Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಎಷ್ಟು ದುಡ್ಡು ಕೊಟ್ಟರು ಖರೀದಿಸಲು ಸಾಧ್ಯವಿಲ್ಲದ ಅಮೂಲ್ಯ ವಸ್ತುಗಳಿವು
ಪ್ರತಿಯೊಬ್ಬರಿಗೂ ಶ್ರೀಮಂತರಾಗಬೇಕು, ಸಿಕ್ಕಾಪಟ್ಟೆ ಆಸ್ತಿ ಹೊಂದಬೇಕು ಅನ್ನೋ ಆಸೆ ಇರುತ್ತದೆ. ಕಾರಣ ಹಣವೊಂದಿದ್ದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಪಡೆಯಬಹುದು ಅನ್ನುವ ಭ್ರಮೆಯಲ್ಲಿ ಜನರಿದ್ದಾರೆ. ಆದರೆ ಅದು ಸುಳ್ಳು.

ನಿಮ್ಮ ಬೇಕಾದಷ್ಟು ಹಣವಿದ್ರೆ ನೀವು ಎಲ್ಲವನ್ನೂ ಪಡೆಯಬಹುದು ಅನ್ನೋದು ನೂರಕ್ಕೆ ನೂರರಷ್ಟು ಸುಳ್ಳು. ನಾವು ಪಡೆಯಲೇ ಬೇಕೆಂದಿರುವ ಕೆಲವು ಅಮೂಲ್ಯ ವಸ್ತುಗಳನ್ನು ಎಷ್ಟು ದುಡ್ಡಿದ್ದರೂ ಕೂಡ ಖರೀದಿಸೋದಕ್ಕೆ ಸಾಧ್ಯವೇ ಇಲ್ಲ. ಅಂತಹ ವಸ್ತುಗಳು ಯಾವುದು ಅನ್ನೋದನ್ನ ತಿಳಿಯೋಣ.

1. ಸಮಯ
ಸಮಯ ತುಂಬಾನೇ ಅಮೂಲ್ಯ. ಸಮಯದ ಮಹತ್ವ ತಿಳಿದವನು ಎಂದಿಗೂ ಸಮಯ ವ್ಯರ್ಥ ಮಾಡೋದಿಲ್ಲ. ನಿಮ್ಮ ಬಳಿ ಎಷ್ಟೇ ದುಡ್ಡಿದ್ದರೂ ಕೂಡ ಕಳೆದು ಹೋದ ಸಮಯವನ್ನು ಪುನಃ ಖರೀದಿಸಲು ಸಾಧ್ಯವಿಲ್ಲ. ಈ ದೇಶದ ಸಾಮಾನ್ಯ ವ್ಯಕ್ತಿಯ ಬಳಿ ಎಷ್ಟು ಸಮಯವಿರುತ್ತದೆಯೋ ಅಷ್ಟೇ ಸಮಯ ಈ ದೇಶದ ಪ್ರಧಾನಿಯ ಬಳಿಯಲ್ಲೂ ಇರುತ್ತದೆ. ಹೀಗಾಗಿ ಯಾರು ಸಮಯದ ಜೊತೆ ನಡೆಯುತ್ತಾನೆ ಆತ ಖಂಡಿತ ಗೆಲ್ಲುತ್ತಾನೆ.

2. ಹವ್ಯಾಸ
ಪ್ರತಿಯೊಬ್ಬರು ಅವರದ್ದೇ ಆದ ಹವ್ಯಾಸಗಳನ್ನು ಹೊಂದಿರುತ್ತಾರೆ. ಸಂಗೀತ, ನೃತ್ಯ, ಚಿತ್ರಕಲೆ, ಇತರರಿಗೆ ಸಹಾಯ ಮಾಡುವುದು ಹೀಗೆ ಅನೇಕ ಹವ್ಯಾಸಗಳಿರುತ್ತದೆ. ನಿಮ್ಮ ಬಳಿ ದುಡ್ಡಿದೆ ಅಂತ ಒಬ್ಬರ ಹವ್ಯಾಸಗಳನ್ನು ನೀವು ಖರೀದಿಸಲು ಆಗುವುದಿಲ್ಲ. ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕೇ ಹೊರತು ಖರೀದಿಸಲು ಆಗುವುದಿಲ್ಲ.

3. ನಿಷ್ಕಲ್ಮಶ ಪ್ರೀತಿ
ನೀವು ಯಾರಿಂದಲೂ ಪ್ರೀತಿಯನ್ನು ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಪಡೆದರೂ ಕೂಡ ಅದು ನಿಜವಾದ ಪ್ರೀತಿ ಆಗುವುದಿಲ್ಲ. ಕೆಲವೊಂದು ಬಾರಿ ನಮ್ಮ ಆಸ್ತಿ-ಪಾಸ್ತಿ ನೋಡಿ ಪ್ರೀತಿಸುವ ಜನ ಸಿಗುತ್ತಾರೆ. ಆದರೆ ಆ ಪ್ರೀತಿ ಕಡೆಯವರೆಗೂ ನಮ್ಮ ಜೊತೆ ಇರುತ್ತಾ? ಖಂಡಿತ ಇಲ್ಲ. ದುಡ್ಡಿಗಾಗಿ ಬಂದವರು ದುಡ್ಡು ಇರುವವರೆಗೂ ಮಾತ್ರ ನಮ್ಮ ಜೊತೆ ಇರುತ್ತಾರೆ. ಹೀಗಾಗಿ ದುಡ್ಡಿನಿಂದ ನಿಷ್ಕಲ್ಮಶ ಪ್ರೀತಿ ಪಡೆಯಲು ಸಾಧ್ಯವಿಲ್ಲ.

4. ನಿಷ್ಕಲ್ಮಶ ಸ್ನೇಹ
ಪ್ರೀತಿಯಂತೆ ಸ್ನೇಹವನ್ನು ಖರೀದಿಸಲು ಸಾಧ್ಯವಿಲ್ಲ. ಸ್ನೇಹ ನಮ್ಮ ಬಳಿ ಇರುವ ಆಸ್ತಿಯನ್ನು ನೋಡಿ ಬರಬಾರದು. ಬದಲಿಗೆ ನಮ್ಮ ಬಳಿ ದುಡ್ಡಿದ್ಯೋ ಇಲ್ವೋ ಅದು ಮುಖ್ಯವಲ್ಲ ನಮ್ಮ ಮನಸ್ಸು ನೋಡಿ ಯಾರು ಗೆಳೆತನ ಮಾಡುತ್ತಾರೋ ಅವರೇ ನಿಜವಾದ ಸ್ನೇಹಿತರು. ಸ್ನೇಹ ಕೂಡ ಖರೀದಿಸಲಾಗದ ಅಮೂಲ್ಯವಾದ ವಸ್ತು.

5. ನೆನೆಪುಗಳು
ಕೆಲವೊಂದು ಬಾರಿ ನಮ್ಮವರು ನಮ್ಮನ್ನು ಬಿಟ್ಟು ದೂರ ಹೋಗುತ್ತಾರೆ. ಆದ್ರೆ ಅವರ ನೆನಪುಗಳು ನಮ್ಮ ಜೊತೆ ಜೀವಂತವಾಗಿರುತ್ತದೆ. ಆದ್ರೆ ದುಡ್ಡಿದ್ದಾಕ್ಷಣ ಆ ನೆನಪುಗಳನ್ನು ಮರು ಸೃಷ್ಟಿಸಲು ಸಾಧ್ಯವೇ? ಬಿಟ್ಟು ಹೋದ ನಮ್ಮವರನ್ನು ಮತ್ತೆ ಕರೆ ತರಬಹದೇ? ಖಂಡಿತ ಸಾಧ್ಯವಿಲ್ಲ.

6. ಮನಶಾಂತಿ
ಒರ್ವ ಮನುಷ್ಯನಿಗೆ ಊಟ, ಆಹಾರ, ಗಾಳಿ, ನೀರು, ವಸತಿ ಎಷ್ಟು ಮುಖ್ಯವೋ ಮನಶಾಂತಿ ಕೂಡ ಅಷ್ಟೇ ಮುಖ್ಯವಾಗುತ್ತದೆ. ದುಡ್ಡಿದ್ದ ಮಾತ್ರಕ್ಕೆ ಮನಶಾಂತಿಯನ್ನು ಖರೀದಿಸಲು ಸಾಧ್ಯವೇ? ನಿಜ ಹೇಳಬೇಕೆಂದರೆ ನಮ್ಮಂತ ಸಾಮಾನ್ಯ ಜನ ದುಡ್ಡಿಲ್ಲದಿದ್ದರೂ ಕೂಡ ಖುಷಿ ಖುಷಿಯಿಂದ ಬದುಕು ಸಾಗಿಸುತ್ತಾರೆ, ನೆಮ್ಮದಿಯಿಂದ ಬದುಕುತ್ತಾರೆ. ಆದರೆ ದುಡ್ಡಿದ್ದವರಿಗೆ ಮನಸ್ಸಿಗೆ ನೆಮ್ಮದಿ ಅನ್ನೋದು ಇರೋದಿಲ್ಲ. ಯಾವಾಗಲೂ ಒಂದಲ್ಲ ಒಂದು ಚಿಂತೆಯಲ್ಲಿ ಕೊರಗುತ್ತಿರುತ್ತಾರೆ.

7. ಯಶಸ್ಸು
ನಿಮ್ಮ ಬಳಿ ದುಡ್ಡಿದ್ದರೆ ಕಾರು, ಬಂಗಲೆ, ವ್ಯಾಪಾರ ಎಲ್ಲವನ್ನೂ ಖರೀದಿಸಬಹುದು. ಆದರೆ ಯಶಸ್ಸು ಖರೀದಿಸಲು ಸಾಧ್ಯವೇ? ಖಂಡಿತ ಇಲ್ಲ. ಯಶಸ್ಸು ನಿಮ್ಮ ಶ್ರಮ, ಏಕಾಗ್ರತೆ, ನಿರಂತರ ಪ್ರಯತ್ನದಿಂದ ಮಾತ್ರವೇ ಸಾಧ್ಯವಾಗುತ್ತದೆ.

8. ಸಂತೋಷ
ದುಡ್ಡಿರೋ ವ್ಯಕ್ತಿಯಲ್ಲಿ ಎಲ್ಲವೂ ಇದೆ ಆತ ಆರಾಮಾಗಿದ್ದಾನೆ ಅಂದುಕೊಳ್ಳುವುದು ತಪ್ಪು ಕಲ್ಪನೆ ಅಷ್ಟೇ. ಆದರೆ ಆ ವ್ಯಕ್ತಿಗಿಂತ ನೂರು ಪಟ್ಟು ಖುಷಿಯಾಗಿ ನಾವಿರುತ್ತೇವೆ. ನಮ್ಮ ಬಳಿ ಹಣ, ಆಸ್ತಿ, ಅಂತಸ್ತು ಇಲ್ಲದಿದ್ದರೇನಂತೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ನಮ್ಮವರಿದ್ದಾರಲ್ಲ ಅಷ್ಟೇ ಸಾಕು. ಸಂತೋಷವು ಕೂಡ ಖರೀದಿಯ ವಸ್ತುವಲ್ಲ.

9. ಪ್ರೇರಣೆ
ಮನುಷ್ಯನಿಗೆ ಪ್ರೇರಣೆ ಅನ್ನುವುದು ತುಂಬಾನೇ ಮುಖ್ಯ. ನಮಗೆ ನಾವೇ ಪ್ರೇರಣೆಯಾಗಿರಬೇಕು. ಮೋಟಿವೇಷನ್ ಬಲವಂತಾಗಿ ಬರೋದಲ್ಲ ಹಾಗೂ ಅದನ್ನು ಖರೀದಿಸಲು ಆಗುವುದು ಇಲ್ಲ. ನಿಮಗೆ ಗೆಲ್ಲುವ ಪ್ರೇರಣೆ ಇದ್ದರೆ ಹಣ ಸಂಪಾದನೆ ಮಾಡೋದು ದೊಡ್ಡ ವಿಚಾರವೇ ಅಲ್ಲ.

10. ಆರೋಗ್ಯ
ಆರೋಗ್ಯವೇ ಭಾಗ್ಯ ಅಂತಾರೆ. ಆರೋಗ್ಯ ಚೆನ್ನಾಗಿ ಇಲ್ಲದಿದ್ದರೆ ಎಷ್ಟು ದುಡ್ಡಿದ್ದು ಏನು ಪ್ರಯೋಜನ. ನಿಜ ನಮ್ಮ ಬಳಿ ದುಡ್ಡಿದ್ದರೆ ರೋಗಗಳು ಬಂದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರಿಪಡಿಸಿಕೊಳ್ಳಬಹುದು. ಆದರೆ ದುಡ್ಡು ಖರ್ಚು ಮಾಡುದರೂ ಸರಿಪಡಿಸಲಾಗದ ರೋಗ ವಕ್ಕರಿಸಿದರೆ ಏನು ಮಾಡೋದು ಅಲ್ವಾ? ಹೀಗಾಗಿ ಆರೋಗ್ಯ ಖರೀದಿಸಲಾಗದ ಒಂದು ಅಮೂಲ್ಯ ಸಂಪತ್ತು.
ಒಟ್ಟಿನಲ್ಲಿ ಜೀವನದಲ್ಲಿ ಪ್ರತಿಯೊಂದು ವಿಚಾರಕ್ಕೂ ಅದರದ್ದೇ ಆದ ಮೌಲ್ಯವಿರುತ್ತದೆ. ಅದನ್ನು ಬಿಟ್ಟು ನಾವು ಅಹಂಕಾರಿಯಂತೆ ಎಲ್ಲವನ್ನೂ ಖರೀದಿಸುತ್ತೇವೆ ಎಂಬಂತೆ ವರ್ತಿಸಬಾರದು. ಖರೀದಿಸಲಾಗದ ವಸ್ತುಗಳು ಒಳ್ಳೆಯ ಮನಸ್ಸಿನಿಂದ ಪಡೆಯಬೇಕೇ ವಿನಹ ದುರಹಂಕಾರದಿಂದಲ್ಲ.



Click it and Unblock the Notifications