Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಪೋಷಕರೇ ಮದುವೆಗೆ ಮುನ್ನ ಮಗಳನ್ನು ಆರ್ಥಿಕ ಸ್ವತಂತ್ರಳನ್ನಾಗಿ ಮಾಡಬೇಕು ಎನ್ನುವುದು ಇದೇ ಕಾರಣಕ್ಕೆ
ಮಾರ್ಚ್ 8ಕ್ಕೆ ಅಂತರರಾಷ್ಟ್ರೀಯ ದಿನ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಿ ಮಹಿಳೆಯರನ್ನು ಶಸಕ್ತರನ್ನಾಗುವಂತೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ನಾವು ಆಧುನಿಕ ಕಾಲಘಟ್ಟದಲ್ಲಿ ಇದ್ದರೂ, ಮಹಿಲೆಯರ ಮೇಲಾಗುತ್ತಿರುವ ದೌರ್ಜನ್ಯ ಮಾತ್ರ ಕಡಿಮೆಯಾಗುತ್ತಿಲ್ಲ.

ಹೆಣ್ಣು ಅಬಲೆ ಎಂದು ಹೇಳಿ-ಹೇಳಿಯೇ ಅವಳನ್ನು ದುರ್ಬಲೆ ಮಾಡುವ ಪ್ರಯತ್ನಗಳು ಆಗುತ್ತಿವೆ. ಹೆಣ್ಣಿಗೆ ಶೋಷಣೆಯಿಂದ ಮುಕ್ತಿ ಹೇಗೆ, ಅವಳು ಶಕ್ತಳಾಗಬೇಕೆಂದರೆ ಏನು ಅವಶ್ಯಕ ಎಂದು ನೋಡುವುದರೆ ಹಣ ಅವಶ್ಯಕ. ಹೌದು ಅವಳು ಮೊದಲು ಆರ್ಥಿಕವಾಗಿ ಸದೃಢಳಾಗಬೇಕು, ಆಗ ಎಂಥದ್ದೇ ಸಮಸ್ಯೆಯಾದರೂ ಎದುರಿಸಲು ಸಾಧ್ಯವಾಗುವುದು.
ಹೆಣ್ಣು ಯಾವಾಗ ಆರ್ಥಿಕವಾಗಿ ಸ್ವತಂತ್ರಳಾಗುತ್ತಾಳೆ ಆಗ ಅವಳಿಗೆ ಎಂಥದ್ದೇ ಪರಿಸ್ಥಿತಿಯಲ್ಲಿ ಬದುಕುವ ಧೈರ್ಯ ಸಿಗುವುದು. ಇಲ್ಲದಿದ್ದರೆ ಸೂತ್ರವಿಲ್ಲದೆ ಗಾಳಿಪಟದಂತಾಗುವುದು. ಒಂದು ನೈಜ ಘಟನೆಯನ್ನು ನಿಮ್ಮ ಮುಂದೆ ಇಡಬಯಸುತ್ತೇನೆ, ಇಂಥ ಸಾವಿರಾರು ಘಟನೆಗಳು ನಮ್ಮ ಕಣ್ಮುಂದೆ ನಡೆಯುತ್ತಿರುತ್ತದೆ.
ಆರ್ಥಿಕವಾಗಿ ಸಬಲಳಾದರೆ ಪರಿಸ್ಥಿತಿಗೆ ಕುಗ್ಗಬೇಕಾಗಿಲ್ಲ
ಬೆಂಗಳೂರಿನ ನಾನು ವಾಸಿಸುತ್ತಿರುವ ಎದುರು ಮನೆಯಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಒಂದು ಹಾಲ್ ಕಿಚನ್ ಇರುವಂಥ ಮನೆಯದು, ಇಬ್ಬರು ಮಕ್ಕಳ ಜೊತೆ ಆಕೆ-ಆಕೆಯ ಗಂಡ ವಾಸಿಸುತ್ತಿದ್ದರು. ಗಂಡ ಡ್ರೈವರ್ ಆಗಿದ್ದ, ಎರಡು ಪುಟ್ಟ ಮಕ್ಕಳು. ಪ್ರತಿದಿನ ಮಕ್ಕಳು ಟೆರೇಸ್‌ನಲ್ಲಿ ಆಡುತ್ತಿದ್ದೆವು, , ಮಕ್ಕಳು ಅಲ್ಲೇ ಸಮೀಪದ ಸರ್ಕಾರಿ ಶಾಲೆಗೆ ಹೋಗುತ್ತಿದ್ದರು. ಸ್ವಲ್ಪ ದಿನಗಳಿಂದ ಮಕ್ಕಳು ಕಾಣುತ್ತಿರಲಿಲ್ಲ, ಬಹುಶಃ ಊರುಕಡೆ ಹೋಗಿರಬಹುದು ಎಂದು ಭಾವಿಸಿದೆ, ಆದರೆ ಒಂದು ದಿನ ಆಕೆ ಮತ್ತು ಆಕೆಯ ಮನೆಯವರು ಮನೆ ಖಾಲಿ ಮಾಡಿದರು, ಆಗ ಗೊತ್ತಾಗಿದ್ದು ಗಂಡ ತೀರಿ ಹೋದ, ಬೆಂಗಳೂರಿನಲ್ಲಿಯೇ ಮಕ್ಕಳನ್ನು ಓದಿಸಿ, ಮನೆ ಬಾಡಿಗೆ ಕಟ್ಟಲು, ಆಕೆ ದುಡಿಯುತ್ತಿರಲಿಲ್ಲ, ಮನೆಯಲ್ಲಿಯೇ ಇದ್ದಕ್ಕಿದ್ದಂತೆ ದುಡಿಯಬೇಕಾದ ಪರಿಸ್ಥಿತಿ ಬಂದಾಗ ಮಕ್ಕಳನ್ನು ಅರ್ಧದಲ್ಲಿಯೇ ಶಾಲೆ ಬಿಡಿಸಿ ಊರಿಗೆ ಹೋದಳು. ಮುಂದಿನ ವರ್ಷ ಊರಿನ ಶಾಲೆಯಲ್ಲಿಯೇ ಹಾಕುವ ಎಂದು ಭಾವಿಸಿ ಕರೆದುಕೊಂಡು ಹೋಗಿರಬಹುದು. ಅದೇ ಅವಳು ದುಡಿಯುತ್ತಿದ್ದರೆ ಮಕ್ಕಳ ವಿದ್ಯಾಭ್ಯಾಸ ಮೊಟಕುಗೊಳಿಸಿ ಊರಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ, ಊರಿಗೆ ಹೋಗಲೇಬೇಕೆಂದು ಮಕ್ಕಳ ಆ ವರ್ಷದ ಪರೀಕ್ಷೆ ಕಳೆದ ಕರೆದುಕೊಂಡು ಹೋಗುತ್ತಿದ್ದರು, ಅದರೆ ಪರಿಸ್ಥಿತಿ ಅವಳನ್ನು ಅಸಾಯಕಳನ್ನಾಗಿ ಮಾಡಿತು.
ಇದು ಬರೀ ಆಕೆಯೊಬ್ಬಳದ್ದೇ ಕಣ್ಣೀರ ಕತೆಯಲ್ಲ, ಅನೇಕ ಹೆಣ್ಮಕ್ಕಳ ಕತೆಯಾಗಿದೆ. ಆಕಸ್ಮಿಕವಾಗಿ ಗಂಡ ತೀರಿ ಹೋದಾಗ ಮುಂದೇನು ಮಾಡಬೇಕೆಂದು ತಿಳಿಯದೆ ಕಣ್ಣೀರು ಹಾಕುತ್ತಾ ತಮ್ಮ ವಿಧಿಗೆ ಬೈಯ್ದುಕೊಳ್ಳುತ್ತಾ ಇರುವ ಎಷ್ಟೋ ಹೆಣ್ಮಕ್ಕಳಿದ್ದಾರೆ. ಆದರೆ ಯಾವಾಗ ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಿರುತ್ತಾಳೋ ಆಗ ಅವಳ ಬದುಕಿನಲ್ಲಿ ಬರುವ ಆಕಸ್ಮಿಕ ಘಟನೆಗಳನ್ನು ಶಕ್ತವಾಗಿ ಎದುರಿಸುತ್ತಾಳೆ.
ಪೋಷಕರೇ ಮದುವೆಗೆ ಮುನ್ನ ಮಗಳನ್ನು ಆರ್ಥಿಕ ಸ್ವತಂತ್ರಳನ್ನಾಗಿ ಮಾಡಿ
ಎಷ್ಟೋ ಪೋಷಕರಿಗೆ ಬೆಳೆದು ನಿಂತ ಮಗಳನ್ನು ಮದುವೆ ಮಾಡಿ ಕಳುಹಿಸಬೇಕೆಂಬ ಒಂದೇ ಯೋಚನೆ, ನಾಳೆ ವಾಳ ಬದುಕಿನ ಸುಭದ್ರತೆ ಏನು ಎಂದು ಯೋಚಿಸುವುದಿಲ್ಲ. ಹುಡುಗ ಕೆಲಸದಲ್ಲಿದ್ದಾನೆ, ಹುಡುಗನ ಮನೆತನ ಚೆನ್ನಾಗಿದೆ ಎಂದು ಮದುವೆ ಮಾಡಿ ಕಳುಹಿಸುತ್ತಾರೆ. ಆದರೆ ಹಾಗೆ ಮದುವೆಯಾಗಿ ಹೋದ ಎಲ್ಲಾ ಹೆಣ್ಮಕ್ಕಳಿಗೆ ಒಂದು ಒಳ್ಳೆಯ ಬದುಕು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೋ ಹೆಣ್ಮಕ್ಕಳು ಮದುವೆಯಾದ ಮೇಲೆ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಎಷ್ಟೋ ಬಾರಿ ನಾನು ತವರು ಮನೆಗೆ ಭಾರವಾಗಬಹುದು ಎಂಬ ಕಾರಣಕ್ಕೆ ಎಲ್ಲಾ ಕಷ್ಟಗಳನ್ನು ನುಂಗುತ್ತಿರುತ್ತಾಳೆ, ಅದೇ ಅವಳು ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ ಇಂಥ ದೌರ್ಜನ್ಯ ಸಹಿಸದೆ ಹೊರಬಂದು ಒಂದು ಒಳ್ಳೆಯ ಬದುಕು ಕಟ್ಟುವ ನಿರ್ಧಾರ ಮಾಡುತ್ತಾರೆ.
ಕನಿಷ್ಠ ಪಕ್ಷ ಒಂದು ಚಿಕ್ಕ ಕೈ ಕೆಲಸವನ್ನಾದರೂ ಕಲಿಸಿ
ಹೆಣ್ಣು ಸ್ವಾಲಂಭಿಯಾಗಬೇಕೆಂದರೆ ಅವಳು ದೊಡ್ಡ ಕೆಲಸಕ್ಕೇ ಸೇರಬೇಕೆಂದಲ್ಲ, ಚಿಕ್ಕ-ಪುಟ್ಟ ಕೈ ಕೆಲಸ ಕಲಿತಿದ್ದಾರೆ ಸಾಕು ಆರಾಮವಾಗಿ ತನ್ನ ಬದುಕು ಕಟ್ಟಿಕೊಳ್ಳಬಹುದು. ಟೈಲರಿಂಗ್, ಕಸೂತಿ ಕೆಲಸ, ಚೆನ್ನಾಗಿ ಅಡುಗೆ ಮಾಡುವುದು , ಬ್ಯೂಟಿಷಿಯನ್ ಹೀಗೆ ಅದು ಇದು ಅಂತಲ್ಲ ಯಾವುದೇ ಕೆಲಸವಾಗಿರಲಿ ಅವಳು ಅದರಿಂದ ಒಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಿದ್ದರೆ ಸಾಕು.



Click it and Unblock the Notifications
