Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಬದುಕಿನಲ್ಲಿ ಕಂಗೆಟ್ಟವರು ಕೃಷ್ಣನ 8 ಉಪದೇಶ ಕೇಳಿ ಸಾಕು
ಶ್ರೀಕೃಷ್ಣ ದೇವರು ಮಾತ್ರವಲ್ಲ ಆತ ನಮ್ಮೆಲ್ಲರ ಸ್ನೇಹಿತ. ಕೃಷ್ಣನ ವಚನಾಮೃತಗಳು ನಮಗೆ ಹೇಗೆ ಬದುಕಬೇಕು ಎಂಬ ಹಾದಿಯನ್ನು ತೋರಿಸಿಕೊಡುತ್ತದೆ. ನೀವೇನಾದರೂ ಕೃಷ್ಣನ ಜೀವನಪಾಠಗಳನ್ನ ಪಾಲಿಸಿದ್ದೇ ಆದ್ರೆ ಬದುಕು ಖಂಡಿತ ಅರ್ಥಪೂರ್ಣವಾಗಲಿದೆ.

ಮುರುಳಿಲೋಲ ನಮ್ಮ ಆಧ್ಯಾತ್ಮಿಕ ಗುರು. ಇಂದಿಗೂ ಕೃಷ್ಣನ ಪ್ರತಿ ಮಾತು ನಮಗೆ ಭಕ್ತಿ ಹಾಗೂ ಧರ್ಮದ ಹಾದಿಯನ್ನು ತೋರಿಸುತ್ತದೆ. ನಮ್ಮ ನಿತ್ಯ ಜೀವನಕ್ಕೆ ಅನುಕೂಲವಾಗುವಂತಹ ಗೋವರ್ಧನಗಿರಿವಾಸನ ಕೆಲ ನೀತಿಗಳನ್ನು ನಿಮಗೆ ಒಂದೊಂದಾಗೆ ತಿಳಿಸಿಕೊಡ್ತೀವಿ.

1. ಕೋಪ ನಿಯಂತ್ರಣದಲ್ಲಿರಲಿ
ಕೃಷ್ಣನ ಪ್ರಕಾರ ಕೋಪ ನಿಯಂತ್ರಣದಲ್ಲಿರಬೇಕಂತೆ. ಇಲ್ಲವಾದಲ್ಲಿ ನಮ್ಮ ಜೀವನ ಸರ್ವನಾಶವಾಗೋದು ಖಂಡಿತ. ಪರಿಸ್ಥಿತಿ ಯಾವುದೇ ಇರಲಿ ಆದ್ರೆ ತಾಳ್ಮೆ ಕಳೆದುಕೊಳ್ಳಬಾರದು. ಎಲ್ಲವನ್ನೂ ಶಾಂತಿಯಿಂದ ನಿಭಾಯಿಸಬೇಕು. ಕೋಪದ ಕೈಗೆ ಬುದ್ಧಿ ಕೊಟ್ರೆ ಕೆಡೋದು ನೀವೆ. ಮುಂದೊಂದು ದಿನ ಕೋಪವೇ ನಿಮ್ಮ ಸೋಲಿಗೆ ಮೂಲ ಕಾರಣವಾಗಬಹುದು. ಆದ್ದರಿಂದ ಶಾಂತಿಯನ್ನ ಕಾಪಾಡೋದು ತುಂಬಾನೇ ಮುಖ್ಯವಾಗುತ್ತದೆ.

2. ತ್ಯಾಗದ ಮಹತ್ವ ತಿಳಿದುಕೊಳ್ಳಿ
ತ್ಯಾಗದ ಮಹತ್ವವನ್ನು ನಾವು ಮಹಾಭಾರತದಿಂದ ಕಲಿಯುತ್ತೇವೆ. ನೀವೇನಾದ್ರು ಜೀವನದಲ್ಲಿ ಯಶಸ್ಸು ಪಡೆಯಬೇಕಂದ್ರೆ ಅನೇಕ ತ್ಯಾಗಗಳನ್ನ ಮಾಡ್ಲೇಬೇಕಾಗುತ್ತದೆ. ತ್ಯಾಗದ ಹೊರತಾಗಿ ಅಭಿವೃದ್ಧಿ ಸಾಧ್ಯವೇ ಇಲ್ಲ. ನೀವು ಆರಾಮದಾಯಕ ಜೀವನ ನಡೆಸುತ್ತಾ ಸುರಕ್ಷಿತವಾಗಿದ್ದರೆ ಜೀವನದಲ್ಲಿ ಮುಂದೆ ಬರೋದು ತುಂಬಾನೇ ಕಷ್ಟ. ಯಶಸ್ಸು ಸುಖ ಸುಮ್ಮನೆ ಒಲಿಯೋದಿಲ್ಲ.

3. ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಅವಡಿಸಿಕೊಳ್ಳಿ
ಭಗವಾನ್ ಶ್ರೀ ಕೃಷ್ಣನಿಗೆ ಅಹಂ ಅನ್ನೋದು ಇರಲೇ ಇಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿ ನಿಂತಿದ್ದು ನಿಜವಾಗ್ಲು ಕೃಷ್ಣನ ಸರಳತೆಯನ್ನು ತೋರಿಸುತ್ತದೆ. ಶ್ರೀ ಕೃಷ್ಣನಿಂದ ನಾವು ಪ್ರಾಮಾಣಿಕತೆ ಮತ್ತು ಮಾನವೀಯತಾ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕತೆಗೆ ಎಂದಿಗೂ ಸೋಲಿಲ್ಲ. ಎಂತಹದ್ದೇ ಕಷ್ಟ ಎದುರಾದ್ರು ಅಪ್ರಾಮಾಣಿಕರಾಗಿ ನಡೆದುಕೊಳ್ಳಬೇಡಿ. ಇದರ ಜೊತೆಗೆ ಜೀವನದಲ್ಲಿ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ.

4. ಶ್ರದ್ಧೆಯಿಂದ ಕೆಲಸ ಮಾಡಿ
ಶ್ರೀ ಕೃಷ್ಣನ ವಚನಾಮೃತದಲ್ಲಿ ಕೆಲಸ ಹಾಗೂ ಕರ್ಮದ ಬಗ್ಗೆ ಉಲ್ಲೇಖವಾಗಿದೆ. ಮನುಷ್ಯ ನಿಷ್ಕ್ರೀಯನಾಗಿರಬಾರದು ಕೆಲಸದಲ್ಲಿ ಕ್ರೀಯಾಶೀಲತೆ ಇರಬೇಕು. ಕಷ್ಟಪಟ್ಟು ಕೆಲಸ ಮಾಡಿ ಆದ್ರೆ ಫಲಿತಾಂಶದ ನಿರೀಕ್ಷೇ ಇಟ್ಟುಕೊಳ್ಳಬೇಡಿ. ಫಲಿತಾಂಶದ ಬಗ್ಗೆ ನೀವು ನಿರೀಕ್ಷೇ ಇಟ್ಟುಕೊಂಡರೆ ಬೇಸರಪಟ್ಟುಕೊಳ್ಳೋದು ಖಂಡಿತ. ಆದ್ಧರಿಂದ ಶ್ರದ್ಧೆಯಿಂದ ಕೆಲಸ ಮಾಡಿ ಪಲಾಫಲ ದೇವರಿಗೆ ಬಿಡಿ. ಪ್ರಾಮಾಣಿಕ ಪ್ರಯತ್ನವಿದ್ದಾಗ ಖಂಡಿತ ದೇವರ ಅನುಗ್ರಹ ಇದ್ದೇ ಇರುತ್ತದೆ.

5. ದೊಡ್ಡ-ಚಿಕ್ಕ ಕೆಲಸವೆಂಬ ಭೇದ ಬೇಡ
ಕೆಲಸದಲ್ಲಿ ಯಾವತ್ತೂ ದೊಡ್ಡದು ಚಿಕ್ಕದೆನ್ನುವುದು ಇರೋದಿಲ್ಲ. ಮುಖ್ಯ ವಿಚಾರ ಏನೆಂದರೆ ಕೊಟ್ಟ ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡಬೇಕು ಅಷ್ಟೇ. ಯಾವಾಗ ಕೆಲಸವನ್ನು ನೀವು ಆಸಕ್ತಿಯಿಂದ ಮನಸಿಟ್ಟು ಮಾಡುತ್ತೀರೋ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಶ್ರೀ ಕೃಷ್ಣನ ಜೀವನವನ್ನೇ ನೀವು ಉದಾಹರಣೆಯಾಗಿ ತೆಗೆದುಕೊಳ್ಳಿ, ಮನಸ್ಸು ಮಾಡಿದ್ದರೆ ಶ್ರೀ ಕೃಷ್ಣನಿಗೆ ಕುರುಕ್ಷೇತ್ರ ಯುದ್ಧ ಗೆಲ್ಲೋದು ದೊಡ್ಡ ವಿಚಾರವಾಗಿರಲಿಲ್ಲ. ಆದರೆ ಕೇವಲ ಒಬ್ಬ ಸಾರಥಿಯಾಗಿ ಕೃಷ್ಣನು ಅರ್ಜುನನ ರಥವನ್ನು ನಡೆಸುತ್ತಾನೆ. ಇದೇ ನಮ್ಮ ಜೀವನಕ್ಕೆ ದೊಡ್ಡ ಪಾಠ. ಕೆಲಸ ಯಾವುದಾದರೇನು ಆದರೆ ಅಲ್ಲಿ ಆಸಕ್ತಿ, ನಿಷ್ಠೆಯೇ ಮುಖ್ಯವಾಗುತ್ತದೆ.

6. ಆಗುವುದೆಲ್ಲಾ ಒಳ್ಳೆಯದಕ್ಕೆ
ಜೀವನದಲ್ಲಿ ಏನೇ ಆದರೂ ನಾವು ಕುಗ್ಗಬಾರದು ಏಕೆಂದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ. ಏನೇ ಆದರೂ ಅದರ ಹಿಂದೆ ಒಂದು ಕಾರಣ ಇದ್ದೇ ಇರುತ್ತದೆ. ದೇವರು ಒಂದು ಪರಮೋಚ್ಛ ಶಕ್ತಿ ನಾವೆಲ್ಲರೂ ಅವನ ಮಕ್ಕಳು. ಕೆಲವೊಂದು ಬಾರಿ ನಮ್ಮ ನಿಯಂತ್ರಣಕ್ಕೆ ಸಿಗದೆ ಎಲ್ಲವೂ ನಡೆದು ಹೋಗುತ್ತದೆ. ಆದರೆ ಅದಕ್ಕಾಗಿ ದುಃಖಿಸದೇ ಆ ಪರಿಸ್ಥಿತಿಯನ್ನು ಸ್ವೀಕರಿಸಿ ಮುನ್ನಡೆಯಬೇಕು.

7. ಭವಿಷ್ಯದ ಚಿಂತೆ ಬೇಡ
ಹೌದು, ಇದು ಕೂಡ ಒಂದು ಅದ್ಭುತವಾದ ಜೀವನಪಾಠ. ಶ್ರೀ ಕೃಷ್ಣನ ಪ್ರಕಾರ ನಾವು ಈ ಕ್ಷಣವನ್ನ ಬದುಕಬೇಕು ನಾಳೆಯ ಚಿಂತೆ ನಮಗೆ ಬೇಡ. ನಿನಗೆ ಸಿಕ್ಕ ಈ ಕ್ಷಣವನ್ನು ಅರ್ಥಪೂರ್ಣವಾಗಿ ಕಳೆಯಬೇಕು. ನಾಳೆ ಏನಾಗುತ್ತೋ ಗೊತ್ತಿಲ್ಲ. ಅದ್ಯಾವುದು ನಮ್ಮ ನಿಯಂತ್ರಣದಲ್ಲಿ ಇಲ್ಲ.

8. ನಿಷ್ಕಲ್ಮಷ ಸ್ನೇಹವಿರಲಿ
ಸ್ನೇಹಿತರಿಗೆ ಉತ್ತಮ ಉದಾಹರಣೆಯೆಂದರೆ ಶ್ರೀಕೃಷ್ಣ ಮತ್ತು ಸುಧಾಮ. ಅವರಿಬ್ಬರ ಮಧ್ಯೆ ಅಂತಸ್ತು ಎಂದಿಗೂ ಅಡ್ಡ ಬಂದಿಲ್ಲ. ಹಾಲಿನಂತಹ ಸ್ನೇಹವನ್ನು ಮಾತ್ರ ನಾವು ಕಾಣಬಹುದು. ಅದೇ ರೀತಿ ಹಣ, ಆಸ್ತಿ-ಅಂತಸ್ತು ನೋಡಿ ಸ್ನೇಹ ಹುಟ್ಟೋದಲ್ಲ. ಸ್ನೇಹಿತನಾದವನು ಪ್ರಮಾಣಿಕ ಹಾಗೂ ನಂಬಿಕೆಗೆ ಅರ್ಹನಾಗಿರಬೇಕು. ನಮ್ಮೆಲ್ಲಾ ಕಷ್ಟ-ಸುಖ, ನೋವು-ನಲಿವುಗಳನ್ನು ಅವನೊಂದಿಗೆ ಹಂಚಿಕೊಳ್ಳುವಂತಿರಬೇಕು. ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಮಿಡಿಯುವ ನಿಷ್ಕಲ್ಮಷ ಸ್ನೇಹವಾಗಿರಬೇಕು.
ಇಲ್ಲಿವರೆಗೂ ನಿಮ್ಮ ಜೀವನದಲ್ಲಿ ಏನೇ ಆಗಿರಬಹುದು. ಆದರೆ ಇನ್ನು ಮುಂದಾದರೂ ಕೃಷ್ಣನ ಮೌಲ್ಯಯುತ ಭೋದನೆಗಳನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ.



Click it and Unblock the Notifications