Latest Updates
-
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು?
ಪ್ರೀತಿಸಿದವರು ಪದೇ ಪದೇ ಕನಸಿನಲ್ಲಿ ಬರ್ತಿದ್ದಾರಾ? ಶುಭವೋ, ಅಶುಭವೋ?
ಸಹಗಲು ಕನಸು ಹಾಗೂ ರಾತ್ರಿಯ ಕನಸಿಗೂ ತುಂಬಾನೇ ವ್ಯತ್ಯಾಸವಿದೆ. ಹಗಲಿನಲ್ಲಿ ನಾವು ನಿದ್ರಿಸದೆಯೇ ನಮಗಿಷ್ಟ ಬಂದ ಕನಸುಗಳನ್ನು ನಾವು ಕಾಣಬಹುದು. ಆದ್ರೆ ರಾತ್ರಿಯ ಕನಸುಗಳು ನಮ್ಮ ನಿಯಂತ್ರಣದಲ್ಲಿ ಇರೋದಿಲ್ಲ. ಕೆಲವೊಂದು ಬಾರಿ ಸಿಹಿಗನಸುಗಳು ಬಿದ್ದರೆ ಇನ್ನೂ ಕೆಲವು ಬಾರಿ ಕೆಟ್ಟ ಕನಸುಗಳು ನಮ್ಮನ್ನು ಕಾಡುತ್ತವೆ. ನಿಮಗೆಂದಾದರೂ ನಿಮ್ಮ ಪ್ರೀತಿಯ ಬಗೆಗಿನ ಕನಸುಗಳು ಬಿದ್ದಿದ್ಯಾ?

ಹೌದು, ನಿಮ್ಮ ಕನಸಿನಲ್ಲಿ ನೀವು ಪ್ರೀತಿಸುವವರನ್ನು ಮದುವೆಯಾಗುತ್ತಿರುವ ಹಾಗೆ, ಮದುವೆ ಮುರಿದು ಬಿದ್ದ ಹಾಗೆ, ಇದೇ ರೀತಿ ನಿಮ್ಮ ಪ್ರೀತಿಯ ಬಗ್ಗೆ ನಿಮಗೆ ಎಂದಾದರೂ ಕನಸು ಬಿದ್ದಿದ್ಯಾ? ಒಳ್ಳೆಯ ಕನಸು ಬಂದಾಗ ಅದನ್ನು ಅಪ್ಪಿಕೊಳ್ಳುತ್ತೇವೆ. ಆದರೆ ಕೆಟ್ಟ ಕನಸುಗಳ ಬಂದಾಗ ಆ ಕನಸು ಸುಳ್ಳು ಎಂದು ಮೂಗು ಮುರಿಯುವುದುಂಟು. ನಿಮಗೊತ್ತಾ? ಅಂತಹ ಕನಸುಗಳು ನಿಮ್ಮ ಭವಿಷ್ಯದ ಸೂಚನೆಯಂತೆ.
ಅಷ್ಟಕ್ಕು ಈ ಪ್ರೀತಿಯ ಕನಸುಗಳ ಬಗ್ಗೆ ಕನಸಿನ ಪುಸ್ತಕದಲ್ಲಿ ಏನೆಂದು ಉಲ್ಲೇಖವಾಗಿದೆ. ಪ್ರೀತಿಯ ಬಗ್ಗೆ, ಪ್ರೀತಿಸಿದವರ ಬಗ್ಗೆ ಕನಸು ಬಿದ್ದರೆ ಏನರ್ಥ? ಎಲ್ಲವನ್ನೂ ಹೇಳ್ತೀವಿ.
1. ಕನಸಿನಲ್ಲಿ ಉಂಗುರ ಕಂಡರೆ ಶುಭವಾಗುತ್ತದೆ
ಕನಸಿನ ವಿಜ್ಞಾನದ ಪ್ರಕಾರ ಒಂದು ಗಂಡು ಅಥವಾ ಹೆಣ್ಣು ತಮ್ಮ ಕನಸಿನಲ್ಲಿ ಉಂಗುರವನ್ನು ಕಂಡರೆ ಅದು ಶುಭ ಸೂಚನೆ. ನಿಮ್ಮ ಪ್ರೀತಿಯು ಮತ್ತಷ್ಟು ಗಟ್ಟಿಯಾಗುತ್ತದೆ ಎಂದರ್ಥ. ನಿಮ್ಮ ಪ್ರೀತಿಯು ಮತ್ತೊಂದು ಹಂತ ಅಂದರೆ ಮದುವೆಯವರೆಗೂ ಹೋಗುತ್ತದೆ ಎಂದರ್ಥ.
2. ಆಭರಣದ ಕನಸು ಕಂಡರೆ ಶುಭ ಸೂಚನೆ
ಕನಸಿನ ವಿಜ್ಞಾನ ಏನು ಹೇಳುತ್ತೆ ಅಂದರೆ ಒಂದು ವೇಳೆ ಹುಡುಗಿಯರಿಗೆ ಅಭರಣದ ಕನಸು ಅಥವಾ ಆಭರಣ ಖರೀದಿಸುವ ಕನಸು ಕಂಡರೆ ಖಂಡಿತ ಅದು ಶುಭ ಸೂಚನೆ. ನೀವು ನಿಮ್ಮ ಪ್ರೀತಿಯ ಹುಡುಗನನ್ನು ಆದಷ್ಟು ಬೇಗ ಪಡೆಯುತ್ತೀರಿ ಎಂದರ್ಥ. ಒಂದು ವೇಳೆ ಕನಸಿನಲ್ಲಿ ನೀವು ಆಭರಣ ಧರಿಸುತ್ತಿದ್ದರೆ ನಿಮಗೆ ಸದ್ಯದಲ್ಲೇ ಮದುವೆ ಯೋಗವಿದೆ ಎಂದರ್ಥ.
3. ಇದು ಶುಭ ಸೂಚನೆಯಲ್ಲ
ಕನಸಿನ ವಿಜ್ಞಾನದ ಪ್ರಕಾರ ನಿಮ್ಮ ಕನಸಿನಲ್ಲಿ ಮದುವೆಯಾದ ಮಹಿಳೆ ಮತ್ತು ಒರ್ವ ಯುವಕ ಜಗಳವಾಡುತ್ತಿರುವುದನ್ನು ಕಂಡರೆ ಅದು ಖಂಡಿತ ಶುಭ ಸೂಚನೆಯಲ್ಲ. ಇದು ನಿಮ್ಮ ಭವಿಷ್ಯದ ದಾಂಪತ್ಯ ಜೀವನ ಸುಖಕರವಾಗಿರುವುದಿಲ್ಲ ಹಾಗೂ ವಿಚ್ಛೇಧನ ನೀಡುವ ಲಕ್ಷಣ ಇದೆ ಎಂಬುದನ್ನು ಸೂಚಿಸುತ್ತದೆ.
ಪ್ರತಿಯೊಂದು ಕನಸಿಗೂ ಕನಸಿನ ವಿಜ್ಞಾನದಲ್ಲಿ ಒಂದೊಂದು ಸೂಚನೆಯಿದೆ. ಕೆಲವೊಂದು ಕನಸುಗಳು ಶುಭ ಸೂಚನೆಯಾದರೆ ಇನ್ನೂ ಕೆಲವು ಕನಸುಗಳು ಅಶುಭದ ಸಂಕೇತವಾಗಿದೆ.



Click it and Unblock the Notifications


