Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ವಿಶ್ವ ಆಹಾರ ಸುರಕ್ಷತಾ ದಿನ: ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಸುರಕ್ಷತೆ ಎಷ್ಟು ಮುಖ್ಯ?
'ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ' ಎಂಬ ಮಾತಿನಂತೆ ಆಹಾರವನ್ನು ಎಷ್ಟು? ಹೇಗೆ ಸೇವಿಸಬೇಕು? ಎಂದು ತಿಳಿದವರು ರೋಗದಿಂದ ದೂರವಿರುತ್ತಾರೆ. ಈ ಮಹತ್ವವನ್ನು ಸಾರುವ ದಿನವೇ ವಿಶ್ವ ಆಹಾರ ಸುರಕ್ಷತಾ ದಿನ. ಜೂನ್ 7ರಂದು ಆಚರಿಸುವ ಈ ದಿನವು ಆಹಾರ ಭದ್ರತೆ, ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಣ ಸಂಬಂಧವನ್ನು ನೆನಪಿಸುವ ದಿನ. ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ತಡೆಯುವ ಮತ್ತು ನಿರ್ವಹಿಸುವ ಬಗ್ಗೆ ದಿನ ಗಮನ ಸೆಳೆಯುತ್ತದೆ.

ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ:
ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಒ) ವಿವಿಧ ವಯೋಮಾನದವರಲ್ಲಿ ಮುಖ್ಯವಾಗಿ ೫ ವರ್ಷಕ್ಕಿಂತ ಕೆಳಗಿರುವವರಲ್ಲಿ ಕಂಡುಬರುವ ಆಹಾರಕ್ಕೆ ಸಂಬಂಧಿಸಿದ ರೋಗಳನ್ನು ಗಮನಿಸಿ ಅದರ ಬಗ್ಗೆ ಜಾಗೃತಿ ಮೂಡಿಸಲು ಆಹಾರ ಸುರಕ್ಷಾ ದಿನದ ಪರಿಕಲ್ಪನೆಯನ್ನು ಜಾರಿಗೆ ತಂದಿತು. 2018ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಜೂನ್ 7ರಂದು ಆಹಾರ ಸುರಕ್ಷಾ ದಿನ ಆಚರಿಸಲು ನಿರ್ಧರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಅಧೀನದಲ್ಲಿರುವ ಆಹಾರ ಮತ್ತು ಕೃಷಿ ಸಂಸ್ಥೆಗಳು ಜಂಟಿಯಾಗಿ ಈ ದಿನವನ್ನು ಆಚರಿಸಲು ಶ್ರಮ ವಹಿಸುತ್ತವೆ.

2021ರ ವಿಶ್ವ ಆಹಾರ ಸುರಕ್ಷತಾ ದಿನದ ಥೀಮ್:
ಇದು ಆಹಾರ ಸುರಕ್ಷಾ ದಿನದ 3ನೇ ವರ್ಷಾಚರಣೆಯಾಗಿದೆ. ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯೊಂದಿಗೆ ಆಚರಿಸುವ ಈ ವರ್ಷದ ಥೀಮ್ 'ಆರೋಗ್ಯಕರ ನಾಳೆಗೆ ಇಂದು ಸುರಕ್ಷಿತ ಆಹಾರ'. ಇದು ಸುರಕ್ಷಿತ ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವತ್ತ ಗಮನಹರಿಸುತ್ತದೆ. ಸುರಕ್ಷಿತ ಆಹಾರವನ್ನ ಸೇವಿಸುವುದು ಜನರಿಗೆ, ಆರ್ಥಿಕತೆಗೆ ದೀರ್ಘಕಾಲೀನ ಪ್ರಯೋಜನವನ್ನು ನೀಡುತ್ತದೆ. ಇದು ಜನರ ಆರೋಗ್ಯ, ಪ್ರಾಣಿಗಳು, ಸಸ್ಯಗಳು, ಪರಿಸರ ಮತ್ತು ಆರ್ಥಿಕತೆಯ ನಡುವೆ ವ್ಯವಸ್ಥಿತ ಸಂಪರ್ಕವನ್ನು ರೂಪಿಸುತ್ತದೆ ಜೊತೆಗೆ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ವಿಶ್ವ ಆಹಾರ ಸುರಕ್ಷತಾ ದಿನದ ಕೋಟ್ಸ್ ಗಳು:
"ಜಗತ್ತಿನಲ್ಲಿ ದೇವರು ಹಸಿದವರಿಗೆ ರೊಟ್ಟಿಯ ರೂಪದಲ್ಲಿ ಕಾಣಸಿಗುತ್ತಾನೆಯೇ ಹೊರತು ಬೇರಾವುದೇ ರೂಪದಲ್ಲೂ ಕಾಣಸಿಗಲಾರ'' - ಮಹಾತ್ಮ ಗಾಂಧಿ.
"ನಿಮ್ಮ ಆಹಾರವು ನಿಮ್ಮ ಔಷಧಿಯಾಗಲಿ, ಮತ್ತು ನಿಮ್ಮ ಔಷಧವು ನಿಮ್ಮ ಆಹಾರವಾಗಲಿ" -ಹಿಪ್ಪೊಕ್ರೇಟ್ಸ್
"ಆಹಾರ ಸುರಕ್ಷತೆಯು ಆಹಾರ ಸರಪಳಿಯಲ್ಲಿರುವ ಪ್ರತಿಯೊಬ್ಬರನ್ನು ಒಳಗೊಂಡಿರುತ್ತದೆ" -ಮೈಕ್, ಜೋಹಾನ್ಸ್

ಆಹಾರ ಸುರಕ್ಷತೆ ಎಂದರೇನು?:
ಆಹಾರ ಸುರಕ್ಷತೆ ಅಂದರೆ, ಆಹಾರ ಸೇವನೆಯಿಂದ ಆರೋಗ್ಯಕ್ಕೆ ಹಾನಿಮಾಡದಂತೆ ತಡೆಯುವ ಎಲ್ಲಾ ಹಂತವನ್ನ ಒಳಗೊಂಡಿದ್ದು, ಆಹಾರ ತಯಾರಿ, ನಿರ್ವಹಣೆ ಹಾಗೂ ಸಂಗ್ರಹಣೆಯ ವಿಚಾರವನ್ನ ಹೊಂದಿದೆ. ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ರಾಸಾಯನಿಕಗಳು ಆಹಾರ ಮಾಲಿನ್ಯ ಅಥವಾ ಅಸುರಕ್ಷತೆಗೆ ಕಾರಣವಾಗಬಹುದು. ಆಹಾರ ಮಾಲಿನ್ಯವು ಅದರ ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಂಗ್ರಹಣೆ ಮತ್ತು ತಯಾರಿಕೆಯ ಯಾವುದೇ ಹಂತದಲ್ಲಿ ಸಂಭವಿಸಬಹುದು. ಆದ್ದರಿಂದ ಅದನ್ನು ಸುರಕ್ಷಿತವಾಗಿರಿಸುವುದು ಮುಖ್ಯ.

ಆಹಾರ ಸುರಕ್ಷತೆಯ ಮಹತ್ವ:
ಆಹಾರ ಸುರಕ್ಷತೆಯು ಕೇವಲ ರೆಸ್ಟೋರೆಂಟ್ಗಳು ಮತ್ತು ಹೋಟೆಲ್ ಗೆ ಮಾತ್ರ ಎಂದು ಯೋಚಿಸುತ್ತಿದ್ದರೆ, ನಿಮ್ಮ ಊಹೆ ತಪ್ಪು. ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಹೇಗೆ ತಯಾರಿಸಬೇಕೆಂದು ತಿಳಿಯುವುದು ಸಹ ಮುಖ್ಯವಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳು ಆಹಾರವನ್ನು ಕಲುಷಿತಗೊಳಿಸುತ್ತವೆ. ಇದು ಗ್ಯಾಸ್ಟ್ರೋಎಂಟರೈಟಿಸ್ ಮತ್ತು ನಿರ್ಜಲೀಕರಣ ಜೊತೆಗೆ ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಉತ್ತಮ ಹಾಗೂ ಸುರಕ್ಷಿತವಾದ ಆಹಾರ ತಯಾರಿ ಹಾಗೂ ಸೇವನೆ ಬಹಳ ಮುಖ್ಯ. ಇದು ಮಕ್ಕಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವವರು ಅನಾರೋಗ್ಯಕ್ಕೆ ತುತ್ತಾಗುವುದು ಕಡಿಮೆಯಾಗುವುದು.



Click it and Unblock the Notifications