವೆಯೇ ಎಂಬುದನ್ನು ಮನಗೊಳ್ಳೊಣ.
ಬೀರ್ ಬಗ್ಗೆ ಕೆಲ ಆಸಕ್ತಿಕರ ವಿಷಯಗಳು

ಹೊಟ್ಟೆಕಿಚ್ಚು:
ಒಂದು ಬೀರ್ ಮುಗಿದು ನೀವು ಇನ್ನೊಂದರತ್ತ ಕೈ ಚಾಚುವಾಗ ಹೊಟ್ಟೆಕಿಚ್ಚುಪಡುವುದಿಲ್ಲ. ಆದರೆ ಮಹಿಳೆ ತನ್ನವನು ಬೇರೊಬ್ಬ ಸ್ತ್ರೀಯನ್ನು ಮಾತನಾಡಿಸುವುದನ್ನೂ ಕೂಡ ಸಹಿಸಳು. ಮಹಿಳೆ ಪ್ರತಿ ವಿಷಯದಲ್ಲೂ ತನ್ನ ಗೆಳೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾಳೆ. ಅಪ್ಪಿ ತಪ್ಪಿಯೂ ಆತ ಬೇರೆ ಹುಡುಗಿಯೊಂದಿಗೆ ಮಾತನಾಡುವುದನ್ನು ಆಕೆ ಇಷ್ಟ ಪಡುವುದಿಲ್ಲ. ಆತನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ಹೊಟ್ಟೆ ಕಿಚ್ಚು ಪಡುವುದರಲ್ಲಿ ಹುಡುಗಿಯರು ಎತ್ತಿದ ಕೈ!

ಪರಿಹಾರ:
ಬೀರ್ ಎಲ್ಲಾ ಸಮಸ್ಯೆಗೂ ಪರಿಹಾರವನ್ನು ಒದಗಿಸಿಕೊಡುತ್ತದೆ. ಮನಸ್ಸಿನ ಎಲ್ಲಾ ದುಖಃಗಳನ್ನು ಮರೆಯುವಂತೆ ಮಾಡುತ್ತದೆ. ಆದರೆ ಮಹಿಳೆ ಸಮಸ್ಯೆ ಇಲ್ಲದಿದ್ದರೂ ಸಮಸ್ಯೆಯನ್ನು ಸೃಷ್ಟಿಸುತ್ತಾಳೆ. ಪ್ರತಿ ದಿನ ಆಕೆಯ ಅನುಮಾನ ದೃಷ್ಟಿ, ಆಕೆಯ ವ್ಯಂಗ್ಯ ಪ್ರಶ್ನೆಗಳು ನಿಮ್ಮನ್ನು ಇನ್ನಷ್ಟು ಕುಗ್ಗಿ ಹೋಗುವಂತೆ ಮಾಡುತ್ತದೆ.

ಅಭಿನಂದನೆಗಳು:
ಕೆಲವು ಪುರುರಷರ ಪ್ರಕಾರ, ಕೆಲವು ಮಹಿಳೆಯರು ಅಭಿನಂದನೆಗಳನ್ನು ಅಷ್ಟು ಬೇಗನೇ ಸ್ವೀಕರಿಸುವುದಿಲ್ಲ. ಅದಕ್ಕಿಂತ ಬೀರ್ ಅನ್ನು ಅಭಿನಂದಿಸುವುದೇ ಸೂಕ್ತ!

ನಿಮ್ಮದೇ ಲೋಕದಲ್ಲಿ ತೇಲಾಡಿ:
ಹೌದು! ಸ್ನೇಹಿತರೊಡನೆ ಬೀರ್ ಕುಡಿಯುತ್ತಿರುವಾಗ ಹಾಳು ಹರಟೆಗಿಂತ ಕ್ರೀಡೆ, ರಾಜಕೀಯ ವಿಷಯಗಳು ಬಂದು ಹೋಗುತ್ತವೆ. ತಮಾಷೆಯ ಮಾತು ಇನ್ನಷ್ಟು ನಿಮ್ಮ ಬೀರ್‌ನ ಟೇಸ್ಟ್ ಅನ್ನು ಇಮ್ಮಡಿ ಗೊಳಿಸಬಹುದು. ನಿಮ್ಮ ಕನಸಿನ ಹುಡುಗಿಯೊಂದಿಗೆ ನೀವು ಬೇಸತ್ತು ಹೋಗಿರುವಿರಾದರೆ ಬೀರ್ ನಿಮಗೆ ಒಳ್ಳೆಯ ಸ್ನೇಹಿತನಾಗಬಹುದು.

ಶಾಪಿಂಗ್ ಇಲ್ಲ:
ನೀವು ಬೀರ್ ಕುಡಿಯುತ್ತಿರುವಾಗ ಶಾಪಿಂಗ್ ಮಾಡಬೇಕೆಂದಿರುವುದಿಲ್ಲ. ಆದರೆ ನೀವು ನಿಮ್ಮ ಮನದನ್ನೆಯ ಜೊತೆಗೆ ಇದ್ದೀರೆಂದರೆ ಅಂದು ನಿಮ್ಮ ಜೇಬಿಗೆ ಕತ್ತರಿಯೇ

ಸಂವಹನ ಸಾಮರ್ಥ್ಯ:
ನಿಮ್ಮವಳು ಎಷ್ಟು ಬಾರಿ ನಿಮಗೆ ಮಾತನಾಡುವ ಅವಕಾಶವನ್ನು ನೀಡುತ್ತಾಳೆ? ಪ್ರತಿ ಮಾತಿನಲ್ಲೂ ನಿಮ್ಮನ್ನು ಚುಚ್ಚಿ ಮಾತನಾಡುತ್ತಾಳೆ, ಆದರೆ ಬೀರ್ ನೀವು ಮಾತನಾಡಿದರೂ ನಿಮ್ಮೊಂದಿಗೆ ಬೀರ್ ಚರ್ಚೆಗೆ ಇಳಿಯುವುದಿಲ್ಲ.

ಹ್ಯಾಂಗೋವರ್:
ನಿಮ್ಮವಳಿಗಿಂತ ಹೆಚ್ಚಿನ ಮತ್ತನ್ನು ಬೀರ್ ನೀಡುತ್ತದೆ. ಇದರಿಂದ ಬೀರ್ ಮಹಿಳೆಗಿಂತ ಉತ್ತಮವಾಗಿದೆ.

ಅಸಮಾಧಾನ ಇಲ್ಲ:
ನೀವು ಬೀರ್ ಕುಡಿಯುತ್ತಿರುವಾಗ ಅಸಂಬದ್ಧ ಮಾತನಾಡುತ್ತಿದ್ದರೂ ಬೀರ್ ಏನೂ ಹೇಳುವುದಿಲ್ಲ. ಆದರೆ ಮಹಿಳೆ ನಿಮ್ಮೊಂದಿಗಿದ್ದರೆ ನಿಮಗೊಂದು ಗುದ್ದು ಸಿಗುವುದು ಖಚಿತ!

ಮುಖ್ಯ ಡೇಟ್ಸ್:
ನೀವು ಬೀರ್ ಜೊತೆ ಇದ್ದಾಗ ನಿಮಗೆ ಮುಖ್ಯವಾದ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದಿಲ್ಲ. ನಿಮ್ಮ ಮದುವೆಯ ವಾರ್ಷಿಕೋತ್ಸವ, ಹುಟ್ಟುಹಬ್ಬ ಹೀಗೆ.

ಮಾಲೀಕತ್ವ:
ನಿಮ್ಮ ಬೀರ್ ನಿಮ್ಮದಾಗಿರುತ್ತದೆ ಆದರೆ ನಿಮ್ಮಾಕೆಯ ಮೇಲೆ ನೀವು ಮಾಲೀಕತ್ವ ನಡೆಸಲಾಗುವುದಿಲ್ಲ.

ಮೋಸ:
ನೀವು ಬೀರ್‌ಗೆ ಮೋಸ ಮಾಡಿದರೆ ಅದು ಏನೂ ಮಾತನಾಡುವುದಿಲ್ಲ. ಆದರೆ ಅದೇ ಮಹಿಳೆಗೆ ಈ ರೀತಿ ಮಾಡಿದರೆ ಅದು ನಿಮ್ಮ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ತಿಂಗಳ ಸಮಯ:
ಬೀರ್‌ಗೆ ತಿಂಗಳ ಸಮಯವಿರುವುದಿಲ್ಲ. ಆದರೆ ನೀವು ಮಹಿಳೆಯೊಂದಿಗೆ ತಿಂಗಳಲ್ಲಿ ಒಂದು ಬಾರಿ ಇರಲಾಗುವುದಿಲ್ಲ.

ನಿರೀಕ್ಷಿಸುವುದಿಲ್ಲ:
ಒಬ್ಬ ಮಹಿಳೆ ತನ್ನವನಿಂದ ಏನನ್ನಾದರೂ ನಿರೀಕ್ಷಿಸುತ್ತಾಳೆ. ಆದರೆ ಬೀರ್ ಏನನ್ನೂ ನಿಮ್ಮಿಂದ ನಿರೀಕ್ಷಿಸುವುದಿಲ್ಲ.

ಹಳೆಯದು ಹೊಸದು:
ನೀವು ಒಂದು ಬೀರ್ ಕುಡಿಯುತ್ತಿದ್ದು ಇನ್ನೊಂದರ ಬಗ್ಗೆ ಆಲೋಚಿಸುತ್ತಿದ್ದರೂ ನೀವು ಕುಡಿಯುತ್ತಿರುವ ಬೀರ್ ನಿಮ್ಮ ಬಗ್ಗೆ ಏನೂ ಆಲೋಚನೆ ಮಾಡುವುದಿಲ್ಲ. ಆದರೆ ಮಹಿಳೆಯ ವಿಷಯದಲ್ಲಿ ನೀವು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ.

ಸಂತೋಷ:
ನೀವು ಬೀರ್ ಕುಡಿಯುವಾಗ ಉಂಟಾಗುವ ಸಂತೋಷ ಹಾಗೆಯೇ ಇರುತ್ತದೆ. ಆದರೆ ನೀವು ಮಹಿಳೆಯ ಜೊತೆ ಇರುವಾಗ ಈ ಸಂತೋಷ ಒಂದೆ ತೆರನಾಗಿರುವುದಿಲ್ಲ.



Click it and Unblock the Notifications