Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಗುಣಮಟ್ಟ ಪರೀಕ್ಷೆಯಲ್ಲಿ ಪತಂಜಲಿ ಸೋನ್ ಪಾಪಡಿ ವಿಫಲ..! ಮೂವರಿಗೆ ಜೈಲು!
ಸೋನ್ ಪಾಪಡಿ ಸಿಹಿ ತಿಂಡಿ ಯಾರಿಗೆ ಇಷ್ಟ ಇಲ್ಲಾ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈ ತಿಂಡಿ ಸವಿದವರೇ. ಅದರಲ್ಲೂ ಈ ತಿಂಡಿಗೆ ಸೋನ್ ಪಾಪಡಿ ಎಂಬ ಹೆಸರು ಬಂದಿರುವ ಹಿಂದೆಯೂ ಒಂದು ಕಥೆ ಸಹ ಇದೆ. ನೀವು ಎಲ್ಲಾ ಅಂಗಡಿ, ಬೇಕರಿಯಲ್ಲೂ ಈ ಸೋನ್ ಪಾಪಡಿ ನೋಡಬಹುದು. ಈಗಲೂ ಇದು ಪೇಮಸ್ ಖಾದ್ಯವಾಗಿದೆ.
ಆದ್ರೆ ಈ ಸೋನ್ ಪಾಪಡಿ ತಯಾರಿಕೆ ಈಗ ಮೂವರನ್ನು ಜೈಲಿಗಟ್ಟುವಂತೆ ಮಾಡಿದೆ. ನಿಮಗೆ ಇದು ಅಚ್ಚರಿ ಎನಿಸಬಹುದು. ಇಂದು ಸಾಧಾರಣ ತಿಂಡಿ ಮೂವರ ಜೈಲು ಶಿಕ್ಷೆಗೆ ಕಾರಣವಾಗಿದೆ. ನೀವು ಪತಂಜಲಿ ಹೆಸರು ಕೇಳಿರುತ್ತೀರಿ. ಬಾಬಾ ರಾಮ್‌ದೇವ್ ಅವರ ಒಡೆತನದ ಸಂಸ್ಥೆ ಇದಾಗಿದ್ದು, ಇದೇ ಸಂಸ್ಥೆಯ ಸೋನ್ ಪಾಪಡಿ ಈಗ ಸುದ್ದಿಯಾಗುತ್ತಿದೆ. ಜೊತೆಗೆ ಮೂವರ ಜೈಲು ಶಿಕ್ಷೆಗೆ ಕಾರಣವಾಗಿದೆ.

ಪತಂಜಲಿ ಎಲೈಚಿ "ಸೋನ್ ಪಾಪಡಿ" ತಯಾರಿಕೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಲ್ಲಿನ ನ್ಯಾಯಾಲಯವು ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪಿಥೋರಗಢ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಂಜಯ್ ಸಿಂಗ್ ಅವರು ಶನಿವಾರ ಜೈಲು ಶಿಕ್ಷೆಯ ಜೊತೆಗೆ ₹ 5,000 ರಿಂದ ₹ 25,000 ವರೆಗೆ ದಂಡ ವಿಧಿಸಿ ಆದೇಶಿಸಿರುವುದು ಇಡೀ ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿದೆ.
ಪಿಥೋರಗಢ್‌ನ ಬೇರಿನಾಗ್ ಪಟ್ಟಣದ ಅಂಗಡಿಯ ವ್ಯಾಪಾರಿ ಲೀಲಾಧರ್ ಪಾಠಕ್ ಆರೋಪಿ ಎಂದು ತೀರ್ಪು ನೀಡಿದ್ದು, ಆತನಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ನೈನಿತಾಲ್‌ನ ರಾಮನಗರದಲ್ಲಿರುವ ಪತಂಜಲಿಯ ಅಧಿಕೃತ ಪ್ರತಿನಿಧಿ ಕನ್ಹಾಜಿ ಡಿಸ್ಟ್ರಿಬ್ಯೂಟರ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹಾಯಕ ವ್ಯವಸ್ಥಾಪಕ ಅಜಯ್ ಜೋಶಿ ಅವರಿಗೆ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಮತ್ತು ₹ 10,000 ದಂಡ ವಿಧಿಸಿದ್ದರೆ, ಇತ್ತ ಕಂಪನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಅಭಿಷೇಕ್ ಕುಮಾರ್ ಅವರಿಗೆ ₹25,000 ದಂಡದೊಂದಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
ಸೆಪ್ಟೆಂಬರ್ 17, 2019 ರಂದು ಪಾಠಕ್ ಅವರ ಅಂಗಡಿಯಿಂದ ಪತಂಜಲಿ "ಎಲೈಚಿ ನವರತ್ನ ಸೋನ್ ಪಾಪಡಿ" ಸಿಹಿಯನ್ನು ತೆಗೆದುಕೊಂಡು ಅದರ ಮಾದರಿಯನ್ನು ಪರೀಕ್ಷೆ ಒಳಪಡಿಸಿದ್ದರು. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ವರದಿ ಬಂದ ಬಳಿಕ 2021ರಲ್ಲಿ ಪತಂಜಲಿ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಅಡಿಯಲ್ಲಿ ಮೂವರನ್ನು ಅಪರಾಧಿಗಳೆಂದು ಘೋಷಿಸಲಾಗಿದೆ. ಈ ಪತಂಜಲಿ ಸೋನ್ ಪಾಪಡಿಯಲ್ಲಿ ಯಾವ ಅಂಶ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ.
ತನಿಖೆಯಲ್ಲಿ, ಸೊಂಪಾಪಾಡಿ ಮಾದರಿಗಳು ಮಾನದಂಡಗಳಿಗೆ ವಿರುದ್ಧವಾಗಿವೆ ಮತ್ತು ಸುರಕ್ಷತೆಯನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿವೆ. ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಉದ್ಯಮಿ ಲೀಲಾಧರ ಪಾಠಕ್ ವಿತರಕ ಅಜಯ್ ಜೋಶಿ ಮತ್ತು ಪತಂಜಲಿ ಸಹಾಯಕ ವ್ಯವಸ್ಥಾಪಕ ಅಭಿಷೇಕ್ ಕುಮಾರ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು.
ಆಹಾರದ ವಿಚಾರದಲ್ಲಿ ಇಂತಹ ಹಲವು ಪ್ರಕರಣಗಳು ಇತ್ತೀಚಿಗೆ ಬೆಳಕಿಗೆ ಬರುತ್ತಿರುವುದನ್ನು ನಾವು ನೋಡಿರಬಹುದು. ಅದರಲ್ಲೂ ಭಾರತದ ಮಸಾಲೆಗಳು ಸಿಂಗಾಪುರ್ ಹಾಗೂ ಹಾಂಗ್‌ಕಾಂಗ್‌ನಲ್ಲಿ ನಿಷೇಧಕ್ಕೊಳಗಾದ ಘಟನೆ ಸಹ ನಡೆದಿತ್ತು. ಈ ಮಸಾಲೆಗಳಲ್ಲಿ ರಾಸಾಯನಿಕ ಅಂಶ ಬೆರೆತ ಕುರಿತು ವರದಿಯಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಪತಂಜಲಿ ಉತ್ಪನ್ನ ಸಹ ಇಂತಹದ್ದೆ ಪ್ರಕರಣದಲ್ಲಿ ಸಿಲುಕಿದ್ದು, ಮೂವರ ಜೈಲು ಶಿಕ್ಷೆಗೆ ಕಾರಣವಾಗಿದೆ.



Click it and Unblock the Notifications