Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ಈ 4 ಭಾಗಗಳಲ್ಲಿ ಮಚ್ಚೆಯಿರುವವರು, ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ!
ಪ್ರತಿಯೊಬ್ಬರಿಗೂ ಹುಟ್ಟಿದಾಗಿನಿಂದ ದೇಹದ ನಾನಾ ಭಾಗಗಳಲ್ಲಿ ಮಚ್ಚೆ ಇರುತ್ತದೆ. ನಾವು ಬೆಳೆದಂತೆಲ್ಲಾ ಆ ಮಚ್ಚೆಯ ಆಕಾರ ಮತ್ತು ಸ್ವರೂಪ ಕೂಡಾ ಬದಲಾಗುತ್ತದೆ. ಬಲಭಾಗದಲ್ಲಿರುವ ಮಚ್ಚೆಯನ್ನು ಪುರುಷರಿಗೆ ಮತ್ತು ಎಡಭಾಗದಲ್ಲಿರುವ ಮಚ್ಚೆಯು ಮಹಿಳೆಯರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವರಿಗೆ ಮಾತ್ರ ಕೆಲವು ಜಾಗದಲ್ಲಿರುವ ಮಚ್ಚೆಗಳು ತುಂಬಾ ಅದೃಷ್ಟ ತರುತ್ತವೆ. ಈ ನಾಲ್ಕು ಸ್ಥಳಗಳಲ್ಲಿ ಮಚ್ಚೆ ಇರುವವರಿಗೆ ಸಂಪತ್ತು ಮತ್ತು ಗೌರವಕ್ಕೆ ಕೊರತೆಯಾಗುವುದಿಲ್ಲ. ದೇಹದ ಆ ಭಾಗಗಳಾವುವು ನೋಡೋಣ.

ಅದೃಷ್ಟ ತರುವ ದೇಹದ ನಾಲ್ಕು ಭಾಗಗಳ ಮಚ್ಚೆಗಳನ್ನು ಈ ಕೆಳಗೆ ನೀಡಲಾಗಿದೆ:

ಹುಬ್ಬುಗಳ ನಡುವಿನ ಮಚ್ಚೆ:
ಹುಬ್ಬುಗಳ ನಡುವಿನ ಖಾಲಿ ಜಾಗದಲ್ಲಿ (ಮಹಿಳೆಯರು ಬಿಂದಿ ಹಾಕುವ ಸ್ಥಳದಲ್ಲಿ) ಮಚ್ಚೆಯನ್ನು ಹೊಂದುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಕೇವಲ ಹಣಕ್ಕೆ ಸಂಬಂಧಿಸಿದ್ದಲ್ಲ, ಅಂತಹವರ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ ಮತ್ತು ಮನೆಯು ಸಂಪತ್ತಿನಿಂದ ತುಂಬಿರುತ್ತದೆ.

ಬೆನ್ನಿನಲ್ಲಿ ಮಚ್ಚೆ :
ಬೆನ್ನಿನಲ್ಲಿ ಮಚ್ಚೆ ಇರುವ ವ್ಯಕ್ತಿಯ ಶ್ರೀಮಂತನಾಗುವ ಸೂಚಕವಾಗಿದೆ. ಜೊತೆಗೆ ಬೆನ್ನಿನ ಮೇಲೆ ಮಚ್ಚೆ ಇರುವ ವ್ಯಕ್ತಿಯು ತುಂಬಾ ರೋಮ್ಯಾಂಟಿಕ್ ಮತ್ತು ತನ್ನ ಪ್ರೇಮಿ / ಗೆಳತಿಗಾಗಿ ಸಾಕಷ್ಟು ಖರ್ಚು ಮಾಡುತ್ತಾನೆ. ಅಂತಹ ವ್ಯಕ್ತಿಯು ಹೆಚ್ಚು ಸಂಪಾದಿಸುತ್ತಾನೆ, ಜೊತೆಗೆ ಆತ ವೇಗವಾಗಿ ಖರ್ಚು ಮಾಡುತ್ತಾನೆ.

ಹೊಕ್ಕುಳ ಸುತ್ತ ಮಚ್ಚೆ :
ಹೊಟ್ಟೆಯ ಮೇಲಿನ ಮಚ್ಚೆಯು ಅಶುಭವೆಂದು ಪರಿಗಣಿಸಲ್ಪಟ್ಟಿದ್ದರೂ, ಅದೇ ಮಚ್ಚೆ ಹೊಕ್ಕುಳದ ಸುತ್ತಲೂ ಇದ್ದರೆ, ನಿಮ್ಮ ಅದೃಷ್ಟ ಬದಲಾಗಬಹುದು. ಒಬ್ಬ ವ್ಯಕ್ತಿಯು ಹೊಕ್ಕುಳಿನ ಸುತ್ತಲೂ ಮಚ್ಚೆಯನ್ನು ಹೊಂದಿದ್ದರೆ, ವ್ಯಕ್ತಿಯು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ. ಮತ್ತು ಅವನು ತನ್ನ ಜೀವನದುದ್ದಕ್ಕೂ ಅದೃಷ್ಟಶಾಲಿಯಾಗಿರುತ್ತಾನೆ.

ಕಾಲಿನ ಮೇಲೆ ಮಚ್ಚೆ :
ಪಾದದ ಮೇಲೆ ಮಚ್ಚೆ ಇರುವುದಕ್ಕೆ ಹಲವು ಅರ್ಥಗಳಿವೆ, ಉದಾಹರಣೆಗೆ, ಆತ ಅಲೆದಾಡುವವನಾಗಿರುತ್ತಾನೆ, ಆತನ ಕಾಲು ಒಂದೇ ಕಡೆ ನಿಲ್ಲುವುದಿಲ್ಲ ಮತ್ತು ಅವನು ವಿದೇಶ ಪ್ರವಾಸ ಮಾಡುತ್ತಾನೆ. ಆದರೆ ಈ ಮಚ್ಚೆಯು ಕಾಲಿನ ಮೇಲೆ ಇದ್ದರೆ, ಆ ವ್ಯಕ್ತಿಯು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾನೆ ಮತ್ತು ಸಮೃದ್ಧಿಯೂ ಆಗುತ್ತಾನೆ ಎಂದರ್ಥ. ಜೊತೆಗೆ ಶ್ರೀಮಂತರಾಗಿದ್ದರೂ, ಅಂತಹ ಜನರು ಉದಾರ ಮನಸ್ಸಿನವರಾಗಿರುತ್ತಾರೆ.



Click it and Unblock the Notifications
