Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಾಂಪತ್ಯದಲ್ಲಿ ಹೆಚ್ಚಿನ ವಯಸ್ಸಿನ ಅಂತರ ಮಹಾ ಆಪತ್ತು ಅಂತಾರೆ ಚಾಣಕ್ಯ..!
ಪ್ರೀತಿ ಹುಟ್ಟೋದಕ್ಕೆ ಕಾರಣ ಬೇಕಿಲ್ಲ. ಯಾರ ಮೇಲೆ ಬೇಕಾದರೂ ಪ್ರೀತಿ ಹುಟ್ಟಬಹುದು. ಅದಕ್ಕೆ ವಯಸ್ಸಿನ ಅಂತರವಂತೂ ಖಂಡಿತ ಅಡ್ಡಿ ಬರೋದಿಲ್ಲ. ಇತ್ತೀಚಿಗೆ ಆಗುತ್ತಿರುವ ಪ್ರೇಮ ವಿವಾಹಗಳಲ್ಲಿ ಹೆಚ್ಚಿನ ಜನರಲ್ಲಿ ವಯಸ್ಸಿನ ಅಂತರ ಹೆಚ್ಚಾಗಿರುತ್ತದೆ.

ಚಾಣಕ್ಯ ದಂಪತಿಗಳ ವಯಸ್ಸಿನ ಅಂತರದ ಬಗ್ಗೆ ಅದೊಂದು ಮಾತನ್ನು ಹೇಳಿದ್ದಾರೆ. ದಂಪತಿಗಳಿಬ್ಬರ ನಡುವೆ ಎಷ್ಟು ವರ್ಷ ವಯಸ್ಸಿನ ಅಂತರವಿರಬೇಕು? ದಂಪತಿಗಳ ನಡುವೆ ಅತೀ ಹೆಚ್ಚು ವಯಸ್ಸಿನ ಅಂತರವಿದ್ದಾಗ ಏನಾಗುತ್ತದೆ ಇಂತಹ ಮದುವೆಯಲ್ಲಿ ಸುಖ ಕಾಣಬಹುದಾ? ಚಾಣಕ್ಯ ಈ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ತಿಳಿಯೋಣ.
1. ಮಹಿಳೆಗಿಂತ ಪುರುಷನ ವಯಸ್ಸು ಅತೀ ಹೆಚ್ಚಾಗಿದ್ದರೆ ಏನಾಗುತ್ತದೆ?
ಪ್ರೇಮ ವಿವಾಹವು ಅಥವಾ ಮನೆಯವರ ಒತ್ತಾಯಕ್ಕೋ ನಮಗಿಂತ ಅತೀ ಹೆಚ್ಚು ವಯಸ್ಸಿನ ಪುರುಷರನ್ನು ಮದುವೆಯಾಗುತ್ತೇವೆ. ಈ ಸಂಬಂಧ ಚೆನ್ನಾಗಿರುವುದಿಲ್ಲ ಅಂತ ಚಾಣಕ್ಯ ಹೇಳಿದ್ದಾರೆ. ದಂಪತಿಗಳಿಬ್ಬರ ನಡುವಿನಲ್ಲಿ ಹೆಚ್ಚಿನ ವಯಸ್ಸಿನ ಅಂತರವಿದ್ದಾಗ ಜೀವನವನ್ನು ಅಡ್ಜಸ್ಟ್‌ಮೆಂಟ್‌ನಲ್ಲೇ ಕಳೆಯಬೇಕಾಗುತ್ತದೆ. ತುಂಬಾ ವಯಸ್ಸಾದ ಪುರುಷ ಅತೀ ಕಡಿಮೆ ವಯಸ್ಸಿನ ಮಹಿಳೆಯನ್ನು ಮದುವೆಯಾಗಲೇ ಬಾರದು. ಅವರಿಬ್ಬರ ನಡುವೆ ಹೊಂದಾಣಿಕೆ ಅನ್ನೋದೇ ಇರೋದಿಲ್ಲ. ಸಂಸಾರವೆಂಬ ಜಂಜಾಟದಲ್ಲಿ ಮುಳುಗಿ ಏಳೋದೇ ಕಷ್ಟವಾಗಬಹುದು. ಇಬ್ಬರ ನಡುವೆ ಜನರೇಷನ್ ಗ್ಯಾಪ್ ಇದ್ದಾಗ ಅವರಿಬ್ಬರ ಆಲೋಚನೆಗಳು, ಕೆಲಸಗಳು ಹೊಂದಾಣಿಕೆ ಆಗುವುದಿಲ್ಲ. ಸಂಸಾರದಲ್ಲಿ ಸುಖ ಅನ್ನೋದೇ ಇರೋದಿಲ್ಲ.
2. ಒಬ್ಬರನ್ನೋಬ್ಬರು ಅವಮಾನಿಸುವುದು
ದಂಪತಿಗಳ ನಡುವೆ ವಯಸ್ಸಿನ ಅಂತರವಿದ್ದಾಗ ಹೆಂಡತಿ ಏನೇ ಮಾಡಿದರೂ ಗಂಡನಿಗೆ ಇಷ್ಟವಾಗೋದಿಲ್ಲ. ಅದೇ ರೀತಿ ಗಂಡ ಏನೇ ಮಾಡಿದರೂ ಹೆಂಡತಿಗೆ ಇಷ್ಟವಾಗೋದಿಲ್ಲ. ಗಂಡ ಏನಾದರೂ ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗದಲ್ಲಿದ್ದರೆ ಹೆಂಡತಿಯನ್ನು ಹೀಯಾಳಿಸೋದು, ಸುಖಾಸುಮ್ಮನೆ ನಿಂದಿಸೋದನ್ನು ಮಾಡುತ್ತಾನೆ. ಹೆಂಡತಿಯು ಅಂತಹ ಗಂಡನ ನಡವಳಿಕೆಯಿಂದ ಬೇಸತ್ತಿರುತ್ತಾಳೆ. ಸಂಸಾರವೇ ಸಾಕು ಅನ್ನುವಷ್ಟು ಆಕೆ ಸೋತು ಹೋಗಿರುತ್ತಾಳೆ.
3. ಸಂಗಾತಿಯ ಅಗತ್ಯತೆಗೆ ಬೆಲೆ ಇರುವುದಿಲ್ಲ
ಚಾಣಕ್ಯನ ಪ್ರಕಾರ ಗಂಡ-ಹೆಂಡತಿಯ ಸಂಬಂಧ ತುಂಬಾನೇ ಪವಿತ್ರವಾದ ಸಂಬಂಧ. ಸಂಬಂಧದಲ್ಲಿ ವಯಸ್ಸಿನ ಅಂತರವಿದ್ದಾಗ ಅವರು ಸಂಗಾತಿಯ ಅಗತ್ಯತೆಗಳಿಗೆ ಬೆಲೆ ಕೊಡುವುದಿಲ್ಲ. ಯಾಕೆಂದರೆ ಅವರು ಮಾಡಿದ್ದೇ ಅವರಿಗೆ ಸರಿ ಅನ್ನಿಸುತ್ತದೆ. ಸಂಗಾತಿಯ ಮಾತನ್ನು ಕೇಳಲು ರೆಡಿ ಇರೋದಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಜನರೇಷನ್ ಗ್ಯಾಪ್ ಇದ್ದಾಗ ಹೀಗೆಲ್ಲಾ ಆಗುವುದು ಸಾಮಾನ್ಯ.
ಮದುವೆ ಅನ್ನೋದು ಜೀವನದಲ್ಲಿ ತುಂಬಾನೇ ಮುಖ್ಯ ಘಟ್ಟ. ಒಂದು ಸಾರಿ ಮದುವೆಯ ಬಂಧನಕ್ಕೆ ಬಿದ್ಧರೆ ನಮ್ಮ ನಂತರದ ಜೀವನವನ್ನು ನಾವು ಅವರೊಂದಿಗೆ ಕಳೆಯಬೇಕಾಗುತ್ತದೆ. ಹೀಗಾಗಿ ಮದುವೆಗೂ ಮುನ್ನ ಒಂದು ಬಾರಿ ಯೋಚಿಸಿ ಇವರೊಂದಿಗೆ ಮದುವೆಯಾದ್ರೆ ಸುಖವಾಗಿ ಇರಬಹುದು ಅನ್ನಿಸಿದ್ರೆ ಮಾತ್ರ ಅಂಥಹ ಮದುವೆಗೆ ನಿಮ್ಮ ಸಮ್ಮತಿ ಇರಲಿ.



Click it and Unblock the Notifications



