Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ವಸಂತ ಋತುವಿನಲ್ಲಿ ಪಿಂಕ್ ಹೂವುಗಳ ಮನಸೂರೆಗೊಳ್ಳುವ ಸೌಂದರ್ಯದಲ್ಲಿ ಮಿಂಚುವ ನಮ್ಮ ಬೆಂಗಳೂರು
ಬೆಂಗಳೂರಿನಲ್ಲಿರುವವರೆಗೆ ರಸ್ತೆ ಬದಿಯಲ್ಲಿ ಹೋಗುತ್ತಿರುವ ಕಣ್ಮನ ಸೆಳೆಯುತ್ತಿದೆ ಪಿಂಕ್ ಹೂವುಗಳು. ಈ ಹೂಗಳ ಸೌಂದರ್ಯದಲ್ಲ ನಿಂತು ಫೋಟೋ ತೆಗಿಸಿಕೊಂಡರೆ ನಮ್ಮ ಬೆಂಗಳೂರು ಎಷ್ಟೊಂದು ಸುಂದರವಾಗಿ ಕಾಣುತ್ತೆ ಎಂದರೆ ಕವಿಗಳ ಕಂಡರೆ ಕವಿತೆಗಳ ಸಾಲೇ ಬರೆಯುತ್ತಾರೆ.
ಪ್ರೇಮಿಗಳು ಕಂಡರೆ ಆ ಪ್ರಕೃತಿ ಸೌಂದರ್ಯದಲ್ಲಿ ಕೈ ಕೈ ಹಿಡಿದು ರೊಮ್ಯಾಂಟಿಕ್ ಹೆಜ್ಜೆ ಹಾಕುತ್ತಾರೆ. ಪ್ರಕೃತಿಯ ಆರಾಧಕರು ಆ ಸೌಂದರ್ಯವನ್ನು ಮೌನವಾಗಿ ಕಣ್ತುಂಬಿಕೊಳ್ಳುತ್ತಾರೆ, ಅಷ್ಟೊಂದು ಸುಂದರಬವಾಗಿರುತ್ತದೆ ಈ ಹೂವುಗಳ ಸೊಬಗು.

ಪಿಂಕ್ ಸೌಂದರ್ಯದ ಖನಿಯಾಗುವ ನಮ್ಮ ಬೆಂಗಳೂರು
ಈ ಫೆಬ್ರವರಿಯಿಂದ ಏಪ್ರಿಲ್ ನಡುವೆ ಈ ಹೂಗಳು ಬಿಡುತ್ತವೆ, ಈ ಸಮಯದಲ್ಲಿ ಬೆಂಗಳೂರನ್ನು ನೋಡಿದರೆ ಗಾರ್ಡನ್ ಸಿಟಿ ಪಿಂಕ್ ಫ್ಲವರ್ ಸಿಟಿಯಾಗಿರುತ್ತದೆ. ಇದನ್ನು ಪಿಂಕ್ ಟ್ರಂಪೆಟ್ ಹೂವುಗಳೆಂದು ಕರೆಯುತ್ತಾರೆ.
ಈ ಪಿಂಕ್ ಹೂವಿನ ಇತಿಹಾಸವೇನು?
ಇದನ್ನು ಜಪಾನ್‌ನ ಸಕುರಾ ಚೆರ್ರಿ ಹೂವುಗಳೆಂದು ಕೆಲವರು ಹೇಳುತ್ತಾರೆ, ಆದರೆ ಅದು ತಪ್ಪು ಕಲ್ಪನೆ, ಈ ಹೂವುಗಳು ದಕ್ಷಿಣ ಅಮೆರಿಕಾದ ಟಬೆಬುಯಾದಿಂದ ಬಂದಿದೆ.
ಸ್ವರ್ಗದಂತೆ ಬದಲಾಗುವ ಜಯನಗರ 4ನೇ ಬ್ಲಾಕ್
ಬೆಂಗಳೂರಿನ ಪ್ರಮುಖ ಶಾಪಿಂಗ್ ಅಡ್ಡಗಳಲ್ಲೊಂದು ಜಯನಗರ 4ನೇ ಬ್ಲಾಕ್, ಕಾಂಪ್ಲೆಕ್ಸ್, ಮಾಲ್‌ಗಳಿಂದ ಈ ಸ್ಥಳ ಯಾವಾಗಲೂ ಜನರಿಂದ ಕಿಕ್ಕಿರಿದಿರುತ್ತದೆ, ಅದರಲ್ಲೂ ಈ ಹೂವು ಬಿಡುವ ಸಮಯದಲ್ಲಿ ಹೂವಿನ ಸೌಂದರ್ಯ ನೋಡಿ ಆಸ್ವಾದಿಸಲು ಬೆಂಗಳೂರಿನ ಇತರ ಭಾಗದಿಂದ ಇಲ್ಲಿಗೆ ಬರುತ್ತಾರೆ. ಇನ್ನು ಕಬ್ಬನ್‌ಪಾರ್ಕ್, ಬೆನ್ನಿಗಾನಹಳ್ಳಿಕೆರೆ ಬಳಿಯಲ್ಲೂ ಈ ಹೂವುಗಳು ತುಂಬಾನೇ ಕಂಡುಬರುತ್ತದೆ.
ಈ ಸುಂದರ ಹೂವುಗಳ ಗಿಡವನ್ನು ಬೆಂಗಳೂರಿಗೆ ತಂದವರು ಯಾರು?
ಈ ಹೂವಿನ ಸೌಂದರ್ಯ ಸಾಧ್ಯವಾಗಿದ್ದು ಜಿ.ಎಚ್.ಕೃಂಬಿಗಲ್ ಎಂದು ಹೇಳಲಾಗುವುದು. ಅವರು ಈ ಟಬೆಬುಯಾ ರೋಸಿಯಾ ಹೂವಿನ ಗಿಡ ತಂದು ನೆಟ್ಟರು ಹೇಳಲಾಗುವುದು. ಜಿ.ಎಚ್.ಕೃಂಬಿಗಲ್ ಬೆಂಗಳೂರಿನ ಲಾಲ್ ಬಾಗ್ ಸಸ್ಯೋದ್ಯಾನದ ಕ್ಯುರೇಟರ್ ಆಗಿ ಸೇವೆ ಸಲ್ಲಿಸಿದ್ದರು. ಇವರ ನೆನಪಿಗೆ ರಾಷ್ಟ್ರೀಯ ವಿದ್ಯಾಶಾಲೆಯ ಮುಂದೆ ಸಾಗುವ ರಸ್ತೆಗೆ ಕೃಂಬಿಗಲ್ ರಸ್ತೆ ಎಂದು ಹೆಸರಿಡಲಾಗಿದೆ.
ಪಿಂಕ್ ಹೂ ಮಾತ್ರವಲ್ಲ ಹಳದಿ ಹೂವುಗಳು ಗಮನ ಸೆಳೆಯುತ್ತದೆ
ಕಕ್ಕೆ ಗಿಡ ಅಥವಾ ಬ್ಯಾಟೆ ಮರ ಎಂದು ಕರೆಯಲ್ಪಡುವ ಮರದಲ್ಲಿ ಹಳದಿ ಹೂವುಗಳು ಈ ಸಮಯದಲ್ಲಿ ಬಿಡುತ್ತದೆ. ಅದರಲ್ಲೂ ಏಪ್ರಿಲ್-ಮೇ ತಿಂಗಳಿನಲ್ಲಿ ಈ ಮರ ಪೂರ್ತಿ ಹಳದಿ ಹೂವುಗಳಿಂದ ಅಲಂಕೃತವಾಗಿರುತ್ತದೆ, ಹೊನ್ನಿನ ಬಣ್ಣದ ಹೂವುಗಳ ಸೌಂದರ್ಯ ತುಂಬಾ ಚೆನ್ನಾಗಿರುತ್ತದೆ, ಪಾರ್ಕ್‌ಗಳಲ್ಲಿ, ಕಬ್ಬನ್ ಪಾರ್ಕ್‌ನಲ್ಲಿ ಈ ಗಿಡಗಳು ತುಂಬಾನೇ ಇರುತ್ತದೆ.
ಗಾರ್ಡನ್ ಸಿಟಿ ಬೆಂಗಳೂರು
ಬೆಂಗಳೂರಿನ ಸೌಂದರ್ಯದ ಬಗ್ಗೆ ತಿಳಿಯಬೇಕೆಂದರೆ ಹಿಂದಿನ ಸಿನಿಮಾಗಳಲ್ಲಿ ಅಥವಾ ಫೋಟೋಗಳಲ್ಲಿ ನೋಡಬೇಕು, ಎಷ್ಟೊಂದು ಸುಂದರವಾಗಿದೆ, ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಂಗಳೂರಿನ ಸೌಂದರ್ಯ ನೋಡಿ ಬೆಂಗಳೂರಿಗೆ ಗಾರ್ಡನ್ ಸಿಟಿ ಎಂಬ ಹೆಸರು ಬಂದಿದೆ. ಇಲ್ಲಿ ಪ್ರತಿಯೊಂದು ಜಾಗದಲ್ಲಿಯೂ ನಿಮಗೆ ಪಾರ್ಕ್‌ಗಳು ಕಾಣಸಿಗುತ್ತದೆ, ಇಲ್ಲಿಯ ವಾತಾವರಣ ಕೂಡ ಆಹ್ಲಾದಕರವಾಗಿದೆ, ಹಾಗಾಗಿಯೇ ಇಲ್ಲಿಗೆ ಕೆಲಸ ಹುಡುಕಿಕೊಂದು ಬಂದವರು ಮತ್ತೆ ತಮ್ಮ ರಾಜ್ಯಕ್ಕೆ ಹೀಮತಿರುಗುವ ಮನಸ್ಸು ಮಾಡಲ್ಲ.
ಕಡಿಮೆಯಾಗುತ್ತಿದೆ ಬೆಂಗಳೂರಿನ ಹಸಿರು ಸೌಂದರ್ಯ
ಗಾರ್ಡನ್ ಸಿಟಿ ಈಗ ಕಾಂಕ್ರಿಟ್ ಸಿಟಿ ಆಗುತ್ತಿರುವುದರಿಂದ ಹಸಿರು ಕಡಿಮೆಯಾಗಿ ಬೃಹತ್ ಕಟ್ಟಡಗಳು ಹೆಚ್ಚಾಗುತ್ತಿವೆ, ಆದರೂ ಇಲ್ಲಿಯ ಕೆಲವೊಂದು ಕಡೆ ತನ್ನ ಪ್ರಕೃತಿ ಸೌಂದರ್ಯ ಉಳಿಸಿಕೊಂಡಿದೆ, ಅದಕ್ಕೆ ಸಾಕ್ಷಿ ಈ ಗಿಡಗಳು ಹಾಗೂ ವಸಂತ ಋತುವಿನಲ್ಲಿ ಬೆಂಗಳೂರು ನಗರ ಬದಲಾಗುವ ಪರಿ...



Click it and Unblock the Notifications
