Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ: ಅಪ್ಪು 'ದಿ ಗ್ರೇಟ್' ಅನಿಸಿಕೊಳ್ಳಲು ಈ ಗುಣಗಳೇ ಕಾರಣ
ಜೊತೆಗಿಲ್ಲದ ಜೀವ ಎಂದಿಗೂ ಜೀವಂತ...... ಇಂದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಜನ್ಮದಿನ. ದೈಹಿಕವಾಗಿ ಅವರು ನಮ್ಮೊಂದಿಗೆ ಇಲ್ಲದೇ ಹೋದರೂ ಪ್ರತಿಯೊಬ್ಬರ ಕನ್ನಡಿಗರ ಮನದಲ್ಲಿ ನೆಲೆಸಿರುವ ಅಪ್ಪುವಿಗೆ ಜನ್ಮ ದಿನದ ಶುಭಾಶಯಗಳು.

ಅಪ್ಪು... ಈ ವ್ಯಕ್ತಿತ್ವವನ್ನು ಇಷ್ಟಪಡದವರೇ ಇಲ್ಲ. ಅಪ್ಪು ಅವರ ಮೌಲ್ಯ ಹೆಚ್ಚಿನವರಿಗೆ ತಿಳಿದಿದ್ದು ಅವರು ಇಲ್ಲವಾದ ಮೇಲೆ. ತಾವು ಮಾಡುತ್ತಿರುವ ಸಮಾಜ ಕಾರ್ಯಗಳನ್ನು, ದಾನಗಳನ್ನೂ ಎಲ್ಲಿಯೂ ಹೇಳುತ್ತಿರಲಿಲ್ಲ, ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬುವುದಕ್ಕೆ ಉದಾಹರಣೆ ಅಪ್ಪು. ಇವರು ಮಾಡಿದ ದಾನಗಳೆಷ್ಟೋ, ಕೆಲವೊಮ್ಮೆ ಇವರಿಂದ ದಾನ ಪಡೆದವರಿಗೂ ನಮಗೆ ಸಹಾಯ ಮಾಡಿದ್ದು ಪುನೀತ್ ರಾಜ್‌ಕುಮಾರ್ ಎಂಬುವುದೇ ಗೊತ್ತೇ ಇರಲಿಲ್ಲ.
ಪುನೀತ್ ರಾಜ್‌ಕುಮಾರ್ ಒಬ್ಬ ನಟನಾಗಿ ಮಾತ್ರ ನಮ್ಮ ಪ್ರೀತಿಗೆ ಪಾತ್ರರಾದವರಲ್ಲ, ಬದಲಿಗೆ ತಮ್ಮ ವ್ಯಕ್ತಿತ್ವ, ಗುಣಗಳಿಂದ ನಮಗೆ ಮತ್ತಷ್ಟು ಹತ್ತಿರವಾದವರು. ಇವರ ನಿಷ್ಕಲ್ಮಷ ನಗುವಿಗೆ ಮೋಡಿಯಾಗದವರೇ ಇಲ್ಲ. ಅವರಿಂದು ನಮ್ಮೊಂದಿಗೆ ಇಲ್ಲ, ಆದರೆ ನಮಗೆಲ್ಲ ಹೇಗೆ ಬದುಕಬೇಕು ಎಂಬುವುದನ್ನು ತೋರಿಸಿಕೊಟ್ಟು ಹೋಗಿದ್ದಾರೆ. ಅವರಲ್ಲಿರುವ ಈ ಗುಣಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಬದುಕು ಕೂಡ ತುಂಬಾನೇ ಒಳ್ಳೆಯದಾಗುವುದು.
ನಾವಿಲ್ಲಿ ಅಪ್ಪುವಿನಿಂದ ಕಲಿಯಬೇಕಾಗಿರುವ ವಿಷಯಗಳ ಬಗ್ಗೆ ಹೇಳಿದ್ದೇವೆ ನೋಡಿ:

ಸರಳತೆ:
ದೊಡ್ಮನೆ ಕುಟುಂಬದಲ್ಲಿ ಜನಿಸಿದ ಕುಡಿ. ಹುಟ್ಟುವಾಗಲೇ ಸಂಪತ್ತು, ಸ್ಟಾರ್‌ಪಟ್ಟ ಎಲ್ಲಾ ನೋಡಿಕೊಂಡು ಬೆಳೆದವರು. ಆದರೆ ಅವರಲ್ಲಿ ಅಹಂ ಎಂಬುವುದು ಒಂದಿಷ್ಟೂ ಇರಲಿಲ್ಲ. ತುಂಬಿದ ಕೊಡ ತುಳುಕಲ್ಲ ಎಂಬುವುದ ಇಂಥವರನ್ನು ನೋಡಿಯೇ ಹೇಳಿರುವುದು. ಯಾವತ್ತಿಗೂ ಎಲ್ಲಿಯೂ ಅಹಂಕಾರ ತೋರಿಸಿದವರಲ್ಲ. ಅವರ ಕೊನೆಯ ಚಿತ್ರ ಗಂಧದ ಗುಡಿ ಶೂಟಿಂಗ್ ವೇಳೆ ಅವರ ಜನರ ಜೊತೆ ಬೆರೆಯುತ್ತಿದ್ದ ರೀತಿ ನೋಡಿ ಒಬ್ಬ ಸ್ಟಾರ್ ನಟ ಇಷ್ಟೊಂದು ಸರಳವಾಗಿರಲು ಹೇಗೆ ಸಾಧ್ಯ ಎಂದು ಅಚ್ಚರಿಪಟ್ಟಿದ್ದರು.
ಎಷ್ಟೇ ದುಡ್ಡಿರಲಿ, ಸೆಲೆಬ್ರಿಟಿ ಪಟ್ಟವಿರಲಿ, ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ನಮ್ಮ ಬದುಕಿನಲ್ಲಿ ನಾವು ಸರಳತೆಯಿಂದ ವರ್ತಿಸಿದರೆ ಈ ಗುಣ ನಮ್ಮನ್ನು ಮತ್ತಷ್ಟು ದೊಡ್ಡ ವ್ಯಕ್ತಿಯನ್ನಾಗಿಸುತ್ತದೆ.

ದಾನ:
ಪುನೀತ್ ರಾಜ್‌ಕುಮಾರ್ ಈ ಸಮಾಜಕ್ಕೆ ನೀಡಿರುವ ಕೊಡುಗೆಅಷ್ಟಿಷ್ಟಲ್ಲ, ಆದರೆ ಇವೆಲ್ಲಾ ಬೆಳಕಿಗೆ ಬಂದದ್ದು ಅವರ ಮರಣವೊಂದಿದ ಬಳಿಕ. ಇವರ ಕಾರ್ಯಗಳನ್ನು ತಿಳಿದಿ ಅಪ್ಪು ಅಭಿಮಾನಿಗಳು ನಮ್ಮ ದೇವರಂತೆ ನಾವು ಕೂಡ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು, ಬಡಡಮಕ್ಕಳಿಗೆ ಓದಲು ನೆರವಾಗಬೇಕು ಎಂದು ಮುಂದಾಗಿದ್ದಾರೆ. ಪುನೀತ್ ರಾಜ್ ಮಾಡಿರುವ ಒಳ್ಳೆಯ ಕಾರ್ಯಗಳಿಂದ ಸ್ಪೂರ್ತಿ ಪಡೆದ ಎಷ್ಟೋ ಹಣವಂತರು ಕೂಡ ತಮ್ಮಲ್ಲಿರುವ ಹಣದಲ್ಲಿ ಸ್ವಲ್ಪವಾದರೂ ಈ ಸಮಾಜಕ್ಕಾಗಿ ನೀಡಬೇಕು ಎಂದು ಅಪ್ಪುವನ್ನು ನೋಡಿ ಸ್ಪೂರ್ತಿ ಪಡೆದಿದ್ದಾರೆ ಎಂದರೆ ತಪ್ಪಾಗಲಾರದು.

ಫಿಟ್ನೆಸ್:
ಅಪ್ಪು ಫಿಟ್ನೆಸ್ ಕಡೆಗೆ ತುಂಬಾನೇ ಗಮನ ಕೊಡುತ್ತಿದ್ದರು. ಅವರ ಫಿಟ್ನೆಸ್‌ಗೆ ಮಾರು ಹೋಗದವರೇ ಇಲ್ಲ, ಅಷ್ಟೊಂದು ಕಟ್ಟು ಮಸ್ತಾದ ಮೈಕಟ್ಟು ಹೊಂದಿದ್ದರು. ತಾವು ಫಿಟ್ ಆಗಿರುವ ಮೂಲಕ ಇತರರಿಗೂ ಫಿಟ್ನೆಸ್ ಮಹತ್ವದ ಬಗ್ಗೆ ಹೇಳಿದ್ದರು. ಫಿಟ್ನೆಸ್ ವಿಷಯದಲ್ಲೂ ಇವರು ಯುವ ಜನತೆಗೆ ಆದರ್ಶ.

ಫ್ಯಾಷನ್:
ಇನ್ನು ಪುನೀತ್ ರಾಜ್‌ಕುಮರ್ ಫ್ಯಾಷನ್ ಬಗ್ಗೆ ಹೇಳಿದರೆ ನೀವೆಲ್ಲಾ ಅಚ್ಚರಿಯಾಗುವುದು ಗ್ಯಾರಂಟಿ. ಏಕೆಂದರೆ ಇವರು ದೊಡ್ಡ ಸ್ಟಾರ್, ಬ್ರ್ಯಾಂಡೆಡ್ ಬಟ್ಟೆಗಳನ್ನೇ ಧರಿಸುತ್ತಾರೆ ಎಂದು ನೀವು ಅಂದುಕೊಂಡಿದ್ದರೆ ಅದು ತಮ್ಮ. ಅವರು ನಾರ್ಮಲ್ ಬಟ್ಟೆಗಳನ್ನು ಧರಿಸುತ್ತಿದ್ದರು. ಅವರೇ ಹೇಳಿದಂತೆ ನಮ್ಮನ್ನು ಇತರರು ಫಾಲೋ ಮಾಡ್ತಾರೆ, ಈ ಕಾರಣಕ್ಕೆ ಬ್ರ್ಯಾಂಡೆಡ್ ಬಟ್ಟೆ ಬಿಟ್ಟು ಸಾಧಾರಣ ಬಟ್ಟೆ ಧರಿಸಲಾರಂಭಿಸಿದೆ ಎಂದು ಹೇಳಿದ್ದಾರೆ. ಈ ಮೂಲಕ ಸಿಂಪ್ಲಿಸಿಟಿಗೂ ಉದಾಹರಣೆಯಾಗಿದ್ದರು.
ಎಲ್ಲಾ ಇದ್ದರೂ ಎಲ್ಲಾ ಆಡಂಬರಗಳಿಂದ ದೂರವಿದ್ದ ಅಪ್ಪು ನಮಗೆಲ್ಲರಿಗೂ ಹಲವಾರು ವಿಷಯಗಳಲ್ಲಿ ಆದರ್ಶ ವ್ಯಕ್ತಿ. ಹೇಗೆ ಬದುಕಬೇಕು, ಬದುಕನ್ನು ಸಾರ್ಥವಾಗಿಸುವುದು ಹೇಗೆ ಎಂಬುವುದನ್ನು ಅಪ್ಪು ನೋಡಿ ಕಲಿಯಬೇಕಾಗಿದೆ.

ಮಿಸ್ ಯೂ ಅಪ್ಪು
ಅಜರಾಮರ ಅಪ್ಪು.... ಹುಟ್ಟು ಹಬ್ಬದ ಶುಭಾಶಯಗಳು... ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಿ ಬನ್ನಿ...



Click it and Unblock the Notifications











