Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವೃಷಭ ರಾಶಿಗೆ ಬುಧ ಸಂಚಾರದಿಂದ ಬುಧಾದಿತ್ಯ ಯೋಗ: ಈ 3 ರಾಶಿಯವರ ಅದೃಷ್ಟವೇ ಬದಲಾಗಲಿದೆ
ಜೂನ್ 7ಕ್ಕೆ ಬುಧನು ವೃಷಭ ರಾಶಿಗೆ ಪ್ರವೇಶಿಸಲಿದೆ, ಈಗಾಗಲೇ ಸೂರ್ಯನು ವೃಷಭ ರಾಶಿಯಲ್ಲಿದೆ. ಇದೀಗ ಬುಧ ವೃಷಭ ರಾಶಿಯನ್ನು ಪ್ರವೇಶಿಸಿದಾಗ ಬುಧಾದಿತ್ಯ ಯೋಗ ಏರ್ಪಡಲಿದೆ. ಇದು ತುಂಬಾನೇ ಮಂಗಳಕರವಾಗಿದೆ. ಈ ತಿಂಗಳ ಮತ್ತೊಂದು ವಿಶೇಷವೆಂದರೆ ಎರಡು ಬಾರಿ ಬುಧಾದಿತ್ಯ ಯೋಗ ಏರ್ಪಡಲಿದೆ. ಜೂನ್ 15ಕ್ಕೆ ಸೂರ್ಯ ಮಿಥುನ ರಾಶಿಗೆ ಪ್ರವೇಶಿಸಲಿದೆ. ತಿಂಗಳ ಕೊನೆಯಲ್ಲಿ ಬುಧನು ಮಿಥುನ ರಾಶಿಗೆ ಪ್ರವೆಶಿಸಲಿದೆ. ಆಗಲೂ ಬುಧ ಆದಿತ್ಯ ಯೋಗ ಏರ್ಪಡಲಿದೆ.
ಬುಧಾದಿತ್ಯ ಯೋಗ
ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಹಾಗೂ ನಮ್ಮ ಬುದ್ಧಿ ಹಾಗೂ ಸಂವಹನದ ಮೇಲೆ ಪ್ರಭಾವ ಬೀರುವ ಬುಧನು ಒಂದೇ ರಾಶಿಯಲ್ಲಿ ಸಂಯೋಗವಾದಾಗ ಬುಧಾದಿತ್ಯ ಯೋಗ ಏರ್ಪಡುವುದು. ಈ ಯೋಗ ಕೆಲವೊಂದು ರಾಶಿಯವರ ಜೀವನದಲ್ಲಿ ತುಂಬಾನೇ ಒಳ್ಳೆಯ ಬದಲಾವಣೆ ತರಲಿದೆ. ಈ ಸಮಯದಲ್ಲಿ ಮಾಡುವ ಕಾರ್ಯಗಳು ತುಂಬಾನೇ ಫಲಪ್ರದವಾಗುವುದು. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ವೃಷಭದಲ್ಲಿ ಬುಧ - ಆದಿತ್ಯ ಯೋಗದಿಂದಾಗಿ ಈ ರಾಶಿಯವರಿಗೆ ತುಂಬಾನೇ ಶುಭವಾಗಿದೆ, ಈ ಅವಧಿ ಅದೃಷ್ಟದಿಂದ ಕೂಡಿದೆ:

ಕನ್ಯಾರಾಶಿ
ಕನ್ಯಾ ರಾಶಿಯವರಲ್ಲಿ 9ನೇ ಮನೆಯಲ್ಲಿ ಬುಧ-ಆದಿತ್ಯ ಯೋಗ ಏರ್ಪಟ್ಟಿದೆ. ಕನ್ಯಾರಾಶಿ ವೃಷಭ ರಾಶಿಯಲ್ಲಿ ಬುಧ ಸಂಕ್ರಮಣದಿಂದಾಗಿ ನಿಮ್ಮ ಆರ್ಥಿಕ ಆದಾಯ ಮತ್ತಷ್ಟು ಹೆಚ್ಚಾಗಲಿದೆ. ಈ ಅವಧಿಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು. ಯಾರಾದರೂ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಪ್ರಯತ್ನಿಸಿದರೆ ಫಲ ಸಿಗಲಿದೆ. ಸಮಾಜದಲ್ಲಿ ಸ್ಥಾನ ಮಾನ ಹೆಚ್ಚಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಕಾಣುವಿರಿ. ವ್ಯಾಪಾರಸ್ಥರು ಈ ಸಮಯದಲ್ಲಿ ಲಾಭವನ್ನು ಗಳಿಸಬಹುದು. ವಿದೇಶಕ್ಕೆ ಹೋಗಬೇಕೆಂದು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಅವಧಿಯಲ್ಲಿ ಅವಕಾಶಗಳು ದೊರೆಯಲಿದೆ. ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಪರಿಹಾರ: ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಪ್ರತಿದಿನ ಬುಧ ಬೀಜ ಮಂತ್ರ ಪಠಿಸಿ.
ಮಕರ ರಾಶಿ
ಮಕರ ರಾಶಿಯಲ್ಲಿ ಬುಧ 5ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಮಕರ ರಾಶಿಯವರು ಮಕರ ರಾಶಿಯವರು ಶುಭ ಫಲವನ್ನು ನಿರೀಕ್ಷಿಸಬಹುದು. ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗುವುದು. ವ್ಯಾಪಾರಸ್ಥರು ಉತ್ತಮ ಲಾಭ ಪಡೆಯುವ ಸಾಧ್ಯತೆಯಿದೆ.ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ಅದರಿಂದ ಲಾಭ ಪಡೆಯುವಿರಿ. ಹೊಸ ಉದ್ಯೋಗ ಅಥವಾ ಸ್ವಂತ ಉದ್ಯೋಗ ಮಾಡಲು ಈ ಸಮಯ ಉತ್ತಮವಾಗಿದೆ. ನಿರುದ್ಯೋಗಿಗಳು ಉದ್ಯೋಗ ಪಡೆಯಬಹುದು. ಈ ಅವಧಿಯಲ್ಲಿ ನಾಯಕತ್ವದ ಗುಣ ಹೆಚ್ಚಾಗಲಿದೆ, ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ಮತ್ತಷ್ಟು ಬೆಳವಣಿಗೆಯಾಗಲಿದೆ.
ಪರಿಹಾರ ಆದಿತ್ಯ ಹೃದಯ ಸ್ತೋತ್ರ ಪಠಿಸಿ, ಬುಧ ಬೀಜ ಮಂತ್ರ ಪಠಿಸಿ.
ಮೀನ ರಾಶಿ
ಮೀನ ರಾಶಿಯವರಲ್ಲಿ 3ನೇ ಮನೆಯಲ್ಲಿ ಬುಧ ಆದಿತ್ಯ ಯೋಗ ಏರ್ಪಟ್ಟಿದೆ. ಇದರಿಂದಾಗಿ ನಿರದ್ಯೋಗಿಗಳಿಗೆ ಉತ್ತಮ ಉದ್ಯೋಗ ಲಭ್ಯವಾಗಲಿದೆ. ಇನ್ನೂ ಈಗಾಗಲೇ ಉದ್ಯೋಗದಲ್ಲಿ ಇದ್ದವರಿಗೆ ಉದ್ಯೋಗದಲ್ಲಿ ಬಡ್ತಿ ಮತ್ತು ಸಂಭಳ ಹೆಚ್ಚಳವಾಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಉತ್ತಮ ಲಾಭ ಪಡೆಯಲಿದ್ದಾರೆ. ನಿಮ್ಮ ವ್ಯಾಪಾರದಲ್ಲಿ ತುಂಬಾನೇ ಲಾಭಗಳಿಸಲು ಸಾಧ್ಯವಾಗುವುದು. ಈ ಸಮಯ ವೃತ್ತಿ ಜೀವನಕ್ಕೆ ತುಂಬಾನೇ ಅನುಕೂಲಕರವಾಗಿದೆ. ನಿಮ್ಮ ವಿರುದ್ಧ ಯಾವುದೇ ಕಾನೂನು ಪ್ರಕರಣ ನಡೆಯುತ್ತಿದ್ದರೆ ಆ ಸಮಸ್ಯೆಯಿಂದ ಮುಕ್ರರಾಗುತ್ತೀರಿ. ವಿದ್ಯಾರ್ಥಿಗಳಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ.
ಪರಿಹಾರ: ಸೂರ್ಯನಿಗೆ ಪ್ರತಿದಿನ ಆರ್ಘ್ಯ ಅರ್ಪಿಸಿ.



Click it and Unblock the Notifications

