Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರ ಸಂಕ್ರಾಂತಿ 2025: ಯಾವ ರಾಜ್ಯದಲ್ಲಿ ಹೇಗೆ ಈ ಹಬ್ಬ ಆಚರಿಸುತ್ತಾರೆ ಗೊತ್ತ?
ವರ್ಷದ ಮೊದಲ ಹಿಂದೂಗಳ ಹಬ್ಬವಾಗಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ದೇಶದ ವಿವಿಧ ಭಾಗದಲ್ಲಿ ಏಕಕಾಲಕ್ಕೆ ಆಚರಿಸುವ ಕೆಲವು ಹಬ್ಬಗಳಲ್ಲಿ ಇದು ಕೂಡ ಒಂದಾಗಿದೆ. ದೇಶದ ಪ್ರಮುಖ ಎಲ್ಲಾ ರಾಜ್ಯದಲ್ಲೂ ಈ ಮಕರ ಸಂಕ್ರಾಂತಿ ಆಚರಣೆ ನೋಡಬಹುದು. ಮಕರ ಸಂಕ್ರಾಂತಿ ಹಿಂದೂಗಳಿಗೆ ತುಂಬಾ ಮಹತ್ವವಾದ ಹಬ್ಬವಾಗಿದೆ. ಈ ದಿನ ಎಳ್ಳು ಬೆಲ್ಲ ಸವಿದು ಸ್ವಚ್ಛ ಮಾತನಾಡಿ ಎಂಬ ಸಂಪ್ರದಾಯವಿದೆ.
ಹಾಗೆ ಈ ದಿನವು ಪೊಂಗಲ್, ಕಿಚಡಿ, ಎಳ್ಳು ಬೆಲ್ಲ ಹಾಗೆ ಹಲವು ರೀತಿ ಸಿಹಿ ಮಾಡಿ ಸವಿಯುವುದು ಸಾಮಾನ್ಯವಾಗಿ ನೋಡಬಹುದು. ಹಾಗೆ ಉತ್ತರ ಭಾರತದಲ್ಲಿ ಗಾಳಿಪಟ ಹಾರಿಸುವ ವಿಶೇಷ ಸಂಪ್ರದಾಯವಿದೆ ಹಾಗೆ ದಕ್ಷಿಣದಲ್ಲಿ ಹೋರಿ ಬೆದರಿಸುವುದುಮ ಕೆಂಡ ಹಾಯುವುದು ಸೇರಿ ಹಲವು ರೀತಿ ಸಂಪ್ರದಾಯಗಳ ನೋಡಬಹುದು.

ಈ ಹಬ್ಬವನ್ನು ಸೌರಮಾನ ಕ್ಯಾಲೆಂಡರ್ ಪ್ರಕಾರ ಆಚರಿಸಲಾಗುತ್ತದೆ. ಈ ದಿನ ಎಳ್ಳು ಬೆಲ್ಲ ಮಾಡಿ ಹಂಚಲಾಗುತ್ತದೆ. ಎಳ್ಳು ಬೆಲ್ಲ ಸವಿಯುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದಲ್ಲಿ ದೇಹದ ಚರ್ಮದಲ್ಲಿ ತೇವಾಂಶದ ಕೊರೆತೆಯಿಂದ ಒಣಗಿರುತ್ತದೆ. ಹೀಗಾಗಿ ಎಳ್ಳು ನಮ್ಮ ಚರ್ಮಕ್ಕೆ ಉತ್ತಮವಾಗಿದೆ. ಇದೇ ಕಾರಣಕ್ಕೆ ಎಳ್ಳು ಸವಿಯುವುದು ಉತ್ತಮ.
ಮಕರ ಸಂಕ್ರಾಂತಿಯಿಂದ ಉತ್ತಾರಾಯಣ ಪ್ರಾರಂಭ. ಮಕರ ಸಂಕ್ರಾಂತಿ ಪ್ರಾರಂಭವಾದಾಗಿನಿಂದ 6 ತಿಂಗಳು ಉತ್ತಾರಾಯಣ ಸಮಯ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮರಣವೊಂದಿದವರು ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ಹಿಂದೂ ಧರ್ಮದ ನಂಬಿಕೆಯಾಗಿದೆ. ಮಹಾಭಾರತದ ಭೀಷ್ಮ ಉತ್ತರಾಯಣ ಕಾಲದವರೆಗೆ ಕಾದು ನಂತರ ತನ್ನ ದೇಹ ತ್ಯಾಗ ಮಾಡಿದರು ಎಂಬ ಉಲ್ಲೇಖವಿದೆ.
ಹಾಗೆ ಈ ಸಂಕ್ರಾಂತಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಹಾಗಾದ್ರೆ ಯಾವೆಲ್ಲಾ ರಾಜ್ಯದಲ್ಲಿ ಯಾವ ರೀತಿ ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಪ್ರದೇಶ
ಆಂಧ್ರ ಹಾಗೂ ತೆಲಂಗಾಣದ ಹಲವು ಭಾಗದಲ್ಲಿ ಒಂದೊಂದು ರೀತಿಯಾಗಿ ಸಂಕ್ರಾಂತಿ ಆಚರಣೆ ನೋಡಬಹುದು. ಇಲ್ಲಿ ಭೋಗಿ, ಮುಕ್ಕನುಮ, ಕಣುಮ ಎಂಬ ಹೆಸರಿನಿಂದಲೂ ಆಚರಿಸುತ್ತಾರೆ. ಅವರು ಈ ಹಬ್ಬವನ್ನು ಹೊಸತನದ ಆರಂಭ ಎಂಬ ಸಂಕೇತದಲ್ಲಿ ಆಚರಿಸುತ್ತಾರೆ. ಈ ದಿನ ಮನೆಯನ್ನು ಸ್ವಚ್ಛಗೊಳಿಸಿ ಹಳೆಯ ವಸ್ತುಗಳನ್ನು, ಕಸವನ್ನು ಒಂದು ಕಡೆ ಹಾಕಿ ಅದಕ್ಕೆ ಬೆಂಕಿ ಹಾಕಿ ಸುಡಲಾಗುತ್ತದೆ. ಕೆಲವು ಕಡೆ ಈ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುತ್ತಾರೆ.
ತಮಿಳುನಾಡು
ತಮಿಳುನಾಡಿನ ಪ್ರಮುಖ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದಾಗಿದೆ ಅಲ್ಲಿ ಪೊಂಗಲ್ ಎಂದು ಕರೆಯಲ್ಪಡುವ ಹಬ್ಬ ಆಗಿದೆ. ಸತತ 4 ದಿನ ಈ ಹಬ್ಬ ಆಚರಿಸುತ್ತಾರೆ. ಈ ಹಬ್ಬದಂದು ರೈತರು ತಮ್ಮ ಹೊಲದ ಪೂಜೆ ಮಾಡುತ್ತಾರೆ. ಎತ್ತುಗಳ ಅಲಂಕರಿಸುತ್ತಾರೆ. ಹಾಗೆ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.
ಕೇರಳ
ಕೇರಳ ಸಂಕ್ರಾಂತಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಮಕರ ವಿಳಕ್ಕು ಎಂದು ಕರೆಯಲಾಗುತ್ತದೆ. ಈ ದಿನ ಶಬರಿಮಲೆಯಲ್ಲಿ ಮಕರ ಜ್ಯೋತಿ ಕಾಣಿಸುವುದರಿಂದ ಅಯ್ಯಪ್ಪನ ಸನ್ನಿಧಾನ ಭಕ್ತರಿಂದ ತುಂಬಿರುತ್ತದೆ. ಹಾಗೆ ಕೇರಳದಲ್ಲಿ ವಿಶೇಷ ಆಚರಣೆಗಳು ಈ ದಿನ ನಡೆಯಲಿವೆ.
ಗುಜರಾತ್
ಗುರಾತ್‌ನಲ್ಲಿ ಉತ್ತರಾಯಾಣ ಎಂದು ಈ ಹಬ್ಬವನ್ನು ಆಚರಿಸುತ್ತಾರೆ, ಇಲ್ಲಿ ಗಾಳಿಪಟ ಹಾರಿಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಹಾಗೆ ಹಬ್ಬದ ದಿನ ಮಾಡಲಾಗುವ ವಿಶೇಷ ಸಿಹಿ ತಿಂಡಿಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಕಿಚಡಿ ಮಾಡಿ ಸವಿಯುವ ಸಂಪ್ರದಾಯವಿದೆ. ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ್ ಸೇರಿ ಹಲವು ರಾಜ್ಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.



Click it and Unblock the Notifications