Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ: ಜೂನ್15-25ರವರೆಗಿನ ವಾರ ಭವಿಷ್ಯ ಹೇಗಿರಲಿದೆ ನೋಡಿ
ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದಲ್ಲಿ 1-9 ಸಂಖ್ಯೆಗಳು ಬರುವುದು, ಉದಾಹರಣೆಗೆ ನಿಮ್ಮ ದಿನಾಂಕ 10 ಆದರೆ ನಿಮ್ಮ ಸಂಖ್ಯೆ 1+0=1 ಆಗಿದೆ. ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ದಿನಾಂಕಕ್ಕೆ ಅನುಸಾರ ಜೂನ್ 19-25ರವರೆಗಿನ ವಾರ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಸಂಖ್ಯೆ 1(ಜನ್ಮ ದಿನಾಂಕ 1, 10, 19, 28)
ಈ ವಾರ ಅನೇಕ ಅವಕಾಶಗಳು ನಿಮಗಾಗಿ ಕಾದಿದೆ. ನೀವು ನಿಮ್ಮ ಸಾಮರ್ಥ್ಯದ ಕಡೆಗೆ ಗಮನ ಹರಿಸಿದರೆ ತುಂಬಾ ಒಳ್ಳೆಯದು. ನೀವು ನಿಮ್ಮ ಕೆಲಸವನ್ನು ಸಾಕಷ್ಟು ಶ್ರಮವಹಿಸಿ ಮಾಡಿದರೆ ಖಂಡಿತ ಫಲ ಸಿಗಲಿದೆ. ಉದ್ಯಮಿಗಳಿಗೂ ಈ ವಾರ ಲಾಭದಾಯಕವಾಗಿದೆ. ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಉಳಿತಾಯ ಮಾಡಲು ಸಾಧ್ಯವಾಗುವುದು.

ಸಂಖ್ಯೆ 2(ಜನ್ಮ ದಿನಾಂಕ 2, 11, 20, 29 )
ಈ ವಾರ ನಿಮಗೆ ಅದ್ಭುತವಾಗಿರಲಿದೆ. ಈ ವಾರ ನಿಮ್ಮ ವೈಯಕ್ತಿಕ ಜೀವನ ಉತ್ತಮಪಡಿಸಲು ಒಳ್ಳೆಯ ಅವಕಾಶ ಸಿಗಲಿದೆ. ಇದನ್ನು ಚೆನ್ನಾಗಿ ಬಳಸಿಕೊಳ್ಳಿ, ಇಲ್ಲದಿದ್ದರೆ ಪಶ್ಚಾತಾಪ ಪಡಬೇಕಾಗುತ್ತದೆ. ವೃತ್ತಿ ಜೀವನ ತುಂಬಾ ಚೆನ್ನಾಗಿರಲಿದೆ. ಏನಾದರೂ ಹೊಸ ಕೆಲಸಕ್ಕೂ ಈ ಅವಧಿ ಶುಭವಾಗಿದೆ. ಬಾಕಿಯುಳಿದ ಕೆಲಸವನ್ನು ಪೂರ್ಣಗೊಳಿಸಲು ಗಮನಹರಿಸಿ. ಕೆಲಸದ ಜಾಗದಲ್ಲಿ ಏನಾದರೂ ಸಮಸ್ಯೆಯಿದ್ದರೆ ಮೇಲಾಧಿಕಾರಿ ಜೊತೆ ಮಾತನಾಡಿದರೆ ಪರಿಹಾರವಾಗಲಿದೆ.
ಸಂಖ್ಯೆ 3(ಜನ್ಮ ಸಂಖ್ಯೆ 3, 12, 21, 30 )
ಈ ವಾರ ನೀವು ಯಾರ ಜೊತೆಯಾದರೂ ಮಾತನಾಡುವಾಗ ತುಂಬಾನೇ ಎಚ್ಚರವಹಿಸಬೇಕು, ನಿಮ್ಮ ಮಾತುಗಳು ಇತರರನ್ನು ನೋಯಿಸಿದಂತೆ ಮಾತನಾಡಿ. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಬೆಂಬಲ ಸಿಗಲಿದೆ, ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರಲಿದೆ. ವೃತ್ತಿ ಜೀವನ ಕೂಡ ಚೆನ್ನಾಗಿರಲಿದೆ. ನಿಮ್ಮ ಕೌಶಲ್ಯದಿಂದ ಒಳ್ಳೆಯ ಅವಕಾಶಗಳು ಸಿಗಲಿದೆ.
ಸಂಖ್ಯೆ 4(ಜನ್ಮ ಸಂಖ್ಯೆ4, 13, 22, 31)
ಈ ವಾರ ಕೆಲ ಸವಾಲುಗಳು ಎದುರಾಗುವುದು, ಆದರೆ ಅದನ್ನು ನೀವು ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ಕುಟುಂಬದವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅವರ ಸಲಹೆಗಳನ್ನು ಗೌರವಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬಹುದು. ಕೆಲಸದ ಜಾಗದಲ್ಲಿ ಸಹೋದ್ಯೋಗಿಗಳ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿ. ಹೂಡಿಕೆಗೆ ಈ ಸಮಯ ಸೂಕ್ತವಾಗಿದೆ.
ಸಂಖ್ಯೆ 5( ಜನ್ಮ ಸಂಖ್ಯೆ 5, 14, 23 )
ನಿಮ್ಮ ಬದುಕಿನಲ್ಲಿರುವ ಸವಾಲುಗಳು ಸಮರ್ಥವಾಗಿ ಎದುರಿಸುತ್ತೀರಿ, ನಿಮ್ಮ ಮನೆಯವರು, ಆಪ್ತರು ಕೂಡ ಸಹಾಯ ಮಾಡುತ್ತಾರೆ. ನೀವು ಕುಟುಂಬದ ಜೊತೆಗೆ ಟ್ರಿಪ್ ಕೂಡ ಪ್ಲ್ಯಾನ್ ಮಾಡಬಹುದು. ಕನ್‌ಸ್ಟ್ರಕ್ಷನ್ ವ್ಯವಹಾರ ಮಾಡುತ್ತಿರುವವರಿಗೆ ಈ ಸಮಯ ಉತ್ತಮವಾಗಿದೆ, ಕೆಲಸದ ಜಾಗದಲ್ಲಿ ಉದ್ಯೋಗಿಗಳು ಅಧಿಕಶ್ರಮವಹಿಸಿ ಕೆಲಸ ಮಾಡಬೇಕಾಗಿದೆ.
ಸಂಖ್ಯೆ 6(6, 15, 24 )
ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಲು ಕಷ್ಟವಾಗಬಹುದು, ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ವೈವಯಕ್ತಿಕ ಬದುಕಿನಲ್ಲಿ ತಪ್ಪು ಕಲ್ಪನೆಗಳಿಂದ ಸಮಸ್ಯೆ ಹೆಚ್ಚಾಗುವುದು. ವೃತ್ತಿ ಜೀವನದಲ್ಲಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಸಮಯ ಸೂಕ್ತವಾಗಿದೆ. ಆದರೆ ನಿಮ್ಮ ಸಹೋದ್ಯೋಗಿಗಳು ನಿಮಗೆ ತೊಂದರೆಯನ್ನುಂಟು ಮಾಡಬಹುದು, ಈ ಬಗ್ಗೆ ಜಾಗ್ರತೆವಹಿಸಿ.
ಸಂಖ್ಯೆ 7( 7, 16, 25 )
ನಿಮಗೆ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗುವುದರಿಂದ ತೃಪ್ತಿ ಇರಲಿದೆ. ನೀವು ಇದೇ ರೀತಿ ನಿಮ್ಮ ಕೆಲಸದಲ್ಲಿ ಮುಂದುವರೆಯಿರಿ, ಪ್ರಗತಿ ಸಿಗಲಿದೆ. ಹೊಸ ಮನೆಗೆ ಹೋಗಲು ಈ ಸಮಯ ಒಳ್ಳೆಯದಿದೆ. ವೃತ್ತಿ ಬದುಕಿನಲ್ಲಿ ಯಾವುದೇ ಶಾರ್ಟ್‌ಕಟ್ ಅನುಸರಿಸಬೇಡಿ. ಖರ್ಚಿನ ಬಗ್ಗೆ ಸ್ವಲ್ಪ ಗಮನಹರಿಸಿ, ಬಜೆಟ್‌ಗಿಂತ ಅಧಿಕ ಖರ್ಚು ಮಾಡಬೇಡಿ.
ಸಂಖ್ಯೆ 8 (8, 17, 26)
ಈ ವಾರ ವೈಯಕ್ತಿಕ ತುಂಬಾ ಚೆನ್ನಾಗಿರಲಿದೆ. ನೀವು ಕುಟುಂಬದ ಜೊತೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ವೃತ್ತಿ ಜೀವನದಲ್ಲೂ ಪ್ರಗತಿ ಕಾಣಲಿದೆ. ಕೆಲಸದಲ್ಲಿನ ನಿಮ್ಮ ನಿಯತ್ತು ಮೇಲಾಧಿಕಾರಿಗಳ ಗಮನ ಸೆಳೆಯುವುದರಿಂದ ವೃತ್ತಿ ಜೀವನದಲ್ಲಿ ಬಡ್ತಿ ಕೂಡ ಸಿಗಬಹುದು. ಒಟ್ಟಿನಲ್ಲಿ ಈ ವಾರ ನಿಮಗೆ ಅನುಕೂಲಕರವಾಗಿದೆ.
ಸಂಖ್ಯೆ 9 ( 9, 18, 27)
ನೀವು ಸರಿಯಾದ ಪ್ರಾರಂಭಕ್ಕಾಗಿ ಸ್ವಲ್ಪ ತಾಳ್ಮೆಯಿಂದ ಕಾಯಬೇಕಾಗಿದೆ. ಬಾಕಿಯುಳಿದಿರುವ ಕೆಲಸವನ್ನು ಪೂರ್ಣಗೊಳಿಸುವತ್ತ ಗಮನಹರಿಸಿ. ವೃತ್ತಿ ಜೀವನದ ಕಡೆಗೆ ತುಂಬಾನೇ ಗಮನಹರಿಸಿದರೆ ಪ್ರಗತಿ ಸಿಗಲಿದೆ. ಬಟ್ಟೆ ವ್ಯವಹಾರ ಮಾಡುತ್ತಿರುವವರಿಗೆ ಈ ಅ ವಾರ ಅನುಕೂಲಕರವಾಗಿದೆ. ಕುಟುಂಬದಲ್ಲಿ ಬಾಂಧವ್ಯ ಗಟ್ಟಿಯಾಗಿಸುವತ್ತ ನೀವು ಗಮನಹರಿಸಬೇಕಾಗಿದೆ.



Click it and Unblock the Notifications