Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಂಖ್ಯಾಶಾಸ್ತ್ರ ಪ್ರಕಾರ ಜುಲೈ 9-15ರವರೆಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ದಿನಾಂಕಕ್ಕೆ ಅನುಸಾರ ಜುಲೈ 9-15ರವರೆಗಿನ ಸಾಪ್ತಾಹಿಕ ಭವಿಷ್ಯ ನೀಡಲಾಗಿದ್ದು ನಿಮ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದಲ್ಲಿ 1-9 ಸಂಖ್ಯೆಗಳು ಬರುವುದು, ಉದಾಹರಣೆಗೆ ನಿಮ್ಮ ದಿನಾಂಕ 10 ಆದರೆ ನಿಮ್ಮ ಸಂಖ್ಯೆ 1+0=1 ಆಗಿದೆ.
ಸಂಖ್ಯೆ 1
ಈ ವಾರ ನಿಮ್ಮ ವೃತ್ತಿ ಬದುಕಿನಲ್ಲಿ ಸ್ಪರ್ಧೆ ಹೆಚ್ಚಿರಲಿದೆ, ಈ ಸಮಯದಲ್ಲಿ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ. ಇನ್ನು ಸಂಬಂಧದಲ್ಲೂ ಕೆಲವು ರೀತಿಯ ಭಿನ್ನಾಭಿಪ್ರಾಯ ಎದುರಿಸಬೇಕಾಗುವುದು. ಈ ಸಮಯದಲ್ಲಿ ನೀವು ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿ, ಅಲ್ಲದೆ ನೀವಾಡುವ ಮಾತುಗಳ ಕಡೆ ತುಂಬಾನೇ ಗಮನವಿರಲಿ, ನಿಮ್ಮ ಮಾತುಗಳಿಂದ ಸಂಬಂಧ ಮತ್ತಷ್ಟು ಹಾಳಾಗಬಹುದು ಜೋಕೆ!

ಸಂಖ್ಯೆ 2
ವಾರ ನಿಮಗೆ ಒಳ್ಳೆಯದಿದೆ, ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ, ನಿಮ್ಮ ಸಂಗಾತಿಯೊಂದಿಗೆ ಖುಷಿಯಾಗಿ ಇರುತ್ತೀರಿ. ಆದರೆ ಆರ್ಥಿಕ ವಿಷಯದಲ್ಲಿ ದುರ್ಬಲವಾಗಿರುವುದರಿಂದ ಈ ವಾರ ಜಾಗ್ರತೆವಹಿಸಬೇಕಾಗಿದೆ. ಈಗ ಎದುರಾಗಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೆ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ದೊರೆಯಲಿದೆ.
ಸಂಖ್ಯೆ 3
ಈ ವಾರ ನಿಮಗೆ ಅದೃಷ್ಟದ ವಾರವಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗಲಿದೆ. ನೀವು ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಸಿಗಲಿದೆ, ಬಡ್ತಿ ಕೂಡ ಸಿಗಲಿದೆ. ನಿಮ್ಮ ಕಾರ್ಯಗಳಿಗೆ ಕುಟುಂಬದವರ ಬೆಂಬಲ ಇರಲಿದೆ. ಇನ್ನು ಆರೋಗ್ಯ ಸಮಸ್ಯೆ ಇರುವವರೆಗೆ ಸುಧಾರಣೆಯಾಗಲಿದೆ, ಉಳಿದವರಿಗೆ ಆರೋಗ್ಯ ಚೆನ್ನಾಗಿರಲಿದೆ.
ಸಂಖ್ಯೆ 4
ಈ ವಾರ ನಿಮ್ಮ ಕೆಲಸ ಹಾಗೂ ಲೆಕ್ಕಚಾರದ ಕಡೆಗೆ ಗಮನಹರಿಸುವುದು ಒಳ್ಳೆಯದು. ಈ ವಾರ ನೀವು ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನಿಸಿದರೆ ಒಳ್ಳೆಯದು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಮನಸ್ಥಿತಿಯಲ್ಲಿ ತೆಗೆದುಕೊಳ್ಳಬೇಡಿ, ನಿಮ್ಮ ನಿರ್ಧಾರ ಸ್ಪಷ್ಟವಾಗಿರಲಿ.
ಸಂಖ್ಯೆ 5
ಈ ವಾರ ನೀವು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ನಿಮ್ಮ ಭವಿಷ್ಯದ ಕುರಿತ ಇರುವ ಗೊಂದಲ ಪರಿಹಾರವಾಗಲಿದೆ, ಆದರೆ ನೀವು ಅತಿಯಾಗಿ ಆಲೋಚಿಸಲು ಹೋಗಬೇಡಿ, ಹಾಗೆ ಮಾಡಿದರೆ ಮತ್ತೆ ಗೊಂದಲ ಉಂಟಾಗಬಹುದು. ಆದ್ದರಿಂದ ಹಾಗೆ ಮಾಡಲು ಹೋಗಬೇಡಿ, ಉಳಿದಂತೆ ಈ ವಾರ ನಿಮಗೆ ಚೆನ್ನಾಗಿರಲಿದೆ.
ಸಂಖ್ಯೆ 6
ಹಳೆಯದನ್ನು ಮರೆತು ಆಗಬೇಕಾಗಿರುವ ವಿಷಯದ ಕಡೆಗೆ ಗಮನಹರಿಸಿ, ಭವಿಷ್ಯವನ್ನು ಧನಾತ್ಮವಾಗಿ ನೋಡಿ. ಈ ವಾರ ನಿಮ್ಮ ಕರ್ಮದ ಫಲ ಪಡೆಯುವಿರಿ, ಈ ಹಿಂದೆ ಒಳ್ಳೆಯದು ಮಾಡಿದರೆ ಒಳ್ಳೆಯದಾಗಲಿದೆ, ಕೆಡಕು ಮಾಡಿದರೆ ಅದರ ಪ್ರಭಾವ ಎದುರಿಸಬೇಕಾಗುತ್ತದೆ.
ಸಂಖ್ಯೆ 7
ಈ ವಾರ ನಿಮಗೆ ಒಳ್ಳೆಯದಿದೆ, ಈ ವಾರ ನಿಮ್ಮ ಬದುಕಿನಲ್ಲಿ ಚಮತ್ಕಾರ ನಡೆಯಲಿದೆ. ಸಂಬಂಧ, ವೃತ್ತಿ ಜೀವನ, ಆರೋಗ್ಯ ಹೀಗೆ ಯಾವುದೋ ಒಂದು ವಿಷಯದಲ್ಲಿ ನೀವು ಊಹಿಸದೇ ಇರುವ ಚಮತ್ಕಾರ ನಡೆಯಲಿದೆ. ನಿಮ್ಮ ಜೀವನದಲ್ಲಿರುವ ಸಮಸ್ಯೆ ಕೊನೆಗೊಳ್ಳಲಿದೆ. ಈ ವಾರ ಆರ್ಥಿಕವಾಗಿ ಒಳ್ಳೆಯದಿದೆ.
ಸಂಖ್ಯೆ 8
ಈ ವಾರ ನಿಮ್ಮ ಆಸೆ ಈಡೇರಲಿದೆ. ಈ ವಾರ ನಿಮಗೆ ಧನಾತ್ಮಕವಾಗಿರಲಿದೆ. ವಿವಾಹಿತ ವೈವಾಹಿಕ ಜೀವನ ಮತ್ತಷ್ಟು ಗಟ್ಟಿಯಾಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ದೊರೆಯಲಿದೆ. ವಿದ್ಯಾರ್ಥಿಗಳಿಗೂಈ ಅವಧಿ ಅನುಕೂಲಕರವಾಗಿರಲಿದೆ.
ಸಂಖ್ಯೆ 9
ಈ ವಾರ ನಿಮಗೆ ಸಾಧಾರಣವಾಗಿರಲಿದೆ, ನಿಮಗೆ ಒಂಟಿತನ ಕಾಡಬಹುದು, ಭಾವನಾತ್ಮಕವಾಗಿ ದುರ್ಬಲವಾಗಿರುವಿರಿ. ಈ ವಾರ ನೀವು ಅಗ್ಯತ ಇರುವವರಿಗೆ ಅಗ್ಯತ ವಸ್ತುಗಳು ನೀವು ಹಾಲು ದಾನ ಮಾಡಿ.



Click it and Unblock the Notifications
