For Quick Alerts
ALLOW NOTIFICATIONS  
For Daily Alerts

ನಾವು ಜೀವನದಲ್ಲಿ ಮಾಡುವ ಅತಿ ದೊಡ್ಡ 10 ತಪ್ಪುಗಳು!

By Super
|

ನಾವೆಲ್ಲರು ಸಹಜವಾಗಿ ತಪ್ಪು ಮಾಡುತ್ತೇವೆ. ಆದರೆ ಕೆಲವರು ತಾವು ಮಾಡಿದ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಮತು ಅದರಿಂದ ಪಾಠ ಕಲಿತು ಮುಂದೆ ಅದನ್ನು ಪುನರಾವರ್ತನೆ ಮಾಡುವುದಿಲ್ಲ. ಆದರೆ ಕೆಲವರು ಮಾತ್ರ ಆ ತಪ್ಪುಗಳಿಂದ ಪಾಠವನ್ನು ಕಲಿಯುವುದಿಲ್ಲ, ಅದಕ್ಕಿಂತ ಮೇಲಾಗಿ ಇವರಿಗೆ ಅದು ತಪ್ಪು ಎಂದು ಅನಿಸುವುದೇ ಇಲ್ಲ. ಇದರ ಪರಿಣಾಮ ಅವರು ಆ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಲೆ ಇರುತ್ತಾರೆ.

ಈ ಲೇಖನದಲ್ಲಿ ನಿಮ್ಮ ಜೀವನದಲ್ಲಿ ನೀವು ಮಾಡುವ ಅತ್ಯಂತ ದೊಡ್ಡ ತಪ್ಪುಗಳ ಬಗ್ಗೆ ವಿವರಿಸಿದ್ದೇವೆ. ಈ ತಪ್ಪುಗಳು ನಿಮ್ಮ ಜೀವನದಲ್ಲಿ ಸಂಭವಿಸಿದ್ದರೆ, ಅದನ್ನು ತಿದ್ದಿಕೊಳ್ಳಿ. ಇಲ್ಲವಾದಲ್ಲಿ, ಅಂತಹ ತಪ್ಪು ನಿಮ್ಮ ಜೀವನದಲ್ಲಿ ಘಟಿಸದಂತೆ ಎಚ್ಚರಿಕೆ ವಹಿಸಿ. ಆದರೂ ಕೆಲವೊಂದು ತಪ್ಪುಗಳನ್ನು ಮನ್ನಿಸಿ ಬಿಡಬಹುದೆಂಬುದನ್ನು ಮರೆಯಬಾರದು.

ಬನ್ನಿ ಹಾಗಾದರೆ ನಾವು ಜೀವನದಲ್ಲಿ ಮಾಡುವ ಅತಿ ದೊಡ್ಡ 10 ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ. ಈ ತಪ್ಪುಗಳನ್ನು " ಸಂಬಂಧದಲ್ಲಿ ನಾವು ಮಾಡುವ ಅತಿ ದೊಡ್ಡ ತಪ್ಪುಗಳು" ಮತ್ತು "ಕೆಲಸದಲ್ಲಿ ನಾವು ಮಾಡುವ ಅತಿದೊಡ್ಡ ತಪ್ಪುಗಳು" ಎಂದು ಸಹ ಪರಿಗಣಿಸಬಹುದು. ಬನ್ನಿ ನಾವು ಮಾಡಬಾರದ 10 ಅತಿ ದೊಡ್ಡ ತಪ್ಪುಗಳ ಕುರಿತು ತಿಳಿದುಕೊಳ್ಳೋಣ, ಮುಂದೆ ಓದಿ.... ವಿಶ್ವದ ಅಗ್ರ 10 ಅತ್ಯಂತ ಶಕ್ತಿಶಾಲಿ ಸೇನಾಪಡೆಗಳು

ನಿಮ್ಮ ಅಹಂ ನಿಮ್ಮನ್ನೇ ಆಳುವಂತೆ ಮಾಡುವುದು

ನಿಮ್ಮ ಅಹಂ ನಿಮ್ಮನ್ನೇ ಆಳುವಂತೆ ಮಾಡುವುದು

ನೀವು ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಅಹಂ ಪ್ರಮುಖ ಪಾತ್ರವಹಿಸಿದಲ್ಲಿ, ಅದು ನಿಮ್ಮ ಜೀವನದ ಅತಿದ ತಪ್ಪುಗಳಲ್ಲಿ ಒಂದು. ಅಹಂ ಜೀವನದ ಅತಿ ದೊಡ್ಡ ಶತ್ರು ಮತ್ತು ಇದು ನಿಮಗೆ ಹತ್ತಿರವಾಗಿರುವವರನ್ನು ಸಹ ದೂರ ಮಾಡಿಬಿಡುತ್ತದೆ. ನಿಮ್ಮ ಅಹಂ ಅನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡಲ್ಲಿ ನಿಮ್ಮ ಜೀವನವು ಸುಗಮವಾಗಿರುತ್ತದೆ.

ಜೀವನದಲ್ಲಿ ಉಳಿತಾಯ ಮಾಡದೇ ಇರುವುದು

ಜೀವನದಲ್ಲಿ ಉಳಿತಾಯ ಮಾಡದೇ ಇರುವುದು

ಬಹುತೇಕ ಯುವ ಜನರು ಈ ದಿನಗಳಲ್ಲಿ ಹೆಚ್ಚಾಗಿ ಸಂಪಾದನೆ ಮಾಡುತ್ತಾರೆ ಮತ್ತು ಅವರ ಜೀವನ ಅವರು ಅಂದು ಕೊಂಡಂತೆ ಸಾಗುತ್ತದೆ ಎಂದು ಇರುವ ಹಣವನ್ನೆಲ್ಲ ಖರ್ಚು ಮಾಡಿಬಿಡುತ್ತಾರೆ. ಆದರೆ ಜೀವನ ಅಂದುಕೊಂಡಂತೆ ಯಾವತ್ತು ಸಾಗುವುದಿಲ್ಲ. ಅದಕ್ಕಾಗಿ ನಿಮ್ಮ ವಿಶ್ರಾಂತ ಜೀವನಕ್ಕಾಗಿ ಸ್ವಲ್ಪ ಹಣವನ್ನು ಹೀಗಿನಿಂದಲೆ ಉಳಿಸಿಡುವುದು ಉತ್ತಮ. ಇಲ್ಲವಾದಲ್ಲಿ ಜೀವನದ ಕೊನೆಗಾಲದಲ್ಲಿ ನಿಮ್ಮ ಜೀವನವು ಅಯೋಮಯವಾಗುತ್ತದೆ. ಎಚ್ಚರ ಈಗಲೇ ಉಳಿಸಿ.

ಕೀಳರಿಮೆ

ಕೀಳರಿಮೆ

ಹಲವಾರು ಜನ ತತ್ವಜ್ಞಾನಿಗಳ ಅಭಿಪ್ರಾಯವೇನೆಂದರೆ;- ಮನುಷ್ಯನ ಜೀವನದಲ್ಲಿ ಕೀಳರಿಮೆ ಅಥವಾ ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ ಇರುತ್ತದೆ. ಇದು ನಮ್ಮ ಜೀವನದ ಅತಿ ದೊಡ್ಡ ತಪ್ಪು, ಏಕೆಂದರೆ ಇದು ನಮ್ಮ ಕುರಿತು ನಾವೇ ಅಸಮಾಧಾನ ಹೊಂದುವಂತೆ ಮಾಡುತ್ತದೆ ಮತ್ತು ನಮ್ಮ ಸಾಮಾರ್ಥ್ಯಗಳ ಕುರಿತು ನಾವು ತಪ್ಪಾಗಿ ಗ್ರಹಿಸುವಂತೆ ಮಾಡುತ್ತದೆ. ಇದು ನಿಮ್ಮ ಅಸ್ತಿತ್ವವನ್ನೆ ಅಲ್ಲಾಡಿಸಿ, ನಿಮ್ಮನ್ನು ಮೂಲೆಗುಂಪಾಗಿಸುತ್ತದೆ. ನಿಮ್ಮಲ್ಲಿ ಎಲ್ಲಾ ಸಾಮರ್ಥ್ಯ ಇದ್ದೂ, ನೀವು ಕೈಲಾಗದವರಂತೆ ಕೂರುವಂತೆ ಮಾಡುತ್ತದೆ.

ಗತ ಕಾಲದ ಸಾಧನೆಗಳೆ ನಿಮ್ಮನ್ನು ನಿಯಂತ್ರಿಸುವಂತೆ ಮಾಡುವುದು

ಗತ ಕಾಲದ ಸಾಧನೆಗಳೆ ನಿಮ್ಮನ್ನು ನಿಯಂತ್ರಿಸುವಂತೆ ಮಾಡುವುದು

"ಯಾವುದೇ ಕಾರಣಕ್ಕು ನಿನ್ನೆಗಳ ಸಾಧನೆಯ ಮೇಲೆಯೇ ನಿಮ್ಮ ಇಂದು ಮತ್ತು ನಾಳೆಗಳನ್ನು ಅಳೆಯಬೇಡಿ. ಇದೇ ನಿಮ್ಮನ್ನು ಸೋಲಿನತ್ತ ಕೊಂಡೊಯ್ದು ಬಿಡುತ್ತದೆ".

ಪ್ರತಿಯೊಬ್ಬರನ್ನು ಮೆಚ್ಚಿಸಲು ಹೋಗುವುದು

ಪ್ರತಿಯೊಬ್ಬರನ್ನು ಮೆಚ್ಚಿಸಲು ಹೋಗುವುದು

ನಿಮ್ಮ ಬಗ್ಗೆ ಇತರರು ಏನು ಆಲೋಚಿಸುತ್ತಾರೆ ಎಂಬುದೆ ನಿಮ್ಮ ಸಮಸ್ಯೆ. ಜನರನ್ನು ನಿಭಾಯಿಸಲು ಅಗತ್ಯವಾದ ಒಂದು ಮನಃ ಸ್ಥಿತಿಯನ್ನು ಇರಿಸಿಕೊಳ್ಳಿ ಹಾಗು ಪ್ರತಿಯೊಬ್ಬರನ್ನು ಮೆಚ್ಚಿಸಲು ಹೋಗಬೇಡಿ, ಅಥವಾ ಪ್ರಯತ್ನಿಸಲೇ ಬೇಡಿ. ಇದು ನಿಮ್ಮ ಜೀವನದ ಅತಿ ದೊಡ್ಡ ತಪ್ಪುಗಳಲ್ಲಿ ಒಂದು.

ಸೋಮಾರಿತನ

ಸೋಮಾರಿತನ

ಸೋಮಾರಿತನವು ನಿಮ್ಮ ಜೀವನದಲ್ಲಿ ಋಣಾತ್ಮಕತೆಯನ್ನೆ ಹೆಚ್ಚಾಗಿ ತರುತ್ತದೆ. ಒಂದು ವೇಳೆ ನೀವು ಹೆಚ್ಚು ಸೋಮಾರಿತನವನ್ನು ರೂಢಿಸಿಕೊಂಡಿದ್ದಲ್ಲಿ, ಅದನ್ನು ಈ ಕ್ಷಣದಿಂದ ಬಿಡಲು ತೀರ್ಮಾನಿಸಿ.

ಅಗೌರವ

ಅಗೌರವ

ನಿಮ್ಮ ಪೋಷಕರು ಪ್ರತಿದಿನ ಜನನ, ವಯಸ್ಸಾಗುವಿಕೆ, ಕಾಯಿಲೆ ಮತ್ತು ಸಾವು ಹೀಗೆ ಜೀವನದ ವಿವಿಧ ಘಟ್ಟಗಳನ್ನು ನೋಡುತ್ತಿರುತ್ತಾರೆ. ಇದೇ ಘಟ್ಟಗಳನ್ನು ನಾಳೆ ನೀವು ಸಹ ಪೋಷಕರಾದಾಗ ನೋಡುತ್ತೀರಿ. ಅದಕ್ಕಾಗಿ ನಿಮ್ಮ ಪೋಷಕರನ್ನು ಗೌರವದಿಂದ ಕಾಣಿರಿ.

ಇತರರ ದಾರಿಯನ್ನು ಅನುಸರಿಸುವುದು

ಇತರರ ದಾರಿಯನ್ನು ಅನುಸರಿಸುವುದು

ಇತರರ ದಾರಿಯನ್ನು ಅನುಸರಿಸುವುದು ಮತ್ತು ಇತರರ ಕನಸನ್ನೆ ನಮ್ಮ ಕನಸೆಂದು ಕಾಣುತ್ತ ದಿನ ಕಳೆಯುವುದು ಸಹ ಜೀವನದ ಅತಿ ದೊಡ್ಡ ತಪ್ಪುಗಳಲ್ಲಿ ಒಂದು. ಇದು ನಿಮ್ಮನ್ನು ನೀವು ಕೇವಲ ಮಾಡಿಕೊಂಡಂತೆ, ಕೊನೆಗೆ ಇದರಿಂದ ಯಾರ ಜೀವನಕ್ಕೂ ಯಾವುದೇ ಲಾಭ ಆಗುವುದಿಲ್ಲ.

ಇತರರ ಜೊತೆಗೆ ಸುಖಾ ಸುಮ್ಮನೆ ಹೋಲಿಸಿಕೊಳ್ಳುವುದು

ಇತರರ ಜೊತೆಗೆ ಸುಖಾ ಸುಮ್ಮನೆ ಹೋಲಿಸಿಕೊಳ್ಳುವುದು

ಬಹುತೇಕ ಜನರು ತಮ್ಮನ್ನು ತಾವು ಇತರರೊಂದಿಗೆ ಹೋಲಿಸಿಕೊಳ್ಳುತ್ತ ಇರುತ್ತಾರೆ. ಇದು ನಿಜವಾಗಿ ದೊಡ್ಡ ತಪ್ಪು. ಇದು ನಿಮಗೆ ಎಲ್ಲಿಗೆ ತಲುಪಬೇಕು, ಯಾವ ಹಂತಕ್ಕೆ ಬೆಳೆಯಬೇಕು ಎಂಬುದನ್ನು ತಿಳಿಸಿಕೊಡಬಹುದೇ ಹೊರತು, ಇನ್ನಿತರ ಯಾವುದೇ ಉದ್ದೇಶಗಳನ್ನು ತಿಳಿಸಿಕೊಡುವುದಿಲ್ಲ. ಇದರಿಂದ ನಿಮ್ಮ ಜೀವನಕ್ಕೆ ಯಾವುದೇ ಪ್ರಯೋಜನವು ಸಹ ಆಗುವುದಿಲ್ಲ. ಈ ದೊಡ್ಡ ತಪ್ಪನ್ನು ಮತ್ತೆ ಮಾಡುವುದನ್ನು ಬಿಡಿ.

ನಿಮಗೆ ತೃಪ್ತಿ ನೀಡದ ಕೆಲಸವನ್ನು ಎಂದೂ ಮಾಡಬೇಡಿ

ನಿಮಗೆ ತೃಪ್ತಿ ನೀಡದ ಕೆಲಸವನ್ನು ಎಂದೂ ಮಾಡಬೇಡಿ

ನಿಮ್ಮ ಜೀವನದ ಅತಿ ದೊಡ್ಡ ತಪ್ಪಿನ ಬಗ್ಗೆ ಮಾತನಾಡಬೇಕೆಂದರೆ ಅದು ಮತ್ತೊಂದಲ್ಲ. ಅದು ನೀವು ಅತೃಪ್ತಿಯನ್ನು ಹೊಂದಿರುವ ಕೆಲಸವನ್ನು ಮಾಡುತ್ತಿರುವುದರ ಬಗ್ಗೆ ಆಗಿರುತ್ತದೆ. ಇತರ ತಪ್ಪುಗಳನ್ನು ಸ್ವಲ್ಪ ಮಟ್ಟಿಗೆ ಮಾಫಿ ಮಾಡಬಹುದು, ಆದರೆ ಈ ತಪ್ಪಿಗೆ ಕ್ಷಮೆಯೇ ಇಲ್ಲ. ನಿಮಗೆ ಒಂದು ಕೆಲಸ ತೃಪ್ತಿಯನ್ನು ನೀಡದಿದ್ದರೆ, ಅದನ್ನು ಮೊದಲು ಬದಲಾಯಿಸಲು ಏನಾದರು ಮಾಡಿ.

English summary

10 Biggest Mistakes we Make in Life

Let us now look at these 10 worst mistakes people make in life. These mistakes can also be viewed as "the worst mistakes to make in a relationship" and "the worst mistakes to make at work". Here are 10 biggest mistakes in life you shouldn't make. Read on...
X
Desktop Bottom Promotion