Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ನವರಾತ್ರಿ 8ನೇ ದಿನ ಮಹಾಗೌರಿ ಪೂಜೆ..! ಏನಿದರ ಮಹತ್ವ ಗೊತ್ತಾ?
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ. ನವರಾತ್ರಿಯ ಸಮಯ ಕೂಡ ಹಿಂದೂಗಳ ಪಾಲಿನ ಅತ್ಯಂತ ಕಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಈ ವಾರದಲ್ಲಿ ಹಿಂದೂಗಳು ವಿಶೇಷ ಪೂಜೆಗಳ ನೆರವೇರಿಸುತ್ತಾರೆ. ದುರ್ಗೆಯ 9 ಅವತಾರಗಳನ್ನು ಅವರು ಆರಾಧಿಸುತ್ತಾರೆ. ಹಾಗೆ ದೇವಿ ದುರ್ಗೆಯ ಆಶೀರ್ವಾದಕ್ಕೆ ಒಳಗಾಗುತ್ತಾರೆ. ಈ ಪೂಜೆಯನ್ನು ದೇಶದ ಒಂದೊಂದು ಭಾಗದಲ್ಲಿ ಒಂದೊಂದು ಪ್ರಕಾರವಾಗಿ ಮಾಡಲಾಗುತ್ತದೆ.
ದುರ್ಗೆ ಒಂದೊಂದು ದಿನ ಒಂದೊಂದು ಅವತಾರದಲ್ಲಿ ಭೂಮಿಗೆ ಬರುತ್ತಾಳೆ. ಹಾಗೆ ಭಕ್ತರ ಬೇಡಿಕೆಗಳ ಇಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ಇಂದು ನವರಾತ್ರಿಯ 8ನೇ ದಿನವಾಗಿದ್ದು ಇಂದು ದುರ್ಗೆ ಮಹಾಗೌರಿಗೆ ಸಮರ್ಪಿತವಾದ ದಿನವಾಗಿದೆ. ದುರ್ಗೆಯ ಮಹಾಗೌರಿಯ ಅವತಾರದಲ್ಲಿ 8ನೇ ದಿನ ಭೂಮಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ.

ದುರ್ಗೆಯ ಈ 9 ಅವತಾರಗಳ ಪೈಕಿ ಮಹಾಗೌರಿ ಅವತಾರಕ್ಕೆ ತನ್ನದೇ ಮಹತ್ವವಿದೆ. ಆಕೆ ಬಿಳಿ ವಸ್ತ್ರದ, ಹಾಲಿನಂತ ಮೈಬಣ್ಣ ಹಿಂದಿರುವ ಗೌರಿ. ಹಾಗೆಂದ ಮಾತ್ರಕ್ಕೆ ಸೌಮ್ಯ ಸ್ವಭಾವದ ಮಾತೆಯಲ್ಲವಂತೆ, ದುಷ್ಟರನ್ನು ಸಂಹಾರ ಮಾಡುವ ಮುನ್ನ ಆಕೆ ಪ್ರಶಾಂತವಾಗಿ ಧ್ಯಾನಕ್ಕೆ ಕುಳಿತುಕೊಳ್ಳುವ ಅವತಾರ ಎಂಬ ವಾದವೂ ಇದೆ.
ಮಾತೆಗೆ ನಾಲ್ಕು ಕೈಗಳಿವೆ ಮತ್ತು ಅವಳು ಬಿಳಿ ಬಣ್ಣದ ಗೂಳಿಯ ಮೇಲೆ ಭೂಮಿಗೆ ಬರುತ್ತಾಳೆ. ಆಕೆಯ ಬಲಗೈಯಲ್ಲಿ ಮೇಲಿನ ಕೈಯಲ್ಲಿ ಅಭಯ ಮುದ್ರೆ ಮತ್ತು ಕೆಳಗಿನ ಕೈಯಲ್ಲಿ ತ್ರಿಶೂಲ ಹಿಡಿದಿರುತ್ತಾಳೆ. ಮೇಲಿನ ಎಡಗೈಯಲ್ಲಿ ಡಮರು ಮತ್ತು ಕೆಳಗಿನ ಕೈಯಲ್ಲಿ ವರ ಮುದ್ರೆ ಇರಲಿದೆ. ಅಂದರೆ ಆಕೆ ಶಿವನ ಸ್ವರೂಪಿಯಾಗಿಯೂ ಕಾಣಿಸಲಿದ್ದಾಳೆ. ಮಹಾಗೌರಿಯು ತನ್ನ 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ.
ಕೈಲಾಸ ವಾಸಿಯಾದ ಶಿವನನ್ನು ತನ್ನ ಪತಿಯಾಗಿ ಪಡೆಯಲು ದೇವಿಯು ಕಠಿಣವಾದ ತಪಸ್ಸು ಮಾಡಿದ್ದಳು. ಇದರಿಂದಾಗಿ ಅವಳ ದೇಹವು ಕಪ್ಪು ಬಣ್ಣಕ್ಕೆ ತಿರುಗಿತು ಎಂಬ ಕಥೆ ಇದೆ. ತದನಂತರ ಆಕೆಯ ತಪಸ್ಸನ್ನು ಮೆಚ್ಚಿದ ಶಿವನು ಸಂತುಷ್ಟನಾಗಿ ಆಕೆಗೆ ಕಾಣಿಸಿಕೊಂಡನಂತೆ, ಹಾಗೆ ಆಕೆಯ ಮೈ ಬಣ್ಣ ಕಪ್ಪಾಗಿದ್ದರಿಂದ ತನ್ನ ಶಿರದಿಂದ ಹುಟ್ಟಿದ ಗಂಗೆಯ ನೀರನ್ನು ಹಿಡಿದು ಆಕೆಯ ಮೈ ಸ್ವಚ್ಛಗೊಳಿಸಿದನಂತೆ. ಈ ವೇಳೆ ದೇವಿ ಬಿಳಿ ಬಣ್ಣಕ್ಕೆ ತಿರುಗಿ ಅತ್ಯಂತ ಸೌಂದರ್ಯವತಿಯಾಗಿ ಬದಲಾದಳು. ಹೀಗಾಗಿ ಆಕೆಗೆ ಶಿವನ ಆಶೀರ್ವಾದ ಪಡೆದು ಮಹಾಗೌರಿಯಾಗಿ ಬದಲಾದಳು ಎಂದು ಹೇಳಲಾಗಿದೆ.
ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವಳು ಎಂಬ ನಂಬಿಕೆ ಇದೆ. ಮಹಾಗೌರಿ ದೇವಿಯ ಪೂಜೆ ಮಾಡಲು ರಾತ್ರಿ ಅರಳುವಂತಹ ಮಲ್ಲಿಗೆ ಹೂವನ್ನು ಬಳಸಬೇಕು. ಹಾಗೆ ಬಿಳಿಯ ಹೂವು ಆಹಾರಗಳ ಆಕೆಗೆ ನೈವೇದ್ಯಕ್ಕೆ ಬಳಸಬೇಕು.
ಮಹಾಗೌರಿಯ ಕಥೆ ಏನು ಗೊತ್ತಾ?
ಒಮ್ಮೆ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆದಿದ್ದಳಂತೆ. ಆದೆ ಮರಳಿ ದೇವಲೋಕ ಸೇರಲು ಬಯಸಿದಳು, ಹಾಗೆ ಶಿವನನ್ನು ಮದುವೆಯಾಗಿ ಅಲ್ಲಿಯೇ ನೆಲೆಸಬೇಕು ಎಂಬ ಬಯಕೆ ಅವಳದ್ದಾಗಿತ್ತು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡಿದಳು. ಆಕೆ ನೀರು, ಆಹಾರ ಬಿಟ್ಟು ತಪಸ್ಸು ಮಾಡಿದ್ದಳು, ಇದರಿಂದ ಶಿವ ಸಂತೃಪ್ತನಾಗಿದ್ದ. ಹಾಗೆ ಪ್ರತ್ಯಕ್ಷವಾಗಿ ಆಕೆಯ ಆಸೆ ಈಡೇರಿಸಿದ. ಹೀಗಾಗಿ ಆಕೆಗೆ ಮಹಾಗೌರಿ ಎಂಬ ಹೆಸರು ಬಂದಿತು.



Click it and Unblock the Notifications











