Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನುಷ್ಯತ್ವ ಮರೆತ ಸ್ಟಾರ್‌ಗೆ ಜನರ ಟೀಕೆ, ಕೊನೆಗೂ ಎಚ್ಚೆತ್ತುಕೊಂಡ ನಾಗಾರ್ಜುನ: ಜನರೂ ಪಾಠ ಕಲಿಯಬೇಕಾಗಿದೆ
ಈವಾಗ ಈ ಸೋಷಿಯಲ್ ಮೀಡಿಯಾ ಮಾಧ್ಯಮದಂತೆಯೇ ತುಂಬಾನೇ ಪವರ್‌ಫುಲ್ ಆಗಿದೆ. ಕೆಲವೊಂದು ಘಟನೆಗಳಿಗೆ ಮಾದ್ಯಮಗಳಿಗಿಂತ ಹೆಚ್ಚಾಗಿಯೇ ರಿಯಾಕ್ಟ್ ಮಾಡುತ್ತದೆ. ಹಾಗಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಜನ ಸಾಮಾನ್ಯರಿಗೆ ಟೀಕೆಗಳಿಗೆ ಎಷ್ಟೇ ದೊಡ್ಡ ವ್ಯಕ್ತಿಯಾದ್ರೂ ಅವರಿಗೆ ಸರಿಯಾಗಿಯೇ ಬುದ್ಧಿ ಕಲಿಸುತ್ತದೆ, ಅದಕ್ಕೆ ಉದಾಹರಣೆಗೆ ತೆಲುಗಿನ ನಟ ನಾಗಾರ್ಜುನ ಅಕ್ಕಿನೇನಿಗೆ ನೆಟ್ಟಿಗರು ಕಲಿಸಿದ ಪಾಠ.

ಮಾನವೀಯತೆ ಇದ್ದರೆ ಮಾತ್ರ ದೊಡ್ಡ ವ್ಯಕ್ತಿಯಾಗಲು ಸಾಧ್ಯ?
ನಾಗಾರ್ಜುನ ಅಕ್ಕಿನೇನಿ ಅವರ ವರ್ತನೆ ನೋಡಿದವರಿಗೆ ಈ ಮನುಷ್ಯನಿಗೆ ಒಂದಿಷ್ಟು ಮಾನವೀಯತೆ ಇಲ್ವಾ ಎಂದು ಅನಿಸುವಂತಿದೆ ಆ ವೀಡಿಯೋ, ಏಕೆ ಜನ ಸುಮ್ಮನೆ ಇಂಥವರ ಜೊತೆ ಫೋಟೋ ತೆಗಿಸಿಕೊಳ್ಳಲು ಎದ್ದುಬಿದ್ದು ಬರುತ್ತಾರೆ, ನಮಗೆ ಗೌರವ ಸಿಗದ ಕಡೆಗೆ ಹೋಗಲೇಬಾರದು ಎಂಬುವುದು ಈ ಜನಕ್ಕೆ ಏಕೆ ಅರ್ಥವಾಗಲ್ಲ? ಈ ವೀಡಿಯೋ ನೋಡಿದಾಗ ಯಾರಿಗಾದರು ಸರಿ ಅಷ್ಟೊಂದು ಬೇಸರವಾಗುತ್ತೆ.
This just came to my notice … this shouldn’t have happened!!
— Nagarjuna Akkineni (@iamnagarjuna) June 23, 2024
I apologise to the gentleman 🙏and will take necessary precautions that it will not happen in the future !! https://t.co/d8bsIgxfI8
ಅಷ್ಟಕ್ಕೂ ಈ ಘಟನೆಯೇನು?
ನಾಗಾರ್ಜುನ ಏರ್‌ಪೋರ್ಟ್‌ನಿಂದ ಬರುವಾಗ ಅಲ್ಲಿ ರಸ್ಟೋರೆಂಟ್ ಅಥವಾ ಕೆಫೆಯಲ್ಲಿ ಕೆಲಸ ಮಾಡುತ್ತಿರುವವರು ಕಾಣುತ್ತೆ, ಅವರಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರು ನಾಗಾರ್ಜುನ ಬಳಿ ಬರಲು ನೋಡುತ್ತಾರೆ, ಅದನ್ನು ನೋಡಿ ಅವರ ಸೆಕ್ಯೂರಿಟಿ ಹಿಡಿದು ತಳ್ಳುತ್ತಾರೆ, ತಳ್ಳಿದ ರಭಸಕ್ಕೆ ಆ ವ್ಯಕ್ತಿ ಬೀಳುತ್ತಾರೆ, ಆದರೆ ಇದ್ಯಾವುದಕ್ಕೂ ನನಗೂ ಸಂಬಂಧವಿಲ್ಲ ಎಂದು ನಾಗಾರ್ಜುನ ಸೀದಾ ನಡೆದುಕಂಡು ಹೋಗುತ್ತಾರೆ, ಈ ವೀಡಿಯೋ ಹೊರ ಬರುತ್ತಿದ್ದಂತೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಟಾರ್‌ಗಳ ಈ ರೀತಿಯ ವರ್ತನೆ ನೋಡುವಾಗ ಪುನೀತ್ ರಾಜ್‌ಕುಮಾರ್‌ನಂಥ ನಟ ಮತ್ತೊಬ್ಬರಿಲ್ಲ ಎಂದು ಹೇಳುವುದು, ಎಲ್ಲಿಯೂ ಒಂದಿಷ್ಟೂ ಅಹಂನ ವರ್ತನೆ ತೋರುತ್ತಿರಲಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಾಕ ಟೀಕೆ
ಹೌದು ನಾಗಾರ್ಜುನ ಮಾಡಿದ್ದು ತುಂಬಾನೇ ತಪ್ಪು, ಒಬ್ಬ ವ್ಯಕ್ತಿ ಬೀಳುತ್ತಿದ್ದಾನೆ ಎಂದರೂ ಏನೂ ಗೊತ್ತಿಲ್ಲ ಎಂದು ಸುಮ್ಮನೆ ನಡೆಯುತ್ತಾರೆ, ಅಂಥ ಅಭಿಮಾನಿಗಳು ಇರುವುದಕ್ಕೇ ಅವರಿಗೆ ಇಂದು ಇಷ್ಟು ದೊಡ್ಡ ಪಟ್ಟ ಸಿಕ್ಕಿರುವುದು. ಅದನ್ನು ಮರೆತು ಯಾವ ನಟ-ನಟಿಯರು ನಡೆದುಕೊಳ್ಳಬಾರದು.
ಟೀಕೆಯಿಂದ ಎಚ್ಚೆತ್ತುಕೊಂಡ ಸ್ಟಾರ್
ಹೌದು ಎಲ್ಲಾ ಕಡೆ ವ್ಯಾಪಾಕ ಟೀಕೆ ಬರುತ್ತಿದ್ದಂತೆ ಈಗಷ್ಟೇ ನನ್ನ ಗಮನಕ್ಕೆ ಬಂತು, ಈ ರೀತಿ ಆಗಬಾರದಿತ್ತು, ಆ ಜಂಟಲ್‌ಮ್ಯಾನ್ ಬಳಿ ನನ್ನ ಕ್ಷಮೆ, ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆವಹಿಸಲಾಗುವುದು ಎಂದು ಬರೆದಿದ್ದಾರೆ.
This just came to my notice ... this shouldn't have happened!!
I apologise to the gentleman 🙏and will take necessary precautions that it will not happen in the future !!
ಸ್ಟಾರ್‌ಗಳನ್ನು ನೀವು ಮಾಡಿರುವುದು, ಅವರಿಗಾಗಿ ನೀವು ನಿಮ್ಮ ಗೌರವ ಕಳೆದುಕೊಳ್ಳಬೇಡಿ ಜನಗಳೇ...
ಒಬ್ಬ ವ್ಯಕ್ತಿ ಇಮದು ದೊಡ್ಡ ಸ್ಟಾರ್ ಆಗಿದ್ದಾನೆ ಎಂದರೆ ಸ್ಟಾರ್ ಮಾಡಿರುವುದು ಜನಗಳು. ಅವರು ನಿಮಗೆ ಕೃತಜ್ಞತೆ ತೋರಿಸಬೇಕು, ಬದಲಿಗೆ ತಾವು ದೇವಲೋಕದಿಂದ ಇಳಿದು ಬಂದಂತೆ ವರ್ತಿಸುತ್ತಿದ್ದರೆ ನಿರ್ಲಕ್ಷ್ಯ ಮಾಡಿ ಮುನ್ನಡೆಯಬೇಕು, ಆದರೆ ಸ್ಟಾರ್‌ಗಳು ಎಂದರೆ ಜನರು ಏಲಿಯನ್ ಕಂಡಂತೆ ಆಡುತ್ತಾರೆ. ನಮ್ಮಂಥ ಸಾಮಾನ್ಯ ಜನರು ಕೂಡ ತಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ, ನಮ್ಮನ್ನು ಗೌರವಿಸುವವರನ್ನು ನಾವು ಗೌರವಿಸೋಣ...



Click it and Unblock the Notifications