Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಒಂದು ಪ್ಲೇಟ್ ಇಡ್ಲಿಗೆ 500 ರೂ.: ಇದು ಸಾಮಾನ್ಯ ಇಡ್ಲಿಯಲ್ಲ!!
ದಕ್ಷಿಣ ಭಾರತದ ಪ್ರಸಿದ್ಧದ ತಿಂಡಿಯಲ್ಲಿ ಇಡ್ಲಿ ಮುಂಚೂಣಿಯಲ್ಲಿದೆ. ಇಡ್ಲಿ ಆರೋಗ್ಯಕ್ಕೆ ಬಹಳ ಉತ್ತಮ ಆಯ್ಕೆ. ಏಕೆಂದರೆ ಕಡಿಮೆ ಎಣ್ಣೆ ಬಳಸುವ ಕಾರಣ ಹಾಗೂ ಜೀರ್ಣಕ್ರಿಯೆಗೂ ಇದು ಸಹಕಾರಿಯಾಗಿರುವ ಕಾರಣ ಇಡ್ಲಿ ಎಲ್ಲರ ಫೇವರಿಟ್ ಫುಡ್ ಆಗಿದೆ.
ಹೋಟೆಲ್‌ನಲ್ಲಿ ಒಂದು ಪ್ಲೇಟ್ ಇಡ್ಲಿಗೆ ಹೆಚ್ಚೆಂದರೆ ನೀವು 30ರಿಂದ 50 ರೂಪಾಯಿ ನೀಡಿರಬಹುದು. ಅದಕ್ಕೂ ಹೆಚ್ಚೆಂದರೆ 100 ರೂಪಾಯಿವರೆಗೂ ನೀಡಿರಬಹುದು. ಆದ್ರೆ ಇಲ್ಲೊಂದು ಕಡೆ ಒಂದು ಪ್ಲೇಟ್ ಇಡ್ಲಿ ಬೆಲೆ ಬರೋಬ್ಬರಿ 500 ರೂಪಾಯಿಯಾಗಿದೆ.

ಇಡ್ಲಿ ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗುವ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಹೀಗಾಗಿ ಜನ ಇಡ್ಲಿಯನ್ನ ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಈ ಇಡ್ಲಿ ಬೆಲೆ ಮಾತ್ರ 500 ರೂಪಾಯಿಯಾಗಿದೆ. ಚೆನ್ನೈನ ಹೆಸರಾಂತ ಉಪಾಹಾರ ಗೃಹ ಅಡ್ಯಾರ್ ಆನಂದ ಭವನವು ರೂ 500 ಬೆಲೆಯ ವಿಶಿಷ್ಟವಾದ ಇಡ್ಲಿಯನ್ನು ನೀಡುತ್ತಿದೆ. ಬೆಲೆಯೂ ಹೆಚ್ಚಿರುವ ಕಾರಣಕ್ಕೆ ಸದ್ದು ಮಾಡುತ್ತಿದೆ.
ಈ ಇಡ್ಲಿಯ ವಿಶೇಷತೆ ಏನು ಗೊತ್ತಾ?
ಈ ಇಡ್ಲಿಗೆ ಸುಮ್ಮನೆ ಇಷ್ಟೊಂದು ದರ ಫಿಕ್ಸ್ ಮಾಡಿಲ್ಲ ಬದಲಾಗಿ, ಈ ಇಡ್ಲಿಗೆ ಪೌಷ್ಟಿಕ ಆಹಾರಗಳ ಸೇರಿಸಲಾಗುತ್ತದೆ. ಅಂದರೆ ಬಾದಾಮಿ, ಬೆರಿಹಣ್ಣು, ಆಲಿವ್ ಸೇರಿ ವಿವಿಧ ಡ್ರೈ ಫ್ರೂಟ್ಸ್‌ಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಇದೊಂದು ಪೌಷ್ಟಿಕಾಂಶ ಭರಿತ ಆಹಾರ ಆಗಿರೋದ್ರಿಂದ ಇದರ ಬೆಲೆ 500 ರೂಪಾಯಿ ಆಗಿದೆ.
@foodtastingmission ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಇಡ್ಲಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅಂದಿನಿಂದ ಈ ವಿಡಿಯೋ ವೈರಲ್ ಆಗಿದೆ. ಜನ ಈ ಇಡ್ಲಿ ನೋಡಿ ಇಷ್ಟೊಂದು ಬೆಲೆ ಏಕೆ ಎಂದು ಬಾಯಿ ಮೇಲೆ ಬೆರಳಿಟ್ಟರೆ ಮತ್ತೆ ಕೆಲವರು ಇಡ್ಲಿ ಜೊತೆಗೆ ಅದನ್ನು ಹಾಕುವುದಕ್ಕಿಂತ, ಈ ಫ್ರೂಟ್ಸ್‌ಗಳನ್ನು ಇಡ್ಲಿ ಸವಿದ ಬಳಿಕವೂ ತಿನ್ನಬಹುದು. ಇದೊಂದು ಮಾರ್ಕೆಟಿಂಗ್ ಅಷ್ಟೇ ಎನ್ನುತ್ತಿದ್ದಾರೆ.
ಅದ್ಭುತ ರುಚಿಯ ಗೀ ರೈಸ್ 10 ನಿಮಿಷದಲ್ಲಿ..! ಸಿಂಪಲ್ ರೆಸಿಪಿ ಇಲ್ಲಿದೆ!
ಇದೊಂದು ಸೂಪರ್ ಫುಡ್ ರೀತಿಯ ಆಹಾರವಾಗಿದೆ. ಇದರಲ್ಲಿ ಎಲ್ಲಾ ವಿಟಮಿನ್, ಪೋಷಕಾಂಶ ಸೇರಿದಂತೆ ವಿವಿಧ ಆರೋಗ್ಯಕರ ಅಂಶಗಳು ಸೇರಿರುವುದರಿಂದಾಗಿ ಎಲ್ಲಾ ವರ್ಗದವರಿಗೂ ಇದೊಂದು ಅತ್ಯುತ್ತಮ ಆಹಾರವಾಗಿದೆ. ಈ ಇಡ್ಲಿ ಸಂಪೂರ್ಣ ಪ್ಯಾಕೇಜ್ ರೀತ ಇದ್ದು, ಎಲ್ಲಾ ರೀತಿಯ ಪೋಷಕಾಂಶವು ಇದರಲ್ಲಿ ಬೆರೆತಿದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ.
ಅಡ್ಯಾರ್ ಆನಂದ ಭವನ ಆರಂಭಗೊಂಡಿದ್ದು ಹೇಗೆ?
1960 ರ ದಶಕದ ಆರಂಭದಲ್ಲಿ ಕೆ.ಎಸ್ ತಿರುಪತಿ ರಾಜಾ ಎಂಬಾತ ತಮಿಳುನಾಡಿನ ಮಧುರೈ ಬಳಿಯ ರಾಜಪಾಳ್ಯಂ ಪಟ್ಟಣದಲ್ಲಿ ಗುರು ಸ್ವೀಟ್ಸ್ ಎಂಬ ಸಣ್ಣ ಸಿಹಿತಿಂಡಿ ಅಂಗಡಿಯನ್ನು ತೆರೆದಿದ್ದರು. ಕೃಷಿಕ ಕುಟುಂಬದಿಂದ ಬಂದ ತಿರುಪತಿ ರಾಜಾ ಪತ್ನಿ ಮುತ್ತುಲಕ್ಷ್ಮಿ ಅವರ ಸಹಾಯದಿಂದ, ಗುರು ಸ್ವೀಟ್ಸ್ ಗೋಧಿ ಹಲ್ವಾ, ಲಡ್ಡು, ಜಹಾಂಗೀರ್, ಬಾದುಶಾ ಮತ್ತು ಪ್ರಸಿದ್ಧ ಮೈಸೂರು ಪಾಕ್‌ನಂತಹ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
1978 ರಲ್ಲಿ, ನನ್ನ ತಂದೆ ಮಲ್ಲೇಶ್ವರಂ ಬಳಿ ಬೆಂಗಳೂರಿನಲ್ಲಿ ಶ್ರೀನಿವಾಸ ಸ್ವೀಟ್ಸ್ ಎಂಬ ಮತ್ತೊಂದು ಸಿಹಿತಿಂಡಿ ಅಂಗಡಿಯನ್ನು ತೆರೆದರು ಎಂದು ತಿರುಪತಿ ರಾಜರ ಕಿರಿಯ ಮಗ 58 ವರ್ಷದ ಕೆಟಿ ಶ್ರೀನಿವಾಸ ರಾಜ ಹೇಳುತ್ತಾರೆ. ಶ್ರೀನಿವಾಸ ಸ್ವೀಟ್ಸ್, ಹಿಂದಿನ ಅಂಗಡಿಗಿಂತ ಭಿನ್ನವಾಗಿತ್ತು. ಆದರೆ 1980 ರ ಹೊತ್ತಿಗೆ ಹಿರಿಯ ಸಹೋದರ ಕೆಟಿ ವೆಂಕಟೇಶನ್ ಚೆನ್ನೈನ ರಾಯಪುರಂನಲ್ಲಿ ಶ್ರೀ ಆನಂದ್ ಭವನ್ ಎಂಬ ಮತ್ತೊಂದು ಸಿಹಿತಿಂಡಿ ಮತ್ತು ಖಾರದ ಅಂಗಡಿಯನ್ನು ಸ್ಥಾಪಿಸಿದರು.
ಬಳಿಕ 1988ರಲ್ಲಿ ಇದೇ ಅಂಗಡಿಗೆ ಮರು ನಾಮಕರಣ ಮಾಡಲಾಗಿತ್ತು, ಅದಕ್ಕೆ ಅಡ್ಯಾರ್ ಆನಂದ ಭವನ ಎಂದು ಹೆಸರಿಡಲಾಗಿತ್ತು. ಈಗ ಈ ಹೋಟೆಲ್ ದೊಡ್ಡ ಉದ್ಯಮವಾಗಿ ಬೆಳೆದಿದೆ. ಜೊತೆಗೆ ವಾರ್ಷಿಕವಾಗಿ ಬರೋಬ್ಬರಿ 800 ಕೋಟಿ ರೂಪಾಯಿ ವಹಿವಾಟು ನಡೆಸುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಮಲೇಷಿಯಾ, ಯುಎಸ್, ಸಿಂಗಾಪುರ್‌ನಲ್ಲಿಯೂ ಮಳಿಗೆಗಳಿವೆ.



Click it and Unblock the Notifications
