Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ? ಯಾವ ಸೂಚನೆಯಿದು?
ಪ್ರತಿಯೊಬ್ಬ ವ್ಯಕ್ತಿಯು ರಾತ್ರಿ ಮಲಗಿದ್ದಾಗ ಕನಸು ಕಾಣುವುದು ಸಹಜ. ಕನಸಿನ ಶಾಸ್ತ್ರದ ಪ್ರಕಾರ ಆ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಕನಸುಗಳು ನಮ್ಮ ಭವಿಷ್ಯದ ಬಗ್ಗೆ ಸುಳಿವುಗಳನ್ನು ನೀಡುತ್ತವೆ. ಜೊತೆಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರ್ಥೈಸಬಲ್ಲವು. ಅಂತಹ ಕನಸುಗಳಲ್ಲಿ ಹಾವುಗಳ ಕನಸು ಬೀಳುವುದು ಸಹ ಒಂದು.
ಕೆಲವರು ಹಾವುಗಳಿಗೆ ಸಂಬಂಧಿಸಿದ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಿದರೆ, ಕೆಲವರದ್ದು ಅಶುಭಕರವೆಂಬ ನಂಬಿಕೆ. ಅದೇ ಸಮಯದಲ್ಲಿ, ವ್ಯಕ್ತಿಯು ಕಾಳ ಸರ್ಪ ದೋಷದಿಂದ ಬಳಲುತ್ತಿದ್ದರೆ, ಆತನೂ ಹಾವಿನ ಕನಸು ಕಾಣುತ್ತಾನೆ ಎಂದು ಕೆಲವರು ನಂಬುತ್ತಾರೆ. ಆದ್ದರಿಂದ ನಾವಿಂದು ಕನಸಿನಲ್ಲಿ ಹಾವುಗಳು ಏಕೆ ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ.
ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ? ಅಂತಹ ಕನಸುಗಳು ಏಕೆ ಬರುತ್ತವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಾಳ ಸರ್ಪ ದೋಷ ಇರಬಹುದು:
ಕನಸಿನಲ್ಲಿ ಹಾವು ಅಟ್ಟಿಸಿಕೊಂಡು ಬಂದರೆ, ನೀರಿನಲ್ಲಿ ಈಜುತ್ತಿದ್ದರೆ ಅಥವಾ ಕೈಕಾಲು ಸುತ್ತಿಕೊಂಡಂತೆ ಕಂಡರೆ ನೀವು ಕಾಳ ಸರ್ಪ ದೋಷದಿಂದ ಬಳಲುತ್ತಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಜಾತಕವನ್ನು ತೋರಿಸಬೇಕು. ಇದರೊಂದಿಗೆ, ಹಾವುಗಳ ಕನಸುಗಳನ್ನ ಕನಸುಗಳನ್ನು ಕಾಣುತ್ತಿದ್ದರೆ ಮತ್ತು ನಿಮ್ಮ ಕನಸಿನಲ್ಲಿ ಹಾವುಗಳು ಕಚ್ಚುತ್ತಿದ್ದರೆ ಅಥವಾ ನಿಮ್ಮ ಕನಸಿನಲ್ಲಿ ಹಾವುಗಳು ಜಗಳವಾಡುವುದನ್ನು ನೋಡಿದರೆ, ಇವುಗಳು ಸಹ ಕಾಳ ಸರ್ಪ ದೋಷವನ್ನು ಸೂಚಿಸುತ್ತವೆ.

ಹಾವು ಕಡಿತ :
ನಿಮ್ಮ ಕನಸಿನಲ್ಲಿ ಹಾವು ನಿಮ್ಮನ್ನು ಕಚ್ಚಿದರೆ ಕಂಡರೆ, ಭವಿಷ್ಯದಲ್ಲಿ ನೀವು ಗಂಭೀರ ಅನಾರೋಗ್ಯಕ್ಕೆ ಒಳಗಾಗಬಹುದು. ಆದರೆ ಹಾವು ಕಚ್ಚಲು ವಿಫಲವಾದರೆ, ಈ ಕನಸು ಒಳ್ಳೆಯ ಸಂಕೇತವಾಗಿದೆ. ಇದರರ್ಥ ನೀವು ಕೆಲವು ಕೆಲಸಗಳಲ್ಲಿ ಜಯವನ್ನು ಪಡೆಯುತ್ತೀರಿ ಎಂಬುದಾಗಿದೆ.

ದೇವಸ್ಥಾನದಲ್ಲಿ ಹಾವು ಕಂಡರೆ :
ನಿಮ್ಮ ಕನಸಿನಲ್ಲಿ ದೇವಸ್ಥಾನದೊಳಗೆ ಹಾವು ಕಂಡರೆ, ನಿಮ್ಮ ಕೆಲವು ಆಸೆಗಳು ಈಡೇರಲಿವೆ ಎಂದರ್ಥ. ಶಿವಲಿಂಗದ ಮೇಲೆ ಹಾವು ಸುತ್ತಿಕೊಂಡಿರುವಂತೆ ಕನಸು ಬಿದ್ದರೆ, ನೀವು ಶಿವನಿಂದ ಆಶೀರ್ವಾದ ಪಡೆಯುತ್ತೀರಿ ಎಂದರ್ಥ. ಅಂತಹ ಜನರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.

ಹಾವು ಹತ್ತುವುದು:
ನಿಮ್ಮ ಕನಸಿನಲ್ಲಿ ಹಾವು ಮರವನ್ನು ಹತ್ತುವುದನ್ನು ನೋಡಿದರೆ, ನಿಮಗೆ ಹಣ ಸಿಗಬಹುದು ಎಂದರ್ಥ. ಬಿಳಿ ಹಾವು ಹತ್ತುವುದನ್ನು ಅಥವಾ ಎಲ್ಲೋ ಕುಳಿತುಕೊಂಡತೆ ಕನಸು ಬೀಳುವುದು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಹಾವುಗಳ ಈ ಕನಸುಗಳು ಕೆಟ್ಟ ಸೂಚನೆ:
ಒಬ್ಬ ವ್ಯಕ್ತಿಯು ಕನಸಿನಲ್ಲಿ ಸತ್ತ ಹಾವನ್ನು ನೋಡಿದರೆ, ಅದು ಒಳ್ಳೆಯ ಸಂಕೇತವಲ್ಲ. ನಿಮ್ಮ ಕನಸಿನಲ್ಲಿ ಜೋಡಿ ಹಾವುಗಳು ಮತ್ತು ಹೆಚ್ಚು ಹಾವುಗಳನ್ನು ನೋಡಿದರೆ, ಇದನ್ನು ಕೆಟ್ಟ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಹಾವು-ಮುಂಗುಸಿಗಳ ಕಾದಾಟವನ್ನು ನೋಡುವುದು ಕಾನೂನು ಹೋರಾಟದಲ್ಲಿ ಸಿಕ್ಕಿಬೀಳುವುದನ್ನು ಸೂಚಿಸುತ್ತದೆ. ಕನಸಿನಲ್ಲಿ ಹಾವು ಮರದಿಂದ ಇಳಿಯುವುದನ್ನು ನೋಡಿದರೆ, ಈ ಕನಸು ಹಣದ ನಷ್ಟವನ್ನು ಸೂಚಿಸುತ್ತದೆ. ಆದರೆ ಬಡವರು ಮರದಿಂದ ಹಾವು ಇಳಿಯುವುದನ್ನು ನೋಡಿದರೆ, ಈ ಕನಸನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.



Click it and Unblock the Notifications
