Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹಣಕಾಸು ಸಮಸ್ಯೆಯಿದ್ದರೆ, ಉಪ್ಪಿನಿಂದ ಈ ವಾಸ್ತು ಪರಿಹಾರ ಮಾಡಿ, ಖಂಡಿತಾ ಫಲ ನೀಡುವುದು
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದಲ್ಲ ಒಂದು ರೀತಿಯ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ಅದಕ್ಕೆ ನಮ್ಮ ಸ್ವಂತ ಮಟ್ಟದಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅದರಲ್ಲಿ ಒಂದು ವಾಸ್ತು ಪರಿಹಾರ. ಇದರ ಸಹಾಯದಿಂದ ನಾವು ಜೀವನದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ಇಂದು ನಾವು ಉಪ್ಪಿನ ಮೂಲಕ ನಮ್ಮ ಸಮಸ್ಯೆಗಳಿಗೆ ಹೇಗೆ ಪರಿಹಾರ ಪಡೆಯಬಹುದು ಎಂಬದನ್ನು ತಿಳಿಸಿಕೊಡಲಿದ್ದೇವೆ.
ಉಪ್ಪಿಲ್ಲದೇ ಯಾವುದೇ ಆಹಾರ ರುಚಿಸದು. ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಹಲವಾರು ಸಮಸ್ಯೆಗಳಿಂದ ಮುಕ್ತರಾಗಲು ಸಹಾಯ ಮಾಡುವುದು. ಅದು ಹೇಗೆ?, ವಾಸ್ತು ಶಾಸ್ತ್ರದ ಪ್ರಕಾರ ಅದನ್ನು ಹೇಗೆ ಬಳಸವುದು ಎಂಬುದನ್ನು ನೋಡೋಣ.

ಆರ್ಥಿಕ ಬಿಕ್ಕಟ್ಟಿಗೆ ಈ ಕ್ರಮಗಳನ್ನು ತೆಗೆದುಕೊಳ್ಳಿ:
ಕೆಲವೊಮ್ಮೆ ಮನೆಯಲ್ಲಿ ಹಣದ ಕೊರತೆ ಇರುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯು ಬಹಳಷ್ಟು ಹಣವನ್ನು ಗಳಿಸಿದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ವಾಸ್ತು ಪ್ರಕಾರ, ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ನಿಮ್ಮ ಮನೆಯಿಂದ ದೂರವಿರಲು, ಒಂದು ಲೋಟ ನೀರು ತುಂಬಿಸಿ, ಅದಕ್ಕೆ ಉಪ್ಪು ಸೇರಿಸಿ, ಅದನ್ನು ಮನೆಯ ನೈಋತ್ಯ ಮೂಲೆಯಲ್ಲಿ ಇರಿಸಿ. ಜೊತೆಗೆ ಲೋಟದ ಮೇಲೆ ಕೆಂಪು ಬಲ್ಬ್ ಅನ್ನು ಇಡಿ, ಅದು ಉರಿಯುವಾಗ ಅದರ ಬೆಳಕು ನೇರವಾಗಿ ಗಾಜಿನ ಮೇಲೆ ಬೀಳಬೇಕು. ಗಾಜಿನ ನೀರು ಒಣಗಿದಾಗ, ಅದನ್ನು ಸ್ವಚ್ಛಗೊಳಿಸಿ, ಮತ್ತೆ ನೀರಿನಲ್ಲಿ ಉಪ್ಪು ಹಾಕಿ. ಹೀಗೆ ಮಾಡುವುದರಿಂದ ಹಣಕಾಸಿನ ಮುಗ್ಗಟ್ಟು ಇರುವುದಿಲ್ಲ ಮತ್ತು ಹಣದ ನಿರ್ವಹಣೆಯೂ ಚೆನ್ನಾಗಿರುತ್ತದೆ.

ಒತ್ತಡದಿಂದ ಮುಕ್ತವಾಗಲು ಹೀಗೆ ಮಾಡಿ:
ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು, ಗಾಜಿನ ಬಟ್ಟಲಿನಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಳ್ಳಿ, ಉಪ್ಪು ಸ್ವಲ್ಪ ದಪ್ಪವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಆ ಬಟ್ಟಲಿನಲ್ಲಿ ಉಪ್ಪಿನೊಂದಿಗೆ ನಾಲ್ಕೈದು ಲವಂಗಗಳನ್ನು ಹಾಕಿ. ನೀವು ಅದನ್ನು ಮನೆಯ ಯಾವುದೇ ಮೂಲೆಯಲ್ಲಿ ಇರಿಸಬಹುದು. ಹೀಗೆ ಮಾಡುವುದರಿಂದ ಹಣವನ್ನು ಪಡೆಯಲು ಪ್ರಾರಂಭಿಸುತ್ತೀರಿ. ಇದರೊಂದಿಗೆ ಮನೆಯ ಅದೃಷ್ಟವೂ ಇರುತ್ತದೆ. ಜೊತೆಗೆ ಆಹ್ಲಾದಕರ ವಾತಾವರಣವೂ ಮನೆಯಲ್ಲಿ ನೆಲೆಸಿರುತ್ತದೆ.

ವಾಸ್ತು ದೋಷಗಳಿಗೆ ಈ ಪರಿಹಾರಗಳನ್ನು ಮಾಡಿ:
ಬಾತ್ ರೂಮ್ ಗೆ ಸಂಬಂಧಿಸಿದ ವಾಸ್ತು ದೋಷವಿದ್ದರೆ ಬಟ್ಟಲಿನಲ್ಲಿ ಕಲ್ಲು ಉಪ್ಪನ್ನು ತೆಗೆದುಕೊಂಡು ಬಾತ್ ರೂಂನಲ್ಲಿ ಯಾರೂ ಮುಟ್ಟದ ಜಾಗದಲ್ಲಿ ಇಡಿ. ಕೆಲವು ದಿನಗಳ ನಂತರ, ಆ ಉಪ್ಪನ್ನು ನೆನಪಿನಿಂದ ಬದಲಾಯಿಸಿ.

ಸಂಬಂಧಗಳಲ್ಲಿ ಮಾಧುರ್ಯವನ್ನು ತರಲು ಹೀಗೆ ಮಾಡಿ:
ಉಪ್ಪು ಆರ್ಥಿಕ ಬಿಕ್ಕಟ್ಟನ್ನು ಸುಧಾರಿಸಲು ಮಾತ್ರವಲ್ಲದೇ, ಪರಸ್ಪರ ಸಂಬಂಧಗಳನ್ನು ಸುಧಾರಿಸಲು ಪರಿಣಾಮಕಾರಿಯಾಗಿದೆ. ಪತಿ-ಪತ್ನಿಯ ನಡುವೆ ಭಿನ್ನಾಭಿಪ್ರಾಯ ಇದ್ದರೆ ವಾಸ್ತು ಪ್ರಕಾರ ಒಂದು ಬಟ್ಟಲಿನಲ್ಲಿ ಉಪ್ಪನ್ನು ತೆಗೆದುಕೊಂಡು ಮಲಗುವ ಕೋಣೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ನೀವು ಹದಿನೈದು ದಿನಗಳು ಅಥವಾ ಒಂದು ತಿಂಗಳ ನಂತರ ಈ ಉಪ್ಪನ್ನು ಬದಲಾಯಿಸಬಹುದು.

ನಕಾರಾತ್ಮಕತೆ ನಿವಾರಣೆಗೆ ಹೀಗೆ ಮಾಡಿ:
ವಾಸ್ತು ಶಾಸ್ತ್ರದಲ್ಲಿ ಉಪ್ಪಿನ ಹಲವು ಸರಳ ಪರಿಹಾರಗಳಿವೆ. ಆದರೆ ನಿಮ್ಮ ಮನೆಯಿಂದ ನಕಾರಾತ್ಮಕತೆಯನ್ನು ತೊಡೆದುಹಾಕಲು ಸುಲಭವಾದ ಮತ್ತು ಸರಳವಾದ ಪರಿಹಾರವೆಂದರೆ, ಉಪ್ಪುನೀರಿನಿಂದ ನೆಲ ಒರೆಸುವುದು. ಇಡೀ ವಾರ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ವಾರಕ್ಕೆ ಎರಡು ಬಾರಿ ಉಪ್ಪುನೀರಿನಿಂದ ನೆಲೆ ಒರೆಸುವುದರಿಂದ, ಎಲ್ಲಾ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ.



Click it and Unblock the Notifications
