Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಪಿತೃಪಕ್ಷ 2021: ಪೂರ್ವಜರಿಗೆ ಪಿಂಡಪ್ರಧಾನ ಮಾಡುವುದರ ಹಿಂದಿದೆ ಈ ಮಹತ್ವ
2021ರ ಪಿತೃ ಪಕ್ಷ ಕಾಲಾವಧಿಯು ಸೆಪ್ಟೆಂಬರ್ 20ರಂದು ಆರಂಭವಾಗಲಿದ್ದು, ಮುಂದಿನ 16ದಿನಗಳವರೆಗೆ ಇರಲಿದೆ. ಈ ಸಮಯದಲ್ಲಿ ತಮ್ಮ ಕುಟುಂಬದ ಹಿರಿಯರು ಅಥವಾ ನಮ್ಮನ್ನಗಲಿದ ವ್ಯಕ್ತಿಗಳ ಆತ್ಮ ತೃಪ್ತಿಗಾಗಿ ಶ್ರಾದ್ಧ, ಪಿಂಡಪ್ರಧಾನ, ತರ್ಪಣ ನೀಡುವುದು ರೂಢಿ. ಈ ಸಮಯದಲ್ಲಿ ನಾಯಿ, ಹಸು ಮತ್ತು ಕಾಗೆಗಳಿಗೆ ವಿವಿಧ ಆಹಾರ ಮತ್ತು ಭಕ್ಷ್ಯಗಳನ್ನು ನೀಡಲಾಗುತ್ತದೆ. ಈ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೀಡಿದ ಆಹಾರವು ನಮ್ಮನ್ನಗಲಿದ ಪೂರ್ವಜರನ್ನು ತಲುಪಿ, ಅವರನ್ನು ಸಂತೃಪ್ತಗೊಳಿಸುತ್ತವೆ ಎಂಬ ನಂಬಿಕೆಯಿದೆ.
ಹಾಗಾದರೆ ಬನ್ನಿ, ಈ ಪಿತೃ ಪಕ್ಷದ ಸಮಯದಲ್ಲಿ ಪಿಂಡಪ್ರಧಾನ ಮಾಡುವ ಏಕೆ ಮಾಡುತ್ತಾರೆ ಎಂಬುದನ್ನು ನೋಡೋಣ.
ಪಿತೃ ಪಕ್ಷದಲ್ಲಿ ಹಿರಿಯರಿಗೆ ಪಿಂಡ ಪ್ರಧಾನ ಮಾಡುವುದು ಏಕೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಪಿತೃ ಪಕ್ಷದಲ್ಲಿ ಹಿರಿಯರಿಗೆ ಪಿಂಡ ಪ್ರಧಾನ ಮಾಡುವ ಮಹತ್ವ:
ಹಿಂದೂ ದಂತಕಥೆಗಳ ಪ್ರಕಾರ, ಬದುಕು-ಸಾವಿನ ನಂತರ ನಮ್ಮ ಪೂರ್ವಜರು ಭೂಮಿ ಮತ್ತು ಸ್ವರ್ಗದ ನಡುವಿನ ಜಗತ್ತಿನಲ್ಲಿ ವಾಸಿಸುತ್ತಿರುತ್ತಾರಂತೆ. ಈ ಜಗತ್ತನ್ನು ಯಮಧರ್ಮರಾಜ ಮುನ್ನಡೆಸುತ್ತಿದ್ದು, ಇಲ್ಲಿ, ನಮ್ಮ ಪೂರ್ವಜರು ತಮ್ಮ ದೈಹಿಕ ಅಗತ್ಯಗಳಾದ ಹಸಿವು, ನೋವು, ಬಾಯಾರಿಕೆ ಮತ್ತು ಶಾಖದಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಭೂಮಿಯ ಮೇಲೆ ಅವರ ವಂಶಸ್ಥರು ಮಾಡಿದ ಕಾಣಿಕೆಗಳು ಮತ್ತು ಪೂಜೆಗಳು ಮಾತ್ರ ಅವರಿಗೆ ಉಪಶಮನವನ್ನು ನೀಡಬಲ್ಲವು ಮತ್ತು ಸ್ವರ್ಗಕ್ಕೆ ಪ್ರವೇಶ ಪಡೆಯಲು ಅವಕಾಶ ಮಾಡಿಕೊಡುತ್ತವೆ. ಇದೇ ಕಾರಣಕ್ಕಾಗಿ ಪಿತೃಪಕ್ಷದಂದು ಪೂರ್ವಜರಿಗೆ ಶ್ರಾದ್ಧಾ, ತರ್ಪಣ, ಪಿಂಡಪ್ರಧಾನಗಳನ್ನ ಮಾಡುವುದು. ಇದರಿಂದ ಪೂರ್ವಜರ ಆತ್ಮಗಳು ತೃಪ್ತವಾಗುತ್ತವೆ ,ಜೊತೆಗೆ ನಮ್ಮ ಪೂರ್ವಜರಿಗೆ ಪಿಂಡ ಪ್ರಧಾನ ಮಾಡುವ ಮೂಲಕ ಅವರು ಬದುಕಿದ್ದಾಗ ಈಡೇರದ ಆಸೆಗಳನ್ನು ಪೂರೈಕೆ ಮಾಡಲಾಗುತ್ತದೆ ಎಂಬ ನಂಬಿಕೆಯಿದೆ.

ಪಿಂಡಪ್ರಧಾನ ಮಾಡುವುದರ ಮಹತ್ವ:
ಹಿಂದೂ ಪುರಾಣದ ಪ್ರಕಾರ, ಕರ್ಣನ ಮರಣದ ನಂತರ ಅವನ ಆತ್ಮ ಸ್ವರ್ಗ ಸೇರಿತ್ತಂತೆ. ಅಲ್ಲಿ ಅವನಿಗೆ ಬಹಳಷ್ಟು ಆಭರಣಗಳು ಮತ್ತು ಚಿನ್ನವನ್ನು ನೀಡುತ್ತಿದ್ದರು, ಆದರೆ ಅವನಿಗೆ ಯಾವುದೇ ಆಹಾರ ಸಿಗಲಿಲ್ಲ. ಅವನಿಗೆ ಹಸಿವು ಉಂಟಾಗಿ, ಆಭರಣವನ್ನು ಏಕೆ ನೀಡುತ್ತಿದ್ದೀರಿ, ಆಹಾರವನ್ನು ಯಾಕೆ ಕೊಡುತ್ತಿಲ್ಲ ಎಂದು ಇಂದ್ರನನ್ನು ಕೇಳಿದಾಗ, ನೀನು ನಿನ್ನ ಪೂರ್ವಜರಿಗೆ ಯಾವಾಗಲೂ ಆಭರಣ ಮತ್ತು ಹೂವುಗಳನ್ನು ದಾನ ಮಾಡುತ್ತಿದ್ದೆ, ಆದರೆ ಅವರಿಗೆ ಎಂದಿಗೂ ಆಹಾರವನ್ನು ಕೊಡಲಿಲ್ಲ ಎಂದು ಉತ್ತರಿಸಿದನು. ಆಗ ಕರ್ಣನು ತನ್ನ ಪೂರ್ವಜರು ಯಾರೆಂದು ನನಗೆ ತಿಳಿದಿಲ್ಲ ಮತ್ತು ಆದ್ದರಿಂದ ಅವನಿಗೆ ಪಿಂಡಪ್ರಧಾನದ ರೂಪದಲ್ಲಿ ಆಹಾರ ನೀಡಲು ಸಾಧ್ಯವಾಗಲಿಲ್ಲ ಎಂದು ಉತ್ತರಿಸಿದನು.
ಆಗ ಇಂದ್ರನು ತನ್ನ ತಪ್ಪುಗಳನ್ನು ಸರಿಪಡಿಸಲು ಕರ್ಣನಿಗೆ 15 ದಿನಗಳನ್ನು ಕೊಟ್ಟನು. ಹೀಗಾಗಿ, ಕರ್ಣನು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡಿ, ತನ್ನ ಪೂರ್ವಜರ ನೆನಪಿಗಾಗಿ ನೀರು ಮತ್ತು ಆಹಾರವನ್ನು ದಾನ ಮಾಡಿದನು. ಇದೇ ಪಿತೃಪಕ್ಷದ ಪಿಂಡಪ್ರಧಾನದ ಹಿಂದಿರುವ ಮಹತ್ವದ ಕತೆಯಾಗಿದೆ.

ಪೂರ್ವಜರಿಗೆ ಪಿಂಡ ಪ್ರಧಾನ ಮಾಡುವಾಗ ನೆನಪಿಡಬೇಕಾದ ಅಂಶಗಳು:
- ನಮ್ಮನ್ನಗಲಿದವರಿಗೆ ಪಿಂಡ ಪ್ರಧಾನ ಮಾಡುವಾಗ ಅಗತ್ಯವಿರುವವರಿಗೆ ಬಟ್ಟೆ ಮತ್ತು ಧಾನ್ಯಗಳನ್ನು ದಾನ ಮಾಡಲು ಮರೆಯದಿರಿ. ಇದು ಪೂರ್ವಜರ ಮೆಚ್ಚುಗೆಗೆ ಪಾತ್ರವಾಗುತ್ತದೆ.
- ನಂಬಿಕೆಗಳ ಪ್ರಕಾರ, ಪಿತೃಪಕ್ಷದ ಅವಧಿಯಲ್ಲಿ ಮಾಂಸಾಹಾರವನ್ನು ಸೇವಿಸದಿರುವುದು ಅತ್ಯಗತ್ಯ, ಇದು ಪಿತೃದೋಷವನ್ನು ತಡೆಯಲು ಸಹಾಯ ಮಾಡುವುದು.
- ಒಂದು ವೇಳೆ ಶ್ರಾದ್ಧ ಮಾಡುತ್ತಿದ್ದರೆ, ಎರಡು ಕೈಗಳಿಂದ ಪಿಂಡ ಪ್ರಧಾನ ಮಾಡಿ, ಈ ಆಹಾರದಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಹಾಕಿಲ್ಲ ಎಂದು ಖಚಿತಪಡಿಸಿಕೊಳ್ಳಿ.
- ಪ್ರಸಾದವನ್ನು ತಯಾರಿಸಲು ಹಸುವಿನ ಹಾಲು, ತುಪ್ಪ ಮತ್ತು ಮೊಸರಿನಂತಹ ಶುದ್ಧ ವಸ್ತುಗಳನ್ನು ಮಾತ್ರ ಬಳಸಿ. ಸಾ
- ಧ್ಯವಾದರೆ ಬೆಳ್ಳಿಯ ಪಾತ್ರೆಗಳಲ್ಲಿ ಪಿತೃಗಳಿಗೆ ಪ್ರಸಾದವನ್ನು ಅರ್ಪಿಸಬೇಕು.
- ಪೂಜೆಗೆ ರಾಗಿ, ಬಾರ್ಲಿ, ಸಾಸಿವೆ ಮತ್ತು ಬಟಾಣಿಗಳಂತಹ ಧಾನ್ಯಗಳನ್ನು ಬಳಸಿ.



Click it and Unblock the Notifications
