Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅದ್ಭುತ ರುಚಿಯ ಗೀ ರೈಸ್ 10 ನಿಮಿಷದಲ್ಲಿ..! ಸಿಂಪಲ್ ರೆಸಿಪಿ ಇಲ್ಲಿದೆ!
ಅನ್ನದಲ್ಲಿ ಹತ್ತಾರು ವಿಧವಾದ ತಿಂಡಿ ಮಾಡಬಹುದು. ಅಂದರೆ ಮಧ್ಯಾಹ್ನದ ಊಟಕ್ಕೆ ಮಾತ್ರ ಅನ್ನ ಬಳಸುವುದಲ್ಲ ಬದಲಿಗೆ ಅನ್ನದಿಂದ ಹತ್ತಾರು ರೀತಿಯಲ್ಲಿ ತಿಂಡಿ ಮಾಡಬಹುದು. ಅದರಲ್ಲೂ ಬೆಳಗ್ಗೆಯ ತಿಂಡಿಗೆ ವಿವಿಧ ರೀತಿಯ ಖಾದ್ಯ ಮಾಡಬಹುದು.
ಅನ್ನದಿಂದ ಚಿತ್ರಾನ್ನ, ಪುಳಿಯೋಗರೆ, ಪಲಾವ್, ಬಿಸಿ ಬೇಳೆ ಬಾತ್, ರೈಸ್ಬಾತ್ನಂತಹ ಒಂದಿಷ್ಟು ಖಾದ್ಯಗಳ ಜೊತೆಗೆ ಬಿರಿಯಾನಿ, ವೆಜ್ ಬಿರಿಯಾನಿಯಂತಹ ಖಾದ್ಯವೂ ಸಿದ್ದಮಾಡಬಹುದು. ಅದರಲ್ಲೇ ನಾವಿಂದು ಗೀ ರೈಸ್ ಮಾಡುವ ಕುರಿತು ತಿಳಿಯೋಣ.

ಬೆಳಗ್ಗೆ ತಿಂಡಿಗೆ ಗೀ ರೈಸ್ ಮಾಡಿದರೆ ಅದರ ರುಚಿಗೆ ನೀವು ಮತ್ತೆ ಮತ್ತೆ ಗೀ ರೈಸ್ ಮಾಡಲು ಮುಂದಾಗುತ್ತೀರಿ. ಗೀ ರೈಸ್ ಮಾಡೋದು ತುಂಬಾನೆ ಸುಲಭ ಹಾಗೂ ಕೆಲವೇ ವಸ್ತು ನಿಮ್ಮ ಮನೆಯಲ್ಲಿದ್ದರೆ ಸಾಕು. ಹಾಗಾದ್ಗರೆ ಬಾಯಿ ಚಪ್ಪರಿಸಿ ಸವಿಯುವ ಗೀ ರೈಸ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕೆ? ಮಾಡುವ ವಿಧಾನವೇನು? ಎಷ್ಟು ಸಮಯು ತೆಗದುಕೊಳ್ಳುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೀ ರೈಸ್ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ - 1 ಗ್ಲಾಸ್
- ತುಪ್ಪ - 3 ಚಮಚ
- ಎಣ್ಣೆ - 1 tbs
- ಗರಂ ಮಸಾಲ
- ಹಸಿರು ಮೆಣಸಿನಕಾಯಿ - 3
- ಚಕ್ರಮೊಗ್ಗು
- ಮರಾಠಿ ಮೊಗ್ಗು
- ಈರುಳ್ಳಿ - 1
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 tbs
- ಉಪ್ಪು
- ಕೊತ್ತಂಬರಿ ಸೊಪ್ಪು
- ಗೋಡಂಬಿ
- ಒಣ ದ್ರಾಕ್ಷಿ
ಗೀ ರೈಸ್ ಮಾಡುವುದು ಹೇಗೆ?
ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಕಿ, ಬಳಿಕ ಅದಕ್ಕೆ ಗೋಡಂಬಿ, ದ್ರಾಕ್ಷಿ, ಹಾಕಿಕೊಂಡು ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಬಳಿಕಿ ಇದಕ್ಕೆ ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಚಕ್ರಮೊಗ್ಗು, ಚಕ್ಕೆ, ಸೋಂಕಾಳು, ಮರಾಠಿ ಮೊಗ್ಗು, ಏಳಕ್ಕಿ, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿ.
ಬಳಿಕ ಇದಕ್ಕೆ ಈರುಳ್ಳಿ ಹಾಕಿಕೊಳ್ಳಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿಕೊಂಡು ನೀರು ಹಾಕಿಕೊಳ್ಳಿ. ಯಾವ ಗ್ಲಾಸ್ನಲ್ಲಿ ಅಕ್ಕಿ ತೆಗೆದುಕೊಳ್ಳುತ್ತಿರೋ ಅದೆ ಗ್ಲಾಸ್ನಲ್ಲಿ ಒಂದೂವರೆ ಗ್ಲಾಸ್ ನೀರು ಹಾಕಿ. ಬಳಿಕ ಇದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ತೊಳೆದು ನೆನೆಸಿಟ್ಟ ಅಕ್ಕಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಮನೆ ಬಳಕೆಯ ಅಕ್ಕಿಯನ್ನೇ ಬಳಸಬಹುದು. ಇದಕ್ಕೆ ಹಸಿ ಬಟಾಣೀ ಸಹ ಸೇರಿಸಿಕೊಳ್ಳಬಹುದು. ಈಗ ಕುಕ್ಕರ್ ಮುಚ್ಚಳ ಹಾಕಿ 2 ಸೀಟಿ ಹೊಡೆಯಲು ಬಿಡಿ.
ಎರಡು ಸೀಟಿ ಹೊಡೆದ ಬಳಿಕ ಅದರ ಮುಚ್ಚಳ ತೆಗೆದು ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗು ಫ್ರೈ ಮಾಡಿಕೊಂಡ ಗೋಡಂಬಿ, ದ್ರಾಕ್ಷಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಗೀ ರೈಸ್ ಸವಿಯಲು ಸಿದ್ಧವಾಗುತ್ತದೆ. ಇದಕ್ಕೆ ಮೊಸರು ಬಜ್ಜಿಗಿಂತಲೂ ತರಕಾರಿ ಕುರ್ಮಾ ಮಾಡಿದರೆ ಇದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.



Click it and Unblock the Notifications
