Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗುಟ್ಕಾ ಸೇವಿಸಿ ಮನೆ ತುಂಬಾ ಉಗಿಯುವ ಪತ್ನಿ..ಪೊಲೀಸರ ಮೊರೆ ಹೋದ ಪತಿ.!
ಇತ್ತೀಚಿನ ದಿನಗಳಲ್ಲಿ ಗುಟ್ಕಾ, ಪಾನ್ ಮಸಾಲಾ ಸೇವಿಸುವವರ ಸಂಖ್ಯೆ ಏರುತ್ತಲೇ ಇದೆ. ಅದ್ರಲ್ಲೂ ನಮ್ಮ ನಿಮ್ಮ ಸುತ್ತ ಎಷ್ಟು ಮಂದಿ ಈ ಚಟಗಳಿಗೆ ದಾಸರಾಗಿರುತ್ತಾರೆ ಒಮ್ಮೆ ಯೋಚಿಸಿ, ಯುವ ಸಮುದಾಯವಂತು ಗುಟ್ಕಾ, ತಂಬಾಕು, ಪಾನ್ ಮಸಾಲಾಗಳಿಲ್ಲದೆ ಒಂದು ದಿನ ದಿನ ಕೂಡ ಇರಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ.
ಈ ಗುಟ್ಕಾ, ಪಾನ್ ಮಸಾಲಾ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಸೇವಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ, ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಯುವತಿಯರು, ಮಹಿಳೆಯರು ಸಹ ಇದೊಂದು ಫ್ಯಾಷನ್ ಎನ್ನುವಂತೆ ಸೇವಿಸಲು ಆರಂಭಿಸಿದ್ದಾರೆ. ಇದೇ ರೀತಿ ಪಾಸ್ ಮಸಾಲಾ ಸೇವಿಸುತ್ತಿದ್ದ ಮಹಿಳೆಯ ಪತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಉತ್ತರ ಪ್ರದೇಶದ ಕುಟುಂಬಕ್ಕೆ ಗುಟ್ಕಾ ಈಗ ಅಕ್ಷರಶಃ ಶತ್ರುವಾಗಿದೆ. ಪತ್ನಿಯ ಗುಟ್ಕಾ ಅಭ್ಯಾಸದ ವಿರುದ್ಧ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ದಾಖಲಿಸಿದ್ದಾನೆ. ಹಾಗಾದ್ರೆ ಪತಿ ಯಾಕೆ ತನ್ನ ಪತ್ನಿ ವಿರುದ್ಧವೇ ಠಾಣೆ ಮೆಟ್ಟಿಲೇರಿದ್ದಾನೆ, ಅಷ್ಟಕ್ಕೂ ಗುಟ್ಕಾದಿಂದ ಆದ ಸಮಸ್ಯೆ ಏನಂತ ನೀವೆ ಓದಿ.
ಗುಟ್ಟಾಗಿ ಗುಟ್ಕಾ ಸೇವಿಸುವ ಪತ್ನಿ
ಇಲ್ಲಿನ ಆಗ್ರಾದಲ್ಲಿ ವಾಸವಿರುವ ಕುಟುಂಬ ಒಂದು ವರ್ಷದ ಹಿಂದೆ ಛಟ್ಟಾ ಗ್ರಾಮದ ಮಹಿಳೆಯನ್ನು ಮಗನೊಂದಿಗೆ ವಿವಾಹ ಮಾಡಿ ಕರೆತಂದಿತ್ತು. ಆಕೆ ತನ್ನ ತಲೆ ಮೇಲೆ ಸೆರಗು ಹಾಕಿಕೊಂಡು ಗುಟ್ಕಾ ಅಗಿಯುತ್ತಿದ್ದಳು, ಈ ಅಭ್ಯಾಸ ಬಿಡಿಸಲು ಪತಿ ಹಲವು ಬಾರಿ ಪ್ರಯತ್ನಿಸಿದ್ದ, ಆದರೆ ಅದು ಸಾಧ್ಯವಾಗಲಿಲ್ಲ. ಪತ್ನಿಯ ಮನೆಯವರಿಗೂ ದೂರು ನೀಡಿದ್ದ ಆದರೂ ಪ್ರಯೋಜನವಾಗಲಿಲ್ಲ. ಆಕೆ ಗುಟ್ಕಾ ಸೇವಿಸುವುದು ಮಾತ್ರವಲ್ಲ ಮನೆಕೆಲಸ ಮಾಡುವಾಗ ಎಲ್ಲೆಂದರಲ್ಲಿ ಗುಟ್ಕಾವನ್ನು ಉಗಿದು ಗಲೀಜು ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಪೊಲೀಸರ ಮೊರೆ ಹೋದ ಪತಿ
ಪತ್ನಿಗೆ ಗುಟ್ಕಾ ಸೇವಿಸುವುದನ್ನು ಬಿಡಿಸಲು ಹಲವು ಬಾರಿ ಯತ್ನಿಸಿ ಸೋತಿದ್ದ ಪತಿ ಬಳಿಕ ಕುಟುಂಬ ಸಮಾಲೋಚಕರ ಬಳಿಯೂ ಕರೆದೊಯ್ದಿದ್ದ ಅಲ್ಲಿಯೂ ಮಾತುಕತೆ ನಡೆದು ಗಲಾಟೆಗೆ ಕಾರಣವಾಗಿತ್ತು. ಇದಾದ ಬಳಿಕ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾದಾಗ ಪೊಲೀಸರು ಮಾತುಕತೆಗೆ ಮುಂದಾದಾಗಲು ಪತ್ನಿ ಮಾತು ಕೇಳಲು ಸಿದ್ದರಿರಲಿಲ್ಲ. ಹೀಗಾಗಿ ಆತ ವಕೀಲರ ಭೇಟಿಯಾಗಿದ್ದ.
ಪತಿ ಮೇಲೆ ಆರೋಪ ಹೊರಿಸಿದ ಪತ್ನಿ
ಪತ್ನಿಯನ್ನು ಆತ ಪೊಲೀಸರ ಮುಂದೆ ಆಪ್ತ ಸಮಾಲೋಚಕರ ಮುಂದೆ ಕರೆತಂದಾಗೆಲ್ಲ ಆಕೆ ಪತಿ ವಿರುದ್ಧ ಆರೋಪ ಮಾಡುತ್ತಿದ್ದಳು. ಆತ ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಮಕ್ಕಳಾಗಲಿಲ್ಲ ಎಂದು ಹೊಡೆದು ಮನೆಯಿಂದ ಹೊರಹಾಕುವ ಯತ್ನ ಮಾಡಿದ್ದಾರೆ, ಆತನಿಗೆ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧವಿದೆ, ಆತನ ಮೊಬೈಲ್‌ನಲ್ಲಿ ಹತ್ತಾರು ಹುಡುಗಿಯರ ಮೊಬೈಲ್ ನಂಬರ್‌ಗಳಿವೆ ಹೀಗೆ ಹತ್ತಾರು ಆರೋಪ ಮಾಡುತ್ತಿದ್ದಳು.
ಮನೆಯಿಂದ ಹೊರಹಾಕಲು ಸುಳ್ಳು ಆರೋಪ
ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗಂಡನನ್ನೇ ಆರೋಪಿಯನ್ನಾಗಿ ಮಾಡಿದಳು. ನನಗೆ ಮಕ್ಕಳಾಗಲಿಲ್ಲ ಎಂದು ಮನೆಯವರು ಸೇರಿ ಹೊರಹಾಕಲು ಮುಂದಾಗಿದ್ದಾರೆ. ಹೀಗಾಗಿ ನಾನು ಗುಟ್ಕಾ ಸೇವಿಸುವುದಾಗಿ ಕಥೆ ಕಟ್ಟಿದ್ದಾರೆ. ನಾನು ಗುಟ್ಕಾ ಸೇವಿಸುವುದಿಲ್ಲ ಎಂದು ಆಕೆಯ ಆರೋಪವಾಗಿದೆ.
ಸಿಗರೇಟ್ ಸೇದಿದ ಅತ್ತೆ ಮದುವೆ ಕ್ಯಾನ್ಸಲ್
ಉತ್ತರ ಪ್ರದೇಶದ ಸಂಬಾಲ್‌ನಲ್ಲಿ ನಡೆದಿರುವ ಮತ್ತೊಂದು ಘಟನೆಯಲ್ಲಿ ಮದುವೆಯೇ ಮುರಿದುಬಿದ್ದಿದೆ. ಮದುವೆಯ ದಿನ ಅತ್ತೆ ಸಿಗರೇಟ್ ಸೇದುವುದು ಮಾತ್ರವಲ್ಲ ಡ್ಯಾನ್ಸ್ ಮಾಡಿದ್ದನ್ನು ಕಂಡ ಸೊಸೆ ಮದುವೆಯೇ ಬೇಡ ಎಂದು ಹೊರಟು ಹೋಗಿದ್ದಾಳೆ. ಮದುವೆ ಹಿಂದಿನ ದಿನ ನಡೆಯುತ್ತಿದ್ದ ಶಾಸ್ತ್ರದಲ್ಲಿ ವರನ ತಾಯಿ ಕೈಯಲ್ಲಿ ಸಿಗರೇಟ್ ಹಿಡಿದು ಡ್ಯಾನ್ಸ್ ಮಾಡುತ್ತಿದ್ದಳು, ಇದನ್ನು ನೋಡಿದ ವಧು ಮದುವೆ ಕ್ಯಾನ್ಸಲ್ ಮಾಡಿ ತೆರಳಿದ್ದಾಳೆ.



Click it and Unblock the Notifications
