Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಖ್ಯಾಶಾಸ್ತ್ರ ಪ್ರಕಾರ ಸೆಪ್ಟೆಂಬರ್ ತಿಂಗಳ ಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಸೆಪ್ಟೆಂಬರ್ ತಿಂಗಳು ನಿಮ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ:
ನಿಮ್ಮ ಜನದಿನಾಂಕಕ್ಕೆ ತಕ್ಕಂತೆ ನಿಮ್ಮ ಸಂಖ್ಯೆ ಯಾವುದೆಂದು ತಿಳಿಯಬಹುದು. ಉದಾಹರಣೆ ನೀವು ಯಾವುದೇ ತಿಂಗಳಿನ 12ರಂದು ಜನಿಸಿದರೆ ನಿಮ್ಮ ಸಂಖ್ಯೆ 3 (2+1) ಆಗಿರುತ್ತದೆ.

ಸಂಖ್ಯೆ 1
ಈ ತಿಂಗಳಿನಲ್ಲಿ ಅನೇಕ ಹೊಸ ಅನುಭವಗಳು ನಿಮಗಾಗಲಿದೆ, ವೃತ್ತಿ ಜೀವನದಲ್ಲಿ ಮತ್ತಷ್ಟು ಶ್ರಮವಹಿಸಿ ಕೆಲಸ ಮಾಡುತ್ತೀರಿ, ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ. ಈ ಸೆಪ್ಟೆಂಬರ್‌ನಲ್ಲಿ ಏನೋ ಹೊಸದನ್ನು ಟ್ರೈ ಮಾಡಲು ಬಯಸುತ್ತೀರಿ.
ಸಂಖ್ಯೆ 2
ಈ ತಿಂಗಳು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ತುಂಬಾ ಚೆನ್ನಾಗಿರಲಿದೆ. ನೀವು ಸಂಬಂಧದಲ್ಲಿ ಸಮತೋಲನ ಕಾಪಾಡಲು ನೀವು ನಿಮ್ಮ ಸಂಗಾತಿಯ ಭಾವನೆ ಕಡೆ ಮನಹರಿಸಿ. ಹೊಸ ಪ್ರಾಜೆಕ್ಟ್ ಪ್ರಾರಂಭಿಸಲು ಈ ತಿಂಗಳು ಚೆನ್ನಾಗಿರಲಿದೆ.
ಸಂಖ್ಯೆ 3
ಈ ತಿಂಗಳು ನಿಮಗೆ ಅತ್ಯುತ್ತಮವಾಗಿದೆ. ಈ ಅವಧಿಯಲ್ಲಿ ಹೊಸ ಫ್ರೆಂಡ್ಸ್ ಸಿಗಲಿದ್ದಾರೆ, ಈ ತಿಂಗಳು ತುಂಬಾ ಖುಷಿಯಾಗಿ ಸಮಯ ಕಳೆಯುತ್ತೀರಿ. ನಿಮ್ಮ ಕೌಶಲ್ಯದ ಕಡೆ ಹೆಚ್ಚು ಗಮನ ನೀಡುತ್ತಾರೆ.
ಸಂಖ್ಯೆ 4
ಈ ಅವಧಿಯಲ್ಲಿ ನೀವು ತುಂಬಾ ಪ್ರಾಕ್ಟಿಕಲ್ ಆಗಿರುತ್ತೀರಿ, ನಿಮ್ಮ ಕೆಲಸ ಕಾರ್ಯಗಳಲ್ಲಿ ತುಂಬಾ ಗಮನ ಕೊಡುತ್ತೀರಿ. ಸಂಬಂಧದ ವಿಷಯದಲ್ಲಿ ಈ ತಿಂಗಳು ನಿಮಗೆ ಚೆನ್ನಾಗಿರಲಿದೆ. ನೀವು ಕ್ರಿಯೇಟಿವ್ ಕ್ಷೇತ್ರದಲ್ಲಿದ್ದರೆ ಉತ್ತಮ ಲಾಭ ಪಡೆಯುವಿರಿ.
ಸಂಖ್ಯೆ 5
ಸೆಪ್ಟೆಂಬರ್ ತಿಂಗಳು ನಿಮಗೆ ಉತ್ತಮವಾಗಿದೆ. ಈ ತಿಂಗಳಿನಲ್ಲಿ ಯಾರಿಗಾದರೂ ಸಹಾಯ ಮಾಡಲು ಅವಕಾಶ ಸಿಕ್ಕರೆ ಮಾಡಿ. ಕುಟುಂಬ ಜೀವನ ಚೆನ್ನಾಗಿರಲಿದೆ, ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ.
ಸಂಖ್ಯೆ 6
ಈ ಅವಧಿಯಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ದೊರೆಯಲಿದೆ. ಈ ಅವಧಿಯಲ್ಲಿ ಸಂಸಾರದಲ್ಲಿ ಕೆಲ ಸಮಸ್ಯೆಗಳಿರಬಹುದು, ಆದರೆ ನೀವು ಪರಸ್ಪರ ನಂಬಿಕೆ ಇಡುವುದು ಒಳ್ಳೆಯದು. ಅನಗ್ಯತ ರಿಸ್ಕ್ ತೆಗೆದುಕೊಳ್ಳಬೇಡಿ.
ಸಂಖ್ಯೆ 7
ಈ ತಿಂಗಳಿನಲ್ಲಿ ನಿಮ್ಮ ಪ್ರೀತಿಯ ವ್ಯಕ್ತಿ ಜೊತೆಗೆ ಖುಷಿಯಿಂದ ಸಮಯ ಕಳೆಯುವಿರಿ. ಈ ಹಿಂದೆ ಆರ್ಥಿಕ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಬಗೆಹರಿಯಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನೀವು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
ಸಂಖ್ಯೆ 8
ಈ ಅವಧಿಯಲ್ಲಿ ನಿಮಗೆ ಮನೆಯವರ ಸಹಕಾರ ಸಿಗಲಿದೆ, ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ನೀವು ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ಸಂಖ್ಯೆ 9
ಉದ್ಯೋಗಿಗಳಿಗೆ ಈ ಅವಧಿ ನಿಮಗೆ ತುಂಬಾ ಚೆನ್ನಾಗಿರಲಿದೆ, ನಿಮ್ಮ ಕೆಲಸದಲ್ಲಿ ಧನಾತ್ಮಕ ಬದಲಾವಣೆ ಕಂಡು ಬರಲಿದೆ. ಯಾವುದೇ ಸಮಯದಲ್ಲಿ ನೀವು ನಂಬಿಕೆ ಕಳೆದುಕೊಳ್ಳಬೇಡಿ, ಇದರಿಂದ ನಿಮಗೆ ಒಳಿತಾಗಲಿದೆ. ವಿವಾಹವಾಗಲು ಬಯಸುವವರಿಗೆ ಈ ಅವಧಿ ಉತ್ತಮವಾಗಿದೆ.



Click it and Unblock the Notifications
