Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ನಿಮ್ಮ ಅದೃಷ್ಟ ಬದಲಾಗಲು ಅಕ್ವೇರಿಯಂನಲ್ಲಿ ಈ ಮೀನಿರಲಿ!
ವಾಸ್ತು ಶಾಸ್ತ್ರದ ಪ್ರಕಾರ, ಅಕ್ವೇರಿಯಂಗಳಿಗೆ ಅಂದರೆ ಮನೆಯೊಳಗೆ ಮೀನು ಇಡುವುದಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದು ಹಲವಾರು ದೋಷಗಳನ್ನು ನಿವಾರಣೆ ಮಾಡಿ, ಮನೆಗೆ, ಕುಟುಂಬಕ್ಕೆ ಶಾಂತಿ, ಸಮೃದ್ಧತೆಗೆ ಕಾರಣವಾಗುತ್ತದೆ ಎಂಬ ನಂಬಿಕೆ ವಾಸ್ತು ವರ್ಗದಲ್ಲಿದೆ. ಆದರೆ ನಾವಿಂದು ಹೇಳಹೊರಡಿರುವುದು ಅಕ್ವೇರಿಯಂ ಬಗ್ಗೆ ಅಲ್ಲ, ಮನೆಯಲ್ಲಿ ಸಂಪತ್ತು ನೆಲೆಸಬೇಕಾದರೆ ಆ ಅಕ್ವೇರಿಯಂನಲ್ಲಿ ಇಡಬೇಕಾದ ಒಂದು ಮೀನಿನ ಬಗ್ಗೆ. ಹಾಗಾದರೆ ಆ ಮೀನು ಯಾವುದು? ಅದರ ವಿಶೇಷತೆಗಳೇನು ಎಲ್ಲವನ್ನೂ ನೋಡೋಣ.
ಅದೃಷ್ಟ ಬದಲಾಗಲು ಮನೆಯಲ್ಲಿ ಅರೋವಾನಾ ಮೀನನ್ನು ಯಾಕೆ ಇಡಬೇಕು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

ಅದೃಷ್ಟದ ಸಂಕೇತ ಅರೋವಾನಾ ಮೀನು:
ಅರೋವಾನಾ ಒಂದು ಸಾಮಾನ್ಯ ಸಾಕು ಮೀನು ಅಲ್ಲ. ಇದು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತಿದ್ದು, ಸುಮಾರು 3 ಅಡಿ ಉದ್ದವಿರುತ್ತದೆ. ಇದರ ಬೆಲೆ ತುಂಬಾ ಹೆಚ್ಚಾಗಿದ್ದು, ಇದರಿಂದಾಗಿ ಈ ಮೀನಿನ ವಿಷಯದಲ್ಲಿ ಅಪರಾಧವೂ ಹೆಚ್ಚಾಗಿದೆ. ಚೀನಿಯರು ಈ ಅರೋವಾನಾ ಮೀನುಗಳನ್ನು ಅದೃಷ್ಟದ ಸಂಕೇತವೆಂದು ನಂಬುತ್ತಾರೆ. ಅದಕ್ಕಾಗಿ ಲಕ್ಷಲಕ್ಷ ಖರ್ಚು ಮಾಡಿ, ಮನೆಯಲ್ಲಿ ಸಾಕುತ್ತಾರೆ. ಇವುಗಳು ಚಿನ್ನದ ಮೀನುಗಳಂತೆ. ಇದನ್ನು ಮನೆಯೊಳಗೆ ಇಟ್ಟುಕೊಳ್ಳುವುದರಿಂದ ವಾಸ್ತುದೋಷ ನಿವಾರಣೆಯಾಗಿ, ನಿಮ್ಮ ಅದೃಷ್ಟ ಬದಲಾಗುವುದು ಎಂಬ ನಂಬಿಕೆಯಿದೆ.

ಅರೋವಾನಾ ಮೀನಿನ ವಿಶೇಷತೆಯೇನು?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಆರೋವಾನಾ ಮೀನನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಮೀನನ್ನು ಮನೆಯಲ್ಲಿಟ್ಟರೆ ನಿಮ್ಮ ಅದೃಷ್ಟ ಬದಲಾಗುವುದಂತೆ. ಏಕೆಂದರೆ ಈ ಮೀನು ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಸಂಪತ್ತು ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ವಾಸ್ತುವಿನ ಗೋಲ್ಡನ್ ಡ್ರ್ಯಾಗನ್ ಎಂದೂ ಕರೆಯಲ್ಪಡುವ ಅರೋವಾನಾ ಮೀನುಗಳನ್ನು ಅದೃಷ್ಟದ ಪ್ರಬಲ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ಸಾಕುವವರಿಗೆ ಸಂತೋಷ, ಪ್ರೀತಿ, ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ವೈಯಕ್ತಿಕ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಮನೆಯ, ಮನದ ಕೆಟ್ಟ ಶಕ್ತಿಗಳನ್ನು ದೂರಮಾಡುತ್ತದೆ.

ವಾಸ್ತುದೋಷ ನಿವಾರಣೆಗೆ ಈ ಮೀನನ್ನು ಹೇಗಿಡಬೇಕು?:
ಉತ್ತಮ ಸಂಪತ್ತಿಗಾಗಿ, ನಿಮ್ಮ ಮನೆಯಲ್ಲಿ ಜೀವಂತ ಮೀನುಗಳನ್ನು ಸಾಕಿದರೆ ಉತ್ತಮ. ಒಂದು ವೇಳೆ ಅಕ್ವೇರಿಯಂ ಇಡಲು ಸಾಧ್ಯವಾಗದಿದ್ದರೆ ಅಥವಾ ನಿಮಗೆ ಇಷ್ಟವಿಲ್ಲದಿದ್ದರೆ ಬಾಯಿಯಲ್ಲಿ ನಾಣ್ಯ ಇಟ್ಟುಕೊಂಡಿರುವ ಚಿನ್ನದ ಅರೋವಾನಾ ಮೀನಿನ ಮೂರ್ತಿಯನ್ನು ಮನೆಯಲ್ಲಿ ಇಡಬಹುದು. ಆದರೆ ಈ ವಿಗ್ರಹವನ್ನು ನಿಮ್ಮ ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಲಾಭ.
ಗಮನಿಸಿ: ಕೆಲವು ಪ್ರಾಣಿಶಾಸ್ತ್ರಜ್ಞರ ಪ್ರಕಾರ, ಆರೋವಾನಾ ಮೀನುಗಳು ಭೂಕಂಪದ ಮುನ್ಸೂಚನೆಯನ್ನು ನೀಡುತ್ತವೆಯಂತೆ.



Click it and Unblock the Notifications
