Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಬೀರ್ ದಾಸ್ ಜನ್ಮದಿನ 2022: ಜೀವನಪಾಠ ಹೇಳಿರುವ ಕಬೀರ್ ದಾಸರ ಕೋಟ್ಸ್
ವೃತ್ತಿಯಿಂದ ನೇಕಾರರಾಗಿದ್ದ ಕಬೀರರು ಅನುಭಾವಿ ಕವಿಯಾದ ಅವರು ಇಂದಿಗೂ ತಮ್ಮ ಹಲವಾರು ಕವನಗಳ ಮೂಲಕ ಜೀವಂತವಾಗಿದ್ದಾರೆ ಮತ್ತು ಶತಮಾನಗಳಿಂದ ಅನ್ವೇಷಕರಿಗೆ ಸ್ಫೂರ್ತಿಯಾಗಿದ್ದಾರೆ. ಸಂತ ಕಬೀರ್ ದಾಸ್ ಅವರು ಕೇವಲ ಸಾಮಾಜಿಕ ಪಿಡುಗುಗಳ ವಿರುದ್ಧ ಮಾತ್ರವೇ ಸೆಣಸಲಿಲ್ಲ, ಜೊತೆಗೆ ಮಾನವತೆಯ ಪಾಠ ಮತ್ತು ವಿಶ್ವ ಪ್ರೇಮವನ್ನೂ ಬೋಧಿಸಿದರು. ಬೂಟಾಟಿಕೆ ವಿರುದ್ಧ ಧ್ವನಿ ಎತ್ತಿದರು ಮತ್ತು ಜನರಲ್ಲಿ ಭಕ್ತಿಯ ಬೀಜಗಳನ್ನು ಬಿತ್ತಿದರವರು ಕಬೀರರು.
ಇಂಥಾ ಮಹಾನ್ ಕವಿ ಕಬೀರ್ ದಾಸರು 1440ರ ಜೂನ್ 14ರಂದು ಜನಿಸಿದರು. ಇವರ ಜನ್ಮದಿನದ ವಿಶೇಷ ಕಬೀರರ ಸ್ಪೂರ್ತಿದಾಯಕ ಕೋಟ್ಸ್‌ಗಳನ್ನು ನೀಡಲಿದ್ದೇವೆ:

ದೇವರು ಎಂದರೇ ಯಾರು? ದೇವರು ಎಂದರೆ ನಮ್ಮ ಉಸಿರಾಟದೊಳಗಿನ ಉಸಿರು. - ಸಂತ ಕಬೀರ್ ದಾಸ
ನಮ್ಮ ಹೃದಯದಲ್ಲಿನ ದೀಪವನ್ನು ನೋಡಿದಾಗ ಜಗತ್ತಿನ ಎಲ್ಲಾ ಕತ್ತಲೆಯು ಮಾಯವಾಗುತ್ತದೆ. - ಸಂತ ಕಬೀರ್ ದಾಸ
ಸಾಕಷ್ಟು ಪರಿಶ್ರಮದ ನಂತರ ಸಂತೋಷದ ಸಾಗರಕ್ಕೆ ಬಂದಾಗ ಮತ್ತೆ ಬಾಯಾರಿಕೆಯಿಂದ ಹಿಂತಿರುಗಬೇಡಿ. - ಸಂತ ಕಬೀರ್ ದಾಸ
ದೇವರು ನನ್ನೊಳಗೂ ಇದ್ದಾನೆ, ದೇವರು ನಿನ್ನೊಳಗೂ ಇದ್ದಾನೆ. ಬದುಕು ಎನ್ನುವುದು ಪ್ರತಿಯೊಂದು ಅಣುವಿನಲ್ಲೂ ಇದೆ, ಅಹಃ ಬಿಟ್ಟು ಎಲ್ಲರೊಳಗೆ ಹಾಗೂ ನಮ್ಮೊಳಗಿನ ದೇವರನ್ನು ಕಾಣಿರಿ. - ಸಂತ ಕಬೀರ್ ದಾಸ
ಕುರುಡುತನವೇ ತುಂಬಿರುವ ಈ ಪ್ರಪಂಚದಲ್ಲಿ ನಾನು ಕನ್ನಡಿಯನ್ನು ಮಾರುತ್ತಿದ್ದೇನೆ. - ಸಂತ ಕಬೀರ್ ದಾಸ
ಈ ಜಗತ್ತಿನಲ್ಲಿ ನಿಮಗೆ ಸತ್ಯ ಬೇಕೆಂದರೆ ನಿಮ್ಮೊಳಗೆ ಅವಿತಿರುವ ರಹಸ್ಯವಾದ ಹಾಗೂ ನಿಜವಾದ ಶಬ್ಧವನ್ನು ಅಲಿಸಿರಿ, ಅದುವೇ ಸತ್ಯ. - ಸಂತ ಕಬೀರ್ ದಾಸ
ಹನಿಯು ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಸಮುದ್ರವು ಹನಿಯಲ್ಲಿ ವಿಲೀನಗೊಳ್ಳುತ್ತದೆ ಎಂದು ಕೆಲವರಿಗೆ ಮಾತ್ರ ತಿಳಿದಿದೆ. - ಸಂತ ಕಬೀರ್ ದಾಸ
ನೀವು ನಿಮ್ಮ ಹತ್ತಿರದ ಪ್ರೀತಿಪಾತ್ರರನ್ನು ನಿರಾಕರಿಸಿದ್ದೀರಿ ಮತ್ತು ಇತರರ ಬಗ್ಗೆ ಯೋಚಿಸುತ್ತಿದ್ದೀರಿ; ಇದರಿಂದಾಗಿ ನಿಮ್ಮ ಎಲ್ಲಾ ಕೆಲಸವೂ ವ್ಯರ್ಥವೇ. - ಸಂತ ಕಬೀರ್ ದಾಸ
ನೀನು ಎಲ್ಲೇ ಇದ್ದರೂ ಅದೇ ನಿನ್ನ ಆರಂಭದ ಹಾದಿ. - ಸಂತ ಕಬೀರ್ ದಾಸ
ಜೀವನದ ಸಾರವು ದೇವರನ್ನು ಸ್ಮರಿಸುವುದರಲ್ಲಿದೆ. - ಸಂತ ಕಬೀರ್ ದಾಸ
ನಾನು ಹಿಂದೂ ಅಲ್ಲ, ಮುಸಲ್ಮಾನನೂ ಅಲ್ಲ, ನಾನು ಈ ದೇಹ ಮಾತ್ರ. ಪಂಚಭೂತಗಳ ಸಾಕ್ಷಿ, ಸಂತೋಷ ಮತ್ತು ದುಃಖದ ನಡುವೆ ಬದುಕುವ ಆತ್ಮ. - ಸಂತ ಕಬೀರ್ ದಾಸ



Click it and Unblock the Notifications










