Latest Updates
-
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ?
ಪುರುಷರು ಈ 4 ವಿಷಯಗಳನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು: ಚಾಣಕ್ಯ ಹೇಳೋದೇನು?
ಚಾಣಕ್ಯ ತನ್ನ ಸಿದ್ದಾಂತ ಹಾಗೂ ಶಾಸ್ತ್ರಗಳ ಮೂಲಕ ವ್ಯಕ್ತಿಯ ಜೀವನದಲ್ಲಿನ ಬದಲಾವಣೆಗಳು, ಕಷ್ಟಗಳು, ಜೀವನ ನಡೆಸುವ ದಾರಿ ಸೇರಿ ಪ್ರತಿಯೊಂದು ಅಂಶವನ್ನು ಹೇಳಿದ್ದಾರೆ. ಯಶಸ್ಸು, ಶ್ರೀಮಂತಿಕೆ, ವೃತ್ತಿ ಸೇರಿ ಸಾಕಷ್ಟು ವಿಚಾಗಳನ್ನು ಅವರು ಹೇಳಿಕೊಂಡಿದ್ದಾರೆ. ಹಾಗೆ ಅವರ ಪುಸ್ತಕಗಳಲ್ಲಿ ಹೇಳಿರುವ ಮಾತುಗಳು ಇಂದಿಗೂ ಪ್ರಸ್ತುತ ಆಗಿವೆ.
ವ್ಯಕ್ತಿಯೊಬ್ಬ ಯಾವ ಮಾರ್ಗದಲ್ಲಿ ಜೀವನ ನಡೆಸಬೇಕು? ಯಾವ ರೀತಿ ಆದರ್ಶಗಳ ಬೆಳೆಸಿಕೊಳ್ಳಬೇಕು, ಹೇಗೆ ಯಶಸ್ಸು ಗಳಿಸಬೇಕು ಎಂಬೆಲ್ಲಾ ಮಾಹಿತಿಯನ್ನು ಸಹ ಅವರು ವಿವರಿಸಿದ್ದಾರೆ. ಹಾಗೆ ವ್ಯಕ್ತಿಯೊಬ್ಬ ಜೀವನದಲ್ಲಿ ಹೇಗೆ ಯಶಸ್ಸು ಸಾಧಿಸಬೇಕು ಅನ್ನೋದನ್ನು ಕೂಡ ಚಾಣಕ್ಯ ವಿವರಿಸುತ್ತಾರೆ. ಅಲ್ಲದೆ ನಿಮ್ಮ ಯಶಸ್ಸಿನ ಗುಟ್ಟೇನು? ಯಾವ ಗುಣಗಳನ್ನು ನೀವು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂಬುದನ್ನು ಕೂಡ ವಿವರಿಸಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸಮಸ್ಯೆಗಳ ಎದುರಿಸುವುದ ಆತನ ಹಲವು ತಪ್ಪುಗಳಿಂದ ಹಾಗೆ ಇತರರಿಂದ ತುಳಿತಕ್ಕೆ ಒಳಗಾಗುವುದು ಕೂಡ ಆತನ ಹಲವು ತಪ್ಪುಗಳಿಂದ ಎಂದು ಚಾಣಕ್ಯ ವಿವರಿಸಿದ್ದಾರೆ. ಹಾಗೆ ವ್ಯಕ್ಯಿಯೊಬ್ಬ ತನ್ನ ಯಾವೆಲ್ಲಾ ವಿಚಾರವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು ಎಂಬುದನ್ನು ವಿವರಿಸಿದ್ದಾರೆ. ಈ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಸಮಸ್ಯೆ ದೊಡ್ಡದಾಗಿಸಬಹುದು, ಇಲ್ಲವೆ ನಿಮ್ಮ ದೌರ್ಬಲ್ಯ ತಿಳಿದು ನಿಮ್ಮ ಜೀವನದ ದೊಡ್ಡ ಇಕ್ಕಟ್ಟುಗಳಿಗೂ ನೀವು ಸಿಲುಕಬಹುದು.
ಹಾಗಾದ್ರೆ ಪುರುಷರು ಯಾವೆಲ್ಲಾ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳೋಣ.
ದಾಂಪತ್ಯ ಕಲಹ
ಸಾಮಾನ್ಯವಾಗಿ ಎಲ್ಲರ ದಾಂಪತ್ಯ ಜೀವನದಲ್ಲೂ ಸಣ್ಣ ಪುಟ್ಟ ಮನಸ್ತಾಪಗಳು, ಜಗಳಗಳು ಇರುವುದು ಸಹಜ. ಅದು ಎಂದಿಗೂ ಮನೆಯಿಂದ ಹೊರ ಬರಬಾರದಂತೆ. ಅದ್ರಲ್ಲೂ ಪುರುಷರು ಈ ದಾಂಪತ್ಯ ಕಲಹದ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದಂತೆ. ದಾಂಪತ್ಯ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಿಮ್ಮ ದೌರ್ಬಲ್ಯ ತಿಳಿಸಿದಂತೆ. ಅದ್ರಲ್ಲೂ ಅವರು ನಿಮ್ಮ ಸಂಸಾರದಲ್ಲಿ ಮುಳ್ಳಾಗಬಹುದು ಎಂದು ಚಾಣಕ್ಯ ಹೇಳಿದ್ದಾರೆ.
ಆರ್ಥಿಕ ನಷ್ಟದ ಕುರಿತು ಮಾತನಾಡಬೇಡಿ
ನೀವು ವ್ಯವಹಾರದಲ್ಲಾಗಲಿ, ಅಥವಾ ಯಾವುದಾದರು ಹೂಡಿಕೆ, ವಸ್ತುಗಳಿಂದ ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದರೆ ಆ ಕುರಿತಾಗಿ ಹೇಳಿಕೊಳ್ಳುವುದು ಸೂಕ್ತವಲ್ಲವಂತೆ. ನಿಮ್ಮ ಹಣಕಾಸು ವ್ಯವಹಾರಗಳು ಆದಷ್ಟು ಗೌಪ್ಯವಾಗಿಡುವುದು ಉತ್ತಮ ಎಂದಿದ್ದಾರೆ. ಏಕೆಂದರೆ ನೀವು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಬಹುತೇಕರು ಸಾಂತ್ವನದ ನುಡಿ ಹೇಳಿದರೂ ಕೂಡ ಅವರ ಮನದಲ್ಲಿ ಸಹಾಯ ಮಾಡುವ ಅಥವಾ ಮರುಕ ವ್ಯಕ್ತಪಡಿಸದೆ ವಿಕೃತ ಆನಂದ ಪಡೆಯಬಹುದು. ಹಾಗೆ ಮುಂದೊಂದು ದಿನ ನಿಮಗೆ ಹಣದ ಅವಶ್ಯಕತೆ ಇದ್ದಾಗ ಅವರು ಸಹಾಯ ಮಾಡದೆ ಇರಬಹುದು. ಅಥವಾ ನಿಮ್ಮ ಈ ನಷ್ಟದ ವಿಚಾರವನ್ನು ಅವರು ಮತ್ತೊಬ್ಬರ ಬಳಿ ಹೇಳಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಚಾಣಕ್ಯ ಹೇಳಿದ್ದಾರೆ.
ನಿಮಗಾದ ಅವಮಾನ ಮತ್ತು ಅಸಾಮಾನ್ಯ ಘಟನೆ
ನೀವು ಆಪ್ತರ ಬಳಿ ನಿಮಗಾದ ಅವಮಾನ ಹಾಗೂ ಅಸಾಮಾನ್ಯು ಘಟನೆಗಳ ಕುರಿತಾಗಿ ಹೇಳಿಕೊಳ್ಳಬಾರದಂತೆ. ನಿಮ್ಮ ಅವಮಾನವನ್ನು ಇತರರೊಂದಿಗೆ ಹೇಳಿಕೊಳ್ಳುವುದರಿಂದ ನಿಮಗೆ ನೆಮ್ಮದಿ ಸಿಗಬಹುದು. ಆದ್ರೆ ಮುಂದೊಂದು ದಿನ ನೀವು ಆಪ್ತರಿಂದಲೇ ಮತ್ತೆ ಕೇಳಬೇಕಾಗಬಹುದು. ಅಥವಾ ಸಾರ್ವಜನಿಕವಾಗಿ ಅವರು ಈ ಮಾತನ್ನು ಮುಂದಿಡಬಹುದು. ಇದರ ಜೊತೆಗೆ ಯಾವುದಾಧು ಅಸಾಮಾನ್ಯ ಘಟನೆಗಳನ್ನು ಕೂಡ ಇತರರೊಂದಿಗೆ ಹೇಳಿಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾರೆ.
ಗುಪ್ತ ಅನಾರೋಗ್ಯಗಳು
ನಿಮ್ಮಲ್ಲಿನ ಕೆಲವು ಅನಾರೋಗ್ಯ ವಿಚಾರವನ್ನು ಬೇರೆಯವರೊಂದಿಗೆ ಹೇಳಿಕೊಳ್ಳುವುದು ಅದಕ್ಕೆ ಪರಿಹಾರ ಪಡೆಯಲು ಸುಲಭವಾಗಬಹುದು. ಆದ್ರೆ ಮತ್ತೆ ಕೆಲವು ಗೌಪ್ಯ ಸಮಸ್ಯೆಗಳನ್ನು ಆಪ್ತರ ಬಳಿ ಹೇಳಿಕೊಳ್ಳದೆ ಇರುವುದು ಉತ್ತಮ. ಇದರಿಂದ ಅವರಲ್ಲಿ ನಿಮ್ಮ ಬಗ್ಗೆ ಕೀಳರಿಮೆ ಮೂಡಬಹುದು. ಈ ವಿಚಾರವನ್ನು ಅವರು ಬಹಳ ಕಾಲ ಗೌಪ್ಯವಾಗಿ ಇಟ್ಟುಕೊಳ್ಳದೆ ಇರಬಹುದು.



Click it and Unblock the Notifications